MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • ಕಾಂಡೋಮ್ ಖರೀದಿಸಿ ಹೆಚ್ಚು ಮಕ್ಕಳನ್ನು ಹೆರುವ ಬಗ್ಗೆ ಸೋನಾಕ್ಷಿ ಕಾಮೆಂಟ್ ವೈರಲ್; ಇಲ್ಲಿದೆ ನೋಡಿ ವಿಡಿಯೋ

ಕಾಂಡೋಮ್ ಖರೀದಿಸಿ ಹೆಚ್ಚು ಮಕ್ಕಳನ್ನು ಹೆರುವ ಬಗ್ಗೆ ಸೋನಾಕ್ಷಿ ಕಾಮೆಂಟ್ ವೈರಲ್; ಇಲ್ಲಿದೆ ನೋಡಿ ವಿಡಿಯೋ

Sonakshi Sinha population comment: ಸೋನಾಕ್ಷಿ ಸಿನ್ಹಾ ಇತ್ತೀಚೆಗೆ ಕಾಂಡೋಮ್‌ ಮತ್ತು ಭಾರತೀಯ ಜನಸಂಖ್ಯೆಯ ಕುರಿತು ಹೇಳಿಕೆ ನೀಡಿದ್ದಾರೆ. ಅವರ ವಿಡಿಯೋ ವೈರಲ್ ಆಗುತ್ತಿದೆ.

2 Min read
Ashwini HR
Published : Nov 22 2025, 06:19 PM IST
Share this Photo Gallery
  • FB
  • TW
  • Linkdin
  • Whatsapp
16
ಸಾಮಾಜಿಕ ಮಾಧ್ಯಮದಲ್ಲಿ ವೈರಲ್
Image Credit : Instagram

ಸಾಮಾಜಿಕ ಮಾಧ್ಯಮದಲ್ಲಿ ವೈರಲ್

ಟ್ವಿಂಕಲ್ ಖನ್ನಾ ಮತ್ತು ಕಾಜೋಲ್ ಅವರ ಚಾಟ್ ಶೋ 'ಟೂ ಮಚ್' ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಈಗಾಗಲೇ ಅನೇಕ ಬಾಲಿವುಡ್ ತಾರೆಯರು ಈ ಶೋನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದ ಬಗ್ಗೆ ಯಾರೂ ಕೇಳಿರದ ಕಥೆಗಳನ್ನು ಹಂಚಿಕೊಂಡಿದ್ದಾರೆ. ನಟಿ ಸೋನಾಕ್ಷಿ ಸಿನ್ಹಾ ಮತ್ತು ಪ್ರಸಿದ್ಧ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಇತ್ತೀಚೆಗೆ ಕಾರ್ಯಕ್ರಮದ ಆರನೇ ಸಂಚಿಕೆಯಲ್ಲಿ ಅತಿಥಿಗಳಾಗಿದ್ದರು. ಈ ಸಂದರ್ಭದಲ್ಲಿ ಕಾಂಡೋಮ್ ಖರೀದಿಸುವ ಬಗ್ಗೆ ಭಾರತೀಯ ಜನರ ಚಿಂತನೆಯ ಕುರಿತು ಸೋನಾಕ್ಷಿ ಹೇಳಿಕೆ ನೀಡಿದ್ದು, ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

26
ಈ ಸಂಚಿಕೆಯಲ್ಲಿ ಚರ್ಚೆಯ ವಿಷಯ
Image Credit : Instagram

ಈ ಸಂಚಿಕೆಯಲ್ಲಿ ಚರ್ಚೆಯ ವಿಷಯ

ಕಾಜೋಲ್ ಮತ್ತು ಟ್ವಿಂಕಲ್ ಅವರ ಚಾಟ್ ಶೋನಲ್ಲಿ ಸಾಮಾನ್ಯವಾಗಿ ಅತಿಥಿಗಳಿಗೆ ಒಂದು ವಿಷಯವನ್ನು ನೀಡಲಾಗುತ್ತದೆ. ಅವರು ಅದರ ಪರವಾಗಿ ಅಥವಾ ವಿರುದ್ಧವಾಗಿ ವಾದಿಸಬೇಕಾಗುತ್ತದೆ. ಈ ಬಾರಿ ಈ ಸಂಚಿಕೆಯಲ್ಲಿ ಚರ್ಚೆಯ ವಿಷಯವೆಂದರೆ “ಭಾರತೀಯರು ಫೇರ್‌ನೆಸ್ ಕ್ರೀಮ್‌ಗಿಂತ ಕಾಂಡೋಮ್‌ಗಳನ್ನು ಖರೀದಿಸಲು ಹೆಚ್ಚು ಮುಜುಗರಪಡುತ್ತಾರೆ.”

Related Articles

Related image1
"ಇದಪ್ಪಾ ಲುಕ್ ಅಂದ್ರೆ"... ಕಾಂತಾರ "ಕನಕವತಿ" ಗೆಟಪ್‌ನಲ್ಲಿ ಮಿಂಚಿದ ಸೋನು ಶ್ರೀನಿವಾಸ್ ಗೌಡ
Related image2
ಅಧ್ಯಯನದಲ್ಲಿಯೂ ಟಾಪರ್ ಬಾಲಿವುಡ್ ಬಾದ್‌ಶಾ; ಅಬ್ಬಾ, ಈ ಸಬ್ಜೆಕ್ಟ್‌ನಲ್ಲಿ 100 ಕ್ಕೆ 92
36
ಸೋನಾಕ್ಷಿ ಬೆಂಬಲ
Image Credit : Instagram

ಸೋನಾಕ್ಷಿ ಬೆಂಬಲ

ಟ್ವಿಂಕಲ್ ಖನ್ನಾ ಮತ್ತು ಮನೀಶ್ ಮಲ್ಹೋತ್ರಾ ಈ ವಿಚಾರವನ್ನು ಬೆಂಬಲಿಸಲಿಲ್ಲ. ಆದರೆ ಸೋನಾಕ್ಷಿ ಸಿನ್ಹಾ ಮತ್ತು ಕಾಜೋಲ್ ಭಾರತೀಯರು ಕಾಂಡೋಮ್ ಖರೀದಿಸಲು ಹಿಂಜರಿಯುತ್ತಾರೆ ಮತ್ತು ನಾಚಿಕೆಪಡುತ್ತಾರೆ ಎಂದೇ ಹೇಳಿದರು. ಈ ಸಮಯದಲ್ಲಿ ಎರಡೂ ಕಡೆಯ ನಡುವೆ ಚರ್ಚೆ ಪ್ರಾರಂಭವಾದಾಗ ಕಾಜೋಲ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿ, ಜನರು ಕಾಂಡೋಮ್ ಖರೀದಿಸಲು ನಾಚಿಕೆಪಡುತ್ತಾರೆ ಎಂದು ಹೇಳಿದರು. "ನೀವು ಫೇರ್‌ನೆಸ್ ಕ್ರೀಮ್ ಖರೀದಿಸಲು ಹೋದಾಗ ಸುಲಭವಾಗಿ ಆ ಶಾರುಖ್ ಖಾನ್ ಕ್ರೀಮ್ ಕೇಳುತ್ತಾರೆ. ಆದರೆ ಕಾಂಡೋಮ್ ಖರೀದಿಸಲು ಹೋದಾಗ ಹಿಂಜರಿಯುತ್ತಾರೆ ಮತ್ತು ನಾಚಿಕೆಪಡುತ್ತಾರೆ" ಎಂದು ಹೇಳಿದಾಗ ಸೋನಾಕ್ಷಿಯೂ ಇವರನ್ನೂ ಬೆಂಬಲಿಸಿದರು.

46
ಎಷ್ಟು ಬಾರಿ ಮೆಡಿಕಲ್‌ ಶಾಪ್‌ಗೆ ಹೋಗಿದ್ದೀರಿ?
Image Credit : Instagram

ಎಷ್ಟು ಬಾರಿ ಮೆಡಿಕಲ್‌ ಶಾಪ್‌ಗೆ ಹೋಗಿದ್ದೀರಿ?

ಇದಕ್ಕೆ ಪ್ರತಿಯಾಗಿ ಮನೀಷ್ ಮಲ್ಹೋತ್ರಾ, ಭಾರತ ಬದಲಾಗಿದೆ ಮತ್ತು ಈಗ ಹಾಗೆ ಇಲ್ಲ ಎಂದು ಹೇಳಿದರು. ಟ್ವಿಂಕಲ್ ಖನ್ನಾ ಕೂಡ ಮನೀಷ್ ಅವರನ್ನು ಬೆಂಬಲಿಸಿದರು. ಚರ್ಚೆಯ ಸಮಯದಲ್ಲಿ, ಕಾಜೋಲ್ ಟ್ವಿಂಕಲ್ ಅವರನ್ನು "ನೀವು ಎಷ್ಟು ಬಾರಿ ಮೆಡಿಕಲ್‌ ಶಾಪ್‌ಗೆ ಹೋಗಿದ್ದೀರಿ?" ಎಂದು ಕೇಳಿದರು. ಅದಕ್ಕೆ ಟ್ವಿಂಕಲ್ "ನಾನು ಸ್ಯಾನಿಟರಿ ಪ್ಯಾಡ್‌ಗಳನ್ನು ಖರೀದಿಸುತ್ತೇನೆ, ಸರಿಯೇ? ಕಾಂಡೋಮ್‌ಗಳಿಗಾಗಿ ಅಲ್ಲ. ಅದು ಬೇರೆಯವರ ಡಿಪಾರ್ಟ್‌ಮೆಂಟ್" ಎಂದು ಉತ್ತರಿಸಿದರು.

56
ಬದಲಾಗಿದೆ ಭಾರತ
Image Credit : Instagram

ಬದಲಾಗಿದೆ ಭಾರತ

ಭಾರತ ಬದಲಾಗಿದೆ ಮತ್ತು ಕಾಂಡೋಮ್ ಖರೀದಿಸುವಾಗ ಯಾರಿಗೂ ಭಯ ಅಥವಾ ನಾಚಿಕೆ ಅನಿಸುವುದಿಲ್ಲ ಎಂದು ಮನೀಶ್ ಮಲ್ಹೋತ್ರಾ ಮತ್ತೊಮ್ಮೆ ಒತ್ತಿ ಹೇಳಿದರು. ಆಗ ಸೋನಾಕ್ಷಿ ಸಿನ್ಹಾ ತಕ್ಷಣ ಪ್ರತಿಕ್ರಿಯಿಸಿದರು.. "ಹಾಗಾದರೆ ನಮ್ಮ ಜನಸಂಖ್ಯೆ ಏಕೆ ಇಷ್ಟೊಂದು ಹೆಚ್ಚಾಗಿದೆ?" ಸೋನಾಕ್ಷಿಯವರ ನೇರ ಪ್ರಶ್ನೆಯನ್ನು ಕೇಳಿದ ಕಾಜೋಲ್ ತನ್ನ ನಗುವನ್ನು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಾಗಿ ಜೋರಾಗಿ ನಕ್ಕರು. ಹೆಚ್ಚಿನ ಜನರು ಇನ್ನೂ ಕಾಂಡೋಮ್ ಖರೀದಿಸುತ್ತಿಲ್ಲ ಎಂದು ತಮ್ಮ ಪ್ರಶ್ನೆ ಸ್ಪಷ್ಟವಾಗಿ ತೋರಿಸುತ್ತದೆ ಎಂದು ಸೋನಾಕ್ಷಿ ಮತ್ತಷ್ಟು ವಾದಿಸಿದರು. ಆದರೆ ಮನೀಶ್ ಮಲ್ಹೋತ್ರಾ ತಮ್ಮ ನಿಲುವಿನಲ್ಲಿಯೇ ಇದ್ದರು.

66
ಇಲ್ಲಿದೆ ನೋಡಿ ವಿಡಿಯೋ
Image Credit : Instagram

ಇಲ್ಲಿದೆ ನೋಡಿ ವಿಡಿಯೋ

ಈ ಸಂಚಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಜನರು ಸೋನಾಕ್ಷಿ ಸಿನ್ಹಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ ಮತ್ತು ಕಾಜೋಲ್ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ. ಆದರೆ ಅನೇಕ ಬಳಕೆದಾರರು ಅವರನ್ನು ಬೆಂಬಲಿಸುತ್ತಿರುವುದು ಸಹ ಕಂಡುಬರುತ್ತದೆ.

 
 
 
 
View this post on Instagram
 
 
 
 
 
 
 
 
 
 
 

A post shared by BINGE MOVES - OTT & Cinema Updates (@bingemoves)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಮನರಂಜನಾ ಸುದ್ದಿ
ಬಾಲಿವುಡ್
Latest Videos
Recommended Stories
Recommended image1
ರಾಜಮೌಳಿಗೆ ರಾಮ್ ಗೋಪಾಲ್ ವರ್ಮಾ ಸಪೋರ್ಟ್, ಜಕ್ಕಣ್ಣನ ಬ್ಯಾಂಕ್ ಬ್ಯಾಲೆನ್ಸ್ ಬಗ್ಗೆ ಆರ್‌ಜಿವಿ ಹೇಳಿದ್ದೇನು?
Recommended image2
ಸ್ನಾನದ ವಿಡಿಯೋ ಶೇರ್​ ಮಾಡಿ ಹಲ್​ಚಲ್​ ಸೃಷ್ಟಿಸಿದ ನಟಿ ಸೋನಂ! ವೈರಲ್​ ವಿಡಿಯೋ ನೋಡಿ ನೆಟ್ಟಿಗರು ಶಾಕ್​
Recommended image3
ಸೂಪರ್ ಟ್ವಿಸ್ಟ್‌ಗಳಿಂದ ತುಂಬಿದ ಸೈಕಾಲಜಿಕಲ್ ಎಮೋಷನಲ್‌ ಜರ್ನಿ: ಇಲ್ಲಿದೆ ರಾಧೇಯ ಸಿನಿಮಾ ವಿಮರ್ಶೆ
Related Stories
Recommended image1
"ಇದಪ್ಪಾ ಲುಕ್ ಅಂದ್ರೆ"... ಕಾಂತಾರ "ಕನಕವತಿ" ಗೆಟಪ್‌ನಲ್ಲಿ ಮಿಂಚಿದ ಸೋನು ಶ್ರೀನಿವಾಸ್ ಗೌಡ
Recommended image2
ಅಧ್ಯಯನದಲ್ಲಿಯೂ ಟಾಪರ್ ಬಾಲಿವುಡ್ ಬಾದ್‌ಶಾ; ಅಬ್ಬಾ, ಈ ಸಬ್ಜೆಕ್ಟ್‌ನಲ್ಲಿ 100 ಕ್ಕೆ 92
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved