ಜೈಲಲ್ಲಿ ಏನು ಮಾಡುತ್ತಿದ್ದಾನೆ ಆರ್ಯನ್? ಜೈಲರ್ ಹೇಳಿದ್ದಿಷ್ಟು!
ಅಕ್ಟೋಬರ್ 2 ರಂದು ಬಾಲಿವುಡ್ ನಟ ಶಾರುಖ್ ಖಾನ್ (Shah Rukh Khan) ಅವರ ಪುತ್ರ ಆರ್ಯನ್ ಖಾನ್ (Aryan Kahn) ಅವರನ್ನು ಕ್ರೂಸ್ ರೇವ್ ಪಾರ್ಟಿಯಿಂದ (Drug Case) ಬಂಧಿಸಲಾಯಿತು, ಮೂರು ಬಾರಿ ಬೇಲ್ ರಿಜೆಕ್ಟ್ ಆಗಿರುವ ಆರ್ಯನ್ ಖಾನ್ ಪ್ರಸ್ತುತ ಆರ್ಥರ್ ರೋಡ್ ಜೈಲಿನಲ್ಲಿದ್ದಾನೆ (Arthur Road jai)l .ಇಂದು ಹೈಕೋರ್ಟ್‌ನಲ್ಲಿ ಮತ್ತೆ ಜಾಮೀನು ವಿಚಾರಣೆ ನಾಳೆಗೆ ಮುಂದೂಡಲ್ಪಟ್ಟಿದೆ. ಜೈಲಲ್ಲಿರುವ ಸ್ಟಾರ್ ಕಿಡ್ ಏನು ಮಾಡುತ್ತಿದ್ದಾನೆ ಎಂಬ ಮಾಹಿತಿಯನ್ನು ಜೈಲಿನ ಅಧಿಕಾರಿಯೊಬ್ಬರು ಬಹಿರಂಗ ಪಡಿಸಿದ್ದಾರೆ. ಅಷ್ಟಕ್ಕೂ ಬಾದ್ ಶಾ ಮಗ ಹೇಗೆ ಕಾಲ ಕಳೆಯುತ್ತಿದ್ದಾನೆ?
ಡ್ರಗ್ ಕೇಸ್‌ನಲ್ಲಿ ಆರೆಸ್ಟ್ ಆಗಿರುವ ಆರ್ಯನ್ ಖಾನ್ ಪ್ರಸ್ತುತ ಅರ್ಥರ್ ಜೈಲಿನಲ್ಲಿದ್ದಾನೆ. ಅವನು ಜೈಲಿನ ಲೈಬ್ರರಿಯಿಂದ ಪುಸ್ತಕಗಳನ್ನು ಓದುತ್ತಾ ಸಮಯ ಕಳೆಯುತ್ತಿದ್ದಾನಂತೆ. ವರದಿಗಳ ಪ್ರಕಾರ, ಜೈಲು ಲೈಬ್ರರಿಯಿಂದ ಆರ್ಯನ್ ಖಾನ್ ಅವರಿಗೆ ಎರಡು ಪುಸ್ತಕಗಳನ್ನು ನೀಡಲಾಗಿದೆ. ಒಂದು ಗೋಲ್ಡನ್ ಲಯನ್ ಮತ್ತು ಇನ್ನೊಂದು ರಾಮ ಮತ್ತು ಸೀತೆಯ ಜೀವನವನ್ನು ಆಧರಿಸಿದ ಪುಸ್ತಕವಾಗಿದೆ.
ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಆರ್ಯನ್ ತುಂಬಾ ಅಸಮಾಧಾನಗೊಂಡಿದ್ದಾರೆ ಎಂದು ಜೈಲು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.ಅಲ್ಲದೆ, NCB ಅಧಿಕಾರಿಗಳು ಆರ್ಯನ್ ಮತ್ತು ಇತರ 7 ಮಂದಿಗೆ ಬೈಬಲ್, ಕುರಾನ್ ಷರೀಫ್ ಮತ್ತು ಭಗವದ್ಗೀತೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪವಿತ್ರ ಪುಸ್ತಕಗಳು ಹಿಂದಿ ಮತ್ತು ಉರ್ದು ಭಾಷೆಗಳಲ್ಲಿ ಲಭ್ಯವಿದೆ ಎಂದು ವರದಿಯಾಗಿದೆ.
ಕಳೆದ ವಾರ, ಜೈಲು ಸಿಬ್ಬಂದಿ ಆರ್ಯನ್ ಅವರ ಆರೋಗ್ಯ (Health) ಮತ್ತು ಹೈಜೀನ್ ಬಗ್ಗೆ ಚಿಂತಿತರಾಗಿದ್ದಾರೆಂದು ವರದಿಯಾಗಿತ್ತು. ಆರ್ಯನ್ ಜೈಲಿನ ಟಾಯ್ಲೆಟ್ ಬಳಸುವುದನ್ನು ತಪ್ಪಿಸಲು ಅವರು ಸರಿಯಾಗಿ ನೀರನ್ನೂ ಕುಡಿಯುತ್ತಿಲ್ಲವಂತೆ. ಸ್ನಾನವನ್ನೂ ಮಾಡಿಲ್ಲ ಎಂದು ಹೇಳಲಾಗುತ್ತಿದೆ. ತನಗೆ ಹಸಿವಿಲ್ಲ, ಬಿಸ್ಕೆಟ್ ಮತ್ತು ನೀರು ಮಾತ್ರ ತಿನ್ನುತ್ತೇನೆ ಎಂದು ಆರ್ಯನ್ ನಿರಂತರವಾಗಿ ಹೇಳುತ್ತಾನೆ ಎಂದು ವರದಿಯಾಗಿದೆ.
ತಂದೆ ಶಾರುಖ್ ಖಾನ್ ಆರ್ಯನ್ ಅನ್ನು ಕೆಲವು ದಿನಗಳ ಹಿಂದೆ ಜೈಲಿನಲ್ಲಿ ಭೇಟಿಯಾದರು ಮತ್ತು ಜೈಲಿನ ಮೀಟಿಂಗ್ ಹಾಲ್‌ನಲ್ಲಿರುವ ಕ್ಯುಬಿಕಲ್‌ನಲ್ಲಿ ಇಂಟರ್‌ಕಾಮ್ ಮೂಲಕ 20 ನಿಮಿಷಗಳ ಕಾಲ ಮಾತನಾಡಿದರು. COVID-19 ಪ್ರೋಟೋಕಾಲ್‌ನ ಕಾರಣದಿಂದಾಗಿ, ಜೈಲಿನಲ್ಲಿ ಫಿಸಿಕಲ್ ಮೀಟಿಂಗ್‌ಗಳಿಗೆ ಪರ್ಮೀಷನ್ ನೀಡಲಾಗುವುದಿಲ್ಲ
ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾರುಖ್ ಖಾನ್ ಅವರು ಆರ್ಯನ್‌ಗೆ ಏನಾದರೂ ತಿಂದಿದ್ದೀಯಾ ಎಂದು ಕೇಳಿದಾಗ, ಅದಕ್ಕೆ ಅವರ ಮಗ ಇಲ್ಲ ಎಂದು ಹೇಳಿದನು. ನಂತರ ಶಾರುಖ್ ಅಲ್ಲಿದ್ದ ಜೈಲರ್‌ಗಳಲ್ಲಿ ತಿನ್ನಲು ಏನಾದರೂ ನೀಡಬಹುದೇ ಎಂದು ಕೇಳಿದರು. ಜೈಲರ್ ನ್ಯಾಯಾಲಯದ ಅನುಮತಿಯಿಲ್ಲದೆ ಯಾವುದೇ ಹೊರಗಿನ ಆಹಾರ ನೀಡಲು ಅನುಮತಿ ಇಲ್ಲವೆಂದು ತಿಳಿಸಿದ್ದಾರೆ.