- Home
- Automobile
- Deals on Wheels
- ಬಿಸಿಲಿನಲ್ಲಿ ಕಾರಿನ ಬ್ರೇಕ್ ದಿಢೀರ್ ಫೇಲ್ ಸಾಧ್ಯತೆ, ಲಾಂಗ್ ಡ್ರೈವ್‍ಗೂ ಮೊದಲು 5 ವಿಚಾರ ಗಮನದಲ್ಲಿರಲಿ
ಬಿಸಿಲಿನಲ್ಲಿ ಕಾರಿನ ಬ್ರೇಕ್ ದಿಢೀರ್ ಫೇಲ್ ಸಾಧ್ಯತೆ, ಲಾಂಗ್ ಡ್ರೈವ್‍ಗೂ ಮೊದಲು 5 ವಿಚಾರ ಗಮನದಲ್ಲಿರಲಿ
ಮಳೆಗಾಲ ಶುರುವಾದರೂ ಮಳೆ ಇಲ್ಲ, ಎಲ್ಲೆಡೆ ಬಿಸಿಲು ಹೆಚ್ಚಾಗುತ್ತಿದೆ. ಇದರ ನಡುವೆ ಕಾರಿನಲ್ಲಿ ಲಾಂಗ್ ಡ್ರೈವ್ ಪ್ಲಾನ್ ಮಾಡಿದ್ದರೆ, ಸಮಸ್ಸೆಗೂ ಮೊದಲೇ ನಿಮ್ಮ ಕಾರು ಚೆಕ್ ಮಾಡಿ. ತಾಪಮಾನದಿಂದ ಕಾರಿನ ಬ್ರೇಕ್ ಫೇಲಾಗುವ ಸಾಧ್ಯತೆ ಇದೆ.

ಬಿಸಿಲಿನ ತಾಪಕ್ಕೆ ಕಾರಿನ ಬ್ರೇಕ್ ಫೇಲ್ ಸಾಧ್ಯತೆ
ಮಳೆಗಾಲ ಶುರುವಾಗಿದೆ. ಆದರೆ ಮಳೆ ಮಾತ್ರ ಇಲ್ಲ. ಕರ್ನಾಟಕ ಸೇರಿದಂತೆ ದೇಶದಲ್ಲೇ ಮಳೆ ಕೊರತೆ ಕಾಣುತ್ತಿದೆ. ಜಿಟಿಜಿಟಿ ಮಳೆ, ಭಾರಿ ಮಳೆ ಕಾಣಬೇಕಿದ್ದ ಹಲವು ಪ್ರದೇಶಗಳಲ್ಲಿ ಮಳೆ ಇಲ್ಲದಾಗಿದೆ. ಪರಿಣಾಮ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಇನ್ನು ಭಾರಿ ಪ್ಲಾನ್ ಮಾಡಿ ಲಾಂಗ್ ಡ್ರೈವ್ ಹೋಗುತ್ತಿದ್ದರೆ ಈ ತಾಪಮಾನದಲ್ಲಿ ಕಾರಿನ ಬ್ರೇಕ್ ಫೇಲ್ ಆಗುವ ಸಾಧ್ಯತೆ ಇದೆ. ಹೀಗಾಗಿ ಪ್ರಯಾಣಕ್ಕೂ ಮೊದಲೇ ಕೆಲ ವಿಚಾರಗಳ ಬಗ್ಗೆ ಗಮನ ನೀಡಿದರೆ ಆತಂಕ ಇರುವುದಿಲ್ಲ.
ಕಾರಿನ ಬ್ರೇಕ್ ಬಗ್ಗೆ ಇರಲಿ ಗಮನ
ತೀವ್ರ ಬಿಸಿಲಿನಲ್ಲಿ ಕಾರು ಚಲಾಸುವಾಗ ಕಾರಿನ ಎಂಜಿನ್ ಸೇರಿದಂತೆ ಹಲವು ಬಿಡಿ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಅದರಲ್ಲೂ ಲಾಂಗ್ ಡ್ರೈವ್‌ನಲ್ಲಿ ಕಾರು ಹೆಚ್ಚು ಸಮಸ್ಯೆಗೆ ಸಿಲುಕಿಕೊಳ್ಳುತ್ತದೆ. ಏರುತ್ತಿರುವ ತಾಪಮಾನಗಳಲ್ಲಿ ಲಾಂಗ್ ಟ್ರಿಪ್, ಲಾಂಗ್ ಡ್ರೈವ್ ಪ್ಲಾನ್ ಮಾಡಿದ್ದರೆ, ಕೆಲ ಸೂಕ್ಷ್ಮ ಅಂಶಗಳ ಬಗ್ಗೆ ಗಮನ ಹರಿಸಿದರೆ ಸಮಸ್ಯೆಯಿಂದ ದೂರವಿರಬಹುದು. ಪ್ರಮುಖವಾಗಿ ಕಾರಿನ ಬ್ರೇಕ್ ಹೆಚ್ಚು ಘರ್ಷಣೆ ಜೊತೆಗೆ ತಾಪಮಾನದಿಂದ ಫೇಲ್ ಆಗುವ ಸಾಧ್ಯತೆ ಇದೆ.
ಬ್ರೇಕ್ ಫೇಡ್
ಲಾಂಗ್ ಡ್ರೈವ್‌ನಲ್ಲಿ ಕಾರಿನ ಬ್ರೇಕ್ ಹೆಚ್ಚು ಬಾರಿ ಪ್ರಯೋಗ ಮಾಡುತ್ತೇವೆ. ಇದರಿಂದ ಕಾರಿನ ಡಿಸ್ಕ್ ಹಾಗೂ ಪ್ಯಾಡ್ ನಡುವಿನ ಘರ್ಷಣೆಯಿಂದ ಸಾಮಾನ್ಯವಾಗಿ ಬಿಸಿಯಾಗುತ್ತದೆ. ಚಳಿಗಾಲ, ಮಳಗಾಲದಲ್ಲಿ ಹೆಚ್ಚಿನ ಸಮಸ್ಯೆಯಾಗುವುದಿಲ್ಲ. ಆದರೆ ಬಿಸಿಲಿನ ತಾಪಮಾನ ಹೆಚ್ಚಿದ್ದಾಗ, ವಾತಾವರಣ ಬಿಸಿಯಾಗಿದ್ದಾಗ, ಕಾರಿನ ಬ್ರೇಕ್ ಕೂಲಿಂಗ್ ಆಗಲು ತಾಪಮಾನವೂ ಬಿಡುವುದಿಲ್ಲ. ಇದರಿಂದ ಬ್ರೇಕ್ ಫೇಲ್ ಸಾಧ್ಯತೆ ಇದೆ.
ಬ್ರೇಕ್ ಹಾಕುವಾಗ ಶಬ್ದ ಬರುತಿದೆಯಾ
ಬ್ರೇಕ್ ಹಾಕುವಾಗ ಸ್ಮೂತ್ ಆಗಿ ಬ್ರೇಕ್ ಹಿಡಿಯುತ್ತಿಲ್ಲ, ಶಬ್ದ ಬರುತ್ತಿದೆ, ಸ್ಮೂತ್‌ನೆಸ್ ಇಲ್ಲ ಎಂದಾದರೆ ನಿಮ್ಮ ಬ್ರೇಕ್ ಪ್ಯಾಡ್ ಹಾಗೂ ಡಿಸ್ಕ್ ಚೆಕ್ ಮಾಡಿ. ಸವೆದು ಹೋಗಿದ್ದರೆ ಬದಲಾಯಿಸುವುದು ಉತ್ತಮ. ಇನ್ನು ಬ್ರೇಕ್ ಆಯಿಲ್ ಅಥವಾ ಫ್ಲೂಯಿಡ್ ಮಟ್ಟ ಪರಿಶೀಲಿಸುವುದು ಉತ್ತಮ. ಅಹತ್ಯವಿದ್ದರೆ ಆಯಿಲ್ ಬದಲಾಯಿಸಿ, ಪ್ರವಾಸ ಆರಂಭಿಸುವುದು ಬ್ರೇಕ್ ದೃಷ್ಟಿಯಿಂದ ಉತ್ತಮ.
ಎಂಜಿನ್ ಬ್ರೇಕಿಂಗ್ ಬಳಸಿ
ಲಾಂಗ್ ಡ್ರೈವ್‌ಗಳಲ್ಲಿ ಘಾಟ್ ಸೆಕ್ಷನ್ ಇಳಿಯುವಾಗ, ಹಚ್ಚಿನ ಇಳಿಜಾರು ಪ್ರದೇಶ ಇಳಿಯುವಾಗ ಪದೇ ಪದೇ ಬ್ರೇಕ್ ತುಳಿದು ಗಾಡಿ ನಿಧಾನ ಮಾಡುವುದಕ್ಕಿಂತ ಎಂಜಿನ್ ಮೂಲಕ ಅಂದರೆ ಲೋವರ್ ಗೇರ್ ಮೂಲಕ ಕಾರು ಹೆಚ್ಚು ನಿಯಂತ್ರಣಕ್ಕೆ ತೆಗೆದುಕೊಳ್ಳಿ. ಇದರಿಂದ ಬ್ರೇಕ್ ಘರ್ಷಣೆ ತಪ್ಪಿಸಬಹುದು. ಜೊತೆಗೆ ಅಪಾಯಕಾರಿ ಘಾಟ್ ಸೆಕ್ಷನ್‌ನಲ್ಲಿ ಬ್ರೇಕ್ ಸುಸ್ಥಿತಿಯಲ್ಲಿಡಲು ಸಾಧ್ಯಲಿದೆ. ಸಾಮಾನ್ಯವಾಗಿ ಘಾಟ್ ಸೆಕ್ಷನ್‌ನಲ್ಲಿ ಅತೀ ಹೆಚ್ಚು ಬ್ರೇಕ್ ಬಳಕೆಯಾಗುವ ಕಾರಣ ಬಿಸಿಯಾಗಿ ತಕ್ಷಣಕ್ಕೆ ಬ್ರೇಕ್ ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಸಾಧ್ಯತೆ ಇದೆ.
ವಿರಾಮ ಇರಲಿ, ಟೈಯರ್ ಪ್ರಶೆರ್ ನೋಡಿಕೊಳ್ಳಿ
ಲಾಂಗ್ ಡ್ರೈವ್ ಹೋಗುವಾಗ ನಡುವೆ ವಿರಾಮ ಉತ್ತಮ. ಚಾಲನೆ, ಪ್ರಯಾಣದ ದೃಷ್ಟಿಯಿಂದ ಹಾಗೂ ಕಾರಿನ ದೃಷ್ಟಿಯಿಂದಲೂ ವಿರಾಮ ಅತ್ಯಗತ್ಯ. ಪ್ರತಿ 2 ರಿಂದ 3 ಗಂಟೆಗೊಮ್ಮೆ ಕಾರು ನಿಲ್ಲಿಸಿ ತಣ್ಣಗಾಗಲು ಬಿಡಿ. ಈ ವೇಳೆ ಬ್ರೇಕ್ ಸಿಸ್ಟಮ್‌ನಿಂದ ಹಿಡಿದು ಕಾರಿನ ಎಂಜಿನ್‌ವರೆಗೂ ತಣ್ಣಗಾಗಲಿದೆ.

