- Home
- Entertainment
- Cine World
- ಪತ್ನಿ ಕತ್ರಿನಾ ಕೈಫ್ ಹುಟ್ಟು ಹಬ್ಬ, ಮುದ್ದಾದ ಫೋಟೊಗಳ ಜೊತೆ ವಿಶ್ ಮಾಡಿದ ವಿಕ್ಕಿ ಕೌಶಲ್
ಪತ್ನಿ ಕತ್ರಿನಾ ಕೈಫ್ ಹುಟ್ಟು ಹಬ್ಬ, ಮುದ್ದಾದ ಫೋಟೊಗಳ ಜೊತೆ ವಿಶ್ ಮಾಡಿದ ವಿಕ್ಕಿ ಕೌಶಲ್
ಬಾಲಿವುಡ್ ನಟಿ ಕತ್ರಿನಾ ಕೈಫ್ ತಮ್ಮ 42 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು. ಈ ವಿಶೇಷ ಸಂದರ್ಭದಲ್ಲಿ ಪತಿ ವಿಕ್ಕಿ ಕೌಶಲ್ ಅವರಿಗೆ ಸ್ಪೆಷಲ್ ಆಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಬಾಲಿವುಡ್‌ನ ಖ್ಯಾತ ನಟಿ ಕತ್ರಿನಾ ಕೈಫ್ (Katrina Kaif) ಹುಟ್ಟುಹಬ್ಬವನ್ನು ಇಂದು ಜುಲೈ 16 ರಂದು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರಿಗೆ ಬಾಲಿವುಡ್ ಸೇರಿ, ಫ್ಯಾನ್ಸ್, ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ ನಟಿಯ ಪತಿ ನಟ ವಿಕ್ಕಿ ಕೌಶಲ್ ಅವರು ಕತ್ರೀನಾ ಅವರ ಅನ್ ಸೀನ್ ಫೋಟೊಗಳನ್ನು ಶೇರ್ ಮಾಡಿ ವಿಶೇಷವಾಗಿ ವಿಶ್ ಮಾಡಿದ್ದಾರೆ.
ಕತ್ರೀನಾ ಕೈಫ್ ಜೊತೆಗಿನ ಮುದ್ದಾದ ಫೋಟೊ ಹಂಚಿಕೊಂಡ ವಿಕ್ಕಿ ಕೌಶಲ್
ನಟ ವಿಕ್ಕಿ ಕೌಶಲ್ (Vicky Kaushal)ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಶೇರ್ ಮಾಡಿದ್ದು ಅದರಲ್ಲಿ ಅವರು ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಮೊದಲ ಚಿತ್ರದಲ್ಲಿ, ಕತ್ರಿನಾ ಕೈಫ್ ತುಂಟಾಟ ಮಾಡುವ ರೀತಿ ಲುಕ್ ಕೊಟ್ಟಿದ್ದಾರೆ, ಅದರಲ್ಲಿ ಅವರು ಸಣ್ಣ ಕಾರಿಡಾರ್‌ನಿಂದ ಕೋಣೆಯೊಳಗೆ ಇಣುಕುತ್ತಿದ್ದಾರೆ. ಎರಡನೇ ಚಿತ್ರದಲ್ಲಿ, ಬರ್ತ್ ಡೇ ಗರ್ಲ್ ಸೆಲ್ಫಿ ತೆಗೆದುಕೊಳ್ಳುತ್ತಿದ್ದು, ವಿಕ್ಕಿ ಕೌಶಲ್ ಆಕೆಗೆ ಚುಂಬಿಸುತ್ತಿರುವುದನ್ನು ಕಾಣಬಹುದು.
ಮುಂದಿನ ಚಿತ್ರದಲ್ಲಿ, ಗಂಡ ಮತ್ತು ಹೆಂಡತಿ ಡೆಸರ್ಟ್ ನಲ್ಲಿ ಪಿಕ್ನಿಕ್ ಎಂಜಾಯ್ ಮಾಡುತ್ತಿರುವುದನ್ನು ಕಾಣಬಹುದು. ಇನ್ನು ಕೊನೆಯ ಚಿತ್ರದಲ್ಲಿ, ಕತ್ರಿನಾ ಕೈಫ್ ಬೀಚ್‌ನಲ್ಲಿ ಪೋಸ್ ನೀಡುತ್ತಿದ್ದಾರೆ. ಫೋಟೊ ಜೊತೆಗೆ ವಿಕ್ಕಿ ಕೌಶಲ್ 'ಹ್ಯಾಪಿ ಬರ್ತ್‌ಡೇ ಗರ್ಲ್. ಐ ಲವ್ ಯೂ' (Happy Birthday Girl)ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ.
ನೆಟಿಜನ್‌ಗಳಿಂದ ಕಾಮೆಂಟ್
ವಿಕ್ಕಿ ಕೌಶಲ್ ಅವರ ಪೋಸ್ಟ್ ಬಂದ ತಕ್ಷಣ, ಫ್ಯಾನ್ಸ್ ಗಳಿಂದ ಕಾಮೆಂಟ್‌ಗಳ ಪ್ರವಾಹವೇ ಹರಿದು ಬಂದಿತು. ಒಬ್ಬರು ಚಿತ್ರಗಳು ತುಂಬಾ ಚೆನ್ನಾಗಿವೆ ಎಂದು ಬರೆದಿದ್ದಾರೆ. ಮತ್ತೊಬ್ಬರು ವಿಕ್ಕಿ ಕೌಶಲ್ ತಮ್ಮ ಪತ್ನಿಯನ್ನು ತುಂಬಾನೆ ಚೆನ್ನಾಗಿ ನೋಡಿಕೊಳ್ಳುತ್ತಾರೆ ಎಂದಿದ್ದಾರೆ. ಇಬ್ಬರದ್ದು ತುಂಬಾನೆ ಮುದ್ದಾದ ಜೋಡಿ ಅಂತಾನೂ ಹೇಳಿದ್ದಾರೆ. ಅಷ್ಟೇ ಅಲ್ಲ ಹುಟ್ಟುಹಬ್ಬಕ್ಕೆ ಶುಭಾಷಯ ಕೂಡ ತಿಳಿಸಿದ್ದಾರೆ.
ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆಯಾಗಿದ್ದು ಯಾವಾಗ?
ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ 9 ಡಿಸೆಂಬರ್ 2021 ರಂದು ಹಿಂದೂ ಪದ್ಧತಿಗಳ ಪ್ರಕಾರ ವಿವಾಹವಾದರು. ಇವರ ವಿವಾಹದ ಚಿತ್ರಗಳು ಬಹಳ ದಿನಗಳ ಕಾಲ ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡಿಂಗ್ ಆಗಿದ್ದವು. ಇಂದು ಕತ್ರಿನಾ ವಿಕ್ಕಿಯೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. ಇಬ್ಬರೂ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.