Asianet Suvarna News Asianet Suvarna News

ಈ ಕಾರಣಕ್ಕೆ ಟೈಗರ್ ಶ್ರಾಫ್-ದಿಶಾ 6 ವರ್ಷದ ಸುಂದರ ಪ್ರೀತಿ ಮುರಿದು ಬಿತ್ತಾ?

ದಿಶಾ ಪಟಾನಿ ಮತ್ತು ಟೈಗರ್ ಶ್ರಾಫ್ ಜೋಡಿಯ ಪ್ರೀತಿ ಮುರಿದು ಬೀಳಲು ಕಾರಣವಾಗಿದ್ದು ಮದುವೆ ಎನ್ನಲಾಗುತ್ತಿದೆ. ಹೌದು, ನಟಿ ದಿಶಾ ಪಟಾನಿ ಈಗಲೇ ಮದುವೆಯಾಗುವ ನಿರ್ಧಾರ ಮಾಡಿದ್ದರಂತೆ. ಆದರೆ ಟೈಗರ್ ಶ್ರಾಫ್ ಇಷ್ಟು ಬೇಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ತಯಾರಿಲ್ಲವಂತೆ. ಹಾಗಾಗಿ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ದೂರ ದೂರ ಆಗಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. 

reason behind the Tiger Shroff and Disha Patani parting ways is marriage sgk
Author
Bengaluru, First Published Jul 29, 2022, 2:25 PM IST

ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಬಾಲಿವುಡ್‌ನ ಕ್ಯೂಟ್ ಕಪಲ್ ಅಂತನೆ ಕರೆಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಸದ್ಯ ಸಖತ್ ವೈರಲ್ ಆಗಿದೆ. ಸದಾ ಜೊತೆಯಲ್ಲೇ ಕಾಣಿಸಿಕೊಳ್ಳುತ್ತಿದ್ದ ಟೈಗರ್ ಶ್ರಾಫ್ ಮತ್ತು ದಿಶಾ ಪಟಾನಿ ಯಾವತ್ತೂ ಡೇಟಿಂಗ್ ವಿಚಾರವನ್ನು ಅಧಿಕೃತ ಗೊಳಿಸಿರಲಿಲ್ಲ. ಹಾಗಂತ ಇಬ್ಬರ ನಡುವಿನ ಪ್ರೀತಿ ಗುಟ್ಟಾಗಿ ಉಳಿದಿರಲಿಲ್ಲ. ಸುಮಾರು 6 ವರ್ಷಗಳ ಕಾಲ ಇಬ್ಬರೂ ಪ್ರೀತಿಯಲ್ಲಿದ್ದರು. ಆದರೀಗ ಇಬ್ಬರು ಬೇರೆ ಆಗುವ ನಿರ್ಧಾರ ಮಾಡಿ ದೂರ ಆಗಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ನಲ್ಲಿ ಗುಲ್ಲಾಗಿದೆ.   ಈ ಸುಂದರ ಜೋಡಿಯ ಬ್ರೇಕಪ್ ವಿಚಾರ ಕೇಳಿ ಅವರ ಫ್ಯಾನ್ಸ್ ಕೂಡ ಶಾಕ್ ಆಗಿದ್ದಾರೆ. ಇನ್ನೇನು ಇಬ್ಬರು ಸದ್ಯದಲ್ಲೇ ಮದುವೆಯಾಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಅಷ್ಟರಲ್ಲೇ ಬ್ರೇಕಪ್ ವಿಚಾರ ಸದ್ದು ಮಾಡುತ್ತಿದೆ. 

ಅಂದಹಾಗೆ ಈ ಸುಂದರ ಜೋಡಿಗೆ ಯಾರ ಕಣ್ಣುಬಿತ್ತು ಎಂದು ಅಭಿಮಾನಿಗಳು ಶಪಿಸುತ್ತಿದ್ದಾರೆ. ಆದರೆ ಅವರ ಬ್ರೇಕಪ್ ಹಿಂದಿನ ಅಸಲಿ ಕಾರಣ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ ಇಬ್ಬರ ಪ್ರೀತಿ ಮುರಿದು ಬೀಳಲು ಕಾರಣವಾಗಿದ್ದು ಮದುವೆ ಎನ್ನಲಾಗುತ್ತಿದೆ. ಹೌದು, ನಟಿ ದಿಶಾ ಪಟಾನಿ ಈಗಲೇ ಮದುವೆಯಾಗುವ ನಿರ್ಧಾರ ಮಾಡಿದ್ದರಂತೆ. ಆದರೆ ಟೈಗರ್ ಶ್ರಾಫ್ ಇಷ್ಟು ಬೇಗ ಮದುವೆ ಎಂಬ ಬಂಧನಕ್ಕೆ ಒಳಗಾಗಲು ತಯಾರಿಲ್ಲವಂತೆ. ಹಾಗಾಗಿ ಇಬ್ಬರ ನಡುವೆ ಮದುವೆ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಿ ದೂರ ದೂರ ಆಗಿದ್ದಾರೆ ಎನ್ನುವ ಮಾತುಗಳು ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ. 

ದಿಶಾ ಮತ್ತು ಟೈಗರ್ ಶ್ರಾಫ್ ಇಬ್ಬರು ಲಿವ್ ಇನ್ ರಿಲೇಷನ್‌ಶಿಪ್ ನಲ್ಲಿದ್ದರು ಎನ್ನಲಾಗುತ್ತಿದೆ. ಅನೇಕ ವರ್ಷಗಳ ಕಾಲ ಜೊತೆಯಲ್ಲಿದ್ದ ಈ ಜೋಡಿ ಇದೀಗ ಮದಗುವೆ ವಿಚಾರಕ್ಕೆ ಬೇರೆ ಬೇರೆ ಆಗಿರುವುದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ. ಟೈಗರ್ ಆಪ್ತರು ಹೇಳುವ ಪ್ರಕಾರ ದಿಶಾ ಪಟಾನಿ ಮದುವೆಯಾಗಲು ನಿರ್ಧರಿಸಿ ಟೈಗರ್ ಶ್ರಾಫ್ ಅವರನ್ನು ಮದುವೆಗೆ ಒತ್ತಾಯಿಸುತ್ತಿದ್ದರಂತ. ಈ ಬಗ್ಗೆ ಅನೇಕ ಬಾರಿ ಟೈಗರ್ ಬಳಿ ಮಾತನಾಡಿದ್ದರು. ಆದರೆ ಟೈಗರ್ ಇಷ್ಟು ಬೇಗ ಬೇಡ ಎಂದು ಪ್ರತೀಬಾರಿ ಮದುವೆ ವಿಚಾರ ಮುಂದೂಡುತಲ್ಲೇ ಬಂದಿದ್ದರಂತೆ. ಹಾಗಾಗಿ ದಿಶಾ, ಟೈಗರ್ ಅವರಿಂದ ದೂರ ಆಗಲು ನಿರ್ಧರಿಸಿ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ಬಾಲಿವುಡ್‌ನಲ್ಲಿ ಕೇಳಿಬರುತ್ತಿದೆ. 

ಬಾಲಿವುಡ್‌ನಲ್ಲಿ ಮತ್ತೊಂದು ಬ್ರೇಕಪ್; ದೂರಾದ ಟೈಗರ್ ಶ್ರಾಫ್-ದಿಶಾ ಜೋಡಿ?

ನಿಜಕ್ಕೂ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಹಿರಂಗವಾಗಿಲ್ಲ. ಆದರೆ ಬ್ರೇಕಪ್ ಬಳಿಕವೂ ದಿಶಾ ಮತ್ತು ಟೈಗರ್ ಇಬ್ಬರೂ ಪರಸ್ಪರ ಸ್ನೇಹಿತರಾಗಿ ಮುಂದುವರೆದಿದ್ದಾರೆ ಎಂದು ಮೂಲಗಳು ಹೇಳಿವೆ. ನಿಜಕ್ಕೂ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರಾ ಎನ್ನುವ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಆದರೆ ಅಭಿಮಾನಿಗಳು ಈ ಸುಂದರ ಜೋಡಿ ಮತ್ತೆ ಒಂದಾಲಿ ಎಂದು ಕೇಳಿಕೊಳ್ಳುತ್ತಿದ್ದಾರೆ.     

ಟೈಗರ್ ಶ್ರಾಫ್ ಸಿನಿಮಾ ವಿಚಾರಕ್ಕೆ ಬರುವುದಾದರೆ ಇತ್ತೀಚಿಗಷ್ಟೆ ಟೈಗರ್,  ಸ್ಕ್ರೂ ಧೀಲಾ ಸಿವಿಮಾವನ್ನು ಅನೌನ್ಸ್ ಮಾಡಿದರು. ಧರ್ಮ ಪ್ರೊಡಕ್ಷನ್ಸ್ ಜೊತೆಗೆ ಸಿನಿಮಾ ಮಾಡುತ್ತಿದ್ದಾರೆ. 3 ನಿಮಿಷಗಳ ಆಕ್ಷನ್ ವೀಡಿಯೊದೊಂದಿಗೆ ಹೊಸ ಸಿನಿಮಾ ಘೋಷಿಸಿದರು. ಇದನ್ನು ನೋಡಿದ ದಿಶಾ, ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು. 'ಕಾಯಲು ಸಾಧ್ಯವಿಲ್ಲ. ಟೈಗರ್ ಯು ಆರ್  ಫೈರ್' ಎಂದು ಬರೆದುಕೊಂಡಿದ್ದರು. 

ಟೈಗರ್ ಶ್ರಾಫ್ ದಿಶಾ ಪಟಾನಿ ಬ್ರೇಕಪ್‌ ಬಗ್ಗೆ ಮೌನ ಮುರಿದ ಜಾಕಿ ಶ್ರಾಫ್‌

ಇನ್ನು ದಿಶಾ ಪಟಾನಿ ಸದ್ಯ ಏಕ್ ವಿಲನ್ ರಿಟರ್ನ್ ಸಿನಿಮಾದ ರಿಲೀಸ್ ಗೆ ಕಾಯುತ್ತಿದ್ದಾರೆ. ಈಗಾಗಲೇ ಪ್ರಮೋಷನ್ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಈ ಸಿನಿಮಾದಲ್ಲಿ ಜಾನ್ ಅಬ್ರಹಾಂ, ಅರ್ಜುನ್ ಕಪೂರ್ ಮತ್ತು ತಾರಾ ಸುತಾರಿಯಾ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. 

Follow Us:
Download App:
  • android
  • ios