MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ​ನಟಿ ಪ್ರೀತಿ ಜಿಂಟಾ ಜೊತೆ ಲವ್ ಆಗಿತ್ತಾ? 18 ವರ್ಷಗಳ ನಂತರ ಡೇಟಿಂಗ್ ಗುಟ್ಟು ರಟ್ಟು ಮಾಡಿದ ಬ್ರೆಟ್ ಲೀ!

​ನಟಿ ಪ್ರೀತಿ ಜಿಂಟಾ ಜೊತೆ ಲವ್ ಆಗಿತ್ತಾ? 18 ವರ್ಷಗಳ ನಂತರ ಡೇಟಿಂಗ್ ಗುಟ್ಟು ರಟ್ಟು ಮಾಡಿದ ಬ್ರೆಟ್ ಲೀ!

ಐಪಿಎಲ್ ಆರಂಭದ ದಿನಗಳಲ್ಲಿ ಹಬ್ಬಿದ್ದ ಪ್ರೀತಿ ಜಿಂಟಾ (Preity Zinta) ಜೊತೆಗಿನ ಪ್ರೇಮ ಸಂಬಂಧದ ವದಂತಿಗಳ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ (Brett Lee) ಮೌನ ಮುರಿದಿದ್ದಾರೆ. ತಮ್ಮಿಬ್ಬರ ನಡುವೆ ಸಂಬಂಧದ ಬಗ್ಗೆ ಸ್ಪಷ್ಟನೆ ನೀಡಿದ್ದು, ಜನರ ಮಾತಿನಿಂದ ಬೇಸರವಾಗಿಲ್ಲ ಎಂದಿದ್ದಾರೆ.

2 Min read
Author : Sathish Kumar KH
Published : Aug 03 2026, 10:39 PM IST
Share this Photo Gallery
  • FB
  • TW
  • Linkdin
  • Whatsapp
16
ಪ್ರೀತಿ ಜಿಂಟಾ ಜೊತೆಗೆ ಬ್ರೆಟ್ ಲೀ ಲವ್
Image Credit : X Post

ಪ್ರೀತಿ ಜಿಂಟಾ ಜೊತೆಗೆ ಬ್ರೆಟ್ ಲೀ ಲವ್

ಆಸ್ಟ್ರೇಲಿಯಾದ ವಿಶ್ವವಿಖ್ಯಾತ ಮಾಜಿ ವೇಗದ ಬೌಲರ್ ಬ್ರೆಟ್ ಲೀ (Brett Lee) ಹಾಗೂ ಬಾಲಿವುಡ್ ನಟಿ, 'ಪಂಜಾಬ್ ಕಿಂಗ್ಸ್' (Punjab Kings) ಫ್ರಾಂಚೈಸಿ ಸಹ-ಮಾಲಕಿ ಪ್ರೀತಿ ಜಿಂಟಾ (Preity Zinta) ನಡುವೆ ಪ್ರೇಮ ಸಂಬಂಧವಿತ್ತು (Romance Rumours) ಎಂಬ ವದಂತಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (IPL) ಆರಂಭಿಕ ದಿನಗಳಲ್ಲಿ ಭಾರಿ ಸದ್ದು ಮಾಡಿದ್ದವು. ಇದೀಗ ಹಲವು ವರ್ಷಗಳ ನಂತರ ಬ್ರೆಟ್ ಲೀ ಈ ವದಂತಿಗಳ ಕುರಿತು ಮೌನ ಮುರಿದಿದ್ದು, ಸತ್ಯಾಸತ್ಯತೆಯನ್ನು ಬಿಚ್ಚಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜಿಂಟಾ-ಲೀ ಹೆಸರಲ್ಲಿ ಹಲವು ಲವ್ ಸ್ಟೋರಿಗಳು
Image Credit : X Post

ಜಿಂಟಾ-ಲೀ ಹೆಸರಲ್ಲಿ ಹಲವು ಲವ್ ಸ್ಟೋರಿಗಳು

ಆಸ್ಟ್ರೇಲಿಯಾ ಪರ ಕ್ರಿಕೆಟ್ ಆಡುವಾಗ ಎದುರಾಳಿ ಬ್ಯಾಟರ್‌ಗಳಿಗೆ ಸಿಂಹಸ್ವಪ್ನವಾಗಿದ್ದ ಬ್ರೆಟ್ ಲೀ, ಐಪಿಎಲ್‌ನಲ್ಲೂ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಆರಂಭದಲ್ಲಿ 'ಕಿಂಗ್ಸ್ ಇಲೆವೆನ್ ಪಂಜಾಬ್' (Kings XI Punjab) ತಂಡದ ಪರ ಆಡಿದ್ದ ಲೀ, ನಂತರ 'ಕೋಲ್ಕತ್ತಾ ನೈಟ್ ರೈಡರ್ಸ್' (KKR) ಪರ ಆಡಿ ನಿವೃತ್ತಿ ಪಡೆದಿದ್ದರು. ಪಂಜಾಬ್ ತಂಡದಲ್ಲಿದ್ದಾಗ ಆ ತಂಡದ ಮಾಲಕಿ ಪ್ರೀತಿ ಜಿಂಟಾ ಅವರೊಂದಿಗೆ ಲೀ ಹೆಸರು ಜೋಡಿಸಿ ಹಲವು ಲವ್ ಸ್ಟೋರಿಗಳು (Love Stories) ಹರಿದಾಡಿದ್ದವು.

Related Articles

Related image1
ಪಂಜಾಬ್ ಕಿಂಗ್ಸ್ ತಂಡದ ಜೊತೆ ಪ್ರೀತಿ ಜಿಂಟಾ ಟ್ರಾವೆಲ್, ಎಲ್ಲರ ಗಮನಸೆಳೆದ ಹೊಸ ಲುಕ್
Related image2
ಐಪಿಎಲ್‌ ಫೈನಲ್‌ನಲ್ಲಿ ಪಂಜಾಬ್ ಸೋತ ನಂತರ ಪ್ರೀತಿ ಜಿಂಟಾ ಕಳೆದುಕೊಂಡಿದ್ದು ಎಷ್ಟು ಕೋಟಿ?
36
ಬ್ರೆಟ್ ಲೀ ನೀಡಿದ ಸ್ಪಷ್ಟನೆ ಏನು?
Image Credit : our own

ಬ್ರೆಟ್ ಲೀ ನೀಡಿದ ಸ್ಪಷ್ಟನೆ ಏನು?

ಬಾಂಬೆ ಟೈಮ್ಸ್‌ಗೆ (Bombay Times) ನೀಡಿದ ಇತ್ತೀಚಿನ ಸಂದರ್ಶನದಲ್ಲಿ ಮಾತನಾಡಿದ 48 ವರ್ಷದ ಬ್ರೆಟ್ ಲೀ, ತಮ್ಮ ಮತ್ತು ಪ್ರೀತಿ ಜಿಂಟಾ ನಡುವಿನ ಲಿಂಕ್-ಅಪ್ ವದಂತಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. 'ನಾನು ನನ್ನ ಜೀವನದಲ್ಲಿ ಯಾವುದೇ ಬಾಲಿವುಡ್ ನಟಿಯನ್ನೂ (Bollywood Actress) ಡೇಟ್ ಮಾಡಿಲ್ಲ' ಎಂದು ಸ್ಪಷ್ಟಪಡಿಸಿದ ಲೀ, 'ನನ್ನ ಮತ್ತು ಪ್ರೀತಿ ಜಿಂಟಾ ನಡುವಿನ ವದಂತಿಗಳು ನನಗೆ ಎಂದಿಗೂ ತೊಂದರೆ ನೀಡಲಿಲ್ಲ. ಏಕೆಂದರೆ ಸತ್ಯ ಏನು ಎಂಬುದು ನನಗೆ ಗೊತ್ತಿತ್ತು. ಜನರು ಏನು ಬೇಕಾದರೂ ಊಹಾಪೋಹ ಹಬ್ಬಿಸಬಹುದು, ಆದರೆ ನಾನು ಅದನ್ನು ತಲೆಗೆ ಹಾಕಿಕೊಳ್ಳಲಿಲ್ಲ' ಎಂದು ಹೇಳಿದ್ದಾರೆ.

ಇದೇ ವೇಳೆ ಪ್ರೀತಿ ಜಿಂಟಾ ಅವರನ್ನು ಹಾಡಿ ಹೊಗಳಿದ ಲೀ, 'ನಾವು ಇಂದಿಗೂ ಅತ್ಯುತ್ತಮ ಸ್ನೇಹಿತರು (Great Friends). ಅವರು ಅತ್ಯಂತ ಬುದ್ಧಿವಂತ ಮಹಿಳೆ ಹಾಗೂ ಅವರ ಮೇಲೆ ನನಗೆ ಅಪಾರ ಗೌರವವಿದೆ' ಎಂದಿದ್ದಾರೆ.

46
ಗರಂ ಆಗಿದ್ದ ಪ್ರೀತಿ ಜಿಂಟಾ!
Image Credit : stockPhoto

ಗರಂ ಆಗಿದ್ದ ಪ್ರೀತಿ ಜಿಂಟಾ!

ಈ ಹಿಂದೆ 2010ರಲ್ಲಿ ತಮ್ಮ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಟಗಾರರ ನಡುವಿನ ವದಂತಿಗಳು ಗಡಿ ದಾಟಿದಾಗ ಪ್ರೀತಿ ಜಿಂಟಾ ಸೋಶಿಯಲ್ ಮೀಡಿಯಾ 'ಎಕ್ಸ್' (X - Twitter) ಖಾತೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದರು. 'ನನ್ನ ತಂಡದ ಆಟಗಾರರೊಂದಿಗೆ ನನ್ನ ಹೆಸರು ಜೋಡಿಸುವುದನ್ನು ನೋಡಿ ಸಾಕಾಗಿದೆ. ಸ್ಪಷ್ಟವಾಗಿ ಹೇಳುತ್ತಿದ್ದೇವೆ, ನಾನು ಸಿಂಗಲ್ ಆಗಿದ್ದೇನೆ ಮತ್ತು ನನ್ನ ತಂಡದ ಯಾವುದೇ ಕ್ರಿಕೆಟಿಗನನ್ನೂ ಡೇಟ್ ಮಾಡುತ್ತಿಲ್ಲ. ನಾನು ಯಾರನ್ನಾದರೂ ಪ್ರೀತಿಸಿದರೆ ನಿಮಗೇ ತಿಳಿಸುತ್ತೇನೆ' ಎಂದು ಗರಂ ಆಗಿ ಬರೆದುಕೊಂಡಿದ್ದರು.

56
ಇಬ್ಬರ ಪ್ರಸ್ತುತ ಜೀವನ ಹೇಗಿದೆ?
Image Credit : X Post

ಇಬ್ಬರ ಪ್ರಸ್ತುತ ಜೀವನ ಹೇಗಿದೆ?

ಪ್ರೀತಿ ಜಿಂಟಾ (Preity Zinta): 2016ರಲ್ಲಿ ತಮ್ಮ ಆಪ್ತ ಸ್ನೇಹಿತ ಜೀನ್ ಗುಡ್‌ಇನಫ್ (Gene Goodenough) ಅವರನ್ನು ಹಿಂದೂ ಸಂಪ್ರದಾಯದಂತೆ ವಿವಾಹವಾದರು. 2021ರಲ್ಲಿ ಬಾಡಿಗೆ ತಾಯ್ತನದ (Surrogacy) ಮೂಲಕ ಅವಳಿ ಮಕ್ಕಳಿಗೆ ತಾಯಿಯಾದರು. ಸದ್ಯ ಸನ್ನಿ ಡಿಯೋಲ್ (Sunny Deol) ಅಭಿನಯದ, ಆಮೀರ್ ಖಾನ್ (Aamir Khan) ನಿರ್ಮಾಣದ 'ಬಟ್ವಾರ 1947' (Batwara 1947) ಸಿನಿಮಾ ಮೂಲಕ ಬಾಲಿವುಡ್‌ಗೆ ದೊಡ್ಡ ಕಂಬ್ಯಾಕ್ ಮಾಡಲು ಸಜ್ಜಾಗಿದ್ದಾರೆ.

66
ಬ್ರೆಟ್ ಲೀ (Brett Lee)
Image Credit : Google

ಬ್ರೆಟ್ ಲೀ (Brett Lee)

2015ರಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬ್ರೆಟ್ ಲೀ, ಆಸ್ಟ್ರೇಲಿಯಾ ಪರ 76 ಟೆಸ್ಟ್‌ಗಳಲ್ಲಿ 310 ವಿಕೆಟ್ ಹಾಗೂ 221 ಏಕದಿನ ಪಂದ್ಯಗಳಲ್ಲಿ (ODI Matches) 380 ವಿಕೆಟ್‌ಗಳನ್ನು ಕಬಳಿಸಿದ ಮಹಾನ್ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಐಪಿಎಲ್ ಆರಂಭದ ದಿನಗಳಲ್ಲಿ ಪಂಜಾಬ್ ತಂಡದ ಆಟಗಾರರಾಗಿ ಪ್ರೀತಿ ಜಿಂಟಾ ಅವರೊಂದಿಗೆ ಕ್ಲೋಸ್ ಆಗಿ ಕಾಣಿಸಿಕೊಂಡಿದ್ದ ಬ್ರೆಟ್ ಲೀ, ತಮ್ಮಿಬ್ಬರ ನಡುವೆ ಇದ್ದದ್ದು ಕೇವಲ ಪವಿತ್ರ ಸ್ನೇಹ (Pure Friendship) ಮಾತ್ರ ಎಂಬುದನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಪ್ರೀತಿ ಜಿಂಟಾ
ಬಾಲಿವುಡ್
ಕ್ರಿಕೆಟ್
ಪಂಜಾಬ್ ಕಿಂಗ್ಸ್
Latest Videos
Recommended Stories
Recommended image1
ಕೊಹ್ಲಿ ಅಗ್ರೆಸಿವ್ ಆಟಕ್ಕೆ ಅಭಿಮಾನಿಗಳಲ್ಲ, ಔಟ್ ಕೊಡುವ ಅಂಪೈರ್‌ಗಳೂ ಫಿದಾ! ವಿರಾಟ್ ರಹಸ್ಯ ಬಿಚ್ಚಿಟ್ಟ ಅಂಪೈರ್!
Recommended image2
'ನೀವೇ ನಿಜವಾದ ಹೀರೋ…'ದೋಸ್ತ್‌ಗಾಗಿ ಭಾವುಕ ಪೋಸ್ಟ್‌ ಹಂಚಿಕೊಂಡ ರೋಹಿತ್ ಶರ್ಮಾ!
Recommended image3
ಸಚಿನ್‌, ಗಂಗೂಲಿ, ಧೋನಿ..ಊಹುಂ.. ಕೆಎಲ್‌ ರಾಹುಲ್‌ಗೆ ಇರುವ ಈ ಹವ್ಯಾಸ ಟೀಮ್‌ ಇಂಡಿಯಾದಲ್ಲಿ ಯಾರೊಬ್ಬರಿಗೂ ಇರ್ಲಿಲ್ಲ!
Related Stories
Recommended image1
ಪಂಜಾಬ್ ಕಿಂಗ್ಸ್ ತಂಡದ ಜೊತೆ ಪ್ರೀತಿ ಜಿಂಟಾ ಟ್ರಾವೆಲ್, ಎಲ್ಲರ ಗಮನಸೆಳೆದ ಹೊಸ ಲುಕ್
Recommended image2
ಐಪಿಎಲ್‌ ಫೈನಲ್‌ನಲ್ಲಿ ಪಂಜಾಬ್ ಸೋತ ನಂತರ ಪ್ರೀತಿ ಜಿಂಟಾ ಕಳೆದುಕೊಂಡಿದ್ದು ಎಷ್ಟು ಕೋಟಿ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved