Koffee with Karan: ರೊಮ್ಯಾನ್ಸ್ ಬಗ್ಗೆ ಬಹಿರಂಗಪಡಿಸಿದ ಟೈಗರ್ ಶ್ರಾಫ್, ಕೃತಿ ಸನೋನ್
ಕರಣ್ ಜೋಹರ್ (Karan Johar) ಅವರ ಜನಪ್ರಿಯ ಚಾಟ್ ಶೋ 'ಕಾಫಿ ವಿತ್ ಕರಣ್ 7' ನ (Koffee with Karan) ಇತ್ತೀಚಿನ ಸಂಚಿಕೆಯಲ್ಲಿ, 'ಹೀರೋಪಂತಿ' ಖ್ಯಾತಿಯ ಸ್ಟಾರ್ಸ್ ಕೃತಿ ಸನೋನ್ (Kriti Sanon) ಮತ್ತು ಟೈಗರ್ ಶ್ರಾಫ್ (Tiger Shroff) ಕಾಣಿಸಿಕೊಂಡಿದ್ದಾರೆ. ಈ ಸಂಚಿಕೆಯಲ್ಲಿ, ಕೃತಿ ಸನೋನ್ ಮತ್ತು ಟೈಗರ್ ಶ್ರಾಫ್ ತಮ್ಮ ಬಗ್ಗೆ ಸಾಕಷ್ಟು ಇಂಟರೆಸ್ಟಿಂಗ್ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.
ಕರಣ್ ಜೋಹರ್ ಕೃತಿಯನ್ನು ಟೈಗರ್ ಶ್ರಾಫ್ ಎಂದಿಗೂ ನಿಮ್ಮನು ಸಂಪರ್ಕಿಸಲಿಲ್ಲವೇ? ಎಂದು ಕೇಳಿದ್ದರು. ಅವನು ಸಾಕಷ್ಟು ಫ್ಲಿಪ್ ಮಾಡುತ್ತಾನೆ. ಹಾಗಾಗಿ ಟೈಗರ್‌ನೊಂದಿಗೆ ಡೇಟಿಂಗ್ (dating) ಮಾಡಲು ತಾನು ಎಂದಿಗೂ ಬಯಸುವುದಿಲ್ಲ ಎಂದು ಕೃತಿ ಹೇಳಿದರು. ಈ ಪ್ರಶ್ನೆಗೆ ಟೈಗರ್ ಅವರು ಕೃತಿಯನ್ನು ಸಂಪರ್ಕಿಸಿಲ್ಲ, ಏಕೆಂದರೆ ಅವರು ಈಗಾಗಲೇ ಕಮಿಟ್ ಆಗಿದ್ದಾರೆ ಎಂದು ಹೇಳಿದರು.
ಈ ನಡುವೆ ಕರಣ್ ಜೋಹರ್ ಅವರು ಕೃತಿ ಮತ್ತು ಆದಿತ್ಯ ರಾಯ್ ಕಪೂರ್ ಅವರ ಪಾರ್ಟಿಯೊಂದರಲ್ಲಿ ತುಂಬಾ ಕ್ಲೋಸ್ ಆಗಿರುವುದನ್ನು ನೋಡಿದ್ದಾರೆ ಎಂದು ಬಹಿರಂಗಪಡಿಸಿದರು. ಇದನ್ನು ಕೇಳಿದ ಕೃತಿ ಆಘಾತಕ್ಕೊಳಗಾದರು. ನಾನು ಆ ರೀತಿ ಅಲ್ಲ ಎಂದು ನಿಮಗೆ ತಿಳಿದಿದೆ. ಆದರೆ ಹೌದು ನಾವು ಮಾತನಾಡುತ್ತಿದ್ದೆವು ಮತ್ತು ಅವರ ತುಂಬಾ ಫನ್ನಿ. ಅವರೊಂದಿಗೆ ಬೆರೆಯುವುದು ಖುಷಿ ಕೊಡುತ್ತದೆ ಎಂದು ಕೃತಿ ಹೇಳಿದ್ದರು.
ಆಲಿಯಾ ಭಟ್ ಉತ್ತಮ ಕೆಲಸ ಮಾಡಲು ಸ್ಫೂರ್ತಿ (Inspiration) ನೀಡುತ್ತಾಳೆ ಎಂದು ಕೃತಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ನಾನು ಆಲಿಯಾರ ಫ್ಯಾನ್ ಮತ್ತು ಗಂಗೂಬಾಯಿ ಕಥಿಯಾವಾಡಿ ಸಿನಿಮಾ ಮಾಡುವ ಅವಕಾಶ ಸಿಕ್ಕರೆ ಖಂಡಿತಾ ಆ ಪಾತ್ರ ಮಾಡುತ್ತೇನೆ ಎಂದಿದ್ದಾರೆ ಕೃತಿ.
ಕಾರ್ಯಕ್ರಮದಲ್ಲಿ, ಕೃತಿ ತಾನು ಕರಣ್ ಜೋಹರ್ ಅವರ 'ಸ್ಟೂಡೆಂಟ್ ಆಫ್ ದಿ ಇಯರ್' ಚಿತ್ರಕ್ಕಾಗಿ ಆಡಿಷನ್ ಮಾಡಿದ್ದೇನೆ, ಆದರೆ ತಿರಸ್ಕರಿಸಲಾಯಿತು ಎಂದು ಬಹಿರಂಗಪಡಿಸಿದರು. ಕೃತಿ, 'ಇದು ನನ್ನ ವೃತ್ತಿ ಜೀವನದ (Career) ಮೊದಲ ಆಡಿಷನ್ ಆಗಿತ್ತು ಎಂದಿದ್ದಾರೆ. 'ಬಹರಾ'ದಲ್ಲಿ ಡ್ಯಾನ್ಸ್ ಮಾಡಲು ಮತ್ತು 'ವೇಕ್ ಅಪ್ ಸಿದ್'ನಲ್ಲಿ ಕೆಲವು ದೃಶ್ಯಗಳನ್ನು ಮಾಡಲು ನನ್ನನ್ನು ಕೇಳಲಾಯಿತು. ಆ ಸಮಯದಲ್ಲಿ ನಾನು ತುಂಬಾ ಕಳಪೆಯಾಗಿ ಮಾಡಿದ್ದೆ. ನಾನು ಚಿತ್ರಕ್ಕೆ ಸಿದ್ಧವಿರಲಿಲ್ಲ ಎಂದೂ ಬಹಿರಂಗಪಡಿಸಿದ್ದಾರೆ.
ಒಮ್ಮೆ ತನ್ನ ತಾಯಿಗೆ ತಿಳಿಸದೆ 'ರಾಬ್ತಾ' ಚಿತ್ರದಲ್ಲಿ ಸಣ್ಣ ಮೇಕೌಟ್ ದೃಶ್ಯ ಮಾಡಿದ್ದೇನೆ ಎಂದು ಹೇಳಿದರು. ಈ ದೃಶ್ಯವನ್ನು ನೋಡಿದ ತಾಯಿಗೆ ಆಶ್ಚರ್ಯವಾಯಿತು. ರೊಮ್ಯಾಂಟಿಕ್ ದೃಶ್ಯವನ್ನು (Romantic Scenese) ನೋಡಿದ ನಂತರ ಅವರ ತಾಯಿ, 'ಇದರಲ್ಲಿ ಹೆಚ್ಚೇನೂ ಇಲ್ಲ' ಎಂದು ಹೇಳಿದ್ದರು ಎಂದು ನಟಿ ಹೇಳಿದ್ದಾರೆ.
ಕರಣ್ ಜೋಹರ್ ಟೈಗರ್ ಅವರನ್ನು ರಣವೀರ್ ಸಿಂಗ್ ಬಗ್ಗೆ ಅಸೂಯೆಪಡಲು ಕಾರಣವೇನು ಎಂದು ಕೇಳಿದಾಗ, ದೀಪಿಕಾ ಪಡುಕೋಣೆ ಹೆಸರನ್ನು ಹೇಳಿ ಎಲ್ಲರನ್ನೂ ಆಶ್ಚರ್ಯಗೊಳಿಸಿದರು. ದೀಪಿಕಾ ತುಂಬಾ ಸ್ವೀಟ್ ಮತ್ತು ತುಂಬಾ ಪ್ರತಿಭಾವಂತಳು ಎಂದು ಟೈಗರ್ ಹೇಳಿದರು, ಆದ್ದರಿಂದ ಅವರು ರಣವೀರ್ ಬಗ್ಗೆ ಅಸೂಯೆಪಡುತ್ತಾರೆ ಎಂದೂ ಟೈಗರ್ ರಿವೀಲ್ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಟೈಗರ್ ಅವರು ವಿಮಾನದಲ್ಲಿ ರೊಮ್ಯಾನ್ಸ್ ಮಾಡಿರುವುದನ್ನು ಬಹಿರಂಗಪಡಿಸಿದ್ದಾರೆ. ವಾಸ್ತವವಾಗಿ, ಕಾರ್ಯಕ್ರಮದಲ್ಲಿ Rapid Fire ರೌಂಡ್ ಸಮಯದಲ್ಲಿ ಟೈಗರ್ ಈ ವಿಷಯವನ್ನು ಹೊರಹಾಕಿದರು
ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅವರ ಬ್ರೇಕಪ್ ಸುದ್ದಿ ಕೆಲವು ಸಮಯದಿಂದ ಹರಿದಾಡುತ್ತಿದೆ. ಆದರೆ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಎಂದಿಗೂ ಹೇಳಲಿಲ್ಲ. ಆದರೆ ಕರಣ್ ಕಾರ್ಯಕ್ರಮದಲ್ಲಿ ಟೈಗರ್, 'ನಾನು ಸಿಂಗಲ್. ತಾನು ಮತ್ತು ದಿಶಾ ಒಳ್ಳೆಯ ಸ್ನೇಹಿತರು ಎಂದು ಟೈಗರ್ ಹೇಳಿದ್ದಾರೆ.
ಟೈಗರ್ ಶ್ರಾಫ್ ಅವರು ಯಾವಾಗಲೂ ಶ್ರದ್ಧಾ ಕಪೂರ್ ಬಗ್ಗೆ ಕ್ರಶ್ ಹೊಂದಿದ್ದರು ಮತ್ತು ಅವರು ತುಂಬಾ ಒಳ್ಳೆಯವರು ಎಂದು ಒಪ್ಪಿಕೊಳ್ಳುತ್ತಾರೆ. ಟೈಗರ್ ಅವರು ಇನ್ನೂ ಶಾಲೆಯಲ್ಲಿದ್ದಾಗ ಶ್ರದ್ಧಾ ಅವರ ಮೇಲೆ ಕ್ರಶ್ ಅನ್ನು ಹೊಂದಿದ್ದರು ಎಂದು ಬಹಿರಂಗಪಡಿಸಿದರು.