MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • ಕೊಹ್ಲಿ ಅಗ್ರೆಸಿವ್ ಆಟಕ್ಕೆ ಅಭಿಮಾನಿಗಳಲ್ಲ, ಔಟ್ ಕೊಡುವ ಅಂಪೈರ್‌ಗಳೂ ಫಿದಾ! ವಿರಾಟ್ ರಹಸ್ಯ ಬಿಚ್ಚಿಟ್ಟ ಅಂಪೈರ್!

ಕೊಹ್ಲಿ ಅಗ್ರೆಸಿವ್ ಆಟಕ್ಕೆ ಅಭಿಮಾನಿಗಳಲ್ಲ, ಔಟ್ ಕೊಡುವ ಅಂಪೈರ್‌ಗಳೂ ಫಿದಾ! ವಿರಾಟ್ ರಹಸ್ಯ ಬಿಚ್ಚಿಟ್ಟ ಅಂಪೈರ್!

ವಿರಾಟ್ ಕೊಹ್ಲಿಯ (Virat Kohli) ಆಟದ ಮೇಲಿನ ಪ್ಯಾಶನ್ ಮತ್ತು ಅಗ್ರೆಶನ್ ಬಗ್ಗೆ ಮಾಜಿ ಅಂತರಾಷ್ಟ್ರೀಯ ಅಂಪೈರ್ ಮಾತನಾಡಿದ್ದಾರೆ. ಕೊಹ್ಲಿ ಬ್ಯಾಟಿಂಗ್‌ ಅಭಿಮಾನಿಗಳು ಮಾತ್ರವಲ್ಲ ಅಂಪೈರ್‌ಗಳಿಗೂ ಇಷ್ಟ. ಇಂತಹ ಟಗಾರರು ಕ್ರಿಕೆಟ್‌ಗೆ ಅಗತ್ಯ, ಅವರ ಆಕ್ರಮಣಶೀಲತೆ ವೈಯಕ್ತಿಕವಲ್ಲ ಎಂದು ಅಂಪೈರ್ ಹೇಳಿದ್ದಾರೆ.

2 Min read
Author : Sathish Kumar KH
Published : Aug 03 2026, 09:58 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : AFP

ಭಾರತೀಯ ಕ್ರಿಕೆಟ್‌ನ (Indian Cricket) ರನ್ ಮಷೀನ್ ವಿರಾಟ್ ಕೊಹ್ಲಿ (Virat Kohli) ಆಟವನ್ನು ಕೇವಲ ಕ್ರಿಕೆಟ್ ಅಭಿಮಾನಿಗಳು ಮತ್ತು ವೀಕ್ಷಕರು ಮಾತ್ರವಲ್ಲ, ಮೈದಾನದಲ್ಲಿದ್ದು ಪಂದ್ಯ ನಡೆಸಿಕೊಡುವ ಅಂಪೈರ್‌ಗಳು ಸಹ ಅಪಾರವಾಗಿ ಮೆಚ್ಚಿಕೊಳ್ಳುತ್ತಾರೆ. ಇತ್ತೀಚೆಗೆ ಮಾಜಿ ಅಂತರಾಷ್ಟ್ರೀಯ ಅಂಪೈರ್ ಒಬ್ಬರು ವಿರಾಟ್ ಕೊಹ್ಲಿ ಮೈದಾನದಲ್ಲಿ ತೋರಿಸುವ ಜೋಷ್ ಹಾಗೂ ಅಗ್ರೆಸಿವ್ ಆಟದ ಬಗ್ಗೆ ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
Image Credit : Getty

ಕೊಹ್ಲಿಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ!

ಕ್ರಿಕೆಟ್ ತನ್ನ ನಿಜವಾದ ರೋಚಕತೆಯನ್ನು (Thrill) ಉಳಿಸಿಕೊಳ್ಳಬೇಕಾದರೆ ವಿರಾಟ್ ಕೊಹ್ಲಿಯಂತಹ ಹುರುಪಿನ ಆಟಗಾರರು ಇರಲೇಬೇಕು ಎಂದು ಅಂತಾರಾಷ್ಟ್ರೀಯ ಅಂಪೈರ್ ಅನಿಲ್ ಚೌಧರಿ (Anil Chaudhary) ಅಭಿಪ್ರಾಯಪಟ್ಟಿದ್ದಾರೆ. ಕೊಹ್ಲಿ ಮೈದಾನದಲ್ಲಿ ತೋರಿಸುವ ಅಗ್ರೆಶನ್ (Aggression), ಆಟದ ಮೇಲಿನ ಅವರ ಹಿಡಿತ ಹಾಗೂ ಅಪಾರವಾದ ಪ್ಯಾಶನ್‌ನಿಂದ (Passion for Game) ಬರುತ್ತದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Related Articles

Related image1
Team India: ರಿಟೈರ್ಮೆಂಟ್ ಚರ್ಚೆ ಬೆನ್ನಲ್ಲೇ ರೋಹಿತ್-ವಿರಾಟ್ ಅಚ್ಚರಿ ನಡೆ; ಆ ಹುಡುಗನ ಸ್ಥಾನಕ್ಕೆ ಎದುರಾಯ್ತು ಕುತ್ತು? ಕಾರಣವೇನು?
Related image2
'ಒಂದೆರಡು ಮ್ಯಾಚ್....': ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಖಡಕ್ ವಾರ್ನಿಂಗ್ ಕೊಟ್ಟ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
35
Image Credit : Getty

'ನಾನು ವಿರಾಟ್ ಕೊಹ್ಲಿಯನ್ನು ಚಿಕ್ಕ ವಯಸ್ಸಿನಿಂದ ನೋಡಿದ್ದೇನೆ, ಅವರ ಪಂದ್ಯಗಳಿಗೆ ಅಂಪೈರಿಂಗ್ ಮಾಡಿದ್ದೇನೆ. ಹಾಗಾಗಿ ಅವರ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ಕೊಹ್ಲಿಗೆ ಯಾರ ಮೇಲೂ ವೈಯಕ್ತಿಕ ದ್ವೇಷವಿಲ್ಲ. ಕೆಲವೊಮ್ಮೆ ಅವರು ಮೈದಾನದಲ್ಲಿ ಅಗ್ರೆಸ್ಸಿವ್ ಆಗಿ ಕಾಣಿಸುತ್ತಾರೆ, ಆದರೆ ನಾವು ಅಂಪೈರ್‌ಗಳು ಸರಿಯಾದ ನಿರ್ಧಾರ ನೀಡಿದರೆ, ಖಂಡಿತವಾಗಿಯೂ ಹೊಗಳುತ್ತಾರೆ. ಓವರ್‌ಗಳ ಮಧ್ಯೆ ಬಂದು ಬೆನ್ನು ತಟ್ಟುತ್ತಾರೆ. ಆಟದ ಮೇಲೆ ಅವರಿಗೆ ಸದಾ ವಿಪರೀತ ಪ್ಯಾಶನ್. ಇಂಥಾ ಆಟಗಾರರು ಇರಲೇಬೇಕು, ಇಲ್ಲವಾದರೆ ಕ್ರಿಕೆಟ್‌ ಎಂಬ ಆಟವೇ ಬೋರಿಂಗ್ (Boring) ಆಗಿಬಿಡುತ್ತದೆ' ಎಂದು ಅನಿಲ್ ಚೌಧರಿ ತಿಳಿಸಿದ್ದಾರೆ.

45
Image Credit : bcci

'ಮಂಕಡಿಂಗ್' ನಿಯಮಕ್ಕೆ ಬೆಂಬಲ!

ಉತ್ತರ ಭಾರತದ ಆಟಗಾರರಲ್ಲಿ ಸಾಮಾನ್ಯವಾಗಿರುವ ರಕ್ತದ ಬಿಸಿ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (IPL) ನಡೆಯುವ ವಾಗ್ವಾದಗಳ ಬಗ್ಗೆಯೂ ಅನಿಲ್ ಚೌಧರಿ ಮಾತನಾಡಿದ್ದಾರೆ. 'ಆಟದ ಮೇಲೆ ಹೆಚ್ಚು ನಿರ್ಬಂಧಗಳನ್ನು ಹೇರಿದರೆ ಅದರ ಅಸಲಿ ಸ್ವರೂಪವೇ ಹಾಳಾಗುತ್ತದೆ. ಆದರೆ ಎಲ್ಲದಕ್ಕೂ ಒಂದು ಮಿತಿ ಇರಬೇಕು' ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ನಾನ್-ಸ್ಟ್ರೈಕರ್ ಎಂಡ್‌ನಲ್ಲಿ ಬೌಲರ್‌ಗಳು ಮಾಡುವ ರನೌಟ್ ಅಥವಾ 'ಮಂಕಡಿಂಗ್' (Mankading / Non-striker Run Out) ನಿಯಮವನ್ನು ಅನಿಲ್ ಚೌಧರಿ ಬಲವಾಗಿ ಬೆಂಬಲಿಸಿದ್ದಾರೆ.

55
Image Credit : AFP

ಭವಿಷ್ಯದಲ್ಲಿ ಬರಲಿವೆ ಬ್ಯಾಟರ್‌ಗಳಿಗೆ ಕಠಿಣ ನಿಯಮಗಳು!

ಬ್ಯಾಟ್ಸ್‌ಮನ್‌ಗಳು ಬೌಲರ್‌ಗಳು ಎಸೆಯುವ ಮುನ್ನವೇ ಅನಗತ್ಯವಾಗಿ ಕ್ರೀಸ್ ಬಿಟ್ಟು ಮುಂದೆ ಹೋಗುವುದನ್ನು ತಡೆಯಲು ಭವಿಷ್ಯದಲ್ಲಿ ಹೊಸ ದಂಡದ ನಿಯಮಗಳು ಬರುವ ಸಾಧ್ಯತೆಯಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. 'ಕ್ರಿಕೆಟ್‌ನಲ್ಲಿ ನಾನ್-ಸ್ಟ್ರೈಕರ್ ರನೌಟ್ ಮಾಡುವುದು ಸಂಪೂರ್ಣವಾಗಿ ನ್ಯಾಯಸಮ್ಮತ. ಒಂದೆರಡು ವರ್ಷಗಳಲ್ಲಿ ಮೊದಲು ಬ್ಯಾಟರ್‌ಗೆ ಎಚ್ಚರಿಕೆ ನೀಡುವುದು, ನಂತರ ರನ್ ಪೆನಾಲ್ಟಿ (Run Penalty) ವಿಧಿಸುವಂತಹ ಕಠಿಣ ನಿಯಮಗಳು ಬರುವ ಸಾಧ್ಯತೆಯಿದೆ. 

ಏಕೆಂದರೆ ಈಗಿನ ನಿಯಮಗಳು ಬ್ಯಾಟರ್‌ಗಳಿಗೆ ಹೆಚ್ಚು ಅನುಕೂಲಕರವಾಗಿದ್ದು, ಬೌಲರ್‌ಗಳಿಗೆ ಅಷ್ಟೇನೂ ಅನುಕೂಲಕರವಾಗಿಲ್ಲ' ಎಂದು ಮಾಜಿ ಅಂಪೈರ್ ಅನಿಲ್ ಚೌಧರಿ ಸ್ಪಷ್ಟಪಡಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕ್ರಿಕೆಟ್
ವಿರಾಟ್ ಕೊಹ್ಲಿ
ಟೀಮ್ ಇಂಡಿಯಾ
ಕ್ರಿಕೆಟ್ ಕ್ರೀಡಾಂಗಣ
Latest Videos
Recommended Stories
Recommended image1
'ನೀವೇ ನಿಜವಾದ ಹೀರೋ…'ದೋಸ್ತ್‌ಗಾಗಿ ಭಾವುಕ ಪೋಸ್ಟ್‌ ಹಂಚಿಕೊಂಡ ರೋಹಿತ್ ಶರ್ಮಾ!
Recommended image2
ಸಚಿನ್‌, ಗಂಗೂಲಿ, ಧೋನಿ..ಊಹುಂ.. ಕೆಎಲ್‌ ರಾಹುಲ್‌ಗೆ ಇರುವ ಈ ಹವ್ಯಾಸ ಟೀಮ್‌ ಇಂಡಿಯಾದಲ್ಲಿ ಯಾರೊಬ್ಬರಿಗೂ ಇರ್ಲಿಲ್ಲ!
Recommended image3
ಮ್ಯಾಚ್ ಫಿಕ್ಸಿಂಗ್‌ಗೆ ಯತ್ನ: ಭಾರತೀಯ ಮೂಲದ ಈ ಕ್ರಿಕೆಟಿಗನಿಗೆ 8 ವರ್ಷ ನಿಷೇಧ!
Related Stories
Recommended image1
Team India: ರಿಟೈರ್ಮೆಂಟ್ ಚರ್ಚೆ ಬೆನ್ನಲ್ಲೇ ರೋಹಿತ್-ವಿರಾಟ್ ಅಚ್ಚರಿ ನಡೆ; ಆ ಹುಡುಗನ ಸ್ಥಾನಕ್ಕೆ ಎದುರಾಯ್ತು ಕುತ್ತು? ಕಾರಣವೇನು?
Recommended image2
'ಒಂದೆರಡು ಮ್ಯಾಚ್....': ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಖಡಕ್ ವಾರ್ನಿಂಗ್ ಕೊಟ್ಟ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved