- Home
- Automobile
- Car News
- ಬಿಡುಗಡೆಗೂ ಮುನ್ನ ಟೀಸರ್‌ನಲ್ಲಿ ದೂಳೆಬ್ಬಿಸಿದ ಟಾಟಾ ಸಿಯೆರಾ ಇವಿ, ಜೂನ್ 30ಕ್ಕೆ ಕಾರು ಲಾಂಚ್
ಬಿಡುಗಡೆಗೂ ಮುನ್ನ ಟೀಸರ್‌ನಲ್ಲಿ ದೂಳೆಬ್ಬಿಸಿದ ಟಾಟಾ ಸಿಯೆರಾ ಇವಿ, ಜೂನ್ 30ಕ್ಕೆ ಕಾರು ಲಾಂಚ್
ಬಹುನಿರೀಕ್ಷಿತ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಸಜ್ಜಾಗಿದೆ. ಜೂನ್ 30 ರಂದು ಕಾರು ಲಾಂಚ್ ಆಗುತ್ತಿದೆ. ಇದೀಗ ಕಾರಿನ ಟೀಸರ್ ಬಿಡುಗಡೆ ಮಾಡಲಾಗಿದ್ದು, ಅದ್ಭುತ ಪ್ರತಿಕ್ರಿಯೆ ಪಡೆದಿದೆ. ಟಾಟಾ ಸಿಯೆರಾ ಇವಿ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

ಟಾಟಾ ಸಿಯೆರಾ ಇವಿ ವಿಡಿಯೋ
ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳ ವಿಭಾಗದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಟಾಟಾ ಸಿಯೆರಾ ಫ್ಯೂಯೆಲ್ ಕಾರು ಯಶಸ್ವಿಯಾದ ಬೆನ್ನಲ್ಲೇ ಇದೀಗ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ. ಬಿಡುಗಡೆಗೂ ಮೊದಲು ಕಾರಿನ ವಿಡಿಯೋ ಒಂದನ್ನು ಟಾಟಾ ಮೋಟಾರ್ಸ್ ಹಂಚಿಕೊಂಡಿದೆ. ಈ ವಿಡಿಯೋ ಸಿಯೆರಾ ಇವಿ ಕುತೂಹಲ ಇಮ್ಮಡಿಗೊಳಿಸಿದೆ.
ಜೂನ್ 30ಕ್ಕೆ ಟಾಟಾ ಸಿಯೆರಾ ಇವಿ ಲಾಂಚ್
ಜೂನ್ 30ಕ್ಕೆ ಹೊಚ್ಚ ಹೊಸ ಟಾಟಾ ಸಿಯೆರಾ ಇವಿ ಕಾರು ಬಿಡುಗಡೆಯಾಗುತ್ತಿದೆ. ಕ್ಲೂಸ್ಡ್ ಆಫ್ ಗ್ರಿಲ್, ರಿಡಿಸೈನ್ಡ್ ನೋಸ್, ವಿಶೇಷ ಹಾಗೂ ಹೊಸ ವಿನ್ಯಾಸದಲ್ಲಿ ಬಂಪರ್, ಸ್ಲೀಕ್ ಎಲ್ಇಡಿ ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಹೊಸ ಡಿಸೈನ್ ಈ ಕಾರಿನಲ್ಲಿದೆ. ಇದರಿಂದ ಸಿಯೆರಾ ಇವಿ ಮತ್ತಷ್ಟು ಆಕರ್ಷಕಗೊಂಡಿದೆ.
ಸಿಗ್ನೇಚರ್ ಸ್ಟೈಲ್ ಜೊತೆಗೆ ಎಲಿಗೆಂಟ್ ಲುಕ್
ಸಿಯೆರಾ ಇವಿಯ ವಿಶೇಷತೆ ಎಂದರೆ ರೇರ್ ಪನೋರಮಿಕ್ ವಿವ್ಯೂ ವಿಂಡೋ. ಎಲೆಕ್ಟ್ರಿಕ್ ಕಾರಿನಲ್ಲೂ ಈ ಸಿಗ್ನೇಚರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿದೆ. ಫ್ಲಚ್ ಡೋರ್ ಹ್ಯಾಂಡಲ್, ಏರಿಯೋ ಆಪ್ಟಿಮೈಸ್ಡ್ ಅಲೋಯ್ ವ್ಹೀಲ್‌ಗಳಿಂದ ಟಾಟಾ ಸಿಯೆರಾ ಇವಿ ಕಾರಿನ ಲುಕ್ ಮತ್ತಷ್ಟು ಬದಲಾಗಿದೆ.
ಅದ್ಭುತ ತಾಣದಲ್ಲಿ ಶೂಟ್
ಟಾಟಾ ಸಿಯೆರಾ ಕಾರಿನ ವಿಡಿಯೋ ಶೂಟ್ ಮರುಭೂಮಿ, ಪರ್ವತಗಳ ರಸ್ತೆಯಲ್ಲಿ ಮಾಡಲಾಗಿದೆ. ಈ ಮೂಲಕ ಟಾಟಾ ಸಿಯೆರಾ ಎಲೆಕ್ಟ್ರಿಕ್ ಕಾರು ಯಾವುದೇ ಪ್ರದೇಶದಲ್ಲೂ ಸರಾಗವಾಗಿ ಸಾಗಲಿದೆ ಅನ್ನೋ ಸೂಚನೆ ನೀಡಿದೆ. ಯಾವುದೇ ರಸ್ತೆಗಳಲ್ಲಿ ಅಷ್ಟೇ ಬಲಿಷ್ಠವಾಗಿ, ಹೆಚ್ಚು ಶಕ್ತಿಶಾಲಿಯಾಗಿ ಮುನ್ನುಗ್ಗಲಿದೆ ಎಂಬುದನ್ನು ವಿಡಿಯೋ ಮೂಲಕ ಸಾಬೀತು ಪಡಿಸಿದೆ.
ಹೊಸ ಇವಿ ಕಾರಿನ ಮೈಲೇಜ್ ಹಾಗೂ ಬೆಲೆ
ಹೊಸ ಸಿಯೆರಾ ಇವಿ ಒಂದು ಬಾರಿ ಚಾರ್ಜ್ ಮಾಡಿದರೆ ಸರಿಸುಮಾರು 500 ರಿಂದ 600 ಕಿ.ಮಿ ಮೈಲೇಜ್ ನೀಡಲಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಸದ್ಯ ಸಿಯೆರಾ ಇವಿ ಕಾರಿನ ಬೆಲೆ ಬಹಿರಂಗವಾಗಿಲ್ಲ. 18 ರಿಂದ 25 ಲಕ್ಷ ರೂಪಾಯಿ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬೆಲೆ ಬಗ್ಗೆ ತೀವ್ರ ಕುತೂಹಲ ಕಾರು ಪ್ರಿಯರಲ್ಲಿದೆ. 65kWh ಬ್ಯಾಟರಿ, 75 kWh ಬ್ಯಾಟರಿ ಪ್ಯಾಕ್ ಲಭ್ಯವಿದೆ.

