MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Automobile
  • Deals on Wheels
  • ಯಾವುದೇ ಕ್ಲೇಮ್ ಮಾಡದಿದ್ದರೆ ಇನ್ಶೂರೆನ್ಸ್‌ನಲ್ಲಿ ಸಿಗುತ್ತೆ ಶೇ 50ರಷ್ಟು ಡಿಸ್ಕೌಂಟ್, ಏನಿದು NCB?

ಯಾವುದೇ ಕ್ಲೇಮ್ ಮಾಡದಿದ್ದರೆ ಇನ್ಶೂರೆನ್ಸ್‌ನಲ್ಲಿ ಸಿಗುತ್ತೆ ಶೇ 50ರಷ್ಟು ಡಿಸ್ಕೌಂಟ್, ಏನಿದು NCB?

ನೀವು ವಾಹನ ವಿಮೆ ಮಾಡುವಾಗ ಎನ್‌ಸಿಬಿ ಲಾಭ ಪಡೆದಿದ್ದೀರಾ? NCB ಮೂಲಕ ನಿಮ್ಮ ಪ್ರಿಮಿಯಂ ಮೊತ್ತದಲ್ಲಿ ಶೇಕಡಾ 50ರಷ್ಟು ಡಿಸ್ಕೌಂಟ್ ಪಡೆಯಬಹುದು. ಇದರಿಂದ ವಿಮೆ ಪ್ರೀಮಿಯಂ ಮೊತ್ತ ಗಣನೀಯವಾಗಿ ಕಡಿಮೆಯಾಗುತ್ತದೆ.  

2 Min read
Author : Chethan Kumar
Published : May 16 2026, 04:33 PM IST
Share this Photo Gallery
  • FB
  • TW
  • Linkdin
  • Whatsapp
16
ವಾಹನಗಳ ವಿಮೆಯಲ್ಲಿ ಇರಲಿ ಎಚ್ಚರ
Image Credit : social media

ವಾಹನಗಳ ವಿಮೆಯಲ್ಲಿ ಇರಲಿ ಎಚ್ಚರ

ವಾಹನಗಳ ವಿಮೆ ಮಾಡಿಸುವಾಗ ಜಾಗರೂಕರಾಗಿರಬೇಕು. ಕೆಲ ವಿಚಾರಗಳಲ್ಲಿ ಮೋಸ ಹೋಗುವುದೇ ಹೆಚ್ಚು. ವಿಶೇಷವಾಗಿ ಇನ್ಶೂರೆನ್ಸ್ ರಿನೀವಲ್ ಮಾಡುವಾಗ ಎನ್‌ಸಿಬಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಹಲವರು ವಾಹನಗಳ ವಿಮೆಯಲ್ಲಿ ಯಾವುದೇ ಕ್ಲೇಮ್ ಮಾಡಿರುವುದಿಲ್ಲ. ಇಂತಹವರು ಗರಿಷ್ಠ ಅಂದರೆ ಶೇಕಡಾ 50ರಷ್ಟು ಎನ್‌ಸಿಬಿ ಪಡೆಯಲು ಸಾಧ್ಯವಿದೆ.

Add Asianetnews Kannada as a Preferred SourcegooglePreferred
26
ಪ್ರೀಮಿಯಂ ಅರ್ಧದಷ್ಟು ಕಡಿಮೆ
Image Credit : our own

ಪ್ರೀಮಿಯಂ ಅರ್ಧದಷ್ಟು ಕಡಿಮೆ

ವಾಹನ ಇನ್ಶೂರೆನ್ಸ್ ಪ್ರೀಮಿಯಂನಲ್ಲಿ ದೊಡ್ಡ ಮೊತ್ತ ಉಳಿತಾಯ ಮಾಡಲು 'ನೋ ಕ್ಲೇಮ್ ಬೋನಸ್ (NCB) ಒಂದು ಸೂಪರ್ ಐಡಿಯಾ. ಇನ್ಶೂರೆನ್ಸ್ ಪಾಲಿಸಿ ಅವಧಿಯಲ್ಲಿ ಯಾವುದೇ ಅಪಘಾತ ಅಥವಾ ಡ್ಯಾಮೇಜ್‌ಗೆ ನೀವು ಕ್ಲೇಮ್ ಮಾಡಿಲ್ಲ ಅಂದ್ರೆ, ಇನ್ಶೂರೆನ್ಸ್ ಕಂಪನಿಗಳು ಪಾಲಿಸಿದಾರರಿಗೆ ಒಂದು ರಿವಾರ್ಡ್ ಕೊಡುತ್ತವೆ. ಇದೇ ನೋ ಕ್ಲೇಮ್ ಬೋನಸ್. ಇದರ ಲಾಭವನ್ನು ಸರಿಯಾಗಿ ಪಡೆದುಕೊಂಡರೆ, ಇನ್ಶೂರೆನ್ಸ್ ಪ್ರೀಮಿಯಂ ಅನ್ನು ಅರ್ಧದಷ್ಟು ಕಡಿಮೆ ಮಾಡಬಹುದು.

Related Articles

Related image1
ಬಿಹಾರದಲ್ಲಿ ಪಂಚಾಯತ್‌ ಸದಸ್ಯರು, ಅಧ್ಯಕ್ಷರ ಭತ್ಯೆ ದುಪ್ಪಟ್ಟು, 50 ಲಕ್ಷ ವಿಮೆ!
Related image2
ವಿಮೆ ಹಣಕ್ಕಾಗಿ ಎವರೆಸ್ಟ್‌ ಚಾರಣಿಗರಿಗೆ ಶೆರ್ಪಾಗಳಿಂದ ‘ವಿಷ’
36
ಏನಿದು ನೋ ಕ್ಲೇಮ್ ಬೋನಸ್?
Image Credit : PR

ಏನಿದು ನೋ ಕ್ಲೇಮ್ ಬೋನಸ್?

ಇನ್ಶೂರೆನ್ಸ್ ರಿನ್ಯೂ ಮಾಡುವಾಗ 'ಓನ್ ಡ್ಯಾಮೇಜ್' (ನಿಮ್ಮ ಸ್ವಂತ ವಾಹನಕ್ಕಾಗುವ ಹಾನಿ) ಪ್ರೀಮಿಯಂ ಮೇಲೆ ಸಿಗುವ ಡಿಸ್ಕೌಂಟ್ ಇದು. ಮೊದಲ ವರ್ಷ ನೀವು ಯಾವುದೇ ಕ್ಲೇಮ್ ಮಾಡಿಲ್ಲ ಅಂದ್ರೆ, ಪ್ರೀಮಿಯಂನಲ್ಲಿ 20% ರಿಯಾಯಿತಿ ಸಿಗುತ್ತದೆ. ಇದೇ ರೀತಿ ಸತತ ಐದು ವರ್ಷ ಕ್ಲೇಮ್ ಮಾಡದೆ ಪಾಲಿಸಿ ಮುಂದುವರಿಸಿದರೆ, ಈ ರಿಯಾಯಿತಿ 50% ವರೆಗೆ ಹೆಚ್ಚಾಗುತ್ತದೆ. ಉದಾಹರಣೆಗೆ, ನಿಮ್ಮ ಗಾಡಿಯ ಪ್ರೀಮಿಯಂ 35,000 ರೂಪಾಯಿ ಅಂದುಕೊಳ್ಳಿ. ಮೊದಲ ಕ್ಲೇಮ್-ಫ್ರೀ ವರ್ಷದ ನಂತರ ನಿಮಗೆ 7,000 ರೂಪಾಯಿ ಕಡಿಮೆ ಆಗುತ್ತದೆ. ಇದೇ ರೀತಿ ಐದು ವರ್ಷ ಕ್ಲೇಮ್ ಮಾಡದಿದ್ದರೆ ಬರೋಬ್ಬರಿ 17,500 ರೂಪಾಯಿ ಉಳಿಸಬಹುದು.

46
ವಾಹನಕ್ಕಲ್ಲ, ಮಾಲೀಕರಿಗೆ ಸಿಗುವ ಬೋನಸ್!
Image Credit : Asianet News

ವಾಹನಕ್ಕಲ್ಲ, ಮಾಲೀಕರಿಗೆ ಸಿಗುವ ಬೋನಸ್!

NCBಯ ಅತಿದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ, ಇದು ಗಾಡಿಗಲ್ಲ, ಅದರ ಮಾಲೀಕರಿಗೆ ಸಿಗೋದು. ಹಾಗಾಗಿ, ನೀವು ಹಳೆ ಕಾರ್ ಮಾರುವಾಗ ಅಥವಾ ಹೊಸ ಕಾರ್ ಕೊಂಡುಕೊಳ್ಳುವಾಗ ನಿಮ್ಮ ಬೋನಸ್ ಅನ್ನು ಹೊಸ ಗಾಡಿಗೆ ವರ್ಗಾಯಿಸಬಹುದು. ಅಷ್ಟೇ ಅಲ್ಲ, ನೀವು ಇನ್ಶೂರೆನ್ಸ್ ಕಂಪನಿ ಬದಲಾಯಿಸಿದರೂ ಈ ಬೋನಸ್ ನಿಮ್ಮ ಕೈತಪ್ಪಿ ಹೋಗಲ್ಲ.

56
ಸಣ್ಣಪುಟ್ಟ ಕ್ಲೇಮ್‌ಗಳು ಲಾಭವೋ? ನಷ್ಟವೋ?
Image Credit : social media

ಸಣ್ಣಪುಟ್ಟ ಕ್ಲೇಮ್‌ಗಳು ಲಾಭವೋ? ನಷ್ಟವೋ?

ಸಣ್ಣ ಮೊತ್ತದ ರಿಪೇರಿ ಖರ್ಚುಗಳಿಗೆಲ್ಲಾ ಇನ್ಶೂರೆನ್ಸ್ ಕ್ಲೇಮ್ ಮಾಡಿದರೆ, ದೀರ್ಘಾವಧಿಯಲ್ಲಿ ನಿಮಗೆ ನಷ್ಟವೇ ಹೆಚ್ಚು. ಯಾಕಂದ್ರೆ, ಸಣ್ಣ ಕ್ಲೇಮ್‌ನಿಂದಾಗಿ ನೀವು ದೊಡ್ಡ ಮೊತ್ತದ NCB ಕಳೆದುಕೊಳ್ಳಬೇಕಾಗಬಹುದು.ಹಳೆ ಗಾಡಿ ಮಾರುವಾಗ, ಆ ಮಾಹಿತಿಯನ್ನು ನಿಮ್ಮ ಇನ್ಶೂರೆನ್ಸ್ ಕಂಪನಿಗೆ ತಿಳಿಸಿ 'NCB ರಿಟೆನ್ಷನ್ ಸರ್ಟಿಫಿಕೇಟ್' ಪಡೆದುಕೊಳ್ಳಬೇಕು. ನಿಮ್ಮ NCB ಲಾಭವು ಗಾಡಿ ಖರೀದಿಸಿದವರಿಗೆ ಸಿಗುವುದಿಲ್ಲ. ಅದನ್ನು ನೀವು ಹೊಸ ಗಾಡಿ ಖರೀದಿಸುವಾಗ ಬಳಸಿಕೊಳ್ಳಬಹುದು.

66
90 ದಿನಗಳ ನಿಯಮ:
Image Credit : social media

90 ದಿನಗಳ ನಿಯಮ:

ಇನ್ಶೂರೆನ್ಸ್ ಅವಧಿ ಮುಗಿದ 90 ದಿನಗಳ ಒಳಗೆ ಅದನ್ನು ರಿನ್ಯೂ ಮಾಡಿಲ್ಲ ಅಂದ್ರೆ, ನೀವು ಕಷ್ಟಪಟ್ಟು ಗಳಿಸಿದ NCB ಪೂರ್ತಿಯಾಗಿ ಲ್ಯಾಪ್ಸ್ ಆಗುತ್ತದೆ. ಒಂದು ವೇಳೆ ಗಾಡಿ ಕಳ್ಳತನವಾಗಿ, ನೀವು ಪಾಲಿಸಿ ಹಣವನ್ನು ಕ್ಲೇಮ್ ಮಾಡಿದರೆ, ನಿಮ್ಮ NCB ಸೊನ್ನೆ ಆಗುತ್ತದೆ. ಇನ್ನು IDV ಅಂದ್ರೆ ನಿಮ್ಮ ವಾಹನದ ಮಾರುಕಟ್ಟೆ ಮೌಲ್ಯ. NCBಯಿಂದ ಗಾಡಿಯ ಬೆಲೆ ಕಮ್ಮಿ ಆಗಲ್ಲ, ಬದಲಿಗೆ ನೀವು ಕಟ್ಟಬೇಕಾದ ಇನ್ಶೂರೆನ್ಸ್ ಪ್ರೀಮಿಯಂ ಮಾತ್ರ ಕಡಿಮೆಯಾಗುತ್ತದೆ

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ವಿಮೆ
ಕಾರುಗಳು
ಬೈಕ್
ಭಾರತ ಸುದ್ದಿ

Latest Videos
Recommended Stories
Recommended image1
ಕರ್ನಾಟಕಕ್ಕೆ ಪಿಎಂ-ಇ-ಡ್ರೈವ್ ಯೋಜನೆಯಡಿಯಲ್ಲಿ ಕೇಂದ್ರದಿಂದ 1,243 EV ಚಾರ್ಜಿಂಗ್ ಸ್ಟೇಷನ್‌ ಮಂಜೂರು
Recommended image2
ಪ್ರತಿ ದಿನ 25 ಕಿ.ಮಿ ಇವಿ ಯೂನಿಸೈಕಲ್‌ನಲ್ಲಿ ಬೆಂಗಳೂರಿಗನ ಪ್ರಯಾಣ, ಪೊಲೀಸ್ ತಡೆದಿದ್ದೇಕೆ?
Recommended image3
ಬೆಂಗಳೂರಲ್ಲಿ ಒಂದೇ ದಿನ 13,000 ಎಲೆಕ್ಟ್ರಿಕ್ ವಾಹನ ನೋಂದಣಿ, ಎಲ್ಲರೂ ಇವಿ ಖರೀದಿಗೆ ಇದೆ ಕಾರಣ
Related Stories
Recommended image1
ಬಿಹಾರದಲ್ಲಿ ಪಂಚಾಯತ್‌ ಸದಸ್ಯರು, ಅಧ್ಯಕ್ಷರ ಭತ್ಯೆ ದುಪ್ಪಟ್ಟು, 50 ಲಕ್ಷ ವಿಮೆ!
Recommended image2
ವಿಮೆ ಹಣಕ್ಕಾಗಿ ಎವರೆಸ್ಟ್‌ ಚಾರಣಿಗರಿಗೆ ಶೆರ್ಪಾಗಳಿಂದ ‘ವಿಷ’
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved