ಬಾಲಿವುಡ್ ಚಿತ್ರಗಳಲ್ಲೇಕೆ ನಟಿಸೋಲ್ಲ ಎಂಬುದನ್ನು ರಿವೀಲ್ ಮಾಡಿದ ಮಹೇಶ್ ಬಾಬು!
ಮಹೇಶ್ ಬಾಬು (Mahesh Babu) ಸೌತ್‌ನ ಸೂಪರ್‌ಸ್ಟಾರ್. ಇವರು ದಕ್ಷಿಣದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಸಹ ಬೃಹತ್ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರ ಹಳೆ ಸಂದರ್ಶನದ ವೀಡಿಯೋ ಕ್ಲಿಪ್ ಈಗ ವೈರಲ್ ಆಗುತ್ತಿದೆ. ಇದರಲ್ಲಿ ನಟ ತಾನು ಬಾಲಿವುಡ್ ಚಿತ್ರಗಳಲ್ಲೇಕೆ ನಟಿಸಲಿಲ್ಲ ಎಂಬುದರ ಕುರಿತು ಮಾತನಾಡಿದ್ದಾರೆ.
Mahesh Babu
ಮಹೇಶ್ ಬಾಬು ಒಬ್ಬ ನಟನ ಜೊತೆ ನಿರ್ಮಾಪಕ, ಮಾಧ್ಯಮ ವ್ಯಕ್ತಿತ್ವ, ಗ್ಲೋಬಲ್ ಸೌತ್ ಸೂಪರ್‌ಸ್ಟಾರ್. ದಕ್ಷಿಣದಲ್ಲಿ ಮಾತ್ರವಲ್ಲ, ಇಡೀ ವಿಶ್ವದಲ್ಲೇ ಬೃಹತ್ ಅಭಿಮಾನಿಗಳನ್ನು ಹೊಂದಿದ್ದಾರೆ.
ಮುರಾರಿ, ಒಕ್ಕಾಡು, ಪೋಕಿರಿ, ಅಥಾಡು, ಡೂಕುಡು, ಉದ್ಯಮಿ, ಸೀತಮ್ಮ ವಾಕಿಟ್ಲೊ ಸಿಲಿಮಾಲ್ ಚೆಟ್ಟಿ ಮುಂತಾದ ಚಿತ್ರಗಳಲ್ಲಿ ಪರಿಣಾಮಕಾರಿ ಅಭಿನಯದ ಮೂಲಕ ಟಾಲಿವುಡ್‌ನಲ್ಲಿ ಸ್ವತಃ ಸ್ಥಾನ ಮಾಡಿಕೊಂಡಿರುವ ಮಹೇಶ್ ಬಾಬು ದಕ್ಷಿಣ ಚಲನಚಿತ್ರೋದ್ಯಮದ ಅತಿದೊಡ್ಡ ಹೆಸರುಗಳಲ್ಲೊಂದು.
ಮಹೇಶ್ ಬಾಬು ಅವರ ಮುಂಬರುವ ಚಲನಚಿತ್ರ ಎಸ್‌ಎಸ್‌ಎಂಬಿಬಿ 28, ಗುಂಟೂರ್ ಕಾರಮ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯ ನಂತರ ಸಾಕಷ್ಟು ಡ್ರೆಂಡ್ ಮತ್ತು ಕುತೂಹಲವನ್ನು ಸೃಷ್ಟಿಸಿದೆ.
ತಮ್ಮ ಹಳೆಯ ವೀಡಿಯೊ ಸಂದರ್ಶನದ ಕ್ಲಿಪ್‌ಗಳು ವೈರಲ್ ಆದಾಗ ಸ್ಟಾರ್‌ಗಳು ಮುಖ್ಯಾಂಶಗಳಿಗೆ ಬರುವುದು ಕಾಮನ್. ಮಹೇಶ್ ಬಾಬು ಸಹ ಹಳೆಯ ವೀಡಿಯೊ ಕ್ಲಿಪ್ ಕಾರಣದಿಂದ ಸುದ್ದಿಯಲ್ಲಿದ್ದಾರೆ. ಕ್ಲಿಪ್‌ನಲ್ಲಿ, ಅವರು ಬಾಲಿವುಡ್‌ಗೆ ಏಕೆ ಹೋಗಲಿಲ್ಲ ಎಂಬುದರ ಕುರಿತು ಅವರು ತೆರೆದಿಟ್ಟಿದ್ದಾರೆ.
'ನಾನು ಸೊಕ್ಕಿನವನು ಎಂದು ಅನಿಸಬಹುದು ಎಂದು ನನಗೆ ಗೊತ್ತಿಲ್ಲ, ಆದರೆ ನಾನು ಹಿಂದಿಯಿಂದ ಸಾಕಷ್ಟು ಆಫರ್‌ಗಳನ್ನು ಪಡೆದುಕೊಂಡಿದ್ದೇನೆ. ಆದರೆ ನನ್ನ ಸರಳ ವಿಷಯವೆಂದರೆ, ಹಿಂದಿಯವರು ನನ್ನನ್ನು ನಿಭಾಯಿಸಬಲ್ಲರೆಂದು ನಂಗೆ ಅನ್ನಿಸೋಲ್ಲ. ನಾನು ಇಲ್ಲಿ ಯಾವ ರೀತಿಯ ಗೌರವ ಪಡೆಯುತ್ತೇನೆ ಎಂಬ ಕಾರಣದಿಂದಾಗಿ ನನ್ನ ಸಮಯ ವ್ಯರ್ಥ ಮಾಡಲು ಸಾಧ್ಯವಿಲ್ಲ. ಇದೊಂದು ಕಾರಣ. ನಾನಿಲ್ಲಿ ಹೊಂದಿರುವ ಬೃಹತ್ ಸ್ಟಾರ್ಡಮ್ ನಾನು ಎಂದಿಗೂ ನನ್ನ ಉದ್ಯಮವನ್ನು ತೊರೆದು ಮತ್ತೊಂದು ಉದ್ಯಮಕ್ಕೆ ಹೋಗುವ ಬಗ್ಗೆ ಯೋಚಿಸುವಂತೆ ಮಾಡಿಲ್ಲ, ಎಂದಿದ್ದಾರೆ.
ಮಹೇಶ್ ಬಾಬು ತಮ್ಮ ಮುಂಬರುವ ಆಕ್ಷನ್ ನಾಟಕ ಚಿತ್ರ ಎಸ್‌ಎಸ್‌ಎಂಬಿ 28 ಗಾಗಿ ಸಜ್ಜಾಗುತ್ತಿದ್ದಾರೆ. ಪ್ರಸ್ತುತ ತಯಾರಿಕೆಯಲ್ಲಿರುವ ಈ ಚಿತ್ರವನ್ನು ಟ್ರಿವಿಕ್ರಮ್ ಶ್ರೀನಿವಾಸ್ ಬರೆದಿದ್ದಾರೆ ಮತ್ತು ನಿರ್ದೇಶಿಸಿದ್ದಾರೆ.
ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಶ್ರೀಲೀಲಾ ಮತ್ತು ಜಗಪತಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕಿತ್ತು. ಆದರೆ, ಶ್ರೀಲೀಲಾಗೆ ಚಿತ್ರದಲ್ಲಿ ಹೆಚ್ಚಿನ ಸ್ಪೇಸ್ ಸಿಗುತ್ತಿದೆ ಎಂಬ ಕಾರಣಕ್ಕೆ ಪೂಜಾ ಹೆಗ್ಡೆ ಚಿತ್ರದಿಂದ ಹೊರ ನಡೆದಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿವೆ. ಗುಂಟೂರ್ ಕಾರಮ್ ಜನವರಿ 13, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಸೂಚನೆ ಇದೆ.
ಹರಿಕಾ ಮತ್ತು ಹ್ಯಾಸಿನಿ ಕ್ರಿಯೇಷನ್ಸ್ ನಿರ್ಮಿಸಿದ ಈ ಚಿತ್ರವು ಥಮಾನ್ ಸಂಯೋಜಿಸಿದ ಸಂಗೀತವನ್ನು ಹೊಂದಿದೆ. ಪಿಎಸ್ ವಿನೋದ್ ಮತ್ತು ನವೀನ್ ನೂಲಿ ಈ ಚಿತ್ರದ ಛಾಯಾಗ್ರಹಣ ಮತ್ತು ಎಡಿಟಿಂಗ್‌ನ್ನು ನಿರ್ವಹಿಸಲಿದ್ದಾರೆ.
ಅವರ ಮುಂಬರುವ ಚಲನಚಿತ್ರ ಯೋಜನೆಗಳಲ್ಲಿ ಪ್ಯಾನ್-ಇಂಡಿಯನ್ ಆಕ್ಷನ್-ಎಂಟರ್ಟೈನರ್ ಚಲನಚಿತ್ರವೂ ಸೇರಿದೆ. ಜಾಗತಿಕವಾಗಿ ಮೆಚ್ಚುಗೆ ಪಡೆದ ದಕ್ಷಿಣ ಚಲನಚಿತ್ರ ನಿರ್ಮಾಪಕ ಎಸ್.ಎಸ್.ರಾಜಮೌಲಿ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.