ಫೋಟೋ ಶೂಟ್ ಮಾಡಿದಾಗ ಫೋಟೋ ಶಾಪ್ ಬಳಸೋದು ಇಷ್ಟವಿಲ್ಲ ವಿದ್ಯಾ ಬಾಲನ್‌ಗೆ ತನ್ನನ್ನು ಸ್ಲಿಮ್ ಆಗಿ ತೋರಿಸೋದಕ್ಕೆ ಒಪ್ಪಿಗೆ ಇಲ್ಲ
ಬಹಳಷ್ಟು ಸೆಲೆಬ್ರಿಟಿಗಳು ಸ್ಲಿಮ್ ಆಗಿ ಬ್ಯೂಟಿಫುಲ್ ಆಗಿ ಕಾಣೋಕೆ ಇನ್ನಿಲ್ಲದ ಸರ್ಕಸ್ ಮಾಡುತ್ತಾರೆ. ಸೆಲೆಬ್ರಿಟಿ ಫೋಟೋ ಶೂಟ್ ಅಂದ್ರೆ ಬೇರೆ ಹೇಳಬೇಕಾ ? ಆದಷ್ಟು ನೀಟಾಗಿ, ಆಂಗಲ್‌ಳನ್ನು ನೋಡಿ ದಪ್ಪಗೆ, ಗುಂಡಗೆ, ಕುಳ್ಳಗೆ ಕಾಣಿಸದಂತೆ ಗಮನ ಹರಿಸಿ, ಕ್ಯಾಮೆರಾ ಫಿಕ್ಸ್ ಮಾಡಿ ನೀಟಾಗಿ ಫೋಟೊ ತೆಗೆಯುತ್ತಾರೆ. ಇಷ್ಟೇ ಸಾಕೇ.. ಫೋಟೋಶಾಪ್ ಮೂಲಕ ಗ್ರ್ಯಾಂಡ್ ಎಡಿಟಿಂಗ್ ಆಗಿ ಫೋಟೋಗಳು ನಟ, ನಟಿಯರ ಸೋಷಿಯಲ್ ಮೀಡಿಯಾ ವಾಲ್‌ಗಳಲ್ಲಿ ರಾರಾಜಿಸುತ್ತವೆ. ಆದರೆ ಇದಕ್ಕೆಲ್ಲದಕ್ಕೆ ವಿದ್ಯಾ ಬಾಲನ್ ಸಮ್ಮತಿ ಇಲ್ಲ.
ತಮ್ಮ ಫೋಟೋವನ್ನು ಫೋಟೋಶಾಪ್ ಮಾಡುವುದನ್ನು ವಿದ್ಯಾಬಾಲನ್ ವಿರೋಧಿಸುತ್ತಾರೆ. ತಮ್ಮ ಫೋಟೋ ಕ್ಲಿಕ್ಕಿಸಿದಂತೆ ಇರಬೇಕು. ಅದಕ್ಕೆ ಫೋಟಾಶಾಪ್ ಮಾಡಿರಬಾರದು ಎಂಬುದು ನಟಿಯ ಸ್ಟ್ರಿಕ್ಟ್ ರೂಲ್. ಈ ನಿಯಮವನ್ನು ಮಾತ್ರ ನಟಿ ತಪ್ಪಿಸೋದೆ ಇಲ್ಲ. ಏನಿದ್ರೂ ಇದ್ದ ಹಾಗೆ ಫೋಟೋ ಬರಬೇಕು ಅಷ್ಟೇ. ಈ ರೂಲ್ಸ್ ಹೊಸದೇನಲ್ಲ, ಹಿಂದಿನಿಂದಲೂ ವಿದ್ಯಾಬಾಲನ್ ಈ ರೂಲ್ಸ್ ಫಾಲೋ ಮಾಡುತ್ತಾರೆ. ತಾವು ದಪ್ಪಗಿದ್ದರೂ ಎಂದೂ ತೆಳ್ಳಗೆ ಕಾಣಿಸಬೇಕೆಂದು ಅಂದುಕೊಳ್ಳುವುದೇ ಇಲ್ಲ ನಟಿ.
ಶೂಟಿಂಗ್ ರೇಂಜ್‌ಗೆ ವಿದ್ಯಾಬಾಲನ್ ಹೆಸರಿಟ್ಟು ಭಾರತೀಯ ಸೇನೆ ಗೌರವ!
ನಟಿ ವಿದ್ಯಾ ಬಾಲನ್ ಅವರ ಫೋಟೋ ಹೇಗೆ ಬಳಸಬೇಕು ಎಂಬ ನಿಯಮಗಳನ್ನು ನೀಡುವ ಮೂಲಕ ಅವಾಸ್ತವಿಕ ಸೌಂದರ್ಯ ಮಾನದಂಡಗಳ ವಿರುದ್ಧ ತಾವೇ ನಿಲುವು ತೆಗೆದುಕೊಂಡಿದ್ದಾರೆ. ಅವರು ಫೋಟೋಗ್ರಾಫರ್‌ಗಳು ಮತ್ತು ನಿಯತಕಾಲಿಕೆಗಳಿಗೆ ತನ್ನ ಫೋಟೋ ಎಡಿಟ್ ಮಾಡದಂತೆ ಕೇಳಿಕೊಂಡಿದ್ದಾರೆ. ಏಕೆಂದರೆ ಅವರು ನಿಜವಾಗಿರುವುದಕ್ಕಿಂತ ತೆಳ್ಳಗೆ ಕಾಣಿಸಿಕೊಳ್ಳಲು ಬಯಸುವುದಿಲ್ಲ.

ನಟಿಯ ನಿಯಮಗಳನ್ನು ಛಾಯಾಗ್ರಾಹಕ ಡಬ್ಬೂ ರತ್ನಾನಿ ಹೊಸ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ವಿದ್ಯಾ ಬಾಲನ್ ತನ್ನದೇ ಲುಕ್‌ನಲ್ಲಿ ಆರಾಮವಾಗಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ನಾನು ಸೆಟ್‌ನಲ್ಲಿಯೇ ಅತ್ಯುತ್ತಮ ಬೆಳಕನ್ನು ಹೊಂದಲು ಪ್ರಯತ್ನಿಸುತ್ತೇನೆ. ಹೀಗಾಗಿ ಫೋಟೋಗಳ ನಂತರದ ಎಡಿಟಿಂಗ್ ಕಡಿಮೆ ಸಾಕಾಗುತ್ತದೆ.

ಈ ವಿಚಾರದಲ್ಲಿ ವಿದ್ಯಾ ಬಾಲನ್ ಹೆಚ್ಚು ಮುಖ್ಯವಾಗುತ್ತಾರೆ. ಏಕೆಂದರೆ ಅವರ ಫೋಟೋಗಳನ್ನು ಎಡಿಟ್ ಮಾಡುವುದು ಅವರಿಗೆ ಇಷ್ಟವಿಲ್ಲ. ಅವರು ತನ್ನದೇ ಆದ ಲುಕ್‌ನಲ್ಲಿ ಹಾಯಾಗಿದ್ದಾರೆ. ಫೋಟೋಗಳಿಗಾಗಿ ತನ್ನನ್ನು ತಾನು ತೆಳ್ಳಗೆ ತೋರಿಸಲು ಬಯಸುವುದಿಲ್ಲ. ಮ್ಯಾಗಜೀನ್ ಚಿತ್ರೀಕರಣದ ಸಮಯದಲ್ಲಿ, ಫೋಟೋಗಳನ್ನು ಯಾವುದೇ ಮರು-ಸ್ಪರ್ಶವಿಲ್ಲದೆ ಕಲರ್ ಸರಿಪಡಿಸಬೇಕು ಮತ್ತು ಶೇರ್ ಮಾಡಬೇಕು ಎಂದು ಹೇಳುತ್ತಾರೆ ಎಂದಿದ್ದಾರೆ.
