Actor's Life: ನಾಲ್ವರು ಮಹಿಳೆಯರೊಂದಿಗೆ ರೇಖಾ ತಂದೆ ಜೆಮಿನಿ ಗಣೇಶನ್‌ಗಿತ್ತು ಸಂಬಂಧ!
ಬಾಲಿವುಡ್ (Bollywood) ಹಿರಿಯ ನಟಿ ರೇಖಾ (Rekha) ಅವರ ತಂದೆ ಜೆಮಿನಿ ಗಣೇಶನ್ (Gemini Ganesan ) ಅವರ 101ನೇ ಜನ್ಮದಿನ. ಅವರು ನವೆಂಬರ್ 17, 1920 ರಂದು ತಮಿಳುನಾಡಿನ ಪುದ್ದುಕೊಟ್ಟೈನಲ್ಲಿ ಜನಿಸಿದರು. ಜೈಮಿನಿ ಗಣೇಶನ್ ಅವರ ನಿಜವಾದ ಹೆಸರು ರಾಮಸಾಮಿ ಗಣೇಶನ್ (Ramaswamy Ganesan) . ದಕ್ಷಿಣದ ಜೊತೆ ಕೆಲವು ಬಾಲಿವುಡ್ ಚಲನಚಿತ್ರಗಳಲ್ಲಿ ಕೆಲಸ ಮಾಡಿದ ಜೆಮಿನಿ, ತಮ್ಮ ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನಕ್ಕಾಗಿ ಯಾವಾಗಲೂ ಸ್ಮರಣೀಯರು. ಅವರು ನಾಲ್ಕು ಮಹಿಳೆಯರೊಂದಿಗೆ ಸಂಬಂಧ ಹೊಂದಿದ್ದರು. ಆದರೆ ಇವರಲ್ಲಿ ಒಬ್ಬರನ್ನು ಮಾತ್ರ ವಿವಾಹವಾದರು. ಅವರು ರೇಖಾಳ ತಾಯಿಯನ್ನು ಮದುವೆಯಾಗಿಲ್ಲ ರೇಖಾ ತಮ್ಮ ತಂದೆಯನ್ನು ದ್ವೇಷಿಸುತ್ತಿದ್ದರಂತೆ. ರೇಖಾನಂಥ ಮಹಾನ್ ನಟಿಯ ತಂದೆ, ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ ಜೆಮಿನಿ ಗಣೇಶನ್ ಬಗ್ಗೆ ಗೊತ್ತಿಲ್ಲದ ಹಲವು ವಿಷಯಗಳು ಇಲ್ಲಿವೆ!
ಮಿಸ್ ಮಾಲಿನಿ ಚಿತ್ರದ ಮೂಲಕ ಜೆಮಿನಿ ತನ್ನ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ದಕ್ಷಿಣ ಚಲನಚಿತ್ರೋದ್ಯಮದಲ್ಲಿ ಜೆಮಿನಿ ಅವರನ್ನು ರೊಮ್ಯಾನ್ಸ್ ರಾಜ ಎಂದು ಕರೆಯಲಾಗುತ್ತಿತ್ತು.
ಚಲನಚಿತ್ರೋದ್ಯಮಕ್ಕೆ ಸೇರುವ ಮೊದಲು, ಜೆಮಿನಿ ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ರಸಾಯನಶಾಸ್ತ್ರದ ಉಪನ್ಯಾಸಕರಾಗಿದ್ದರು. ನಂತರ ಕ್ರಮೇಣ ಅವರ ಮನಸ್ಸು ಆ ವೃತ್ತಿಯಿಂದ ದೂರ ಸರಿದು, ಪೂರ್ಣಾವಧಿ ನಟನೆಯಲ್ಲಿಯೇ ತಮ್ಮನ್ನು ತೊಡಗಿಸಿಕೊಂಡರು.
ಕೆಲಸ ಬಿಟ್ಟು ನಟನಾ ಲೋಕದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕು ಎಂಬ ಆಸೆ ಅವರದ್ದಾಗಿತ್ತು ಮತ್ತು ಅವರ ಕನಸುಗಳನ್ನು ಈಡೇರಿಸಲು, ಅವರು ಜೆಮಿನಿ ಸ್ಟುಡಿಯೋದಲ್ಲಿ ಪ್ರೊಡಕ್ಷನ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.
ತುಂಬಾ ಹ್ಯಾಂಡ್‌ಸಮ್ ಆಗಿದ್ದ ಕಾರಣದಿಂದಾಗಿ ಜೆಮಿನಿ ಅವರಿಗೆ ತಮಿಳು ಸಿನಿಮಾ ಮಿಸ್ ಮಾಲಿನಿಯಲ್ಲಿ ಕೆಲಸ ಮಾಡುವ ಅವಕಾಶವನ್ನು ದೊರೆಯಿತು. 1947 ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ, ಅವರು ರೇಖಾ ಅವರ ತಾಯಿ ಮತ್ತು ಆ ಕಾಲದ ಸೂಪರ್‌ಸ್ಟಾರ್ ಪುಷ್ಪವಲ್ಲಿ ಎದುರು ಕಾಣಿಸಿಕೊಂಡರು
ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಸಮಯದಲ್ಲಿ ಜೆಮಿನಿ ಮತ್ತು ಪುಷ್ಪವಲ್ಲಿ ನಡುವೆ ನಿಕಟತೆ ಬೆಳೆಯಲಾರಂಭಿಸಿತು. ಸ್ವಲ್ಪ ಸಮಯದ ನಂತರ, ಅವರು ಜೆಮಿನಿ ಸ್ಟುಡಿಯೋವನ್ನು ತೊರೆದರು ಮತ್ತು ತಮ್ಮ ಹೆಸರನ್ನು ರಾಮಸ್ವಾಮಿ ಗಣೇಶನ್ ನಿಂದ ಜೆಮಿನಿ ಗಣೇಶನ್ ಎಂದು ಬದಲಾಯಿಸಿದರು.
ಜೆಮಿನಿ ಪುಷ್ಪವಲ್ಲಿ ಅವರನ್ನು ಭೇಟಿಯಾದಾಗ, ಅವರು ಮದುವೆಯಾಗಿದ್ದರು. 1954ರಲ್ಲಿ ಗಣೇಶನ್ ಮತ್ತು ಪುಷ್ಪವಲ್ಲಿ ಅವರ ಸಂಬಂಧದ ಸುದ್ದಿ ಸಾಕಷ್ಟು ಸುದ್ದಿ ಮಾಡಿತ್ತು. ಪುಷ್ಪವಲ್ಲಿ ಮದುವೆಯಾಗದೆ ಮಗಳ ತಾಯಿಯಾದರು. ಅವರೇ ಬಾಲಿವುಡ್ ನಟಿ ರೇಖಾ.
ರೇಖಾ ಅವರ ಪೂರ್ಣ ಹೆಸರು ಭಾನುರೇಖಾ ಗಣೇಶನ್, ಆದರೆ ಅವರು ತನ್ನ ತಂದೆಗೆ ಅಕ್ರಮ ಸಂತಾನ ಮತ್ತು ಜೆಮಿನಿ ಗಣೇಶನ್ ತನ್ನ ಮಗಳೆಂದು ರೇಖಾರನ್ನು ಎಂದಿಗೂ ಹೇಳಿಕೊಳ್ಳದ ಕಾರಣ ನಟಿ ರೇಖಾ ಅವರು ತಮ್ಮ ಹೆಸರಿನೊಂದಿಗೆ ಜೆಮಿನಿ ಅವರ ಸರ್‌ನೇಮ್ ಸೇರಿಸಲಿಲ್ಲ.
ರೇಖಾ ಅವರ ತಂದೆ ಜೆಮಿನಿ ಗಣೇಶನ್ ಅವರು ದಕ್ಷಿಣದ ಸೂಪರ್ ಸ್ಟಾರ್ ಆಗಿದ್ದರು. ಆದರೆ ಅವರು ತಮ್ಮ ಹೆಸರನ್ನು ರೇಖಾಗೆ ನೀಡಲಿಲ್ಲ. ರೇಖಾರ ತಾಯಿಯನ್ನು ಮದುವೆಯಾಗಿರಲಿಲ್ಲ. ಈ ವಿಷಯವನ್ನು ರೇಖಾ ಅವರ ಜೀವನ ಚರಿತ್ರೆ ರೇಖಾ ದಿ ಅನ್‌ಟೋಲ್ಡ್ ಸ್ಟೋರಿಯಲ್ಲಿ ಉಲ್ಲೇಖಿಸಲಾಗಿದೆ. ಜೆಮಿನಿ ವೃತ್ತಿ ಜೀವನದ ಉತ್ತುಂಗದಲ್ಲಿದ್ದರೆ, ಅದೇ ಸಮಯದಲ್ಲಿ ತಾಯಿಯಾದ ನಂತರ ಪುಷ್ಪಾವಲ್ಲಿ ಅವರ ವೃತ್ತಿ ಜೀವನವು ಸ್ಥಗಿತಗೊಂಡಿತು.
ಕೌಟುಂಬಿಕ ಪರಿಸ್ಥಿತಿ ಹದಗೆಟ್ಟ ಕಾರಣ ರೇಖಾ ಚಿಕ್ಕ ವಯಸ್ಸಿನಲ್ಲೇ ದುಡಿಯಲು ಆರಂಭಿಸಿದ್ದರು. ರೇಖಾರ ತಾಯಿ ಅವರ ಓದು ಬಿಡಿಸಿದರು. ಆರಂಭಿಕ ದಿನಗಳಲ್ಲಿ, ರೇಖಾ ತೆಲುಗಿನ ಬಿ ಮತ್ತು ಸಿ ದರ್ಜೆಯ ಚಿತ್ರಗಳಲ್ಲಿಯೂ ಕೆಲಸ ಮಾಡಿದರು. ಜೆಮಿನಿ ಗಣೇಶನ್ ಬಯಸಿದ್ದರೆ, ರೇಖಾ ಅವರಿಗೆ ಇಂಡಸ್ಟ್ರಿಯಲ್ಲಿ ಸುಲಭವಾಗಿ ಕೆಲಸ ಕೊಡಿಸಬಹಿದಿತ್ತು. ಆದರೆ ಅವರು ಸಹಾಯ ಮಾಡಲಿಲ್ಲ. ತಂದೆಯ ಈ ನಡವಳಿಕೆಯಿಂದ ರೇಖಾ ಬಾಲ್ಯದಿಂದಲೂ ಅವರನ್ನು ದ್ವೇಷಿಸಲು ಪ್ರಾರಂಭಿಸಿದಳು.
ಪುಷ್ಪವಲ್ಲಿ ಅವರ ನಿಧನದ ಮೂರು ವರ್ಷಗಳ ನಂತರ ಜೆಮಿನಿ ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿಯನ್ನು ಪಡೆದರು. ಜೆಮಿನಿ ಅವರಿಗೆ ಈ ಪ್ರಶಸ್ತಿಯನ್ನು ರೇಖಾ ಅವರೇ ನೀಡಿದ್ದರು. ಎಲ್ಲರ ಮುಂದೆ ಅವರು ಜೆಮಿನಿ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. ರೇಖಾ ಅವರಿಂದ ಈ ಪ್ರಶಸ್ತಿ ಪಡೆದಿರುವುದು ಸಂತೋಷವಿದೆ ಎಂದಿದ್ದರು.
ಜೆಮಿನಿ ಗಣೇಶನ್ 2005 ರಲ್ಲಿ ನಿಧನರಾದರು. ಅವರು ನಿಧನರಾದಾಗ, ರೇಖಾ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಮತ್ತು ಕೊನೆಯ ಬಾರಿಗೆ ತಂದೆಯ ಮುಖವನ್ನು ನೋಡಲು ಸಾಧ್ಯವಾಗಲಿಲ್ಲ. ವರದಿಗಳ ಪ್ರಕಾರ ಆ ಸಮಯದಲ್ಲಿ ರೇಖಾ ಹಿಮಾಚಲ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್‌ನಲ್ಲಿದ್ದರು.