ಹಾಲಿವುಡ್ ಹೀರೋ ಹಾಗೆ ಮಿಂಚಿದ ಮಹೇಶ್ ಬಾಬು; ಕೀರ್ತಿ ಸುರೇಶ್ ಹೇಳಿದ್ದೇನು?
ಟಾಲಿವುಡ್ ಸ್ಟಾರ್ ಮಹೇಶ್ ಬಾಬು ಹಾಲಿವುಡ್ ಹೀರೋ ಹಾಗೆ ಮಿಂಚಿದ್ದಾರೆ. ಪ್ರಿನ್ಸ್ ಫೋಟೋಗೆ ನಟಿ ಕೀರ್ತಿ ಸುರೇಶ್ ಫಿದಾ ಆಗಿದ್ದಾರೆ.
ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸದಾ ತನ್ನ ಸ್ಟೈಲಿಶ್ ಲುಕ್ ಮೂಲಕವೇ ಹೆಚ್ಚು ಗಮನ ಸೆಳೆಯುವ ಪ್ರಿನ್ಸ್ ಇದೀಗ ಸಿಕ್ಕಾಪಟ್ಟೆ ಹಾಟ್ ಆಗಿ ಕಾಮಿಸಿಕೊಂಡಿದ್ದಾರೆ. ಹಾಲಿವುಡ್ ಹೀರೋ ಹಾಗೆ ಕಾಣಿಸುವ ಮಹೇಶ್ ಬಾಬು ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಮಹೇಶ್ ಬಾಬು ಸದ್ಯ ಗುಂಟೂರು ಕಾರಮ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಗುಂಟೂರು ಕಾರಮ್ ಹಾಗೆ ಮಹೇಶ್ ಬಾಬು ಕೂಡ ಸಿಕ್ಕಾಪಟ್ಟೆ ಸ್ಪೈಸಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಿನ್ಸ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದು ಮೆಚ್ಚುಗೆಯ ಕಾಮೆಂಟ್ ಮಾಡುತ್ತಿದ್ದಾರೆ.
47 ವರ್ಷದ ನಟ ಮಹೇಶ್ ಬಾಬು ಮತ್ತಷ್ಟು ಯಂಗ್ ಆಗಿ ಕಾಣಿಸುತ್ತಿದ್ದಾರೆ. ಡೆನಿಮ್ ಶರ್ಟ್ ಮತ್ತು ಪ್ಯಾಂಟ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಂಡಿದ್ದು ಮಸ್ತ್ ಪೋಸ್ ನೀಡಿದ್ದಾರೆ.
ಅಂದಹಾಗೆ ಸದ್ಯ ಮಹೇಶ್ ಬಾಬು ಶೇರ್ ಮಾಡಿರುವ ಫೋಟೋಗಳು ಗುಂಟೂರು ಕಾರಮ್ ಸಿನಿಮಾದ ಮೇಕಿಂಗ್ ಫೋಟೋ ಎನ್ನಲಾಗಿದೆ. ಆದರೆ ಇನ್ನೂ ಕೆಲವರು ಫೂಟೋಶೂಟ್ ಮೇಕೆಂಗ್ ಎನ್ನುತ್ತಿದ್ದಾರೆ. ಗುಂಟೂರು ಕಾರಮ್ ಚಿತ್ರಕ್ಕೆ ತ್ರಿವಿಕ್ರಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.
ಮಹೇಶ್ ಬಾಬು ಹಾಟ್ ಲುಕ್‌ಗೆ ಅಭಿಮಾನಿಗಳು ಮಾತ್ರವಲ್ಲದೇ ಖ್ಯಾತ ನಟಿ ಕೀರ್ತಿ ಸುರೇಶ್ ಕೂಡ ಕಾಮೆಂಟ್ ಮಾಡಿದ್ದಾರೆ. ಮಹೇಶ್ ಬಾಬು ಶೇರ್ ಮಾಡಿರುವ ಪೋಟೋಗೆ ಕೀರ್ತಿ ಸುರೇಶ್ 'ವಾವ್' ಎಂದು ಹೇಳಿದ್ದಾರೆ. ಜೊತೆಗೆ ಬೆಂಕಿ ಇಮೋಜಿ ಹಾಕಿದ್ದಾರೆ.
ಮಹೇಶ್ ಬಾಬು ಪತ್ನಿ ನಮ್ರತಾ ಶಿರೋಡ್ಕರ್ ಕೂಡ ಕಾಮೆಂಟ್ ಮಾಡಿದ್ದಾರೆ. ಕಾಮೆಂಟ್ ಸೆಕ್ಷನ್‌ನಲ್ಲಿ ನಮ್ರತಾ 'ಉಫ್...' ಎಂದು ಬೆಂಕಿ ಇಮೋಜಿ ಇರಿಸಿದ್ದಾರೆ. ಇನ್ನೂ ನಟ ನಿಖಿಲ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.