Katrina-Vicky Kaushal: ಡಿವೋರ್ಸ್​ಗೆ ರೆಡಿಯಾಯ್ತಾ ಕತ್ರಿನಾ-ವಿಕ್ಕಿ ಕ್ಯೂಟ್​ ಜೋಡಿ?

ತಾರಾ ಜೋಡಿಯಾಗಿರುವ ಕತ್ರಿನಾ ವಿಕ್ಕಿ ಕೌಶಲ್ ಮದುವೆಯಾಗಿ ಒಂದೂವರೆ ವರ್ಷಗಳಾಗಿದ್ದು, ಅವರ ಡಿವೋರ್ಸ್​ ಸುದ್ದಿ ಸಕತ್​ ಸೌಂಡ್​ ಮಾಡ್ತಿದೆ. ಏನಿದು ವಿಷ್ಯ? 
 

Will Vicky Kaushal divorce Katrina Find out what the actor has to say

ಸೆಲೆಬ್ರಿಟಿಗಳು ಅದರಲ್ಲಿಯೂ ಮುಖ್ಯವಾಗಿ ಚಿತ್ರ ತಾರೆಯರೆಂದರೆ ಅವರ ಸುತ್ತಲೂ ಯಾವಾಗಲೂ ಗಾಸಿಪ್​ ಗಿರಕಿ ಹೊಡೆಯುತ್ತಲೇ ಇರುತ್ತದೆ. ಮದುವೆ, ಡಿವೋರ್ಸ್​, ಡೇಟಿಂಗ್​ (Dating), ಅಕ್ರಮ ಸಂಬಂಧ... ಹೀಗೆ ಒಂದೇ ಎರಡೆ?  ಮದುವೆಯಾಗದಿದ್ದರೆ ಮದ್ವೆ ಯಾವಾಗ ಎಂದೂ, ಮದುವೆ ಆಯ್ತು ಅಂದರೆ ಮಕ್ಕಳು ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತೆ.  ಅದೇ ವಿಷಯದಲ್ಲಿ ಸದ್ಯ ನಟಿ  ಕತ್ರಿನಾ ಕೈಫ್ ಸುದ್ದಿಯಲ್ಲಿದ್ದಾರೆ. 2021ರ ಡಿಸೆಂಬರ್​ 9ರಂದು ಕತ್ರಿನಾ, ವಿಕ್ಕಿ ಕೌಶಲ್ ಅವರ ಜೊತೆ ಮದುವೆಯಾಗಿದ್ದಾರೆ. ಒಂದೂವರೆ ವರ್ಷಗಳಾಗುತ್ತಲೇ ಮಕ್ಕಳು ಯಾವಾಗ ಎನ್ನುವ ಪ್ರಶ್ನೆ ಎದುರಾಗಿದೆ. ಅದರಲ್ಲಿಯೂ ಸದ್ಯ ಬಾಲಿವುಡ್​ನಲ್ಲಿ ಮದ್ವೆ, ಮಕ್ಕಳ ಸುದ್ದಿ ಸಕತ್​ ಸದ್ದು ಮಾಡುತ್ತಿದೆ. ಅದರಂತೆಯೇ ಕತ್ರಿನಾ ಕೂಡ ಗರ್ಭಿಣಿ (Pregnant) ಎನ್ನುವ ಸುದ್ದಿ ಸದ್ಯ ಹರಿದಾಡಿತ್ತು. ಆದರೆ ಇದಕ್ಕೆ ಖುದ್ದು  ಕತ್ರಿನಾ ಪ್ರತಿಕ್ರಿಯೆ ನೀಡಿದ್ದು,  ಹಾರಿದಾಡುತ್ತಿರುವ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದರು. ಸದ್ಯ ನಾನು  ಜೀ ಲೇ ಜರಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದೇನೆ.  ಈ ಸಿನಿಮಾ ಬಳಿಕ  ಮಗುವಿನ ಬಗ್ಗೆ ಪ್ಲಾನ್ ಮಾಡಲಿದ್ದೇವೆ ಎಂದಿದ್ದರು.  ಸಿನಿಮಾದ ಶೂಟಿಂಗ್ ಮುಗಿಸಿ  ನಂತರ ಪ್ಲಾನ್ ಮಾಡುತ್ತೇನೆ. ಸದ್ಯ ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಜೊತೆ ಸಿನಿಮಾ ಮಾಡುತ್ತಿದ್ದೇನೆ ಎಂದು ಹೇಳಿದ್ದರು. 

ಇದೇನೋ ಸರಿ. ಆದರೆ ಇದರ ನಡುವೆಯೇ ಈ ತಾರಾ ದಂಪತಿಯ ಡಿವೋರ್ಸ್​ (Divorce) ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಬಹಳ ಸದ್ದು ಮಾಡುತ್ತಿದೆ.  ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ (Vicky Kaushal) ಡಿವೋರ್ಸ್ ಪಡೆಯಲಿದ್ದಾರಾ ಎನ್ನುವ ಪ್ರಶ್ನೆಯ ಸುದ್ದಿ ಇದಾಗಿದೆ. ಇದು ಆನ್​ಲೈನ್​ನಲ್ಲಿ ಚರ್ಚೆ ಹುಟ್ಟುಹಾಕಿದೆ. ಝರಾ ಹಟ್ಕೆ, ಝರಾ ಬಚ್ಕೆ ಸಿನಿಮಾದ ಪ್ರಮೋಷನ್ ವೇಳೆ ಈ ಡಿವೋರ್ಸ್ ವಿಚಾರ ಜೋರಾಗಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ವಿಕ್ಕಿ ಕೌಶಲ್​ ಅವರು ನಟಿಸಿದ ಹೊಸ ಸಿನಿಮಾ ‘ಜರಾ ಹಟ್ಕೆ ಜರಾ ಬಚ್ಕೆ’ (Jara Hatke Zara Bachke) ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದಲ್ಲಿ ಮದುವೆ, ಡಿವೋರ್ಸ್​, ಮರು ಮದುವೆ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಕಥೆ ಇದೆ. ಹಾಗಾಗಿ ಪತ್ರಕರ್ತರೊಬ್ಬರು ವಿಕ್ಕಿ ಕೌಶಲ್​ (Vicky Kaushal) ಅವರಿಗೆ ಈ ರೀತಿ ನೇರವಾಗಿ ವಿಚ್ಚೇದನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಹೌದು, ಡಿವೋರ್ಸ್​ ಸುದ್ದಿ  ಶುರುವಾಗಿದ್ದು ಪತ್ರಕರ್ತ ಕೇಳಿದ ಆ ಒಂದು ಪ್ರಶ್ನೆಯಿಂದ.  

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ-ವಿಕ್ಕಿ ಜೋಡಿ? ಮೌನ ಮುರಿದ ಸ್ಟಾರ್ ನಟಿ

ಪತ್ರಕರ್ತನೊಬ್ಬ ವಿಕ್ಕಿ ಅವರಿಗೆ, ಒಂದು ವೇಳೆ ಕತ್ರಿನಾ ಕೈಫ್​ಗಿಂತ ಒಳ್ಳೆ ಹುಡುಗಿ ಸಿಕ್ಕಿದರೆ ಅವರಿಗೆ ಡಿವೋರ್ಸ್ ಕೊಡುತ್ತೀರಾ ಎಂದು ಕೇಳಿದ್ದಾರೆ. ‘ನಮ್ಮ ದೇಶದಲ್ಲಿ ಮದುವೆಗೆ ಹಲವು ಜನ್ಮಗಳ ಸಂಬಂಧ ಇರುತ್ತದೆ ಎಂದು ಹೇಳುತ್ತಾರೆ. ಒಂದು ವೇಳೆ ನಿಮಗೆ ಕತ್ರಿನಾ ಕೈಫ್​ಗಿಂತ ಉತ್ತಮವಾಗಿರುವ ಬೇರೆ ಹುಡುಗಿ ಸಿಕ್ಕರೆ ಮರು ಮದುವೆ ಆಗುತ್ತೀರಾ? ಕತ್ರಿನಾ ಕೈಫ್​ಗೆ ಡಿವೋರ್ಸ್​ ನೀಡುತ್ತೀರಾ?’ ಎಂದು ಕೇಳಲಾಯಿತು.  ಇದಕ್ಕೆ ಅಲ್ಲಿಯೇ ಇದ್ದ ನಟಿ ಸಾರಾ ಅಚ್ಚರಿಯ ರಿಯಾಕ್ಷನ್ ಕೊಟ್ಟರೆ ವಿಕ್ಕಿ ಮಾತ್ರ ತಮಾಷೆಯ ಉತ್ತರ ಕೊಟ್ಟಿದ್ದಾರೆ.
 
‘ನೀವು ಈಗ ಏನು ಕೇಳಿದ್ದೀರಿ? ನಾನು ಮನೆಗೆ ಹೋಗಬೇಕು. ನೀವು ಎಂತಹ ಕಷ್ಟ ಪ್ರಶ್ನೆಗಳನ್ನು ಕೇಳುತ್ತಿದ್ದೀರಿ. ಈ ವಿಷಯದಲ್ಲಿ ನಾನಿನ್ನೂ ಬಾಲಕ. ಸ್ವಲ್ಪ ದೊಡ್ಡೋನಾಗೋಕೆ ಬಿಡಿ ಎಂದಿದ್ದಾರೆ ವಿಕ್ಕಿ ಕೌಶಲ್​. ಈ ಅಪಾಯಕಾರಿ ಪ್ರಶ್ನೆಗೆ ನಾನು ಹೇಗೆ ಉತ್ತರಿಸಲಿ’ ಎಂದು ಹೇಳುವ ಮೂಲಕ ಅವರು ನಗು ಚೆಲ್ಲಿದ್ದಾರೆ. ಇದು ಡೇಂಜರಸ್ ಪ್ರಶ್ನೆ ಎಂದು ನಕ್ಕ ವಿಕ್ಕಿ, ಈ ಮದುವೆ ಜನ್ಮ ಜನ್ಮದ ಮದುವೆ ಎನ್ನುವ ಮೂಲಕ  ಮುಂದಿನ ಜನ್ಮದಲ್ಲೂ ಕತ್ರಿನಾ ಕೈಫ್​ ಅವರನ್ನು ಬಿಡುವುದಿಲ್ಲ ಎಂದು   ಹೇಳಿದ್ದಾರೆ. 

Real Story: ಈ ಸಂಸಾರಕ್ಕೆ ಕತ್ರಿನಾ ಕೈಫ್ ವಿಲನ್! ಅಷ್ಟಕ್ಕೂ ಇವಳೇನು ಮಾಡಿದ್ಲು?

 ‘ಜರಾ ಹಟ್ಕೆ ಜರಾ ಬಚ್ಕೆ’ ಸಿನಿಮಾದಲ್ಲಿ ವಿಕ್ಕಿ ಕೌಶಲ್​ಗೆ ಜೋಡಿಯಾಗಿ ಸಾರಾ ಅಲಿ ಖಾನ್​ (Sara Ali Khan) ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಇದಲ್ಲದೇ ಇನ್ನೂ ಹಲವು ಪ್ರಾಜೆಕ್ಟ್​ಗಳಲ್ಲಿ ವಿಕ್ಕಿ ಕೌಶಲ್​ ಅವರು ಬ್ಯುಸಿ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಸಿನಿಮಾ ಜೂನ್ 2ರಂದು ರಿಲೀಸ್ ಆಗಲಿದೆ. ವಿಕ್ಕಿ ಕೌಶಲ್ ಮದುವೆ ಮುಗಿಸಿ ಹೆಚ್ಚು ಬ್ರೇಕ್ ಇಲ್ಲದೆ ಈ ಸಿನಿಮಾದ ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದರು. ಅಂತೂ ಸಿನಿಮಾ ಪ್ರೇಕ್ಷಕರ ಮುಂದರೆ ಬರಲು ರೆಡಿಯಾಗಿದೆ. ಸಾರಾ ಅಲಿ ಖಾನ್ ಅವರು ಅಟ್ರಾಂಗಿ ರೇ ಸಿನಿಮಾದಲ್ಲಿ ಧನುಷ್ ಜೊತೆ ಕಾಣಿಸಿಕೊಂಡಿದ್ದರು. ಸಿನಿಮಾದ ಹಾಡುಗಳು ಹಿಟ್ ಆದರೂ ಈ ಮೂವಿ ಕಮರ್ಷಿಯಲ್ ಸಕ್ಸಸ್ ಎನಿಸಿಕೊಳ್ಳಲಿಲ್ಲ. ಹಾಗಾಗಿ ಈ ಚಿತ್ರ ಸಾರಾ ಅಲಿ ಖಾನ್​ಗೂ ಅಗತ್ಯವಾಗಿದೆ.

Latest Videos
Follow Us:
Download App:
  • android
  • ios