ಖ್ಯಾತ ನಟಿ ಉಮಾಶ್ರೀ ಅವರು ಸಂದರ್ಶನವೊಂದರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವ್ಯಕ್ತಿತ್ವ ಮತ್ತು ಕೊಡುಗೆಗಳನ್ನು ಮನಸಾರೆ ಹೊಗಳಿದ್ದಾರೆ. ಅವರೊಬ್ಬ ಶ್ರೇಷ್ಠ ವ್ಯಕ್ತಿ, ಎಲ್ಲರನ್ನೂ ಸಮಾನವಾಗಿ ಕಾಣುತ್ತಾರೆ ಎಂದು ಬಣ್ಣಿಸಿದ್ದು, ಈ ಹೇಳಿಕೆಗೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ನಟನೆಯಲ್ಲಿ ನಂಬರ್ 1, ಯಾವುದೇ ಪಾತ್ರ ಕೊಟ್ಟರೂ ಆ ಪಾತ್ರದೊಳಕ್ಕೆ ಹೋಗಿ ಅದನ್ನು ಮೈಮೇಲೆ ಆಹ್ವಾನಿಸಿಕೊಂಡು ನಟನೆ ಮಾಡುವ ಪರಿಯಿಂದಲೇ ಅಸಂಖ್ಯ ಅಭಿಮಾನಿಗಳನ್ನು ಗಳಿಸಿದವರು ನಟಿ ಉಮಾಶ್ರೀ. ಪುಟ್ಟಕ್ಕನ ಮಕ್ಕಳು ಸೀರಿಯಲ್​ನಲ್ಲಿ ಪುಟ್ಟಕ್ಕನ ಪಾತ್ರದ ಮೂಲಕ ಇನ್ನೂ ಜನರಿಗೆ ಹತ್ತಿರವಾದವರು ನಟಿ. 400ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿರುವ ಇವರು, 'ಗುಲಾಬಿ ಟಾಕೀಸ್' ಚಿತ್ರಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ನಟಿ ಮಾತ್ರವಲ್ಲದೇ, ರಾಜಕೀಯದಲ್ಲಿಯೂ ಮುಂದು ಉಮಾಶ್ರೀ. ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿ 2013 ರಿಂದ 2018ರವರೆಗೆ ಸೇವೆ ಸಲ್ಲಿಸಿದ್ದಾರೆ.

Add Asianetnews Kannada as a Preferred SourcegooglePreferred

ಮೈಮರೆತು ವರ್ಣನೆ

ಇದೀಗ ನಟಿ, ಸಿದ್ದರಾಮಯ್ಯ ಅವರ ಬಗ್ಗೆ ಕೆಲವೊಂದು ಮಾತುಗಳನ್ನಾಡಿದ್ದು, ಅದಕ್ಕೆ ನೆಟ್ಟಿಗರು ತಮ್ಮದೇ ಆದ ರೀತಿಯಲ್ಲಿ ಕಮೆಂಟ್ಸ್​ ಮಾಡುತ್ತಿದ್ದಾರೆ. sabhewithsaba ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ನಿರೂಪಕಿ, ಸಿದ್ದರಾಮಯ್ಯ ಅವರ ಬಗ್ಗೆ ಹೇಳಿ ಅಂದಾಗ, ನಟಿಯ ಹಾವಭಾವವೇ ಬದಲಾಗಿ ಹೋಯ್ತು. ಸಿದ್ದರಾಮಯ್ಯನವರ ಗುಣಗಾನದಲ್ಲಿ ತಮ್ಮ ಮೈಯನ್ನೇ ಮರೆತ ನಟಿ, ಅವರ ಒಂದೊಂದೇ ಒಳ್ಳೆಯ ಕೆಲಸಗಳನ್ನು, ಅವರ ಒಳ್ಳೆಯ ಗುಣಗಳನ್ನು ಹೇಳತೊಡಗಿದರು.

ಪದಗಳೇ ಸಾಕಾಗಲ್ಲ

ಸಿದ್ದರಾಮಯ್ಯನವರದ್ದು ಗ್ರೇಟ್​ ಪರ್ಸನ್ಯಾಲಿಟಿ. ಹ್ಯೂಮನ್​. ಅವರ ಬಗ್ಗೆ ನನ್ನಂಥವರು ಮಾತನಾಡಲಿಕ್ಕೆ ಪದಗಳೇ ಸಾಕಾಗುವುದಿಲ್ಲ, ಅಂಥ ಒಂದು ವ್ಯಕ್ತಿತ್ವ. ಅವರಿವರು ಏನೇನೋ ಹೇಳಬಹುದು. ಆದರೆ ಅವರ ಹತ್ತಿರ ಇದ್ದು ಕಂಡವರಿಗೆ ಅವರು ಏನು ಎನ್ನುವುದು ಗೊತ್ತಿದೆ. ಪ್ರೀತಿಯನ್ನು ಹಂಚುವುದನ್ನು ಅವರಿಂದ ನೋಡಿ ಕಲಿಯಬೇಕು. ಅಯ್ಯೋ ಎಷ್ಟು ಚೆಂದ, ಗ್ರಾಮ್ಯ ಎಂದು ಬಣ್ಣಸಿದ್ದಾರೆ ನಟಿ. ಅವರಿಗೆ ಯಾರಾದರೂ ಇಷ್ಟ ಆದರು ಎಂದುಬಿಟ್ಟರೆ ಅವರು ಬೈದರೂ ಸ್ವೀಟ್​ ಆಗಿರುತ್ತದೆ. ಅವರು ಈ ರಾಜ್ಯಕ್ಕೆ ಕೊಟ್ಟಿರುವ ಕೊಡುಗೆಗಳು ಇರಬಹುದು, ಎಲ್ಲರನ್ನೂ ಸಮಾನವಾಗಿ ಕಾಣುವಂಥದ್ದು ಇರಬಹುದು, ಪ್ರತಿಭೆಗಳನ್ನು ಹುಡುಕಿ ಅವಕಾಶ ಕೊಡುವುದು, ನಂಬಿದವರ ಕೈಹಿಡಿಯುವುದು... ಹೀಗೆ ಹೇಳುತ್ತಾ ಹೋದರೆ ಪದಗಳೇ ಸಾಕಾಗುವುದಿಲ್ಲ ಎಂದು ನಟಿ ಹೊಗಳಿದ್ದಾರೆ.

ನೆಟ್ಟಿಗರು ಏನಂದ್ರು?

ಸಿದ್ದರಾಮಯ್ಯನವರ ಅಭಿಮಾನಿಗಳು ನಟಿಯ ಮಾತಿಗೆ ಭಲೆ ಭಲೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯನವರ ವ್ಯಕ್ತಿತ್ವವೇ ಅಂಥದ್ದು ಎನ್ನುತ್ತಿದ್ದಾರೆ. ಇನ್ನು ಆಗದವರು ನಟನೆ ಓವರ್​ ಆಯ್ತು ಎನ್ನುತ್ತಿದ್ದಾರೆ. ಮತ್ತೆ ಕೆಲವರು ನಟಿಯಾಗಿ ನಿಮ್ಮ ಮೇಲೆ ಅಭಿಮಾನ ಇತ್ತು, ಆದರೆ ನೀವು ಈ ರೀತಿ ಮಾತನಾಡಿದ್ದು ಕೇಳಿ ಯಾಕೋ ಇದ್ದ ಅಭಿಮಾನವೂ ಹೋಯ್ತು ಎನ್ನುತ್ತಿದ್ದಾರೆ.