Vidya Balan Birthday : ಫೇವರೇಟ್ ಸಿಂಗರ್ ಕಚೇರಿಯಲ್ಲೇ ಬದಲಾದ ವಿದ್ಯಾ ಬಾಲನ್ ಅದೃಷ್ಟ!
ಬಾಲಿವುಡ್ ನ ಖ್ಯಾತ ನಟಿ ವಿದ್ಯಾ ಬಾಲನ್ (Vidya Balan ) ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1 ಜನವರಿ 1979 ರಂದು ಮುಂಬೈನಲ್ಲಿ ವಿದ್ಯಾ ಬಾಲನ್ ದಕ್ಷಿಣ ಭಾರತದ ಕುಟುಂಬದಲ್ಲಿ ಜನಿಸಿದರು. ಮೊದಲಿನಿಂದಲೂ ವಿದ್ಯಾ ನಟಿಯಾಗಿ ಕೆರಿಯರ್ ಮಾಡಬೇಕೆಂದು ಬಯಸಿದ್ದರು. ಆದರೆ, ನಟಿ ತನ್ನ ವೃತ್ತಿಜೀವನದ ಆರಂಭದಲ್ಲಿ ಅನೇಕ ನಿರಾಕರಣೆಗಳನ್ನು ಎದುರಿಸಬೇಕಾಯಿತು. ಆದರೆ 'ಪರಿಣೀತಾ' ಸಿನಿಮಾ ಸಿಕ್ಕ ನಂತರ ಅವರ ಹೋರಾಟ ಕೊನೆಗೊಂಡಿತು. ವಿದ್ಯಾ ಅವರಿಗೆ 'ಪರಿಣೀತಾ' ಸಿನಿಮಾದಲ್ಲಿ ಅವಕಾಶ ಸಿಕ್ಕಿದ್ದು ಹೇಗೆ ಮತ್ತು ಅದರ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಕೂಡ ಇದೆ.
ಆರಂಭದಲ್ಲಿ ಬಹಳ ಕಷ್ಟಪಟ್ಟಿದ್ದ ನಟಿ ವಿದ್ಯಾ ಬಾಲನ್
ಆರಂಭದಲ್ಲಿ ನಾನು ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದಾಗ ದಕ್ಷಿಣ ಭಾರತದ ಇಂಡಸ್ಟ್ರಿ ನಟ ಮೋಹನ್‌ಲಾಲ್ ಅವರೊಂದಿಗೆ ಮಲಯಾಳಂ ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಕೆಲವು ಕಾರಣಗಳಿಂದ ಈ ಚಿತ್ರವು ಸ್ಥಗಿತಗೊಂಡಿತು ಮತ್ತು ನನ್ನನ್ನು ದರಿದ್ರ ಎಂದು ಕರೆಯಲಾರಂಭಿಸಿತು ಎಂದು ವಿದ್ಯಾ ಬಾಲನ್ ಸಂದರ್ಶನವೊಂದರಲ್ಲಿ ಹೇಳಿದ್ದರು.
ಇದಾದ ನಂತರ ವಿದ್ಯಾ ಬಾಲನ್ ಹಲವು ನಿರಾಕರಣೆಗಳನ್ನು ಎದುರಿಸಬೇಕಾಯಿತು. ವಿದ್ಯಾ ಟಿವಿ ಧಾರಾವಾಹಿ 'ಹಮ್ ಪಾಂಚ್' ಮೂಲಕ ನಟನೆಯಲ್ಲಿ ತನ್ನ ಅದೃಷ್ಟವನ್ನು ಪರೀಕ್ಷಿಸಿದರು. ಇದರ ನಂತರ ಅವರು ಅನೇಕ ದೂರದರ್ಶನ ಜಾಹೀರಾತುಗಳಲ್ಲಿ ಕೆಲಸ ಮಾಡಿದರು. ಇವುಗಳಲ್ಲಿ ಹೆಚ್ಚಿನ ಜಾಹೀರಾತುಗಳನ್ನು ಪ್ರದೀಪ್ ಸರ್ಕಾರ್ ನಿರ್ದೇಶಿಸಿದ್ದಾರೆ.
ವಿದ್ಯಾ ಪ್ರದೀಪ್ ಸರ್ಕಾರ್ ಜೊತೆ ಕೆಲಸ ಮಾಡುತ್ತಿದ್ದರು. ಅವರನ್ನು ವಿದ್ಯಾ ದಾದಾ ಎಂದು ಕರೆಯುತ್ತಿದ್ದರು. ಈ ಸಮಯದಲ್ಲಿ, ವಿನೋದ್ ಚೋಪ್ರಾ ಅವರ ಮುಂಬರುವ ಚಿತ್ರ 'ಪರಿಣೀತಾ' ಗಾಗಿ ವಿದ್ಯಾ ಅವರನ್ನು ಆಡಿಷನ್
ಮಾಡಿದರು.
ವಿದ್ಯಾ ತನ್ನ ಚೊಚ್ಚಲ ಸಿನಿಮಾ ಪರಿಣೀತಾಗೆ 60 ಕ್ಕೂ ಹೆಚ್ಚು ಸ್ಕ್ರೀನ್ ಪರೀಕ್ಷೆಗಳನ್ನು ನೀಡಬೇಕಾಯಿತು. ಒಂದು ಹಂತದಲ್ಲಿ, ಈ ಬಾರಿಯೂ ಅವರನ್ನು ತಿರಸ್ಕರಿಸಬಹುದು ಎಂದು ವಿದ್ಯಾ ಭಾವಿಸಿದರಂತೆ.
'ತನ್ನ ನೆಚ್ಚಿನ ಗಾಯಕ ಎನ್ರಿಕ್ ಇಗ್ಲೇಷಿಯಸ್ ಅವರ ಸಂಗೀತ ಕಚೇರಿಗೆ ನಾನು ನನ್ನ ಸ್ನೇಹಿತರೊಂದಿಗೆ ತಲುಪಿದೆ. ನಾನು ವೇದಿಕೆಗೆ ತುಂಬಾ ಹತ್ತಿರದಲ್ಲಿದ್ದೆ. ಏನ್ರೀಕ್ ಕೈ ನನ್ನ ಕೈಗೆ ತಗುಲಿದರೆ ನನ್ನ ಅದೃಷ್ಟ ಬದಲಾಗುತ್ತದೆ ಎಂದು ನನ್ನ ಸ್ನೇಹಿತನಿಗೆ ಹೇಳಿದೆ. ನಾನು ಅವರ ದೊಡ್ಡ ಅಭಿಮಾನಿಯಾಗಿದ್ದೆ' ಎಂದು ವಿದ್ಯಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಆಗಲೇ ಪ್ರದೀಪ್ ದಾದಾ ಅವರ ಕರೆ ಬಂದಿತ್ತು ಮತ್ತು ವಿನೋದ್ ಚೋಪ್ರಾ ನನ್ನೊಂದಿಗೆ ಮಾತನಾಡಲು ಬಯಸುತ್ತಾರೆ ಎಂದರು. ಅಷ್ಟು ಬಾರೀ ಸ್ಕ್ರೀನ್ ಟೆಸ್ಟ್ ಕೊಟ್ಟ ನಾನು, ಆರು ತಿಂಗಳಾಯಿತು ಈಗ ಏನು ಟೆಸ್ಟ್ ಕೊಡಲಿ ಎಂದು ಯೊಚಿಸಿದೆ. ಆಗ ನೀನು ‘ಪರಿಣೀತಾ’ಗೆ ಆಯ್ಕೆ ಆಗಿದ್ದೀಯ ಅವರು ಹೇಳಿದರು ಎಂದು ಇಂಟರ್‌ವ್ಯೂವ್‌ನಲ್ಲಿ ವಿದ್ಯಾ ಹೇಳಿದರು.
'ಇದನ್ನು ಕೇಳಿದ ನನ್ನ ಕಣ್ಣೀರು ನಿಲ್ಲಲಿಲ್ಲ. ನನ್ನನ್ನು ರಿಜೆಕ್ಟ್ ಮಾಡಿರಬಹುದು ಎಂದು ಭಾವಿಸಿದ ನನ್ನ ಫ್ರೆಂಡ್ಸ್ ಸಮಾಧಾನ ಮಾಡಿ ಸಾರಿ ಕೇಳಿದರು. ಆಗ ನಾನು ಸೆಲೆಕ್ಟ್ ಆದೆ ಎಂದು ಕೂಗಿ ಹೇಳಿದೆ' ಎಂದು ವಿದ್ಯಾ ಹೇಳಿದರು. 2005ರಲ್ಲಿ ‘ಪರಿಣೀತಾ’ ಸಿನಿಮಾವು ನಟಿಯ ಜೀವನವನ್ನು ಸಂಪೂರ್ಣವಾಗಿ ಬದಲಾಯಿಸಿತು.
Vidya Balan
13 ವರ್ಷಗಳ ತನ್ನ ವೃತ್ತಿಜೀವನದಲ್ಲಿ, ವಿದ್ಯಾ ಬಾಲಿವುಡ್‌ನಲ್ಲಿ ತನ್ನ ಸ್ಥಾನವನ್ನು ಬಲಪಡಿಸಿ ಕೊಂಡಿದ್ದಾರೆ. 'ಭೂಲ್ ಭುಲಯ್ಯ' ಸಿನಿಮಾದಿಂದ ಹಿಡಿದು 'ದಿ ಡರ್ಟಿ ಪಿಕ್ಚರ್'ನ ಬೋಲ್ಡ್ ಪಾತ್ರದವರೆಗೆ ಅಥವಾ 'ಕಹಾನಿ' ಚಿತ್ರದ ಪ್ರಬಲ ನಟನೆವರೆಗೆ ವಿದ್ಯಾ ತಮ್ಮ ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ್ದಾರೆ.
Vidya Balan
ವಿದ್ಯಾ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2017 ರಲ್ಲಿ ಬಂದ ವಿದ್ಯಾ ಅಭಿನಯದ 'ತುಮ್ಹಾರಿ ಸುಲು' ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದು ಮತ್ತೊಮ್ಮೆ ವಿದ್ಯಾ ಬಾಲನ್ ಬಾಲಿವುಡ್‌ನ ಮೋಸ್ಟ್ ಟ್ಯಾಲೆಂಟೆಡ್ ನಟಿ ಎಂದು ಸಾಬೀತು ಮಾಡಿದೆ.
ವಿದ್ಯಾ 2012 ರಲ್ಲಿ ಚಲನಚಿತ್ರ ನಿರ್ಮಾಪಕ ಸಿದ್ಧಾರ್ಥ್ ರಾಯ್ ಕಪೂರ್ ಅವರನ್ನು ವಿವಾಹವಾದರು. ಅವರು ಮದುವೆಯಾಗುವ ಬಗ್ಗೆ ಯೋಚಿಸಿರಲಿಲ್ಲ. ಆದರೆ ಸಿದ್ಧಾರ್ಥ್ ಭೇಟಿಯಾದ ನಂತರ ಅಭಿಪ್ರಾಯ ಬದಲಾಯಿತು.ಎರಡೂವರೆ ವರ್ಷಗಳ ಡೇಟಿಂಗ್ ನಂತರ ನಾವು ಮದುವೆಯಾದೆವು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.