MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಗಂಭೀರ್ ವಿರುದ್ಧ ತಿರುಗಿಬಿದ್ದ ಹಿರಿಯ ಆಟಗಾರರು? ಬಿಸಿಸಿಐಗೆ ತಲುಪಿದ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಜಗಳ!

ಗಂಭೀರ್ ವಿರುದ್ಧ ತಿರುಗಿಬಿದ್ದ ಹಿರಿಯ ಆಟಗಾರರು? ಬಿಸಿಸಿಐಗೆ ತಲುಪಿದ ಟೀಮ್ ಇಂಡಿಯಾ ಡ್ರೆಸ್ಸಿಂಗ್ ರೂಮ್ ಜಗಳ!

ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿಯ ಬಗ್ಗೆ ಬಿಸಿಸಿಐ ಮತ್ತು ಹಿರಿಯ ಆಟಗಾರರಲ್ಲಿ ಅಸಮಾಧಾನ ಹೆಚ್ಚುತ್ತಿದೆ. ಸೋಲಿನ ಹೊಣೆಯನ್ನು ಇತರರ ಮೇಲೆ ಹೊರಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಮುಂಬರುವ ಶ್ರೀಲಂಕಾ ಪ್ರವಾಸ ಅವರ ಭವಿಷ್ಯಕ್ಕೆ ನಿರ್ಣಾಯಕವಾಗಿದೆ.

2 Min read
Author : Sathish Kumar KH
Published : Aug 03 2026, 11:00 PM IST
Share this Photo Gallery
  • FB
  • TW
  • Linkdin
  • Whatsapp
16
ಗಂಭೀರ್ ವಿರುದ್ಧ ತಿರುಗಿಬಿದ್ದ ಸೀನಿಯರ್ಸ್
Image Credit : chat GPT

ಗಂಭೀರ್ ವಿರುದ್ಧ ತಿರುಗಿಬಿದ್ದ ಸೀನಿಯರ್ಸ್

ಭಾರತೀಯ ಪುರುಷರ ಕ್ರಿಕೆಟ್ ತಂಡದ (Indian Cricket Team) ಮುಖ್ಯ ತರಬೇತುದಾರ (Head Coach) ಗೌತಮ್ ಗಂಭೀರ್ (Gautam Gambhir) ಅವರ ಹಾದಿ ಸುಗಮವಾಗಿಲ್ಲ ಎಂಬ ಸುದ್ದಿಯೊಂದು ಕ್ರಿಕೆಟ್ ವಲಯದಲ್ಲಿ ಭಾರಿ ಸದ್ದು ಮಾಡುತ್ತಿದೆ. ಒಂದು ವರ್ಷದ ಹಿಂದೆ ಬಿಸಿಸಿಐನಲ್ಲಿ (BCCI) ಗಂಭೀರ್ ಹೊಂದಿದ್ದ ಬೆಂಬಲ ಹಾಗೂ ಅಧಿಕಾರ ಈಗ ಕಡಿಮೆಯಾಗುತ್ತಿದ್ದು, ಅವರ ಕೋಚಿಂಗ್ ಶೈಲಿ (Coaching Style) ಬಗ್ಗೆ ಆಡಳಿತ ಮಂಡಳಿಯ ಅಧಿಕಾರಿಗಳು ಹಾಗೂ ತಂಡದ ಕೆಲ ಹಿರಿಯ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸೋಲಿನ ಹೊಣೆ ಹೊರದ ಗಂಭೀರ್?
Image Credit : bcci

ಸೋಲಿನ ಹೊಣೆ ಹೊರದ ಗಂಭೀರ್?

'cricblogger.com' ವರದಿಯ ಪ್ರಕಾರ, ಟೀಮ್ ಇಂಡಿಯಾದ ಸರಣಿ ಸೋಲುಗಳಿಗೆ ಗಂಭೀರ್ ತಮ್ಮ ತರಬೇತುದಾರ ಮ್ಯಾನೇಜ್‌ಮೆಂಟ್‌ನ ನಿರ್ಧಾರಗಳ ಜವಾಬ್ದಾರಿ ವಹಿಸಿಕೊಳ್ಳುವ ಬದಲಿಗೆ, ಆಟಗಾರರು (Players), ಸೆಂಟರ್ ಆಫ್ ಎಕ್ಸಲೆನ್ಸ್ (CoE) ಅಥವಾ ಸಪೋರ್ಟ್ ಸ್ಟಾಫ್ (Support Staff) ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂಬ ಭಾವನೆ ಬಿಸಿಸಿಐ ಅಧಿಕಾರಿಗಳಲ್ಲಿ ಮೂಡಿದೆ. ಈ ವಿಷಯವು ಡ್ರೆಸ್ಸಿಂಗ್ ರೂಮ್‌ನಲ್ಲೂ (Dressing Room) ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ಎನ್ನಲಾಗಿದೆ.

Related Articles

Related image1
Gautam Gambhir: ಆ ಸ್ಟಾರ್‌ಗೆ ಇದೇ ಕೊನೆಯ ಚಾನ್ಸ್! ಗಂಭೀರ್ ತಂಡದಿಂದ ಡ್ರಾಪ್ ಮಾಡೋ ಮುನ್ನ ಜಾಗ ಉಳಿಸಿಕೊಳ್ಳಲು 'ಆ ಪ್ರಭಾವಿ' ಬೆನ್ನು ಬಿದ್ದ ಕ್ರಿಕೆಟರ್!
Related image2
ಏಕದಿನ ವಿಶ್ವಕಪ್ ಗೆಲ್ಲಲು ಆರ್‌ಸಿಬಿಯಂತೆ ಪರ್ಫೆಕ್ಟ್‌ ಭಾರತ ತಂಡ ಸೆಲೆಕ್ಟ್ ಮಾಡಿದ ದಿನೇಶ್ ಕಾರ್ತಿಕ್! ಆದ್ರೆ ಗಂಭೀರ್ ಆಪ್ತನಿಗಿಲ್ಲ ಸ್ಥಾನ
36
ಬಿಸಿಸಿಐಗೆ ಹಿರಿಯ ಆಟಗಾರರ ದೂರು!
Image Credit : Getty

ಬಿಸಿಸಿಐಗೆ ಹಿರಿಯ ಆಟಗಾರರ ದೂರು!

ತಂಡದ ಕೆಲ ಹಿರಿಯ ಆಟಗಾರರು (Senior Players) ಗೌತಮ್ ಗಂಭೀರ್ ಅವರ ಕೋಚಿಂಗ್ ಶೈಲಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ವಿಧಾನದ ಕುರಿತು ಭಾರತದ ಮಾಜಿ ಕ್ರಿಕೆಟಿಗರು ಹಾಗೂ ಬಿಸಿಸಿಐ ಸದಸ್ಯರ ಬಳಿ ಖಾಸಗಿಯಾಗಿ ತಮ್ಮ ಅಸಮಾಧಾನವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ತರಬೇತುದಾರರಾಗಿ ಅಧಿಕಾರ ಸ್ವೀಕರಿಸಿದಾಗ ಗಂಭೀರ್‌ಗೆ ತಮ್ಮಿಷ್ಟದ ಸಪೋರ್ಟ್ ಸ್ಟಾಫ್ ಆಯ್ಕೆ ಮಾಡಿಕೊಳ್ಳಲು ಬಿಸಿಸಿಐ ಪೂರ್ಣ ಸ್ವಾತಂತ್ರ್ಯ ನೀಡಿತ್ತು. ಆದರೆ, ಅವರು ಪಡೆದುಕೊಂಡ ಅಧಿಕಾರಕ್ಕೆ ತಕ್ಕಂತೆ ತಂಡದ ಫಲಿತಾಂಶ ಬಂದಿಲ್ಲ ಎಂಬ ಅಭಿಪ್ರಾಯ ಮಂಡಳಿಯ ಪ್ರಮುಖರಲ್ಲಿದೆ.

46
'ಟ್ರಾನ್ಸಿಷನ್' ಕುರಿತು ಉಲ್ಟಾ ಮಾತು!
Image Credit : Getty

'ಟ್ರಾನ್ಸಿಷನ್' ಕುರಿತು ಉಲ್ಟಾ ಮಾತು!

ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಸೋಲು ಕಂಡಾಗ ಗಂಭೀರ್ ತೀವ್ರ ವಿಮರ್ಶೆಗೆ ಗುರಿಯಾಗಿದ್ದರು. ಮುಖ್ಯ ತರಬೇತುದಾರರಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ 'ತಂಡದಲ್ಲಿ ಯಾವುದೇ ಬದಲಾವಣೆಯ ಹಂತವಿಲ್ಲ (No Transition)' ಎಂದಿದ್ದ ಗಂಭೀರ್, ಸೋಲುಗಳ ಬಳಿಕ ತಂಡ 'ಟ್ರಾನ್ಸಿಷನ್' ಹಂತದಲ್ಲಿದೆ ಎಂದು ಹೇಳಿಕೆ ನೀಡಿದ್ದು ಸೋಶಿಯಲ್ ಮೀಡಿಯಾದಲ್ಲಿ (Social Media) ತೀವ್ರ ಟ್ರೋಲ್‌ಗೆ ಕಾರಣವಾಗಿತ್ತು.

56
ಶ್ರೀಲಂಕಾ ಪ್ರವಾಸ ಗಂಭೀರ್‌ಗೆ ಅಗ್ನಿಪರೀಕ್ಷೆ!
Image Credit : X

ಶ್ರೀಲಂಕಾ ಪ್ರವಾಸ ಗಂಭೀರ್‌ಗೆ ಅಗ್ನಿಪರೀಕ್ಷೆ!

ಬಿಸಿಸಿಐ ಹಾಗೂ ಗಂಭೀರ್ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ನಡೆಯಲಿರುವ ಶ್ರೀಲಂಕಾ ಪ್ರವಾಸ (Sri Lanka Tour) ಗೌತಮ್ ಗಂಭೀರ್ ಅವರ ತರಬೇತುದಾರ ಭವಿಷ್ಯಕ್ಕೆ ನಿರ್ಣಾಯಕವಾಗಲಿದೆ. ಒಂದು ವೇಳೆ ಈ ಸರಣಿಯಲ್ಲೂ ತಂಡ ಕಳಪೆ ಪ್ರದರ್ಶನ ನೀಡಿದರೆ, ಅವರ ಕೋಚಿಂಗ್ ಅವಧಿಯ ಮೇಲಿನ ಪರಿಶೀಲನೆ ಮತ್ತು ಒತ್ತಡ ಇನ್ನಷ್ಟು ತೀವ್ರಗೊಳ್ಳಲಿದೆ.

66
2027ರ ಒಪ್ಪಂದವೇ ರಕ್ಷಾಕವಚ!
Image Credit : ANI

2027ರ ಒಪ್ಪಂದವೇ ರಕ್ಷಾಕವಚ!

ಇಷ್ಟೆಲ್ಲಾ ಗೊಂದಲಗಳಿದ್ದರೂ, ಗಂಭೀರ್ ಹುದ್ದೆಗೆ ತಕ್ಷಣಕ್ಕೆ ಯಾವುದೇ ಅಪಾಯವಿಲ್ಲದಿರಲು ಪ್ರಮುಖ ಕಾರಣ ಅವರ ಒಪ್ಪಂದ! ಗೌತಮ್ ಗಂಭೀರ್ ಅವರು 2027ರ ಒಡಿಐ ವಿಶ್ವಕಪ್‌ವರೆಗೂ (2027 World Cup) ಬಿಸಿಸಿಐ ಜೊತೆ ಒಪ್ಪಂದ ಹೊಂದಿದ್ದಾರೆ. ವಿಶ್ವಕಪ್‌ಗೆ ಕೇವಲ ಒಂದು ವರ್ಷ ಸಮಯವಿರುವಾಗ ಯಾವುದೇ ಕ್ರಿಕೆಟ್ ಮಂಡಳಿಯೂ ಪ್ರಮುಖ ತರಬೇತುದಾರರನ್ನು ಹಠಾತ್ತನೆ ವಜಾಗೊಳಿಸುವುದಿಲ್ಲ. 

ಜೊತೆಗೆ, ಸತತ ಪ್ರಯಾಣ ಹಾಗೂ ನಿರಂತರ ಮಾಧ್ಯಮ ಪರಿಶೀಲನೆ ಇರುವ ಭಾರತೀಯ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ತಕ್ಷಣವೇ ಬೇರೆ ಸೂಕ್ತ ಅಭ್ಯರ್ಥಿಗಳು ಸಿಗುವುದು ಕಷ್ಟಕರ ಎಂಬುದು ಮಂಡಳಿಗೆ ತಿಳಿದಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕ್ರಿಕೆಟ್
ಬಿಸಿಸಿಐ
ಗೌತಮ್ ಗಂಭೀರ್
ಟೀಮ್ ಇಂಡಿಯಾ
Latest Videos
Recommended Stories
Recommended image1
ಅಪರೂಪದ ದಾಖಲೆಯ ಹೊಸ್ತಿಲಲ್ಲಿ ರೋಹಿತ್‌ ಶರ್ಮಾ, 24 ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ ಸಚಿನ್‌ಗೂ ಸಾಧ್ಯವಾಗಿಲ್ಲ ಈ ದಾಖಲೆ!
Recommended image2
​ನಟಿ ಪ್ರೀತಿ ಜಿಂಟಾ ಜೊತೆ ಲವ್ ಆಗಿತ್ತಾ? 18 ವರ್ಷಗಳ ನಂತರ ಡೇಟಿಂಗ್ ಗುಟ್ಟು ರಟ್ಟು ಮಾಡಿದ ಬ್ರೆಟ್ ಲೀ!
Recommended image3
ಕೊಹ್ಲಿ ಅಗ್ರೆಸಿವ್ ಆಟಕ್ಕೆ ಅಭಿಮಾನಿಗಳಲ್ಲ, ಔಟ್ ಕೊಡುವ ಅಂಪೈರ್‌ಗಳೂ ಫಿದಾ! ವಿರಾಟ್ ರಹಸ್ಯ ಬಿಚ್ಚಿಟ್ಟ ಅಂಪೈರ್!
Related Stories
Recommended image1
Gautam Gambhir: ಆ ಸ್ಟಾರ್‌ಗೆ ಇದೇ ಕೊನೆಯ ಚಾನ್ಸ್! ಗಂಭೀರ್ ತಂಡದಿಂದ ಡ್ರಾಪ್ ಮಾಡೋ ಮುನ್ನ ಜಾಗ ಉಳಿಸಿಕೊಳ್ಳಲು 'ಆ ಪ್ರಭಾವಿ' ಬೆನ್ನು ಬಿದ್ದ ಕ್ರಿಕೆಟರ್!
Recommended image2
ಏಕದಿನ ವಿಶ್ವಕಪ್ ಗೆಲ್ಲಲು ಆರ್‌ಸಿಬಿಯಂತೆ ಪರ್ಫೆಕ್ಟ್‌ ಭಾರತ ತಂಡ ಸೆಲೆಕ್ಟ್ ಮಾಡಿದ ದಿನೇಶ್ ಕಾರ್ತಿಕ್! ಆದ್ರೆ ಗಂಭೀರ್ ಆಪ್ತನಿಗಿಲ್ಲ ಸ್ಥಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved