'ದೊಡ್ಡಮ್ಮ' ಅಂತ ಮಾತ್ರ ಕರೀಬೇಡಪ್ಪಾ: ತಂಗಿ ಮಗನಿಗೆ ಕಂಡೀಷನ್ ಹಾಕಿದ್ರು ನಟಿ ಅಹಾನಾ!
ತನ್ನ ಸೋದರಿ ದಿಯಾ ಅವರ ಮಗ ಓಮಿಗೆ 'ದೊಡ್ಡಮ್ಮ' ಎಂದು ಕರೆಸಿಕೊಳ್ಳಲು ತನಗೆ ಇಷ್ಟವಿಲ್ಲ ಎಂದು ನಟಿ ಅಹಾನಾ ಕೃಷ್ಣ ಹೇಳಿದ್ದಾರೆ. ಈ ಹಿಂದೆ ಅವರ ಸೋದರಿ ಇಶಾನಿ ಕೂಡ 'ಚಿಕ್ಕಮ್ಮ' ಎಂದು ಕರೆಸಿಕೊಳ್ಳಲು ಇಷ್ಟವಿಲ್ಲ ಎಂದಿದ್ದರು. ಈಗ ಅಹಾನಾ ಸರದಿ.

ಓಮಿಯೇ ಮುಖ್ಯ ಪಾತ್ರಧಾರಿ
ನಟಿ ಅಹಾನಾ ಕೃಷ್ಣ ಅವರು ತಮ್ಮ ಸೋದರಿ ದಿಯಾ ಅವರ ಮಗ ನಿಯೋಮ್ ಅಲಿಯಾಸ್ ಓಮಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ತಮ್ಮ ಕುಟುಂಬಕ್ಕೆ ಓಮಿ ಎಷ್ಟು ಮುಖ್ಯ ಎಂಬುದನ್ನು ವಿವರಿಸಿರುವ ಅಹಾನಾ, ಈಗ ತಮ್ಮೆಲ್ಲರ ಜೀವನದಲ್ಲಿ ಓಮಿಯೇ ಮುಖ್ಯ ಪಾತ್ರಧಾರಿ ಎಂದಿದ್ದಾರೆ. ಅಷ್ಟೇ ಅಲ್ಲ, ಈ ಹಿಂದೆ ತನ್ನ ತಂಗಿ ಇಶಾನಿ ಹೇಳಿದಂತೆ, ತನಗೂ ಕೂಡ ಓಮಿ 'ದೊಡ್ಡಮ್ಮ' ಅಂತ ಕರೆಯೋದು ಇಷ್ಟವಿಲ್ಲ ಅಂತ ಸ್ಪಷ್ಟಪಡಿಸಿದ್ದಾರೆ.

ನಮ್ಮಲ್ಲೇ ಜಗಳ ನಡೆಯುತ್ತೆ
ಓಮಿ ಒಂದೇ ದಿನದಲ್ಲಿ ನಮ್ಮೆಲ್ಲರ ಜೀವನದ ಹೀರೋ ಆಗಿಬಿಟ್ಟಿದ್ದಾನೆ. ಅವನು ಮಧ್ಯಾಹ್ನ ಊಟಕ್ಕೆ ಬರೋದನ್ನೇ ನಾವು ಕಾಯ್ತಾ ಇರ್ತೀವಿ. ಅವರ ಕಾರ್ ಬರೋದು ಕಂಡ ತಕ್ಷಣ ನಾವೆಲ್ಲರೂ ಗೇಟ್ ಹತ್ತಿರ ಓಡ್ತೀವಿ. ಅವನನ್ನು ಎತ್ತಿಕೊಳ್ಳೋಕೆ ನಮ್ಮಲ್ಲೇ ಜಗಳ ನಡೆಯುತ್ತೆ. ಕುಟುಂಬದಲ್ಲಿ ಹುಟ್ಟುವ ಮೊದಲ ಮಕ್ಕಳಿಗೆ ಸಿಗುವ ವಿಶೇಷ ಪ್ರೀತಿ, ಆರೈಕೆ ಈಗ ಓಮಿಗೆ ಸಿಗುತ್ತಿದೆ.
ವಯಸ್ಸು ಇನ್ನೂ ಬಂದಿಲ್ಲ
ನನಗೂ ಇದೇ ರೀತಿ ಸಿಕ್ಕಿತ್ತು ಅಂತ ನಾನು ನನ್ನ ತಂಗಿಯರಿಗೆ ಹೇಳ್ತೀನಿ, ಆದ್ರೆ ಅವರಿಗೆ ಅದು ಇಷ್ಟ ಆಗಲ್ಲ. ಸದ್ಯಕ್ಕೆ ಮನೆಯ ರಾಜ ಯಾರು ಅಂದ್ರೆ ಅದು ದಿಯಾ ಮಗನೇ. ನಮ್ಮೆಲ್ಲರ ಪ್ರಪಂಚ ಈಗ ಅವನ ಸುತ್ತಲೇ ಗಿರಕಿ ಹೊಡೆಯುತ್ತಿದೆ ಎಂದು ಅಹಾನಾ ಹೇಳಿದರು. ಮುಂದುವರಿಸಿ ಮಾತನಾಡಿದ ಅವರು, "ಅವನು ನನ್ನನ್ನು 'ದೊಡ್ಡಮ್ಮ' ಅಂತ ಕರೆಯೋ ವಯಸ್ಸು ಇನ್ನೂ ಬಂದಿಲ್ಲ. ನನ್ನ ಪ್ಲಾನ್ ಏನಂದ್ರೆ, ಅವನಿಂದ 'ಅಮ್ಮು' ಅಂತಾ ಕರೆಸಿಕೊಳ್ಳಬೇಕು.
ಇಷ್ಟ ಇದ್ರೆ ಕರೀಲಿ
ಯಾಕಂದ್ರೆ ನನ್ನ ಕಸಿನ್ ಮಗ ನನ್ನನ್ನು 'ಅಮ್ಮು' ಅಂತಾನೇ ಕರೆಯುತ್ತಿದ್ದ. ಒಂದು ವೇಳೆ ಓಮಿಗೆ 'ಆಂಟಿ' ಅಂತ ಕರೆಯೋಕೆ ಇಷ್ಟ ಇದ್ರೆ ಕರೀಲಿ, ಪರವಾಗಿಲ್ಲ. ಆದರೆ 'ದೊಡ್ಡಮ್ಮ' ಅನ್ನೋ ಪದ ಮಾತ್ರ ಬೇಡ. ಯಾಕೋ ಅದು ಕೇಳೋಕೆ ಒಂದು ಥರ ಚೆನ್ನಾಗಿರಲ್ಲ. ಕೊನೆಗೆ ಎಲ್ಲವೂ ಅವನ ಇಷ್ಟ," ಎಂದು ಅಹಾನಾ, ರೇಖಾ ಮೆನನ್ ಅವರ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

