ಟ್ರೋಲಿಂಗ್‌ನ ಈ ಹೊಸ ಪ್ರವೃತ್ತಿಗೆ ನಾನು ನಿಮಗೆ ಬಹಳಷ್ಟು ಉತ್ತಮ ಉದಾಹರಣೆಯನ್ನೂ ನೀಡಬಲ್ಲೆ, ಟ್ರೋಲಿಂಗ್, ಗಾಸಿಪ್ ವದಂತಿಗಳಿಂದ ಅದೆಷ್ಟು ಸಂಸಾರಗಳು ಬೀದಿಗೆ ಬಂದು ಬಿದ್ದವೆ ಎಂದು ನಾನು ಹೇಳಬಲ್ಲೆ.. ಆದರೆ, ಕೊನೆಗೊಂದು ವಿಷಯ ಎಲ್ಲರಿಗೂ ಅರ್ಥವಾಗಬೇಕು. ಅದೇನೆಂದರೆ.. ಎಲ್ಲದಕ್ಕೂ ಒಂದು ಅಂತ್ಯ ಅಂತ ಇದೆ..
ಕಿಡಿಕಿಡಿಯಾದ ಅಭಿಷೇಕ್ ಬಚ್ಚನ್!
ನಟ ಅಭಿಷೇಕ್ ಬಚ್ಚನ್ (Abhishek Bachchan) ತಮ್ಮ ವೈಯಕ್ತಿಕ ಜೀವನದ ಕಾರಣದಿಂದಾಗಿ ಆಗಾಗ್ಗೆ ಸುದ್ದಿಯಲ್ಲಿರೋದು ಹೊಸ ಸಂಗತಿಯೇನಲ್ಲ. ಪತ್ನಿ ಐಶ್ವರ್ಯಾ ರೈ ಜೊತೆ ಅಭಿಷೇಕ್ ವಿಚ್ಛೇದನ ಪಡೆಯುತ್ತಾರೆ, ಅವರಿಬ್ಬರ ಮಧ್ಯೆ ಎಲ್ಲವೂ ಸರಿಯಿಲ್ಲ, ಅತ್ತೆ-ಸೊಸೆಗೆ ಆಗಿಬರೋದಿಲ್ಲ' ಎಂದೆಲ್ಲಾ ಸುದ್ದಿಯಾಗಿತ್ತು. ಜೊತೆಗೆ, ಅಂದೊಮ್ಮೆ ಅಭಿಷೇಕ್ ಹೆಸರು ನಟಿ ನಟಿ ನಿಮ್ರತ್ ಕೌರ್ (Nimrat Kaur) ಜೊತೆ ಸಂಬಂಧ ಹೊಂದಿತ್ತು. ಅದೂ ಕೂಡ ಈ ಇಬ್ಬರೂ 'ದಾಸವಿ' ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ ಬಳಿಕ, ಅವರಿಬ್ಬರೂ ವಿವಾಹೇತರ ಸಂಬಂಧ ಹೊಂದಿದ್ದಾರೆ ಎನ್ನಲಾಗಿತ್ತು.
ಊಹಾಪೋಹಗಳಿಗೆ, ಗಾಸಿಪ್‌ಗಳಿಗೆ ಹೋಲ್‌ಸೇಲ್ ಆಗಿ ಉತ್ತರ
ಇದೀಗ ತಮ್ಮ ವಿರುದ್ಧ ಹಬ್ಬಿಸಲಾಗಿರುವ ಎಲ್ಲಾ ಊಹಾಪೋಹಗಳಿಗೆ, ಗಾಸಿಪ್‌ಗಳಿಗೆ ಹೋಲ್‌ಸೇಲ್ ಆಗಿ ಉತ್ತರ ನೀಡಿದ್ದಾರೆ ಅಭಿಷೇಕ್ ಬಚ್ಚನ್. ಅಭಿಷೇಕ್ ನಿಮ್ರತ್ ಕೌರ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಬಲವಾದ ವದಂತಿಗಳು ಹಬ್ಬಿದ್ದವು. ಕೊನೆಗೂ ಅಭಿಷೇಕ್ ಈ ಬಗ್ಗೆ ಮೌನ ಮುರಿದಿದ್ದಾರೆ. ಇತ್ತೀಚಿಗೆ ಸಂದರ್ಶನವೊಂದರಲ್ಲಿ, ನಿಮ್ರತ್ ಅವರನ್ನು ನೇರವಾಗಿ ಹೆಸರಿಸಲಿಲ್ಲ, ಆದರೆ ಅಂತಹ ಎಲ್ಲಾ ವದಂತಿಗಳು ಸಾಕಷ್ಟು ಸಮಸ್ಯೆ ತಂದಿತು' ಎಂದಿದ್ದಾರೆ.
'ನಾನು ಹೇಳಬಯಸುವುದು ಇಷ್ಟೇ.. ತಪ್ಪು ಅಥವಾ ಸುಳ್ಳು ಮಾಹಿತಿಯನ್ನು ಹರಡುತ್ತಿರುವ ವ್ಯಕ್ತಿಗೆ ಅದನ್ನು ಸ್ಪಷ್ಟಪಡಿಸುವ ಅಥವಾ ಸರಿಪಡಿಸುವ ಯಾವುದೇ ಆಸಕ್ತಿ ಇರುವುದಿಲ್ಲ. ಮೊದಲು, ನನ್ನ ಬಗ್ಗೆ ಹಬ್ಬಿಸಲಾದ ವಿಷಯಗಳು ನನ್ನ ಮೇಲೆ ಪರಿಣಾಮ ಬೀರಲಿಲ್ಲ. ಆದರೆ ಇಂದು ನನಗೆ ಒಂದು ಕುಟುಂಬವಿದೆ. ಹೀಗಾಗಿ ಆ ಸುದ್ದಿಗಳು ತುಂಬಾ ಅಸಮಾಧಾನವನ್ನು ಉಂಟುಮಾಡುತ್ತದೆ. ನಾನು ಆ ಬಗ್ಗೆ ಕೆಲವು ಸ್ಪಷ್ಟಿಕರಣಗಳನ್ನು ನೀಡಿದ್ದರೂ, ಜನರು ಅದನ್ನು ಅವರದೇ ಆದ ವಿರುದ್ಧ ರೀತಿಯಲ್ಲಿ ಅರ್ಥೈಸುತ್ತಾರೆ. ಏಕೆಂದರೆ ನಕಾರಾತ್ಮಕ ಸುದ್ದಿಗಳು ಮಾರಾಟವಾಗುತ್ತವೆ.
ನೀವು ನನ್ನ ಜೀವನವನ್ನು ನಡೆಸುತ್ತಿಲ್ಲ
'ಜನರು ನನ್ನ ಸ್ಥಾನದಲ್ಲಿಲ್ಲ. ನೀವು ನನ್ನ ಜೀವನವನ್ನು ನಡೆಸುತ್ತಿಲ್ಲ. ನಾನು ಯಾರಿಗೆ ಜವಾಬ್ದಾರನಾಗಿರುತ್ತೇನೆಯೋ ಅವರಿಗೆ ನೀವು ಜವಾಬ್ದಾರರಲ್ಲ' ಎಂದು ಅಭಿಷೇಕ್ ಬಚ್ಚನ್ ಖಾರವಾಗಿಯೇ ನುಡಿದಿದ್ದಾರೆ. ಜೊತೆಗೆ, 'ಇಂತಹ ನಕಾರಾತ್ಮಕತೆಯನ್ನು ಹರಡುವ ಜನರು, ಮೊದಲನೆಯದಾಗಿ ತಮ್ಮ ಆತ್ಮಸಾಕ್ಷಿಯೊಂದಿಗೆ ಬದುಕಬೇಕು, ತಮ್ಮ ಆತ್ಮಸಾಕ್ಷಿಯೊಂದಿಗೆ ವರ್ತಿಸಬೇಕು. ಅವರು ತಮ್ಮ ಸೃಷ್ಟಿಕರ್ತನಿಗೆ ಉತ್ತರಿಸಬೇಕು. ಇದು ನನ್ನ ಬಗೆಗಿನ ಸುದ್ದಿಯಾದರೂ ನನಗೆ ಮಾತ್ರವಲ್ಲ, ಇದು ನನ್ನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ. ಇದರಿಂದ ಎಷ್ಟು ಕಠಿಣ ಪರಿಸ್ಥಿತಿ ಉಂಟಾಗುತ್ತದೆ ಎಂದರೆ, ನಮ್ಮ ಇಡೀ ಕುಟುಂಬ ಇದರಲ್ಲಿ ಭಾಗಿಯಾಗಬೇಕಾಗುತ್ತದೆ.
ಟ್ರೋಲಿಂಗ್‌ನ ಈ ಹೊಸ ಪ್ರವೃತ್ತಿಗೆ ನಾನು ನಿಮಗೆ ಬಹಳಷ್ಟು ಉತ್ತಮ ಉದಾಹರಣೆಯನ್ನೂ ನೀಡಬಲ್ಲೆ, ಟ್ರೋಲಿಂಗ್, ಗಾಸಿಪ್ ವದಂತಿಗಳಿಂದ ಅದೆಷ್ಟು ಸಂಸಾರಗಳು ಬೀದಿಗೆ ಬಂದು ಬಿದ್ದವೆ ಎಂದು ನಾನು ಹೇಳಬಲ್ಲೆ.. ಆದರೆ, ಕೊನೆಗೊಂದು ವಿಷಯ ಎಲ್ಲರಿಗೂ ಅರ್ಥವಾಗಬೇಕು. ಅದೇನೆಂದರೆ.. ಎಲ್ಲದಕ್ಕೂ ಒಂದು ಅಂತ್ಯ ಅಂತ ಇದೆ.. ಸಾಕಷ್ಟು ಸಂಗತಿಗಳಿಗೆ ಕಾಲವೇ ಉತ್ತರಿಸಲಿದೆ' ಎಂದಿದ್ದಾರೆ ಅಭಿಷೇಕ್ ಬಚ್ಚನ್.
ಆದರೆ, ಅಭಿಷೇಕ್ ಬಚ್ಚನ್ ಬಗ್ಗೆ ವದಂತಿಗಳು ವ್ಯಾಪಕವಾಗಿ ಹರಡಿದಾಗ, ಬಚ್ಚನ್ ಕುಟುಂಬದ ಆಪ್ತ ಸ್ನೇಹಿತರೊಬ್ಬರು ಮಾತನಾಡಿ ಹೀಗೆ ಹೇಳಿದ್ದರು.. 'ಅಭಿಷೇಕ್ ತಮ್ಮ ಪತ್ನಿಗೆ ಎಂದಿಗೂ ಮೋಸ ಮಾಡುವುದಿಲ್ಲ, ಅಭಿಷೇಕ್ ತಮ್ಮ ಸಂಬಂಧದಲ್ಲಿ ಯಾವಾಗಲೂ ಪ್ರಾಮಾಣಿಕರಾಗಿದ್ದಾರೆ' ಎಂದು ಸ್ಪಷ್ಟಪಡಿಸಿದ್ದರು. ಆದರೂ ಕೂಡ ಅವರ ವಿರುದ್ಧ ಹಬ್ಬುತ್ತಿರುವ ಸುದ್ದಿ ಸ್ಟಾಪ್ ಆಗುತ್ತಿಲ್ಲ..!


