*ಡ್ರಗ್ಸ್‌ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆರ್ಯನ್!‌*ಜೈಲಿನಲ್ಲಿ ರಾಮಸೀತೆಯರ ಕತೆ ಓದುತ್ತಿರುವ ಕಿಂಗ್‌ ಖಾನ್‌ ಪುತ್ರ*ಅಕ್ಟೋಬರ್‌ 30 ವರೆಗೂ ಮುಂದುವರೆಯಲಿದೆ ಜೈಲುವಾಸ

ಮುಂಬೈ (ಅ. 24 ): ಡ್ರಗ್ಸ್‌ ಆರೋಪದ ಮೇಲೆ ಎನ್‌ಸಿಬಿ(NCB)ಯಿಂದ ಬಂಧನಕ್ಕೊಳಗಾಗಿರುವ ಆರ್ಯನ್‌ ಖಾನ್‌ ನ್ಯಾಯಾಂಗ ಬಂಧನ ಅಕ್ಟೋಬರ್‌ 30 ವರೆಗೂ ಮುಂದುವರೆಯಲಿದೆ. ಮುಂಬೈ ಸ್ಪೆಷಲ್ ಕೋರ್ಟ್ ಬಾಲಿವುಡ್(Bollywood) ನಟ ಶಾರೂಖ್ ಖಾನ್(Shah Rukh Khan) ಮಗ ಆರ್ಯನ್ ಖಾನ್ ಹಾಗೂ ಇನ್ನಿಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ನ್ಯಾಯಾಂಗ ಬಂಧನದಲ್ಲಿರುವ ಆರ್ಯನ್‌ಗೆ ಹಲವು ಬಾರಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿದರೂ ಪ್ರತಿ ಬಾರಿಯೂ ರಿಜೆಕ್ಟ್ ಆಗುತ್ತಲೇ ಇದೆ. ಈ ಮಧ್ಯೆ ಕಿಂಗ್‌ ಖಾನ್‌ ಪುತ್ರ ಆರ್ಯನ್ ಜೈಲಿನಲ್ಲಿ ರಾಮಸೀತೆಯರ ಕತೆಗಳನ್ನು ಓದುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. 

ಆರ್ಯನ್ ಖಾನ್‌ಗೆ ಗಾಂಜಾ ವ್ಯವಸ್ಥೆ ಮಾಡಲು ಒಪ್ಪಿಕೊಂಡಿದ್ರಾ ಅನನ್ಯಾ ಪಾಂಡೆ?

ಅಕ್ಟೋಬರ್‌ 3 ರಿಂದ ಜೈಲಿನಲ್ಲಿರುವ ಆರ್ಯನ್‌ ಖಾನ್‌ ವರ್ತನೆ ಬಗ್ಗೆ ಇತ್ತೀಚೆಗೆ ಹಲವು ವರದಿಗಳು ಬಂದಿದ್ದವು. ಕಾರಾಗೃಹದ ನಿಯಮಗಳ ಪ್ರಕಾರ ಕೈದಿಗಳು ಪ್ರೇರಣಾದಯಾಕ (Motivational) ಅಥವಾ ಧಾರ್ಮಿಕ (Religious) ಪುಸ್ತಕಗಳನ್ನು ಓದಬಹುದು. ಹಾಗಾಗಿ ಅಧಿಕಾರಿಗಳು ಜೈಲಿನ ಗ್ರಂಥಾಲಯದಿಂದ ಪುಸ್ತಕಗಳನ್ನು ಪಡೆದು ಓದುವಂತೆ ಆರ್ಯನ್‌ಗೆ ತಿಳಿಸಿದ್ದಾರೆ. ಆರ್ಯನ್‌ಗೆ ಗೋಲ್ಡನ್‌ ಲಯನ್‌ (Golden Lion) ಎಂಬ ಒಂದು ಪುಸ್ತಕ ಮತ್ತು ರಾಮಸೀತೆಯರ (Rama-Sita) ಕತೆಗಳ ಇನ್ನೊಂದು ಪುಸ್ತಕಗಳನ್ನು ನೀಡಲಾಗಿದೆ. ಈ ಎರಡು ಪುಸ್ತಕಗಳನ್ನು ಆರ್ಯನ್‌ ಓದುತ್ತಿರುವುದಾಗಿ ತಿಳಿದು ಬಂದಿದೆ.

DDLJಗೆ 26 ವರ್ಷ..! ಸಹ ನಟ ಶಾರೂಖ್ ಸಂಕಷ್ಟದಲ್ಲಿದ್ರೂ ಕಾಜೊಲ್‌ಗೆ ಸಂಭ್ರಮ

ಅಕ್ಟೋಬರ್‌ 21 ರಂದು ಮಗ ಆರ್ಯನ್‌ರನ್ನು ಭೇಟಿ ಮಾಡಿದ ಶಾರುಖ್‌ ಖಾನ್‌ ಸುಮಾರು ಹದಿನೆಂಟು ನಿಮಿಷಗಳ ಕಾಲ ಮಾತನಾಡಿದ್ದರು. ಆರ್ಯನ್‌ರನ್ನು ಭೇಟಿ ಮಾಡಲು ಜೈಲಿಗೆ ತೆರಲಿದ್ದ ಶಾರುಖ್‌ರಿಗ ಯಾವುದೇ ವಿಶೇಷ ಸೌಲಭ್ಯ ನೀಡದೆ ಸಾಮಾನ್ಯ ಜನರಂತೆಯೇ ಅವರ ಜತೆಗೂ ವರ್ತಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದರು. ಆರ್ಯನ್‌ ಭೇಟಿಯಾಗಿ ಹೊರ ಬಂದ ಶಾರುಖ್‌ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. 

ಜೈಲಿನಲ್ಲಿ ಬಿಸ್ಕಟ್‌ಗಳನ್ನು ಮಾತ್ರ ಸೇವಿಸುತ್ತಿರುವ ಆರ್ಯನ್‌! 

ಆರ್ಥರ್ ರೋಡ್ ಜೈಲಿಗೆ ಶಿಫ್ಟ್ ಮಾಡಿದಾಗಿನಿಂದ ಆರ್ಯನ್ ಸರಿಯಾಗಿ ಊಟ ಮಾಡುತ್ತಿಲ್ಲ, ಕ್ಯಾಂಟೀನ್‌ನಿಂದ ಖರೀದಿಸಿದ ಪಾರ್ಲೆ ಜಿ ಬಿಸ್ಕಟ್‌ಗಳಲ್ಲಿ ಮಾತ್ರ ತಿನ್ನುತ್ತಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಅಧಿಕಾರಿಗಳು ಪದೇ ಪದೇ ಪ್ರಯತ್ನಿಸಿದರೂ, ಹಸಿವಿನ ಕೊರತೆಯಿಂದಾಗಿ ಆರ್ಯನ್ ಮತ್ತು ಆತನ ಸ್ನೇಹಿತರು ಯಾರೂ ಜೈಲಿನ ಆಹಾರವನ್ನು ತಿನ್ನುತ್ತಿಲ್ಲ ಎಂದು ಹೇಳಲಾಗುತ್ತಿದೆ. ಅಲ್ಲದೇ ಆರ್ಯನ್ ಜೈಲಿನಲ್ಲಿ ಸ್ನಾನ ಮಾಡುತ್ತಿಲ್ಲ ಹಾಗೂ ಇನ್ನಿತರ ಖೈದಿಗಳು ಬಳಸುತ್ತಿರುವ ಶೌಚಾಲಯವನ್ನು ಬಳಸುತ್ತಿಲ್ಲ ಎಂಬ ವರದಿ ಬಂದಿತ್ತು. 

ಆರ್ಯನ್ ಬಳಿ ಡ್ರಗ್ಸ್ ಪತ್ತೆಯಾಗದಿದ್ದರೂ ಜಾಮೀನು ಯಾಕೆ ಸಿಗುತ್ತಿಲ್ಲ? ಬಯಲಾಯ್ತು ರಹಸ್ಯ!