Imran Khan ಮದುವೆಯಾಗ ಬೇಕಿದ್ದ Rekha, ನಟಿ ತಾಯಿ ಸಹ ಒಪ್ಪಿದ್ದರಂತೆ!
ವಿಶ್ವಕಪ್ ಗೆದ್ದ ನಾಯಕ ಎನಿಸಿಕೊಂಡಿರುವ ಇಮ್ರಾನ್ ಖಾನ್ (Imran Khan) ಪಾಕ್ ಪ್ರಧಾನಿ ಹುದ್ದೆಯಿಂದ ಕೆಳಕ್ಕೆ ಇಳಿದಿದ್ದಾರೆ. ಬಾಲಿವುಡ್ (Bollywood) ನಟಿ ರೇಖಾ (Rekha) ಜತೆ ಅದೊಂದು ಕಾಲದಲ್ಲಿ ಹೆಸರು ಥಳಕು ಹಾಕಿಕೊಂಡಿತ್ತು.

ನ್ಯೂಸ್ ಪೇಪರ್ ನ ಈ ಲೇಖನದಲ್ಲಿ ರೇಖಾ ಮತ್ತು ಇಮ್ರಾನ್ ಖಾನ್ ಅವರ ಚಿತ್ರ ಮುದ್ರಿಸಲಾಗಿದೆ. ರೇಖಾ ಅವರ ತಾಯಿ ಕೂಡ ಮದುವೆಗಾಗಿ ಜ್ಯೋತಿಷ್ಯವನ್ನು ಭೇಟಿ ಮಾಡಿದ್ದರು. ರೇಖಾ ಅವರ ತಾಯಿ ಇಮ್ರಾನ್ ಖಾನ್ ಅವರನ್ನು ತನ್ನ ಮಗಳಿಗೆ ಪರ್ಫೇಕ್ಟ್ ಎಂದು ಪರಿಗಣಿಸಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿತ್ತು.
ಇಮ್ರಾನ್ ಮತ್ತು ರೇಖಾ ಅವರ ಜಾತಕವನ್ನು ನೋಡಲು ಅವರು ಜ್ಯೋತಿಷಿಯನ್ನು ಸಂಪರ್ಕಿಸಿದರು. ಜ್ಯೋತಿಷ್ಯ ಹೇಳಿರುವ ಬಗ್ಗೆ ಯಾರಿಗೂ ತಿಳಿದಿಲ್ಲವಾದರೂ, ರೇಖಾ ಅವರ ತಾಯಿ ಇಮ್ರಾನ್ ಖಾನ್ ಅವರನ್ನು ತನ್ನ ಮಗಳಿಗೆ ಉತ್ತಮ ಹುಡುಗ ಎಂದು ಪರಿಗಣಿಸಿದ್ಮದರು. ಇಮ್ರಾನ್ ತನ್ನ ಕುಟುಂಬದ ಸದಸ್ಯರಾಗಬೇಕೆಂದು ಬಯಸಿದ್ದರು.
ಇಮ್ರಾನ್ ಖಾನ್ ಕೂಡ ರೇಖಾ ಅವರನ್ನು ಭೇಟಿ ಮಾಡಲು ಮುಂಬೈಗೆ ಬಂದರು ಮತ್ತು ಇಬ್ಬರೂ ಕೂಡ ಸ್ವಲ್ಪ ಸಮಯ ಕಳೆದರು. ಈ ಸಮಯದಲ್ಲಿ, ಇಮ್ರಾನ್ ಮತ್ತು ರೇಖಾ ಮುಂಬೈನ ಕಡಲತೀರ ಮತ್ತು ನೈಟ್‌ಕ್ಲಬ್‌ಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು.
ಇಮ್ರಾನ್ ಮತ್ತು ರೇಖಾ ಪರಸ್ಪರ ತುಂಬಾ ಪ್ರೀತಿಸುತ್ತಿದ್ದರು ಎಂದು ಇಬ್ಬರನ್ನು ಒಟ್ಟಿಗೆ ನೋಡಿದವರು ಹೇಳುತ್ತಾರೆ ಎಂದು ವರದಿಯಲ್ಲಿ ಹೇಳಲಾಗಿದೆ
ಯಾವುದೇ ನಟಿಯೊಂದಿಗೆ ಸ್ವಲ್ಪ ಸಮಯ ಮಾತ್ರ ಸಮಯ ಕಳೆಯಲು ಇಷ್ಟಪಡುತ್ತೇನೆ ಎಂದು ಇಮ್ರಾನ್ ಖಾನ್ ತಮ್ಮ ಹೇಳಿಕೆಯಲ್ಲಿ ಹೇಳಿದ್ದರು. ಅದರ ನಂತರ ನಾನು ನನ್ನ ಜೀವನದಲ್ಲಿ ಮುಂದುವರಿಯುತ್ತೇನೆ. ನಾನು ಸಿನಿಮಾ ನಟಿಯನ್ನು ಮದುವೆಯಾಗಲಾರೆ ಎಂದಿದ್ದರು ಇಮ್ರಾನ್ ಖಾನ್.
ಆದರೂ ರೇಖಾ ಈ ಸಂಬಂಧ ಬಗ್ಗೆ ಯಾವುದೇ ಹೇಳಿಕೆ ನೀಡಿರಲಿಲ್ಲ. ಲೇಖನದ ಪ್ರಕಾರ, ರೇಖಾ ಅವರಿಗಿಂತ ಮೊದಲು, ಇಮ್ರಾನ್ ಖಾನ್ ಅವರ ಸಂಬಂಧವು ಬಾಲಿವುಡ್ ನಟಿ ಜೀನತ್ ಅಮಾನ್ ಮತ್ತು ಶಬಾನಾ ಅಜ್ಮಿ ಅವರೊಂದಿಗೂ ಇತ್ತು. ಇಮ್ರಾನ್ ಖಾನ್ ನಂತರ ಕ್ರಿಕೆಟ್ ಜಗತ್ತನ್ನು ತೊರೆದು ರಾಜಕೀಯಕ್ಕೆ ಸೇರಿದರು. 2018 ರಲ್ಲಿ, ಅವರ ಪಕ್ಷ ತೆಹ್ರೀಕ್-ಎ-ಇನ್ಸಾಫ್ ಗೆದ್ದು ನಂತರ ಅವರು ಪಾಕಿಸ್ತಾನದ ಪ್ರಧಾನಿಯಾದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.