MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಟೀಮ್‌ ಇಂಡಿಯಾ 'ಥ್ರೀ ಸ್ಟಾರ್‌' ಜೆರ್ಸಿ ವೈಭವ್‌ಗೆ ನೀಡಿದ ಕನ್ನಡಿಗ ರಘು, ಹೆಮ್ಮೆಯಿಂದ ಸಂಭ್ರಮಿಸಿದ ಸೂರ್ಯವಂಶಿ

ಟೀಮ್‌ ಇಂಡಿಯಾ 'ಥ್ರೀ ಸ್ಟಾರ್‌' ಜೆರ್ಸಿ ವೈಭವ್‌ಗೆ ನೀಡಿದ ಕನ್ನಡಿಗ ರಘು, ಹೆಮ್ಮೆಯಿಂದ ಸಂಭ್ರಮಿಸಿದ ಸೂರ್ಯವಂಶಿ

ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಟೀಮ್ ಇಂಡಿಯಾ ಸೇರುವ ಕನಸು ನನಸಾಗಿದೆ. ಬಿಸಿಸಿಐನಿಂದ ಸರ್ಪ್ರೈಸ್ ಬಾಕ್ಸ್‌ನಲ್ಲಿ ತಮ್ಮ 'ಪ್ಲೇಯರ್ ನಂಬರ್ 532' ಮತ್ತು 'ಜೆರ್ಸಿ ನಂಬರ್ 3' ಇರುವ ನೀಲಿ ಜೆರ್ಸಿಯನ್ನು ಪಡೆದ ಅವರು, ಈ ಭಾವುಕ ಕ್ಷಣದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

1 Min read
Author : Santosh Naik
Published : Jun 23 2026, 10:25 AM IST
Share this Photo Gallery
  • FB
  • TW
  • Linkdin
  • Whatsapp
16
ಕನಸು ನನಸಾದ ಕ್ಷಣ
Image Credit : BCCI

ಕನಸು ನನಸಾದ ಕ್ಷಣ

ಮೊದಲ ದಿನದಿಂದಲೇ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನದಲ್ಲಿ ಕಷ್ಟಪಟ್ಟ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ದೊಡ್ಡ ಕನಸು ಕೊನೆಗೂ ನನಸಾಗಿದೆ. ಭಾರತ ತಂಡವನ್ನು ಪ್ರತಿನಿಧಿಸುವ ಅವರ ಸುದೀರ್ಘ ಜರ್ನಿಯ ಅತ್ಯಂತ ಪ್ರಮುಖ ಮೈಲಿಗಲ್ಲು ಇಂದು ಪೂರ್ಣಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಮಾತುಗಳಿಗೆ ನಿಲುಕದ ಭಾವುಕತೆ
Image Credit : BCCI

ಮಾತುಗಳಿಗೆ ನಿಲುಕದ ಭಾವುಕತೆ

ಟೀಮ್ ಇಂಡಿಯಾದ 'ಥ್ರೀ ಸ್ಟಾರ್‌' ನೀಲಿ ಜೆರ್ಸಿಯನ್ನು ಪಡೆದ ನಂತರ ವೈಭವ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. "ಈ ಫೀಲಿಂಗ್ ಅನ್ನು ನನ್ನಿಂದ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ" ಎಂದು ಅವರು ಅತ್ಯಂತ ಭಾವುಕರಾಗಿ ನುಡಿದಿದ್ದಾರೆ.

Related Articles

Related image1
ಈ ವಯಸ್ಸಲ್ಲಿ ಚಿನ್ನಿ ದಾಂಡು ಕೂಡ ಸರಿಯಾಗಿ ಆಡೋಕೆ ಬರ್ತಿರಲಿಲ್ಲ: ವೈಭವ್‌ ಸೂರ್ಯವಂಶಿ ಆಟಕ್ಕೆ ಬಿಗ್‌ಬಿ ಸಲಾಂ
Related image2
ಐಪಿಎಲ್‌ ಯಶಸ್ಸಿನ ಬೆನ್ನಲ್ಲೇ ಜಾಹೀರಾತು ಕಂಪನಿಗಳ ಪಾಲಿಗೆ ದುಬಾರಿಯಾದ ವೈಭವ್‌ ಸೂರ್ಯವಂಶಿ
36
ಪ್ಲೇಯರ್ ನಂಬರ್ 532 ಮತ್ತು ಜೆರ್ಸಿ ನಂಬರ್ 3
Image Credit : BCCI

ಪ್ಲೇಯರ್ ನಂಬರ್ 532 ಮತ್ತು ಜೆರ್ಸಿ ನಂಬರ್ 3

ವೈಭವ್ ಸೂರ್ಯವಂಶಿ ಅವರಿಗೆ ಟೀಮ್ ಇಂಡಿಯಾದಲ್ಲಿ 'ಪ್ಲೇಯರ್ ನಂಬರ್ 532' (Player-532) ಎಂಬ ಅಧಿಕೃತ ಸ್ಥಾನ ಸಿಕ್ಕಿದೆ. ಇನ್ನು ಮೈದಾನದಲ್ಲಿ ಅವರು '3' (03) ಸಂಖ್ಯೆಯ ಜೆರ್ಸಿ ಧರಿಸಿ ಅಬ್ಬರಿಸಲಿದ್ದಾರೆ. ಜೆರ್ಸಿಯ ಹಿಂಭಾಗದಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ.

46
ಹೋಟೆಲ್ ರೂಮ್‌ಗೆ ಬಂದ ಸರ್ಪ್ರೈಸ್ ಬಾಕ್ಸ್
Image Credit : BCCI

ಹೋಟೆಲ್ ರೂಮ್‌ಗೆ ಬಂದ ಸರ್ಪ್ರೈಸ್ ಬಾಕ್ಸ್

ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ತೋರಿಸಿರುವಂತೆ, ಬಿಸಿಸಿಐ (BCCI) ಲೋಗೋ ಇರುವ ವಿಶೇಷ ಕಿಟ್ ಬಾಕ್ಸ್ ಅನ್ನು ಹೋಟೆಲ್ ಸಿಬ್ಬಂದಿ ಟ್ರಾಲಿಯ ಮೂಲಕ ವೈಭವ್ ಅವರ ರೂಮ್‌ಗೆ ತಲುಪಿಸುತ್ತಾರೆ. ಟೀಮ್‌ ಇಂಡಿಯಾ ಸಿಬ್ಬಂದಿ ಆಗಿರುವ ಕರ್ನಾಟಕದ ಉತ್ತರ ಕನ್ನಡದ ಕುಮಟಾ ಮೂಲದ ರಘು ಅವರು ವೈಭವ್‌ ಸೂರ್ಯವಂಶಿ ಅವರ ರೂಮ್‌ಗೆ ಜೆರ್ಸಿ ಇದ್ದ ಬಾಕ್ಸ್‌ಅನ್ನು ತಲುಪಿಸಿದ್ದಾರೆ. ಈ ಬಾಕ್ಸ್ ಅನ್ನು ತೆರೆಯುವಾಗ ವೈಭವ್ ಅವರ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು.

56
ಜೆರ್ಸಿ ನೋಡಿ ಹೆಮ್ಮೆ ಪಟ್ಟ ವೈಭವ್‌
Image Credit : BCCI

ಜೆರ್ಸಿ ನೋಡಿ ಹೆಮ್ಮೆ ಪಟ್ಟ ವೈಭವ್‌

ಬಾಕ್ಸ್ ಓಪನ್ ಮಾಡಿ ಇಂಡಿಯನ್ ಜೆರ್ಸಿಯನ್ನು ಕೈಗೆತ್ತಿಕೊಂಡ ತಕ್ಷಣ ವೈಭವ್ ಅವರ ಮುಖದಲ್ಲಿ ಹೆಮ್ಮೆಯ ನಗು ಮೂಡಿದೆ. "ಈ ಟೀ ಶರ್ಟ್ ನೋಡಿದ ತಕ್ಷಣ ನನಗೆ ನಗು ತಡೆಯಲು ಸಾಧ್ಯವಾಗಲಿಲ್ಲ, ಅಷ್ಟೊಂದು ಖುಷಿಯಾಯಿತು. ಇದು ಕೇವಲ ಒಂದು ಕನಸಿನಂತೆ ಭಾಸವಾಗುತ್ತಿದೆ" ಎಂದು ಅವರು ಹೇಳಿದ್ದಾರೆ.

66
ನಂಬಲಾಗದ ಅದ್ಭುತ ಅನುಭವ
Image Credit : BCCI

ನಂಬಲಾಗದ ಅದ್ಭುತ ಅನುಭವ

"ಕೆಲವೊಮ್ಮೆ ನಾವು ಎಂದಿಗೂ ಊಹಿಸದ ಅದ್ಭುತಗಳು ನಮ್ಮ ಜೀವನದಲ್ಲಿ ನಡೆದುಬಿಡುತ್ತವೆ. ಅದು ಸಂಭವಿಸಿದಾಗ ನಮಗೆ ಹೇಗೆ ರಿಯಾಕ್ಟ್ ಮಾಡಬೇಕೆಂದೇ ತಿಳಿಯುವುದಿಲ್ಲ. ನನ್ನ ಸ್ಥಿತಿಯೂ ಈಗ ಹಾಗೆಯೇ ಆಗಿದೆ" ಎನ್ನುತ್ತಾ ವೈಭವ್ ಸೂರ್ಯವಂಶಿ ಭಾರತ ತಂಡದ 'ಥ್ರೀ ಸ್ಟಾರ್‌' ಜೆರ್ಸಿ ಮುಟ್ಟಿ ಆನಂದಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ವೈಭವ್ ಸೂರ್ಯವಂಶಿ
ಟೀಮ್ ಇಂಡಿಯಾ
ಬಿಸಿಸಿಐ
ಕ್ರಿಕೆಟ್
ಕ್ರೀಡೆಗಳು

Latest Videos
Recommended Stories
Recommended image1
ಭಾರತ ಎದುರಿನ ಟಿ20 ಸರಣಿಗೆ ಬಲಿಷ್ಠ ಇಂಗ್ಲೆಂಡ್ ಕ್ರಿಕೆಟ್ ತಂಡ ಪ್ರಕಟ; ಮೂವರು ಆರ್‌ಸಿಬಿ ಸ್ಟಾರ್ ಆಟಗಾರರಿಗೆ ಸ್ಥಾನ
Recommended image2
ಸೆಲೆಬ್ರೇಷನ್ ಅಭ್ಯಾಸ ಮಾಡಿದ್ದ ಪಾಕ್ ಒಂದೂ ಪಂದ್ಯ ಗೆಲ್ಲದೆ ಮಹಿಳಾ ಟಿ20 ವಿಶ್ವಕಪ್‌ನಿಂದ ಔಟ್, ಫುಲ್ ಟ್ರೋಲ್
Recommended image3
ಮಹಿಳಾ ಕ್ರಿಕೆಟಿಗರಿಗೆ ICC ಬಿಗ್ ರಿಲೀಫ್! ಹೆರಿಗೆಯ ಬಳಿಕ ಮೈದಾನಕ್ಕೆ ಮರಳಲು ಹೊಸ ನಿಯಮ
Related Stories
Recommended image1
ಈ ವಯಸ್ಸಲ್ಲಿ ಚಿನ್ನಿ ದಾಂಡು ಕೂಡ ಸರಿಯಾಗಿ ಆಡೋಕೆ ಬರ್ತಿರಲಿಲ್ಲ: ವೈಭವ್‌ ಸೂರ್ಯವಂಶಿ ಆಟಕ್ಕೆ ಬಿಗ್‌ಬಿ ಸಲಾಂ
Recommended image2
ಐಪಿಎಲ್‌ ಯಶಸ್ಸಿನ ಬೆನ್ನಲ್ಲೇ ಜಾಹೀರಾತು ಕಂಪನಿಗಳ ಪಾಲಿಗೆ ದುಬಾರಿಯಾದ ವೈಭವ್‌ ಸೂರ್ಯವಂಶಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved