ಟೈಗರ್ ಶ್ರಾಫ್ ದಿಶಾ ಪಟಾನಿ ಬ್ರೇಕಪ್, ಮೌನ ಮುರಿದ ಜಾಕಿ ಶ್ರಾಫ್
ದಿಶಾ ಪಟಾನಿ (Disha patani) ಮತ್ತು ಟೈಗರ್ ಶ್ರಾಫ್ (Tiger Shroff) ಬ್ರೇಕಪ್ ಸುದ್ದಿ ಮಾಧ್ಯಮಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ನಡುವೆ ಟೈಗರ್ ತಂದೆ ಹಾಗೂ ನಟ ಜಾಕಿ ಶ್ರಾಫ್ (Jockie Shroff) ಪ್ರತಿಕ್ರಿಯೆ ಹೊರಬಿದ್ದಿದೆ. ಅಷ್ಟಕ್ಕೂ ಜಾಕ್ ಶ್ರಾಫ್ ತಮ್ಮ ಮಗ ಟೈಗರ್ ಮತ್ತು ದಿಶಾ ಪಟಾನಿಯ ಬ್ರೇಕಪ್ ವರದಿಗಳ ಬಗ್ಗೆ ಹೇಳಿದ್ದೇನು?
ಮಾಧ್ಯಮ ವರದಿಗಳಲ್ಲಿ, ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅವರ ನಿಕಟ ಮೂಲಗಳು ತಮ್ಮ 6 ವರ್ಷಗಳ ಸಂಬಂಧವನ್ನು ಮುರಿದುಕೊಂಡಿದ್ದಾರೆ. ಆದಾಗ್ಯೂ, ಅವರು ಯಾವಾಗಲೂ ಸ್ನೇಹಿತರಂತೆ ಒಟ್ಟಿಗೆ ಇರುತ್ತಾರೆ ಎಂದು ಉಲ್ಲೇಖಿಸಲಾಗಿದೆ.
'ಅವರು ಯಾವಾಗಲೂ ಒಳ್ಳೆಯ ಸ್ನೇಹಿತರು, ಅವರು ಒಟ್ಟಿಗೆ ಹೋಗುವುದನ್ನು ನಾನು ನೋಡಿದ್ದೇನೆ. ಇದು ನನ್ನ ಮಗನ ಲವ್ ಲೈಫ್ ಅನ್ನು ನಾನು ಟ್ರ್ಯಾಕ್ ಮಾಡುತ್ತಿದ್ದೇನೆ ಎಂದು ಅಲ್ಲ. ನಾನು ಮಾಡುವ ಕೊನೆಯ ಕೆಲಸ ಮತ್ತು ಅವರ ಪ್ರೈವೇಸಿಯಲ್ಲಿ ಮೂಗು ತುರಿಸಿದ ಹಾಗೆ ಆಗುತ್ತದೆ. ಆದರೆ ಅವರು ತುಂಬಾ ಒಳ್ಳೆಯ ಸ್ನೇಹಿತರು ಎಂದು ನಾನು ಭಾವಿಸುತ್ತೇನೆ. ಕೆಲಸದ ಹೊರತಾಗಿ ಅವರು ಒಟ್ಟಿಗೆ ಸಮಯ ಕಳೆಯುತ್ತಾರೆ' ಎಂದು ಜಾಕಿ ಶ್ರಾಫ್ ಸಂಭಾಷಣೆಯಲ್ಲಿ ಹೇಳಿದ್ದಾರೆ.
ಬಾಂಬೆ ಟೈಮ್ಸ್‌ನೊಂದಿಗಿನ ಈ ಸಂಭಾಷಣೆಯಲ್ಲಿ, ಜಾಕಿ ಅವರು ದಿಶಾ ಪಟಾನಿಯ ಕುಟುಂಬದೊಂದಿಗೆ ಬಾಂಧವ್ಯದ ಬಗ್ಗೆ ಮಾತನಾಡಿದರು.
'ಜೊತೆಯಲ್ಲಿ ಇರುತ್ತಾರೋ ಇಲ್ಲವೋ ಅನ್ನೋದು ಅವರವರಿಗೆ ಬಿಟ್ಟಿದ್ದು. ಒಬ್ಬರಿಗೊಬ್ಬರು ಆರಾಮವಾಗಿ ಇರುತ್ತಾರೋ ಇಲ್ಲವೋ. ನನ್ನ ಮತ್ತು ನನ್ನ ಹೆಂಡತಿ ಆಯೇಷಾ ಅವರ ಲವ್ ಸ್ಟೋರಿಯ ರೀತಿ ಇದು ಅವರ ಲವ್‌ಸ್ಟೋರಿ. ದಿಶಾ ಜೊತೆ ನಮ್ಮ ಹೊಂದಾಣಿಕೆ ಉತ್ತಮವಾಗಿದೆ. ನಾನು ಹೇಳಿದಂತೆ ಅವರು ಒಟ್ಟಿಗೆ ಸಂತೋಷವಾಗಿದ್ದಾರೆ. ಭೇಟಿಯಾಗುವುದು, ಮಾತನಾಡುವುದು ಇತ್ಯಾದಿ' ಎಂದು ಹೇಳಿದ್ದಾರೆ ಜಾಕಿ
ಹಿಂದಿನ ಸಂಭಾಷಣೆಯಲ್ಲಿ, ಜಾಕಿ ಶ್ರಾಫ್ ಟೈಗರ್ ಮತ್ತು ದಿಶಾ ಅವರ ಮದುವೆಯತ್ತ ಗಮನಸೆಳೆದಿದ್ದರು. ದಿಶಾ ಹೆಸರನ್ನು ಹೇಳದೆ, ಟೈಗರ್ ತನ್ನ ಮೊದಲ ಪ್ರೀತಿಯನ್ನು 25 ವರ್ಷದ ಹುಡುಗಿಯಾಗಿ ಪಡೆದಿದ್ದಾನೆ ಎಂದು ಹೇಳಿದ್ದರು.
ಅಷ್ಟೇ ಅಲ್ಲ ಅವರು ಒಂದೇ ವೃತ್ತಿಯಿಂದ ಬಂದವರು, ಒಟ್ಟಿಗೆ ನೃತ್ಯ ಮತ್ತು ಪ್ರಾಕ್ಟೀಸ್ ಮಾಡುತ್ತಿದ್ದರು ಎಂದು ಜಾಕಿ ಮಗನ ಪ್ರೀತಿ ಬಗ್ಗೆ ಹೇಳಿದ್ದರು. ಅಷ್ಟೇ ಅಲ್ಲ ತಾನು ಸೇನಾ ಕುಟುಂಬಕ್ಕೆ ಸೇರಿದವಳು ಹಾಗಾಗಿ ಶಿಸ್ತಿನ ಮಹತ್ವ ಗೊತ್ತಿದೆ ಭವಿಷ್ಯದಲ್ಲಿ ಅವರು ಮದುವೆಯಾಗಬಹುದು ಎಂದೂ ಜಾಕಿ ಹೇಳಿದ್ದರು.
ಈ ಜೋಡಿ 6 ವರ್ಷಗಳ ಕಾಲ ಪರಸ್ಪರರ ಡೇಟ್ ಮಾಡಿದ ನಂತರ ಬೇರೆಯಾದರು ಎಂದು ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಅವರ ನಿಕಟ ಮೂಲಗಳು ತಿಳಿಸಿದೆ ಎಂದು ಇತ್ತೀಚಿನ ವರದಿಯೊಂದು ಹೇಳಿಕೊಂಡಿದೆ.
ತಮ್ಮ ಬ್ರೇಕಪ್ ಅನ್ನು ನಿರ್ಲಕ್ಷಿಸಿ ಟೈಗರ್ ವೃತ್ತಿಜೀವನದ ಮೇಲೆ ಕೇಂದ್ರೀಕರಿಸುತ್ತಿದ್ದಾರೆ ಎಂದು ಟೈಗರ್‌ನ ಸ್ನೇಹಿತರೊಬ್ಬರು ಉಲ್ಲೇಖಿಸಿದ್ದಾರೆ ಮತ್ತು ಬ್ರೇಕಪ್ ನಂತರವೂ ಇಬ್ಬರೂ ಸ್ನೇಹಿತರಂತೆ ಪರಸ್ಪರ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದು ಅದೇ ವರದಿಯಲ್ಲಿ ಹೇಳಲಾಗುತ್ತಿದೆ.