50ನೇ ವಸಂತಕ್ಕೆ ಕಾಲಿರಿಸಿದ ಅಭಿಷೇಕ್ ಬಚ್ಚನ್: ಪತಿಗೆ ಐಶ್ ಮಾಡಿದ ವಿಶ್‌ಗೆ ಅಭಿಮಾನಿಗಳು ಫಿದಾ
Abhishek Bachchan 50th birthday: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರ 50ನೇ ಹುಟ್ಟುಹಬ್ಬಕ್ಕೆ ಪತ್ನಿ ಐಶ್ವರ್ಯಾ ರೈ ಇನ್ಸ್ಟಾಗ್ರಾಮ್‌ನಲ್ಲಿ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ಭಾರಿ ವೈರಲ್ ಆಗಿದೆ.

ಅಭಿಷೇಕ್ ಬಚ್ಚನ್ 50ನೇ ಹುಟ್ಟುಹಬ್ಬ
ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಅವರು ತಮ್ಮ 50ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅವರಿಗೆ ಅವರ ಅಭಿಮಾನಿಗಳು, ಬಂಧು ಬಳಗದವರು, ಆತ್ಮೀಯ ಸ್ನೇಹಿತರು ಹೀಗೆ ದೇಶದೆಲ್ಲೆಡೆಯ ಅವರ ಅಭಿಮಾನಿಗಳು ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಆದರೆ ಈ ಬಾರಿ ಅವರ ಪತ್ನಿ ಐಶ್ವರ್ಯಾ ರೈ ಮಾಡಿದ ವಿಶ್ ಎಲ್ಲರ ಗಮನ ಸೆಳೆದಿದೆ. ಹೌದು ಐಶ್ವರ್ಯಾ ರೈ ಅವರು ತಮ್ಮ ಪತಿ ಅಭಿಷೇಕ್ ಬಚ್ಚನ್ 50ನೇ ವಸಂತಕ್ಕೆ ಕಾಲಿರಿಸಿದ ಹಿನ್ನೆಲೆ ಇನ್ಸ್ಟಾಗ್ರಾಮ್ ಮೂಲಕ ಭಾವುಕವಾಗಿ ವಿಶ್ ಮಾಡಿದ್ದು, ಅವರು ಈ ಬಾರಿ ಮಾಡಿದ ವಿಶ್ ಅನೇಕರ ಗಮನ ಸೆಳೆದಿದೆ.
ಪತ್ನಿ ಐಶ್ ಭಾವುಕ ವಿಶ್
ಅಭಿಷೇಕ್ ಬಚ್ಚನ್ ಅವರ ಬಾಲ್ಯದ ಫೋಟೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಐಶ್ವರ್ಯಾ ರೈ ಹಂಚಿಕೊಂಡಿದ್ದು, ಆ ಫೋಟೋದಲ್ಲಿ ಅಭಿಷೇಕ್‌ನ ಕಣ್ಣು ಮಾತ್ರ ಕಾಣಿಸುತ್ತಿದೆ. ಫೋಟೋದ ಜೊತೆಗೆ ಐಶ್ವರ್ಯಾ ರೈ ಹೀಗೆ ಬರೆದಿದ್ದಾರೆ. ಪ್ರೀತಿಯ ಬೇಬಿ-ಪಪ್ಪಾ, ನಿಮಗೆ 50 ನೇ ಹುಟ್ಟುಹಬ್ಬದ ಶುಭಾಶಯಗಳು, ದೇವರು ನಿಮಗೆ ಪ್ರೀತಿ, ಶಾಂತಿ, ಸಂತೋಷ, ಸಂತೃಪ್ತಿ ಮತ್ತು ಉತ್ತಮ ಆರೋಗ್ಯವನ್ನು ನೀಡಲಿ. ಬಂಗಾರವಾಗಿರಿ. ಪ್ರೀತಿಯಲ್ಲಿ ಮಿಂಚಿರಿ ಎಂದು ಬರೆದಿದ್ದಾರೆ.
ತಂದೆಯಿಂದಲೂ ಮಗನಿಗೆ ಶುಭಾಶಯ
ಹಾಗೆಯೇ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಕೂಡ ತಮ್ಮ ಏಕೈಕ ಪುತ್ರ ಅಭಿಷೇಕ್ ಬಚ್ಚನ್ ಅವರ 50ನೇ ಹುಟ್ಟುಹಬ್ಬಕ್ಕೆ ಭಾವುಕ ಸಂದೇಶವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ತಮ್ಮ ಮಗನಿಗೆ ಪ್ರೀತಿ ಆಶೀರ್ವಾದ ನೀಡಿದ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ. ಅಭಿಷೇಕ್ ಅವರ 50 ನೇ ಹುಟ್ಟುಹಬ್ಬಕ್ಕೆ ಶುಭಾಶಯಗಳನ್ನು ಕಳುಹಿಸಿದ ಎಲ್ಲರಿಗೂ, ನನ್ನ ಕೃತಜ್ಞತೆ ಮತ್ತು ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ. ನಿಮ್ಮ ಆಶೀರ್ವಾದಗಳು ಅವರಿಗೆ ಮುಂದುವರಿಯಲು ಧೈರ್ಯ ಮತ್ತು ಶಕ್ತಿಯನ್ನು ನೀಡುತ್ತವೆ ಎಂದು ಅವರು ಬರೆದಿದ್ದಾರೆ.
ಬಾಲಿವುಡ್‌ನ ಗೆಳೆಯರಿಂದಲೂ ಶುಭಾಶಯ
ಅಭಿಷೇಕ್ ಅವರ ವಿಶೇಷ ದಿನದಂದು ಅವರ ಕುಟುಂಬದ ಹೊರತಾಗಿ, ಅವರ ಬಾಲಿವುಡ್‌ನ ಹಲವರು ಸಹೋದ್ಯೋಗಿಗಳು ಮತ್ತು ಸ್ನೇಹಿತರು ಅವರಿಗೆ ಶುಭಾಶಯಗಳನ್ನು ಸಲ್ಲಿಸಿದ್ದಾರೆ. ನಟ ಜಾಕಿ ಶ್ರಾಫ್ ಅಭಿಷೇಕ್ ಅವರ ಚಿತ್ರಗಳನ್ನು ಒಳಗೊಂಡ ವೀಡಿಯೊವನ್ನು ಹಂಚಿಕೊಂಡು ಬಿಗ್ ಹಗ್ಸ್ ಎಂದು ಬರೆದಿದ್ದಾರೆ. ನಟ ರಿತೇಶ್ ದೇಶಮುಖ್ ತಮ್ಮ ಹೌಸ್‌ಫುಲ್ 5 ನ ಸಹನಟನಾಗಿರುವ ಅಬಿಷೇಕ್‌ಗೆ ಭಾವನಾತ್ಮಕ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ, ಪ್ರೀತಿಯ @bachchan,ನೀವೆಂದರೆ ನನ್ನ ಪಾಲಿಗೆ ಏನು ಎಂದು ಹೇಳಲು ನನ್ನ ಬಳಿ ಪದಗಳಿಲ್ಲ, ನೀವು ಯಾವಾಗಲೂ ಅಣ್ಣನಂತೆ ನನ್ನೊಂದಿಗಿದ್ದೀರಿ. ಈ ದಿನ ನಾನು ನಿಮಗೆ ನಗು, ಪ್ರೀತಿ ಮತ್ತು ಉತ್ತಮ ಆರೋಗ್ಯದಿಂದ ತುಂಬಿದ ಸಂತೋಷದ ಜಗತ್ತನ್ನು ಬಯಸುತ್ತೇನೆ. ಹುಟ್ಟುಹಬ್ಬದ ಶುಭಾಶಯಗಳು ನನ್ನ ಸಹೋದರ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ.
ಇತ್ತೀಚಿನ ಸುದ್ದಿ: ವಿಜಯಪುರದ ಮಂಗಳೂರಿನಲ್ಲಿ ರೆಡ್ ಬರ್ಡ್ ಪ್ರವೇಟ್ ಜೆಟ್ ಪತನ
ಡಿವೋರ್ಸ್ ಗಾಸಿಪ್ ಬಗ್ಗೆ ಅಭಿಷೇಕ್ ಮಾತು
ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಅವರು ಚೆನ್ನಾಗಿಯೇ ಇದ್ದರೂ ಇಬ್ಬರ ಮಧ್ಯೆ ವಿಚ್ಛೇದನ ಆಗುತ್ತೆ ಎಂದು ಹೇಳುವ ಸುದ್ದಿಗಳು ಸಾಕಷ್ಟು ಬಾರಿ ಮಾಧ್ಯಮಗಳಲ್ಲಿ ಸಂಚಲನ ಸೃಷ್ಟಿಸಿದ್ದವು. ಈ ಬಗ್ಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅಭಿಷೇಕ್, ನಮ್ಮ ಮದುವೆ ಹಾಗೂ ವಿಚ್ಚೇದನಕ್ಕೆ ಸಂಬಂಧಿಸಿದಂತೆ ಹಬ್ಬಿರುವ ಊಹಾಪೋಹಾಗಳು ಸಂಪೂರ್ಣವಾಗಿ ಸುಳ್ಳು ಹಾಗೂ ಉದ್ದೇಶಪೂರ್ವಕವಾಗಿ ನೋವುಂಟು ಮಾಡುವಂತಹವು. ನಾವು ಮದುವೆಯಾಗುವ ಮೊದಲು, ಅವರು ನಮ್ಮ ಮದುವೆಯ ದಿನಾಂಕಗಳನ್ನು ಊಹಿಸುತ್ತಿದ್ದರು. ನಾವು ಮದುವೆಯಾದ ನಂತರ, ನಾವು ಯಾವಾಗ ಬೇರ್ಪಡುತ್ತೇವೆ ಎಂದು ಅವರು ನಿರ್ಧರಿಸಲು ಪ್ರಾರಂಭಿಸಿದರು. ಇದೆಲ್ಲವೂ ಅಸಂಬದ್ಧ. ಅವಳಿಗೆ ನನ್ನ ಬಗ್ಗೆ ತಿಳಿದಿದೆ, ನನಗೆ ಅವಳ ಸತ್ಯ ತಿಳಿದಿದೆ. ನಾವು ಪ್ರೀತಿಯ, ಸ್ಥಿರವಾಗಿ ನೆಲೆಗೊಂಡ ಕುಟುಂಬಕ್ಕೆ ಮರಳುತ್ತೇವೆ ಮತ್ತು ಅದುವೇ ನಿಜವಾಗಿಯೂ ಮುಖ್ಯ. ಎಂದು ನಟ ಹೇಳಿದ್ದಾರೆ.
ಇದನ್ನೂ ಓದಿ: ಮದುವೆ ಸಾಮಾಜಿಕ ಕರ್ತವ್ಯ, ಕೇವಲ ದೈಹಿಕ ಒಪ್ಪಿಗೆಯ ವಿಚಾರವಲ್ಲ: ಮೋಹನ್ ಭಾಗವತ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

