MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Khalnayak Returns ಬೆನ್ನಲ್ಲೇ ಸಂಜಯ್​ ದತ್​ ಬೆನ್ನೇರಿತು ಕಾಗೆ: ಸಿಎಂ ಸಿದ್ದು ನೆನಪಿಸಿದ ಕನ್ನಡಿಗರು! Video Viral

Khalnayak Returns ಬೆನ್ನಲ್ಲೇ ಸಂಜಯ್​ ದತ್​ ಬೆನ್ನೇರಿತು ಕಾಗೆ: ಸಿಎಂ ಸಿದ್ದು ನೆನಪಿಸಿದ ಕನ್ನಡಿಗರು! Video Viral

'ಖಳನಾಯಕ್ ರಿಟರ್ನ್ಸ್' ಚಿತ್ರದ ಮೂಲಕ ಮರಳುತ್ತಿರುವ ನಟ ಸಂಜಯ್ ದತ್ ಅವರ ಕಾರಿನ ಮೇಲೆ ಕಾಗೆ ಕುಳಿತ ಘಟನೆ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆಯು, ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿನ ಮೇಲೆ ಕಾಗೆ ಕುಳಿತು ವಿವಾದ ಸೃಷ್ಟಿಸಿದ್ದ 2016ರ ಪ್ರಸಂಗವನ್ನು ನೆನಪಿಸಿದೆ.

2 Min read
Author : Suchethana D
Published : Apr 26 2026, 07:12 PM IST
Share this Photo Gallery
  • FB
  • TW
  • Linkdin
  • Whatsapp
16
 ‘ಖಳನಾಯಕ್ ರಿಟರ್ನ್ಸ್’
Image Credit : instagram

‘ಖಳನಾಯಕ್ ರಿಟರ್ನ್ಸ್’

ನಟ ಸಂಜಯ್​ ದತ್​ ಅವರ ಖಳನಾಯಕ್​ ಚಿತ್ರ ಬ್ಲಾಕ್​ಬಸ್ಟರ್​ ಆಗಿತ್ತು. 30 ವರ್ಷಗಳ ಹಿಂದೆ ರಿಲೀಸ್​ ಆಗಿದ್ದ ಈ ಚಿತ್ರದ ಸೀಕ್ವೆಲ್ ಈಗ ಸಿದ್ಧವಾಗುತ್ತಿದೆ. ಮೊನ್ನೆ 24ರಂದು ‘ಖಳನಾಯಕ್ ರಿಟರ್ನ್ಸ್’ (Khalnayak Returns) ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಟೀಸರ್‌ನಲ್ಲಿ ಸಂಜಯ್ ದತ್ ಅತ್ಯಂತ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

26
ಜಾಲತಾಣದಲ್ಲಿ ಮಾಹಿತಿ
Image Credit : instagram

ಜಾಲತಾಣದಲ್ಲಿ ಮಾಹಿತಿ

ಈ ಸಿನಿಮಾ ಬಗ್ಗೆ ಜಾಲತಾಣದಲ್ಲಿ ಬರೆದುಕೊಂಡಿರುವ ನಟ, ‘ಯಾವುದೇ ಕಥೆ ಮುಗಿಯುವುದಿಲ್ಲ. ಅದು ಮತ್ತೆ ಆರಂಭವಾಗುತ್ತದೆ. ಖಳನಾಯಕ್ ರಿಟರ್ನ್ಸ್’ ಎಂದು ಬರೆದುಕೊಂಡಿದ್ದಾರೆ. ‘ಪ್ರತಿ ಕಥೆಗೂ ಒಂದು ಸಮಯವಿರುತ್ತದೆ. ಈಗ ಅದರ ಸಮಯ ಬಂದಿದೆ’ ಎಂಬ ಕ್ಯಾಪ್ಷನ್ ನೀಡಿದ್ದಾರೆ.

Related Articles

Related image1
ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್​ ಹೇಳಿದ್ರು ನೋಡಿ ಈ ಯುವತಿ
Related image2
ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು
36
ಏನು ಗ್ರಹಚಾರ ಕಾದಿದೆ?
Image Credit : viralbhayani Instagram

ಏನು ಗ್ರಹಚಾರ ಕಾದಿದೆ?

ಆದರೆ ಇದರ ಬೆನ್ನಲ್ಲೇ ಇದೀಗ ಅವರ ಕಾರಿನ ಮೇಲೆ ಕಾಗೆಯೊಂದು ಕುಳಿತು ಹಾರಿ ಹೋಗಿದೆ. ಬಹುಶಃ ಇದನ್ನು ಖುದ್ದು ನಟನೂ ನೋಡಿರಲಿಕ್ಕಿಲ್ಲ. ನೋಡಿದ್ದರೂ ಅಷ್ಟೊಂದು ಗಮನ ಹರಿಸಿರಲಿಕ್ಕಿಲ್ಲ. ಆದರೆ, ಪಾಪರಾಜಿಗಳು ಬಿಡಬೇಕಲ್ಲ. ನಟ ಕಾರಿನಿಂದ ಇಳಿಯುವುದಕ್ಕೂ ಸರಿಯಾಗಿ ಆ ಕಾಗೆ ಬಂದ ಕಾರಿನ ಮೇಲೆ ಕುಳಿತು ಅಲ್ಲಿಂದ ಹಾರಿ ಹೋಗಿದೆ. ಇದಾಗಲೇ ಜೈಲು ಸೇರಿ ಬಂದಿರೋ ನಟನಿಗೆ ಇನ್ನೇನು ಗ್ರಹಚಾರ ಕಾದಿದೆ ಎಂದು ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ.

46
ಮೂಢನಂಬಿಕೆ ನಂಬಲ್ಲ
Image Credit : Asianet News

ಮೂಢನಂಬಿಕೆ ನಂಬಲ್ಲ

ಆದರೆ ಕಾಗೆಯ ವಿಷಯ ಬಂದಾಗಲೆಲ್ಲಾ ನಮ್ಮ ಕನ್ನಡಿಗರು ನೆನಪಿಸಿಕೊಳ್ಳುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು. ಮೂಢನಂಬಿಕೆ ನಂಬಲ್ಲ, ಹಿಂದೂ ಹಬ್ಬಗಳ ದಿನಗಳಂದು ನಾನು ಮಾಂಸಾಹಾರ ಸೇವನೆ ಮಾಡುತ್ತೇನೆ ಎಂದೆಲ್ಲಾ ಹೇಳುವ ಮುಖ್ಯಮಂತ್ರಿಗಳು, ಚುನಾವಣೆ ಹತ್ತಿರ ಬಂದಾಗ ದೇಗುಲಗಳಲ್ಲಿ ಪೂಜೆ ಸಲ್ಲಿಸುವ ವಿಡಿಯೋಗಳೆಲ್ಲಾ ಹರಿಬಿಟ್ಟು ಟ್ರೋಲ್​ ಮಾಡುವವರಿಗೇನೂ ಕಮ್ಮಿಯಿಲ್ಲ ಎನ್ನಿ. ತಾವು ನಂಬದಿದ್ದರೂ ತಮ್ಮ ಪತ್ನಿಗಾಗಿ ಹೀಗೆಲ್ಲಾ ಮಾಡುತ್ತೇವೆ ಎಂದು ಸಿಎಂ ಆಗಲೀ, ಪ್ರಕಾಶ್​ ರಾಜ್​ ಆಗಲಿ ಎಲ್ಲರೂ ಹೇಳುವುದು ಕಾಮನ್​.

56
2016ರ ಘಟನೆ
Image Credit : Social Media

2016ರ ಘಟನೆ

ಆದರೆ, ವಿಷ್ಯ ಅದಲ್ಲ. ಇದೀಗ ಸಂಜಯ್​ ದತ್​ ಅವರ ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ 2016ರ ಘಟನೆಯನ್ನು ಜಾಲತಾಣದಲ್ಲಿ ಮತ್ತೆ ನೆನಪಿಸಲಾಗುತ್ತಿದೆ. ಆಗ ಸಿದ್ದರಾಮಯ್ಯನವರ ಅಧಿಕೃತ ಕಾರಿನ ಬಾನೆಟ್ ಮೇಲೆ ಕಾಗೆ ಕುಳಿತುಕೊಂಡಾಗ, ಮೂಢನಂಬಿಕೆಯನ್ನು ವಿರೋಧಿಸುವ ಸಿಎಂ ಅದೇ ಕಾಗೆ ಕಾರಣಕ್ಕೆ ಕಾರು ಬದಲಾಯಿಸಿದರು ಎಂದು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿದ್ದವು.

66
ಕಾರು ಬದಲಾಯಿಸಿದ್ದ ಸಿಎಂ ಸಿದ್ದರಾಮಯ್ಯ
Image Credit : Asianet News

ಕಾರು ಬದಲಾಯಿಸಿದ್ದ ಸಿಎಂ ಸಿದ್ದರಾಮಯ್ಯ

ಏಕೆಂದರೆ, ಮೂಢ ನಂಬಿಕೆಯೆಲ್ಲಾ ನಂಬಲ್ಲ ಎಂದಿದ್ದ ಸಿಎಂ, ಕಾಗೆ ಕುಳಿತ ಕೆಲವೇ ದಿನಗಳಲ್ಲಿ ಅದನ್ನು ಬದಲಾಯಿಸಿ, ಹೊಸ ಕಾರನ್ನು ಖರೀದಿಸಿದರು. ಆದರೆ ಇದು ಟ್ರೋಲ್​ ಆಗುತ್ತಲೇ ಅವರು, ಸಮಜಾಯಿಷಿ ನೀಡಿದ್ದರು. ಹಳೆಯ ಕಾರು ಹೆಚ್ಚು ಓಡಿದ್ದರಿಂದಲೇ ಹೊಸ ಕಾರು ಖರೀದಿಸಲಾಗಿದೆ ಎಂದಿದ್ದರು. ನಂತರದ ದಿನಗಳಲ್ಲಿ ಕೇರಳದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾಗ, ಸಿದ್ದರಾಮಯ್ಯ ಅವರ ಮೇಲಿದ್ದ ಮರದ ಕೊಂಬೆಯಿಂದ ಕಾಗೆಯೊಂದು ಅವರ ಬಿಳಿ ಪಂಚೆಯ ಮೇಲೆ ಹಿಕ್ಕೆ ಹಾಕಿದ ಪ್ರಸಂಗವೂ ಸಾಕಷ್ಟು ಸುದ್ದಿಯಾಗಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜ್ಯೋತಿಷ್ಯ
ರಾಜಕೀಯ ಸುದ್ದಿ
ಸಿದ್ದರಾಮಯ್ಯ
ಮನರಂಜನಾ ಸುದ್ದಿ
ಬಾಲಿವುಡ್

Latest Videos
Recommended Stories
Recommended image1
ಆ ಒಂದು ಕಿಸ್‌ ಸೀನ್‌ಗೆ ಐಶ್ವರ್ಯಾ ರೈಗೆ ಲೀಗಲ್ ನೋಟಿಸ್ ಬಂದಿತ್ತು: ಹಳೆಯ ವಿಚಾರ ವೈರಲ್
Recommended image2
ಗಂಡನ ಮನೆಯಲ್ಲಿ ವಿಚಿತ್ರ ಪ್ರಾಣಿ ಕಂಡು ಬೆಚ್ಚಿಬಿದ್ದ ನಟಿ ವೈಷ್ಣವಿ ಗೌಡ! ವಿಡಿಯೋ ಹಂಚಿಕೊಂಡ ಮೂಗುತಿ ಸುಂದರಿ
Recommended image3
Bhagyalakshmi: ಮತ್ತೊಂದು ಮದ್ವೆಯಾದ ಅಮ್ಮನ ಕಂಡ್ರೆ ಗುರ್​ ಎನ್ನೋ ತನ್ವಿ, ಇಲ್ನೋಡಿ ಭರ್ಜರಿ ಸ್ಟೆಪ್​
Related Stories
Recommended image1
ಸಿಎಂ ಸಾಹೆಬ್ರೇ, ಸಿಎಂ ಸಾಹೆಬ್ರೇ ಎಂದು ಕೂಗಿ ಕೂಗಿ ಏನ್​ ಹೇಳಿದ್ರು ನೋಡಿ ಈ ಯುವತಿ
Recommended image2
ಸಿಎಂ ಸಿದ್ದರಾಮಯ್ಯ ಬಗ್ಗೆ ನಟಿ ಉಮಾಶ್ರಿ ಇದೆಂಥ ಮಾತು- ವ್ಹಾರೆವ್ಹಾ ಎಂದ ನೆಟ್ಟಿಗರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved