MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Sports
  • Cricket
  • Gautam Gambhir: ಆ ಸ್ಟಾರ್‌ಗೆ ಇದೇ ಕೊನೆಯ ಚಾನ್ಸ್! ಗಂಭೀರ್ ತಂಡದಿಂದ ಡ್ರಾಪ್ ಮಾಡೋ ಮುನ್ನ ಜಾಗ ಉಳಿಸಿಕೊಳ್ಳಲು 'ಆ ಪ್ರಭಾವಿ' ಬೆನ್ನು ಬಿದ್ದ ಕ್ರಿಕೆಟರ್!

Gautam Gambhir: ಆ ಸ್ಟಾರ್‌ಗೆ ಇದೇ ಕೊನೆಯ ಚಾನ್ಸ್! ಗಂಭೀರ್ ತಂಡದಿಂದ ಡ್ರಾಪ್ ಮಾಡೋ ಮುನ್ನ ಜಾಗ ಉಳಿಸಿಕೊಳ್ಳಲು 'ಆ ಪ್ರಭಾವಿ' ಬೆನ್ನು ಬಿದ್ದ ಕ್ರಿಕೆಟರ್!

ಗೌತಮ್ ಗಂಭೀರ್ ಕೋಚಿಂಗ್‌ನಲ್ಲಿ ಧ್ರುವ್ ಜುರೆಲ್ ಅವರಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಆ ಹುಡುಗನ  ಟೆಸ್ಟ್ ಸ್ಥಾನ ಅಲುಗಾಡುತ್ತಿದೆ. ತಂಡದಿಂದ ಹೊರಬೀಳುವ ಭೀತಿಯಲ್ಲಿರುವ ಅವನು, ಶ್ರೀಲಂಕಾ ಪ್ರವಾಸಕ್ಕೂ ಮುನ್ನ ತಮ್ಮ ಕೌಶಲ್ಯ ವೃದ್ಧಿಸಿಕೊಳ್ಳಲು ಪ್ರಭಾವಿ ದಿಗ್ಗಜನ ಮೊರೆ ಹೋಗಿದ್ದಾನೆ.

2 Min read
Author : Bhimasi M Koleppanavar
Published : Aug 01 2026, 05:00 PM IST
Share this Photo Gallery
  • FB
  • TW
  • Linkdin
  • Whatsapp
16
ದೊಡ್ಡ ಮಟ್ಟದ ಪೈಪೋಟಿ!
Image Credit : Social Media

ದೊಡ್ಡ ಮಟ್ಟದ ಪೈಪೋಟಿ!

ಟೀಮ್ ಇಂಡಿಯಾದ ಕೊಂಬಿನಂಥ ಹೆಡ್ ಕೋಚ್ ಗೌತಮ್ ಗಂಭೀರ್ ಯುಗದಲ್ಲಿ ಯಾರಿಗೂ ತಂಡದಲ್ಲಿ ಸ್ಥಾನ ಪಕ್ಕಾ ಇಲ್ಲ ಎಂಬುದು ಈಗಾಗಲೇ ಸಾಬೀತಾಗಿದೆ. ಸದ್ಯ ಭಾರತೀಯ ಕ್ರಿಕೆಟ್ ತಂಡವು ಮುಂಬರುವ ಶ್ರೀಲಂಕಾ ಟೆಸ್ಟ್ ಪ್ರವಾಸಕ್ಕೆ ಸಜ್ಜಾಗುತ್ತಿದ್ದು, ಎರಡು ಪಂದ್ಯಗಳ ಈ ಸರಣಿಯು ಆಗಸ್ಟ್ 15ರಿಂದ ಆರಂಭವಾಗಲಿದೆ. ಆದರೆ ಸರಣಿ ಶುರುವಾಗುವುದಕ್ಕೂ ಕೆಲವೇ ದಿನಗಳ ಮುನ್ನ ಟೀಮ್ ಇಂಡಿಯಾದ ವಿಕೆಟ್‌ಕೀಪಿಂಗ್ ವಲಯದಲ್ಲಿ ದೊಡ್ಡ ಮಟ್ಟದ ಪೈಪೋಟಿ ಸೃಷ್ಟಿಯಾಗಿದ್ದು, ಸ್ಟಾರ್ ಆಟಗಾರ ರಿಷಭ್ ಪಂತ್ ಅವರ ಟೆಸ್ಟ್ ಭವಿಷ್ಯವೇ ಈಗ ತೂಗುಯ್ಲೆಯಲ್ಲಿದೆ!

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಟಿ20 ತಂಡದಲ್ಲಿಲ್ಲ ಪಂತ್‌ಗೆ ಸ್ಥಾನ!
Image Credit : ANI

ಟಿ20 ತಂಡದಲ್ಲಿಲ್ಲ ಪಂತ್‌ಗೆ ಸ್ಥಾನ!

ಪ್ರಸ್ತುತ ರಿಷಭ್ ಪಂತ್ ಭಾರತದ ಏಕದಿನ ಅಥವಾ ಟಿ20 ತಂಡಗಳಲ್ಲಿ ಸ್ಥಾನ ಪಡೆದಿಲ್ಲ. ಅವರು ಕೇವಲ ಟೆಸ್ಟ್ ಸ್ವರೂಪದಲ್ಲಿ ಮಾತ್ರ ಭಾರತದ ಪರ ಆಡುತ್ತಿದ್ದಾರೆ. ಆದರೆ, ಶ್ರೀಲಂಕಾ ಪ್ರವಾಸಕ್ಕಾಗಿ ಆಯ್ಕೆ ಸಮಿತಿಯು ಪಂತ್ ಜೊತೆಗೆ ಕೆ.ಎಲ್. ರಾಹುಲ್ ಮತ್ತು ಧ್ರುವ್ ಜುರೆಲ್ ಅವರನ್ನು ಸೇರಿಸಿ ಒಟ್ಟು ಮೂವರು ವಿಕೆಟ್ ಕೀಪರ್‌ಗಳನ್ನು ಆಯ್ಕೆ ಮಾಡಿರುವುದು ಪಂತ್ ಅವರಿಗೆ ನಡುಕ ಹುಟ್ಟಿಸಿದೆ. ಕೋಚ್ ಗಂಭೀರ್ ಅವರು ಧ್ರುವ್ ಜುರೆಲ್ ರೂಪದಲ್ಲಿ ಮತ್ತೊಬ್ಬ ಅತ್ಯುತ್ತಮ ಕೀಪರ್ ಹಾಗೂ ಬ್ಯಾಟರ್‌ಗೆ ಮಣೆ ಹಾಕಿರುವುದು ಪಂತ್ ಅವರ ಸ್ಥಾನಕ್ಕೆ ನೇರ ಕಂಟಕ ತಂದೊಡ್ಡಿದೆ.

Related Articles

Related image1
Cricket: ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!
36
ಜುರೆಲ್‌ಗೆ ಅವಕಾಶದ ಸಾಧ್ಯತೆ?
Image Credit : ANI

ಜುರೆಲ್‌ಗೆ ಅವಕಾಶದ ಸಾಧ್ಯತೆ?

ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಧ್ರುವ್ ಜುರೆಲ್ ಅದ್ಭುತ ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಇನ್ನೊಂದೆಡೆ, ಪಂತ್ ಅವರ ಇತ್ತೀಚಿನ ಬ್ಯಾಟಿಂಗ್ ಫಾರ್ಮ್ ಕೂಡ ಅಷ್ಟೇನೂ ಭರವಸೆ ಮೂಡಿಸುವಂತಿಲ್ಲ. ಒಂದು ವೇಳೆ ಲಂಕಾ ಸರಣಿಯಲ್ಲಿ ಜುರೆಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿ, ಅವರು ಮಿಂಚಿದರೆ ಪಂತ್ ಅವರನ್ನು ತಂಡದಿಂದ ಪೂರ್ಣವಾಗಿ ಕೈಬಿಡುವ ಸಾಧ್ಯತೆ ದಟ್ಟವಾಗಿದೆ.

46
ಆ ದಿಗ್ಗಜನ ಮೊರೆ ಹೋದ ರಿಷಭ್!
Image Credit : X/BCCI

ಆ ದಿಗ್ಗಜನ ಮೊರೆ ಹೋದ ರಿಷಭ್!

ತಂಡದಿಂದ ಡ್ರಾಪ್ ಆಗುವ ಭೀತಿಯಲ್ಲಿರುವ ರಿಷಭ್ ಪಂತ್, ಈಗ ತಮ್ಮ ಸ್ಥಾನವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಭಾರತ ಕ್ರಿಕೆಟ್‌ನ 'ದಿಗ್ಗಜ' ಮಹೇಂದ್ರ ಸಿಂಗ್ ಧೋನಿ ಅವರ ಮೊರೆ ಹೋಗಿದ್ದಾರೆ. ಪಂತ್ ಇತ್ತೀಚೆಗೆ ರಾಂಚಿಗೆ ತೆರಳಿ ಎಂ.ಎಸ್. ಧೋನಿ ಅವರನ್ನು ನೇರವಾಗಿ ಭೇಟಿಯಾಗಿದ್ದಾರೆ. ಭಾರತದ ಮಾಜಿ ಸ್ಪಿನ್ನರ್ ಶಹಬಾಜ್ ನದೀಮ್ ಹಂಚಿಕೊಂಡ ಫೋಟೋದಲ್ಲಿ, ಪಂತ್ ಮತ್ತು ಧೋನಿ ರಾಂಚಿಯ ಜಿಮ್‌ನಲ್ಲಿ ಒಟ್ಟಿಗೆ ತರಬೇತಿ ಪಡೆಯುತ್ತಿರುವುದು ಕಂಡುಬಂದಿದೆ. ಧೋನಿ ಅವರಿಂದ ವಿಕೆಟ್ ಕೀಪಿಂಗ್ ಮತ್ತು ಒತ್ತಡ ನಿಭಾಯಿಸುವ ಸೂಕ್ಷ್ಮ ಸಲಹೆಗಳನ್ನು ಪಡೆಯಲು ಪಂತ್ ಈ ಮಟ್ಟದ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ.

56
ಪ್ರದರ್ಶನವೊಂದೇ ಅಂತಿಮ!
Image Credit : X/BCCI

ಪ್ರದರ್ಶನವೊಂದೇ ಅಂತಿಮ!

ಗಂಭೀರ್ ಅವರ ಕಟ್ಟುನಿಟ್ಟಿನ ಆಡಳಿತದಲ್ಲಿ ಪ್ರದರ್ಶನವೊಂದೇ ಅಂತಿಮ. ಹೀಗಾಗಿ, ಧೋನಿ ನೀಡಿದ ಸ್ಪೆಷಲ್ ಟಿಪ್ಸ್ ಬಳಸಿ ರಿಷಭ್ ಪಂತ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಮ್ಮ ಕೆರಿಯರ್ ಉಳಿಸಿಕೊಳ್ಳುತ್ತಾರಾ ಅಥವಾ ಧ್ರುವ್ ಜುರೆಲ್ ಪಂತ್ ಜಾಗವನ್ನು ಕಬಳಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ!

66
ಶ್ರೀಲಂಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡ!
Image Credit : X/BCCI

ಶ್ರೀಲಂಕಾ ಪ್ರವಾಸಕ್ಕೆ ಭಾರತ ಟೆಸ್ಟ್ ತಂಡ!

ಶುಭಮನ್ ಗಿಲ್ (ನಾಯಕ), ಕೆ.ಎಲ್. ರಾಹುಲ್ (ಉಪನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ದೇವದತ್ ಪಡಿಕ್ಕಲ್, ಸಾಯಿ ಸುದರ್ಶನ್, ಧ್ರುವ ಜುರೆಲ್ (ವಿಕೆಟ್‌ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್ ಮತ್ತು ಸರನ್ಶ್ ಜೈನ್.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

BM
Bhimasi M Koleppanavar
ಹುಬ್ಬಳ್ಳಿ-ಧಾರವಾಡದ ಮಧ್ಯದ ಶಿವಳ್ಳಿ ನನ್ನ ಹುಟ್ಟೂರು. ಮೈಸೂರಿನಲ್ಲಿ ಎಂ.ಎ. ವ್ಯಾಸಂಗ ಮಾಡುವಾಗಲೇ ಪತ್ರಿಕೋದ್ಯಮಕ್ಕೆ ಕಾಲಿಟ್ಟೆ. ಹುಬ್ಬಳ್ಳಿಯ ‘ಉದಯವಾಣಿ’ಯಿಂದ ಆರಂಭವಾದ ನನ್ನ ಮಾಧ್ಯಮ ಜರ್ನಿ, ‘ವಿಜಯವಾಣಿ’ ಮತ್ತು ‘ನ್ಯೂಸ್ 18’ ಸಂಸ್ಥೆಗಳ ಮೂಲಕ ಸಾಗಿತು. ಪ್ರಸ್ತುತ ‘ಏಷ್ಯಾನೆಟ್ ಸುವರ್ಣ ನ್ಯೂಸ್’ ಡಿಜಿಟಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಜಕೀಯ, ಕ್ರೈಂ, ಸುದ್ದಿಗಳೇ ಅಚ್ಚು ಮೆಚ್ಚು.
ಕ್ರಿಕೆಟ್
ಕ್ರೀಡೆಗಳು
ರಿಷಭ್ ಪಂತ್
ಟೀಮ್ ಇಂಡಿಯಾ
Latest Videos
Recommended Stories
Recommended image1
11 ಬೌಂಡರಿ, 5 ಸಿಕ್ಸರ್: ಆರ್‌ಸಿಬಿ ಮಾಜಿ ಕ್ರಿಕೆಟಿಗನಿಂದ ವಿಸ್ಪೋಟಕ ಶತಕ! ಆತನನ್ನು ಕೈಬಿಟ್ಟು ಬೆಂಗಳೂರು ಫ್ರಾಂಚೈಸಿಯಿಂದ ಮಹಾ ಎಡವಟ್ಟು?
Recommended image2
ಪಾಕ್‌ ಕ್ರಿಕೆಟರ್‌ಗಳಿಗೆ ಹ್ಯಾಂಡ್‌ಶೇಕ್‌ ಕೊಡೋದಿಲ್ಲ ಟೀಮ್‌ ಇಂಡಿಯಾ ಪ್ಲೇಯರ್ಸ್‌, ಆದ್ರೆ ತಬ್ಬಿಕೊಂಡು ಅಭಿನಂದನೆ ಹೇಳಿದ ಜೆಮಿಮಾ!
Recommended image3
6 ಎಸೆತ, 21 ರನ್: ಫಿನಿಶ್ ಮಾಡ್ತಾರೆ ಅಂದ್ಕೊಂಡ್ರೆ, ಅದೇನೋ ಮಾಡಲು ಹೋಗಿ ಟ್ರೋಲ್‌ ಆದ 3D ಆಲ್ರೌಂಡರ್ ವಿಜಯ್ ಶಂಕರ್!
Related Stories
Recommended image1
Cricket: ಕ್ಯಾನ್ಸರ್ ಗೆದ್ದ ಕಷ್ಟ, ತಂದೆಯ ಮೌನ ಸಂದೇಶ; ಭಾವನಾತ್ಮಕ ಹೋರಾಟದ ಮೂಲಕ ಟೀಮ್ ಇಂಡಿಯಾ ಬಾಗಿಲು ತಟ್ಟಿದ ಹುಡುಗ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved