ಸೋಶಿಯಲ್ ಮೀಡಿಯಾದಲ್ಲಿ ಪತ್ನಿಯೊಬ್ಬಳ ಡಿವೋರ್ಸ್ ಲೆಟರ್ ವೈರಲ್ ಆಗಿದೆ. ತಾನು ಗಂಡನಿಗೆ ಡಿವೋರ್ಸ್ ನೀಡಲು ಕಾರಣ ಏನು ಎಂಬುದನ್ನು ಪತ್ನಿ ಹೇಳಿದ್ದಾಳೆ. ಇದನ್ನು ಓದಿನ ನೆಟ್ಟಿಗರು ಈಗ ಕನ್ಫ್ಯೂಸ್ ಆಗಿದ್ದಾರೆ.
ಮನೆಯಲ್ಲಿ ಮಗು ಅಳು ಕೇಳ್ಬೇಕು, ಪತಿ - ಪತ್ನಿ ಜಗಳ ಇರ್ಬೇಕು. ದಾಂಪತ್ಯದಲ್ಲಿ ಸಣ್ಣಪುಟ್ಟ ಗಲಾಟೆ ಸಾಮಾನ್ಯ. ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೆ ಎನ್ನುವ ಮಾತಿದೆ. ಹಿಂದೆ ಜಗಳ ಮಾಡ್ತಾ, ರಾಜಿ ಆಗ್ತಾ ದಾಂಪತ್ಯ ಸಾಗಿಸ್ತಿದ್ದರು. ಈಗ ಕಾಲ ಬದಲಾಗಿದೆ. ಕೌಟುಂಬಿಕ ಹಿಂಸೆ, ವಿವಾಹೇತರ ಸಂಬಂಧದಂತ ಘಟನೆಯೇ ವಿಚ್ಛೇದನಕ್ಕೆ ಕಾರಣ ಆಗ್ಬೇಕು ಅಂತಿಲ್ಲ. ಅತೀ ಸಣ್ಣ ವಿಷ್ಯಕ್ಕೂ ಜನರು ಡಿವೋರ್ಸ್ (Divorce) ಅಂತಿದ್ದಾರೆ. ಅಡುಗೆಗೆ ಉಪ್ಪು ಹಾಕಿಲ್ಲ, ಮಲಗಿದಾಗ ಗಂಡ ಗೊರಕೆ ಹೊಡಿತಾನೆ, ಶಾಪಿಂಗ್ ಗೆ ಹಣ ಕೊಡೋದಿಲ್ಲ ಹೀಗೆ ಕ್ಷುಲ್ಲಕ ಕಾರಣಕ್ಕೆ ಬೇರೆ ಆಗೋರ ಸಂಖ್ಯೆ ಹೆಚ್ಚಾಗಿದೆ. ಈಗ ಸೋಶಿಯಲ್ ಮೀಡಿಯಾದಲ್ಲಿ ಗಂಡನಿಗೆ ಪತ್ನಿ ಬರೆದ ಡಿವೋರ್ಸ್ ಲೆಟರ್ ಒಂದು ವೈರಲ್ ಆಗಿದೆ.
ಪತ್ನಿ ಡಿವೋರ್ಸ್ ಗೆ ಬರೆದ ಕಾರಣ ಕೆಲವರಿಗೆ ಅಚ್ಚರಿ ಅನ್ನಿಸಿದೆ. ಮತ್ತೆ ಕೆಲವರು ನಿರ್ಧಾರ ಸರಿ ಇದೆ ಎಂದಿದ್ದಾರೆ. ಇನ್ನೊಂದಿಷ್ಟು ಮಂದಿ ಇದು ಪ್ರಮೋಷನ್ ಅಂತಿದ್ದಾರೆ. ಹಾಗಿದ್ರೆ ಆ ಲೆಟರ್ ನಲ್ಲಿ ಏನಿದೆ ಅಂದ್ರಾ? ಪತ್ನಿ, ಪತಿಗೆ ಡಿವೋರ್ಸ್ ನೀಡಲು ಅಂಡರ್ವೇರ್ ಕಾರಣವಾಗಿದೆ. ಗಂಡ ಸ್ನಾನ ಮಾಡೋದಿಲ್ಲ, ಅಂಡರ್ ವೆರ್ ವಾಶ್ ಮಾಡೋದಿಲ್ಲ. ಫ್ಲಶ್ ಮಾಡೋದಿಲ್ಲ ಅಂತ ಪತ್ನಿ ಆರೋಪ ಮಾಡಿದ್ದಾಳೆ. ಇಷ್ಟೇ ಅಲ್ಲ ನಥಿಂಕ್ ಫೋನ್ ಬಗ್ಗೆಯೂ ಬರೆದಿದ್ದಾಳೆ.
ಪತ್ನಿ ಬರೆದ ಲೆಟರ್ (letter) : ಪ್ರಿಯ ಅಂಕಿತ್, ನೀನು ಪ್ರಿಯ ಎನ್ನಲು ಅರ್ಹನಲ್ಲ. ನಾನು ನಿನ್ನಿಂದ ಬೇಸತ್ತಿದ್ದೇನೆ. ನನಗೆ ಇನ್ನು ಸಹಿಸಲು ಸಾಧ್ಯವಿಲ್ಲ. ಈ ಸಂಬಂಧದಲ್ಲಿ ನಾನು ಬದುಕಲು ಸಾಧ್ಯವಿಲ್ಲ. ನೀನು ಸ್ನಾನ ಮಾಡುವುದಿಲ್ಲ, ನೀನು ಮೂರು ದಿನಗಳವರೆಗೆ ಒಂದೇ ಅಂಡರ್ವೇರ್ ಧರಿರ್ತಿಯಾ. ಎಲ್ಲೂ ಆಕಸ್ಮಿಕವಾಗಿ ಸ್ನಾನ ಮಾಡಿದ್ರೆ ಆ ದಿನ, ಒದ್ದೆ ಟವಲ್ ಅನ್ನು ಹಾಸಿಗೆಯ ಮೇಲೆ ಹಾಕಿರ್ತೀಯಾ. ನೀನು ಹಣಕ್ಕೆ ಸ್ವಲ್ಪವೂ ಬೆಲೆ ಕೊಡೋದಿಲ್ಲ. ನೀನು 80 ಸಾವಿರ ಬೆಲೆಬಾಳುವ ನಥಿಂಗ್ ಫೋನ್ ಖರೀದಿಸಿದ್ದೀಯ. ಅದರ ಹೆಸರೇ ನಥಿಂಗ್ ಅಂದ್ಮೇಲೆ ಇನ್ನು ಅದ್ರಲ್ಲಿ ಏನಿರಲು ಸಾಧ್ಯ? ನೀನು ಫ್ಲಶ್ ಕೂಡ ಸರಿಯಾಗಿ ಮಾಡೋದಿಲ್ಲ. ಮೂರ್ಖ! ನನ್ನ ವಕೀಲರು ನಿಮಗೆ ಡಿವೋರ್ಸ್ ಲೆಟರ್ ಕಳಿಸ್ತಾರೆ. ಗುಡ್ ಬೈ. ಹೀಗಂತ ಮಹಿಳೆ ಡಿವೋರ್ಸ್ ಲೆಟರ್ ಬರೆದಿದ್ದಾಳೆ.
ಸೋಶಿಯಲ್ ಮೀಡಿಯಾ ಬಳಕೆದಾರರ ಪ್ರತಿಕ್ರಿಯೆ ಏನು? : ಲೆಟರ್ ಓದಿದ ಬಳಕೆದಾರರು ಇದು ಡಿವೋರ್ಸ್ ಪತ್ರ ಅನ್ನೋದನ್ನು ನಂಬೋಕೆ ಸಿದ್ಧ ಇಲ್ಲ. ಇದು ನಥಿಂಗ್ ಫೋನ್ ಪ್ರಮೋಷನ್. ಈ ರೀತಿ ಯಾರಾದ್ರೂ ಪ್ರಮೋಷನ್ ಮಾಡ್ತಾರಾ ಅಂತ ಜನರು ಪ್ರಶ್ನೆ ಮಾಡಿದ್ದಾರೆ. ಒಬ್ಬರ ವ್ಯಕ್ತಿತ್ವ ಇಟ್ಕೊಂಡು ಪ್ರಮೋಷನ್ ಮಾಡೋದು ತಪ್ಪು ಅಂತ ಕೆಲ ನೆಟ್ಟಿಗರು ಹೇಳಿದ್ರೆ ಮತ್ತೆ ಕೆಲವರು ಡಿವೋರ್ಸ್ ಬಗ್ಗೆ ಕಮೆಂಟ್ ಮಾಡಿದ್ದಾರೆ. ಬಾಕ್ಸ್ ನಲ್ಲಿ ಹಾಕಿಲ್ಲ, ಹನಿಮೂನ್ ಗೆ ಕರೆದುಕೊಂಡು ಹೋಗಿಲ್ಲ. ನೀನು ಲಕ್ಕಿ ಎಂದಿದ್ದಾರೆ.
ಯುಕೆ ಮೂಲದ ಟೆಕ್ ಕಂಪನಿ ನಥಿಂಗ್ ಭಾರತದಲ್ಲಿ ತನ್ನ ಅತ್ಯಂತ ಶಕ್ತಿಶಾಲಿ ಸ್ಮಾರ್ಟ್ಫೋನ್ ನಥಿಂಗ್ ಫೋನ್ (3) ಬಿಡುಗಡೆ ಮಾಡಿದೆ. ಕಂಪನಿ ಇದನ್ನು ಪ್ರೀಮಿಯಂ ವಿಭಾಗದಲ್ಲಿ 79,999 ಆರಂಭಿಕ ಬೆಲೆಗೆ ಬಿಡುಗಡೆ ಮಾಡಿದೆ. ಇದು ಕಂಪನಿಯ ಇಲ್ಲಿಯವರೆಗಿನ ಅತ್ಯಂತ ದುಬಾರಿ ಸ್ಮಾರ್ಟ್ಫೋನ್. ಇದರ ಮಾರಾಟ ಜುಲೈ 15 ರಿಂದ ಪ್ರಾರಂಭವಾಗಲಿದೆ. ಪತ್ರದಲ್ಲಿ ನಥಿಂಕ್ ಫೋನ್ ಉಲ್ಲೇಖ ಇರೋದ್ರಿಂದ ಜನರು ಇದು ಡಿವೋರ್ಸ್ ಲೆಟರ್ ಅಲ್ಲ, ಪ್ರಮೋಷನ್ ಲೆಟರ್ ಎನ್ನುತ್ತಿದ್ದಾರೆ.
