MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ: ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?

ಶಾರುಖ್ ಸೇರಿ ಈ ನಟರ ಜೊತೆ ಸಂಬಂಧ: ಗುಟ್ಟು ರಟ್ಟು ಮಾಡಿದ ಪ್ರಿಯಾಂಕಾ ಚೋಪ್ರಾ! ಬಾಲಿವುಡ್​ಗೆ ಗುಡ್​ಬೈ?

ಜಾಗತಿಕ ಐಕಾನ್ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಸಹ-ನಟರೊಂದಿಗೆ ಡೇಟಿಂಗ್ ಮಾಡಿದ್ದಾಗಿ ಒಪ್ಪಿಕೊಂಡಿರುವ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಾಹಿದ್ ಕಪೂರ್, ಶಾರುಖ್ ಖಾನ್ ಅವರಂತಹ ನಟರ ಹೆಸರನ್ನು ಪ್ರಸ್ತಾಪಿಸಿದ್ದು, ಇದರ ಜೊತೆಗೆ, ಅವರು ಬಾಲಿವುಡ್ ತೊರೆವ ಬಗ್ಗೆ ಹೇಳಿದ್ದೇನು?

2 Min read
Author : Suchethana D
Published : Feb 21 2026, 03:43 PM IST
Share this Photo Gallery
  • FB
  • TW
  • Linkdin
  • Whatsapp
16
ವಿವಾದದಲ್ಲಿ ಪ್ರಿಯಾಂಕಾ ಚೋಪ್ರಾ
Image Credit : Getty

ವಿವಾದದಲ್ಲಿ ಪ್ರಿಯಾಂಕಾ ಚೋಪ್ರಾ

ಜಾಗತಿಕ ಐಕಾನ್, ಪ್ರಿಯಾಂಕಾ ಚೋಪ್ರಾ (Priyanka Chopra) ಒಂದಿಲ್ಲೊಂದು ವಿಷಯಗಳಿಂದ ಸದಾ ಸುದ್ದಿಯಲ್ಲಿ ಇರುವಂಥವರು. ಹಲವು ನಟ-ನಟಿಯರಂತೆ ಪ್ರಿಯಾಂಕಾ ಚೋಪ್ರಾ ನಡೆದು ಬಂದ ಹಾದಿಯೂ ಕಠಿಣವಾದದ್ದೇ. ತಮ್ಮ ಬಣ್ಣ, ಮೂಗಿನಿಂದಾಗಿ ಇದಾಗಲೇ ಹಲವಾರು ಬಾರಿ ಬಾಡಿ ಷೇಮಿಂಗ್​ಗೆ ಒಳಗಾಗಿ ಕೊನೆಗೆ ಪ್ಲಾಸ್ಟಿಕ್​ ಸರ್ಜರಿಯ ಮೊರೆ ಹೋಗಿದ್ದೂ ಇದೆ.

26
ಬಾಲಿವುಡ್​ಗೆ ಗುಡ್​ಬೈ
Image Credit : Getty

ಬಾಲಿವುಡ್​ಗೆ ಗುಡ್​ಬೈ

ಇದೀಗ ಅವರು ಬಾಲಿವುಡ್​ ಬಿಡಲಿದ್ದಾರೆ ಎನ್ನುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆಯೇ, ಈ ಹಿಂದೆ ನಟಿ ಖುದ್ದು ತಾವು ಹಲವರ ಜೊತೆ ಡೇಟಿಂಗ್​ ಮಾಡಿರುವುದಾಗಿ ಒಪ್ಪಿಕೊಂಡಿರುವ ವಿಡಿಯೋಗಳೂ ವೈರಲ್​ ಆಗುತ್ತಿವೆ. ನಿಕ್​ ಜೋನಸ್​ ಅವರನ್ನು ಮದುವೆಯಾಗಿ, ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie) ಎಂಬ ಮಗಳನ್ನು ಪಡೆದಿರುವ ನಟಿ ಪ್ರಿಯಾಂಕಾ, ಡೇಟಿಂಗ್​ ಕುರಿತು ಮಾತನಾಡಿರುವ ವಿಡಿಯೋ ಇದಾಗಿದೆ.

Related Articles

Related image1
ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
Related image2
Bigg Bossಗೆ ಎಂಟ್ರಿ ಆದಾಗ್ಲೇ ಎಲಿಮಿನೇಷನ್​ಗೂ ಸಹಿ! ಜನರ ವೋಟ್​ ಅನ್ನೋದೇ ಸುಳ್ಳು- ಕಹಿ ಅನುಭವ ತೆರೆದಿಟ್ಟ ನಟಿ ಚಿತ್ರಾಲ್​
36
ಹಲವರ ಜೊತೆ ನಟನೆ
Image Credit : Getty

ಹಲವರ ಜೊತೆ ನಟನೆ

ಇದರಲ್ಲಿ ನಟಿ, ನಿಕ್ ಜೋನಾಸ್ ಅವರೊಂದಿಗೆ ಮದುವೆಯಾಗಿರುವ ಮೊದಲು ತಾವು ಡೇಟಿಂಗ್ ಮಾಡಿದ ನಟರ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಇವರ ಹೆಸರು ಶಾರುಖ್ ಖಾನ್ (Shah rukh Khan) ಅವರ ಹೆಸರನ್ನು ಮೊದಲಿಗೆ ತೆಗೆದುಕೊಂಡಿರುವ ನಟಿ, ಆ ಬಳಿಕ ಶಾಹಿದ್ ಕಪೂರ್, ಹರ್ಮನ್ ಬವೇಜಾ ಅವರಂತಹ ಅನೇಕ ಬಾಲಿವುಡ್ ನಟರೊಂದಿಗೆ ಡೇಟಿಂಗ್​ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ದೇಸಿಗರ್ಲ್ ಬಾಲಿವುಡ್​ನಲ್ಲಿ ಅನೇಕ ಸೂಪರ್ ಸ್ಟಾರ್​ಗಳ ಜೊತೆ ನಟಿಸಿದ್ದಾರೆ. ಪ್ರಿಯಾಂಕಾ ಅವರ ಹೆಸರು ನಟರಾದ ಶಾಹಿದ್ ಕಪೂರ್ ಮತ್ತು ಹರ್ಮಾನ್ ಬಾವ್ಜೆ ಅವರೊಂದಿಗೆ ತಳುಕಿ ಹಾಕಿಕೊಂಡಿತ್ತು. ಹರ್ಮಾನ್ ಬಾವ್ಜಾ ಮತ್ತು ಪ್ರಿಯಾಂಕಾ ಮದುವೆಯಾಗಲು ಕೂಡ ಮುಂದಾಗಿದ್ದರು ಎನ್ನುವ ಸುದ್ದಿ ಕೂಡ ಹರಡಿತ್ತು. ಅಂದಹಾಗೆ, ಶಾಹಿದ್ ಕಪೂರ್ ಜೊತೆ ಕೂಡ ಮದುವೆಯ ಸುದ್ದಿ ಕೇಳಿಬಂದಿತ್ತು. ಆದರೆ ನಟನ ಜೊತೆ ಬ್ರೇಕಪ್ ಬಳಿಕ ಪ್ರಿಯಾಂಕಾ ನಿಕ್ ಜೋನಸ್ ಜೊತೆ ಡೇಟ್ ಮಾಡಲು ಶುರು ಮಾಡಿದ್ದರು.

46
ಹಲವರ ಜೊತೆ ಡೇಟಿಂಗ್​
Image Credit : Getty

ಹಲವರ ಜೊತೆ ಡೇಟಿಂಗ್​

ಇದರಲ್ಲಿ ನಟಿ, ತಮ್ಮ ಬಾಯ್​ಫ್ರೆಂಡ್ಸ್ (Boyfriends) ಎಲ್ಲಾ ಒಳ್ಳೆಯವರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು. ನಾನು ನಟಿಸಿದ ನಟರ ಜೊತೆ ಆಗಾಗ ಡೇಟ್ ಮಾಡುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ನಾನು ಯಾವಾಗಲೂ ನನ್ನ ಸೆಟ್‌ನಲ್ಲಿ ಭೇಟಿಯಾದ ಸಹ ನಟರೊಂದಿಗೆ ಡೇಟಿಂಗ್ ಮಾಡಿದ್ದೇನೆ. ಸಂಬಂಧಕ್ಕೆ ಬೆಲೆ ಕೊಡುತ್ತೇನೆ. ಪ್ರತಿಯೊಂದು ಸಂಬಂಧವು ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ. ನನ್ನ ಜೀವನದಲ್ಲಿ ಬಂದ ಜನರ ಬಗ್ಗೆ ಹೇಗೆ ಸಂಬಂಧ ಹೊಂದಬೇಕು, ಡೇಟಿಂಗ್​ ಯಾವ ವ್ಯಕ್ತಿಯ ಜೊತೆ ಮಾಡಬೇಕು ಎಂಬ ತಿಳಿವಳಿಕೆ ನನಗಿತ್ತು. ಆದ್ದರಿಂದ ಉತ್ತಮ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ. ನನ್ನ ಎಲ್ಲಾ ಡೇಟಿಂಗ್ ಕೂಡ ಅದ್ಭುತವಾಗಿವೆ. ಆದರೆ ಅವರೊಂದಿಗಿನ ಸಂಬಂಧವು ಕೆಟ್ಟದಾಗಿ ಕೊನೆಗೊಂಡಿತು. ನಾನು ಈಗಲೂ ಕೂಡ ಮಾಜಿ ಗೆಳೆಯರನ್ನು ಇಷ್ಟಪಡುತ್ತೇನೆ ಎಂದಿದ್ದಾರೆ.

56
ಬಾಲಿವುಡ್​ಗೆ ಗುಡ್​ಬೈ?
Image Credit : Getty

ಬಾಲಿವುಡ್​ಗೆ ಗುಡ್​ಬೈ?

ಇದೇ ವೇಳೆ ಬಾಲಿವುಡ್​ಗೆ ಗುಡ್​ಬೈ ಹೇಳ್ತಿದ್ದಾರೆ ನಟಿ ಎನ್ನುವ ಸದ್ದು ಸಕತ್​ ಸದ್ದು ಮಾಡುತ್ತಿದೆ. ಈ ಬಗ್ಗೆ ಮಾತನಾಡಿರುವ ನಟಿ, ಸದ್ಯ ಹಾಲಿವುಡ್​ನಲ್ಲಿ ಬಿಜಿಯಾಗಿದ್ದೇನೆ. ಹಾಲಿವುಡ್ ಚಿತ್ರ 'ದಿ ಬ್ಲಫ್' ಚಿತ್ರ ಬಿಡುಗಡೆಯಾಗಲಿದೆ.  

66
ಬಾಲಿವುಡ್​ ತೊರೆಯೋ ಇಷ್ಟವಿರಲಿಲ್ಲ
Image Credit : X

ಬಾಲಿವುಡ್​ ತೊರೆಯೋ ಇಷ್ಟವಿರಲಿಲ್ಲ

ಬಾಲಿವುಡ್‌ನಿಂದ ದೂರ ಸರಿಯುವ ಉದ್ದೇಶವನ್ನು ಎಂದಿಗೂ ಹೊಂದಿರಲಿಲ್ಲ. ಆದರೆ, ಹಿಂದಿ ಸಿನಿಮಾದಲ್ಲಿ ಕೆಲಸ ಮಾಡುವಾಗ, ಕೆಲವೊಂದು ಸೀಮಿತವಾಗಿರುತ್ತದೆ. ಆದರೆ ಹಾಲಿವುಡ್​ನಲ್ಲಿ ಹಾಗಿಲ್ಲ. ಇದರ ಹೊರತಾಗಿಯೂ ಬಾಲಿವುಡ್ ತೊರೆಯುವುದು ಎಂದಿಗೂ ತಮ್ಮ ಮೂಲ ಯೋಜನೆಯ ಭಾಗವಾಗಿರಲಿಲ್ಲ ಎಂದಿರುವ ನಟಿ, ಸದ್ಯ ಬಾಲಿವುಡ್​ನಲ್ಲಿ ನಟಿಸುವ ಸಾಧ್ಯತೆಯ ಬಗ್ಗೆ ಅಲ್ಲಗಳೆದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಪ್ರಿಯಾಂಕಾ ಚೋಪ್ರಾ
ಮನರಂಜನಾ ಸುದ್ದಿ
ಸಂಬಂಧಗಳು
ಮದುವೆ

Latest Videos
Recommended Stories
Recommended image1
'ಹೆಂಡ್ತಿಗೆ ಹೊಡೆಯಿರಿ.. ಆದ್ರೆ ಮೂಳೆ ಮುರೀಬೇಡಿ..' ಈ ದೇಶದ ಹೊಸ ಕಾನೂನಿಗೆ ಸ್ವರಾ ಭಾಸ್ಕರ್‌ ಕಿಡಿ!
Recommended image2
KGF ಮೀರಿಸೋ ಟಾಕ್ಸಿಕ್: ಈ ಸಲ ಯುದ್ಧಾನೇ ಬೇರೆ! ಯಶ್ ಕೌಂಟರ್ ಕೊಟ್ಟಿದ್ದು ಯಾರಿಗೆ?
Recommended image3
'ಸತ್ಯಮೇವ ಜಯತೇ' ಎಂದ ರಾಜ್ ಕುಂದ್ರಾ.. ಬೇಲ್ ಸಿಕ್ಕ ಕೆಲವೇ ಗಂಟೆಗಳಲ್ಲಿ ಶಿಲ್ಪಾ ಶೆಟ್ಟಿ-ರಾಜ್ ಕುಂದ್ರಾ ಡಿನ್ನರ್ ಡೇಟ್!
Related Stories
Recommended image1
ಮೊದಲ ಬಾರಿಗೆ 2ನೇ ಮದುವೆ, ಸಂಗಾತಿ ಬಯಕೆ ಕುರಿತು ಓಪನ್ನಾಗಿ ಮನಸ್ಸಿನ ಮಾತು ತೆರೆದಿಟ್ಟ ನಟಿ Meghana Raj
Recommended image2
Bigg Bossಗೆ ಎಂಟ್ರಿ ಆದಾಗ್ಲೇ ಎಲಿಮಿನೇಷನ್​ಗೂ ಸಹಿ! ಜನರ ವೋಟ್​ ಅನ್ನೋದೇ ಸುಳ್ಳು- ಕಹಿ ಅನುಭವ ತೆರೆದಿಟ್ಟ ನಟಿ ಚಿತ್ರಾಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved