ದೈವಕ್ಕೆ ಅವಮಾನ ಆರೋಪ: ಹುಚ್ಚು ವರ್ತನೆಗೆ ಕ್ಷಮೆ ಕೇಳಿದ ರಣ್‌ವೀರ್ ಸಿಂಗ್
ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ 'ಕಾಂತಾರ' ಚಿತ್ರದ ದೈವವನ್ನು 'ದೆವ್ವ' ಎಂದು ಕರೆದು ನಟ ರಣ್‌ವೀರ್ ಸಿಂಗ್ ವಿವಾದ ಸೃಷ್ಟಿಸಿದ್ದರು. ರಣ್‌ವೀರ್ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿ, ಭಾವನೆಗಳಿಗೆ ನೋವಾಗಿದ್ದರೆ ಕ್ಷಮೆಯಾಚಿಸಿದ್ದಾರೆ.

ದೈವಕ್ಕೆ ದೆವ್ವ ಎಂದ ನಟ ರಣ್‌ವೀರ್
ಗೋವಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಕಾಂತಾರ-1 ಸಿನಿಮಾದಲ್ಲಿನ ರಿಷಬ್ ಶೆಟ್ಟಿ ಪಾತ್ರದ ಅನುಕರಣೆ ವೇಳೆ ದೈವಕ್ಕೆ ದೆವ್ವ ಎಂದು ನಟ ರಣ್‌ವೀರ್ ಸಿಂಗ್ ಹೇಳಿದ್ದರು. ತಮ್ಮ ವರ್ತನೆ ಮತ್ತು ಹೇಳಿಕೆಗೆ ಇದೀಗ ರಣ್‌ವೀರ್ ಸಿಂಗ್ ಸೋಶಿಯಲ್ ಮೀಡಿಯಾ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಣ್‌ವೀರ್ ಸಿಂಗ್ ಹೇಳಿದ್ದೇನು?
ಕಾಂತಾರ-1 ಸಿನಿಮಾದಲ್ಲಿನ ರಿಷಭ್ ಶೆಟ್ಟಿಯವರ ಅದ್ಭುತವಾದ ಅಭಿನಯ ತೋರಿಸೋದು ನನ್ನ ಉದ್ದೇಶವಾಗಿತ್ತು. ಈ ರೀತಿಯಾಗಿ ನಟಿಸಲು ಎಷ್ಟು ಪರಿಶ್ರಮ ಬೇಕಾಗುತ್ತೆ ಎಂಬುವುದು ಓರ್ವ ನಟನಾಗಿ ನನಗೆ ಗೊತ್ತಿದೆ. ರಿಷಭ್ ನಟನೆಗೆ ಮೆಚ್ಚುಗೆ ಸೂಚಿಸಿದ್ದೇನೆ. ನಮ್ಮ ದೇಶದ ಪ್ರತಿಯೊಂದು ಸಂಸ್ಕೃತಿ, ಸಂಪ್ರದಾಯ ಮತ್ತು ನಂಬಿಕೆಯನ್ನು ನಾನು ಯಾವಾಗಲೂ ಗೌರವಿಸುತ್ತೇನೆ. ಯಾರ ಭಾವನೆಗಳಿಗೆ ನೋವುಂಟು ಮಾಡಿದ್ದರೆ, ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದ್ದಾರೆ.
ದೂರು ದಾಖಲು
ನಟ ರಣ್‌ವೀರ್ ಸಿಂಗ್ ವಿರುದ್ಧ ಗೋವಾದಲ್ಲಿ ದೂರು ದಾಖಲಾಗಿದೆ. ಹಿಂದೂ ಜನಜಾಗೃತಿ ಸಮಿತಿ (ಎಚ್‌ಜೆಎಸ್) ಸಮಿತಿಯ ಪ್ರಮೋದ್ ತುಯೇಕರ್ ಮತ್ತು ದಿಲೀಪ್ ಶೆಟ್ಯೆ ಅವರು, ರಣ್‌ವೀರ್ ಪೂಜಿಸುವ ದೈವವನ್ನು ಸ್ತ್ರೀ ಪ್ರೇತ ಎಂದು ಅವಮಾನಿಸಿದ್ದಾರೆ ಎಂದು ಪಣಜಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ವಿಜಯ್ ನನ್ನ ಶತ್ರುವಲ್ಲ, ನನ್ನ 'ಟಾರ್ಗೆಟ್' ಬೇರೆಯೇ ಇದೆ: ಕಮಲ್ ಹಾಸನ್ ಹೇಳಿಕೆಗೆ ಹೌಹಾರಿದ ತಮಿಳುನಾಡು!
ವಿವಾದ ಸೃಷ್ಟಿ
ಗೋವಾದಲ್ಲಿ ಇತ್ತೀಚೆಗೆ ನಡೆದ ಅಂತಾರಾಷ್ಟ್ರೀಯ ಸಿನಿಮೋತ್ಸವದ ಸಮಾರೋಪ ಸಮಾರಂಭದಲ್ಲಿ ರಣವೀರ್ ಸಿಂಗ್, ಕಾಂತಾರದಲ್ಲಿ ರಿಷಬ್ ಶೆಟ್ಟಿಯವರ ನಟನೆ ಹೊಗಳುತ್ತಾ, ವೇದಿಕೆ ಮೇಲೆಯೇ ಸಿನಿಮಾದ ದೈವದ ನಟನೆ ಅನುಕರಿಸಿದ್ದರು. ಅನುಕರಣೆ ಮಾಡುವ ಭರದಲ್ಲಿ ರಣವೀರ್ ಅವರು ದೈವದ ಅಭಿನಯವನ್ನು ‘ದೆವ್ವ’ ಎಂದು ಹೇಳಿ ವಿವಾದ ಸೃಷ್ಟಿಸಿಕೊಂಡಿದ್ದರು.
ಇದನ್ನೂ ಓದಿ: James Cameron: ಸಿನಿಮಾ ನಟರನ್ನೂ AI ಸೃಷ್ಟಿಸುವಂತಾದರೆ ಅದಕ್ಕಿಂತ ಭಯಾನಕ ಬೇರೇನಿಲ್ಲ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

