- Home
- Entertainment
- Sandalwood
- ಲಂಗ ದಾವಣಿಯಲ್ಲಿ ಮಿಂಚಿದ ಜೂ. ಮಾಲಾಶ್ರೀ… ಯಾವ ಸಿನಿಮಾಕ್ಕೆ ರೆಡಿಯಾಗ್ತಿದ್ದಾರೆ ಚೆಲುವೆ?
ಲಂಗ ದಾವಣಿಯಲ್ಲಿ ಮಿಂಚಿದ ಜೂ. ಮಾಲಾಶ್ರೀ… ಯಾವ ಸಿನಿಮಾಕ್ಕೆ ರೆಡಿಯಾಗ್ತಿದ್ದಾರೆ ಚೆಲುವೆ?
Aradhana Ram: ಕಾಟೇರಾ ಚೆಲುವೆ ಆರಾಧನಾ ರಾಮ್ ಮತ್ತೆ ಲಂಗ -ದಾವಣಿಯಲ್ಲಿ ಮಿಂಚಿದ್ದಾರೆ. ಅವರ ಮುದ್ದಾದ ನಗು, ಸ್ಟೈಲ್ ಈ ಬಾರಿ ಪಡ್ಡೆಗಳ ಹೃದಯ ಕದ್ದಿದೆ. ಮಲಾಶ್ರೀ ಪುತ್ರಿ ಯಾವ ಸಿನಿಮಾಕ್ಕೆ ತಯಾರಿ ನಡೆಸ್ತಿದ್ದಾರೆ? ಹೊಸ ಸಿನಿಮಾ ಸೆಟ್ ಏರಲು ರೆಡಿಯಾಗಿದ್ಯಾ? ಕೇಳ್ತಿದ್ದಾರೆ ಅಭಿಮಾನಿಗಳು.

ಆರಾಧನಾ ರಾಮ್
ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಮೊದಲ ಸಿನಿಮಾ ಮೂಲಕವೇ ಸಿನಿ ರಸಿಕರ ಎದೆಗೆ ಲಗ್ಗೆ ಇಟ್ಟಿದ್ದರು. ಮೊದಲ ಸಿನಿಮಾದಲ್ಲಿ ದರ್ಶನ್ ತೂಗುದೀಪ ಜೊತೆ ನಟಿಸುವ ಅವಕಾಶ ಪಡೆದುಕೊಂಡ ಆರಾಧನಾ, ಆ ಸಿನಿಮಾ ಮೂಲಕ ಜನ ಮನ ಗೆದ್ದಿದ್ದರು.
ಮತ್ತೆ ಲಂಗ ದಾವಣಿಯಲ್ಲಿ ಮಿಂಚಿಂಗ್
ಇದೀಗ ಆರಾಧನಾ ಮತ್ತೆ ಲಂಗ ದಾವಣಿಯಲ್ಲಿ ಮಿಂಚಿದ್ದಾರೆ. ಇದು ಯಾವುದೇ ಸಿನಿಮಾದ ಚಿತ್ರ ಅಲ್ಲ. ಅವರ ಫೋಟೋ ಶೂಟ್ ಸಂದರ್ಭದಲ್ಲಿ ಕ್ಲಿಕ್ ಮಾಡಿರುವಂತಹ ಮುದ್ದಾದ ಫೋಟೊಗಳು. ನಟಿಯನ್ನು ಮತ್ತೆ ಲಂಗದಾವಣಿಯಲ್ಲಿ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ಸಖತ್ ಕ್ಯೂಟ್ ಪೋಸ್
ಆರಾಧನಾ ಶೇರ್ ಮಾಡಿರುವ ಅಷ್ಟೂ ಫೋಟೊಗಳಲ್ಲೂ ನಟಿ ಒಂದೊಂದರಲ್ಲೂ ಒಂದೊಂದು ರೀತಿ ಪೋಸ್ ಕೊಟ್ಟಿದ್ದು, ನಟಿಯ ಮುದ್ದಾದ ಫನ್ನಿ ಫೇಸ್ ಎಕ್ಸ್’ಪ್ರೆಶನ್ ಅಭಿಮಾನಿಗಳ ಹೃದಯ ಗೆದ್ದಿದೆ. ಕನ್ನಡತಿ ಸೂಪರ್ ಎಂದಿದ್ದಾರೆ ಜನ.
ಜೂ. ಮಾಲಾಶ್ರೀ
ಈ ಫೋಟೊಗಳಲ್ಲಿ ನೋಡಿದ್ರೆ ಮಾಲಾಶ್ರೀ ಆರಂಭದಲ್ಲಿ ಸಿನಿಮಾ ಇಂಡಷ್ಟ್ರಿ ಬಂದಾಗ ಹೇಗಿದ್ರೋ ಹಾಗೇ ಕಾಣಿಸ್ತಿದ್ದಾರೆ ಆರಾಧನಾ. ಹಾಗಾಗಿಯೇ ಫ್ಯಾನ್ಸ್, ಜೂನಿಯರ್ ಮಾಲಾಶ್ರೀ ಎಂದು ಕಾಮೆಂಟ್ ಮಾಡಿದ್ದಾರೆ.
ಮಗಳಿಗೆ ಮಾಲಾಶ್ರೀ ಏನಂದ್ರು?
ಫೋಟೊಗಳನ್ನು ನೋಡಿ ಸ್ವತಃ ಮಾಲಾಶ್ರೀ ಕಾಮೆಂಟ್ ಮಾಡಿ Cutieee expressions, my pretty angel ಎಂದು ಮುದ್ದಾಗಿ ಪ್ರೀತಿ ತೋರಿಸಿದ್ದಾರೆ. ಇನ್ನು ಶ್ರುತಿ ಪುತ್ರಿ ಗೌರಿ ಹಾರ್ಟ್ ಇಮೋಜಿ ಕಾಮೆಂಟ್ ಮಾಡಿದ್ದಾರೆ.
ಮುಂದಿನ ಪ್ರಾಜೆಕ್ಟ್ ಯಾವುದು?
ಕಾಟೇರಾ ಸಿನಿಮಾ ರಿಲೀಸ್ ಆಗಿ ವರ್ಷ ಎರಡು ಆಗಿದೆ, ಆದ್ರೆ ಇಲ್ಲಿವರೆಗೆ ನಟಿಯ ಯಾವುದೇ ಹೊಸ ಸಿನಿಮಾ ರಿಲೀಸ್ ಆಗಿಲ್ಲ. ಅಭಿಮಾನಿಗಳಂತೂ ಆರಾಧನಾರನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ. ಉಪೇಂದ್ರ ಅವರ ಹೊಸ ಸಿನಿಮಾ ‘ನೆಕ್ಸ್ಟ್ ಲೆವೆಲ್’ನಲ್ಲಿ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಇದೆ, ಆದರೆ ಸಿನಿಮಾ ಯಾವಾಗ ಬರುತ್ತೆ ಅನ್ನೋದು ಮಾತ್ರ ಗೊತ್ತಿಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

