ಅಮ್ಮಂದಿರ ದಿನ ಇಬ್ಬರು ತಾಯಂದಿರ ಎರಡು ಇಮೋಶನ್, ವಿಜಯ್ ಪ್ರಮಾಣವಚನ ಹಿಂದಿನ ಸಿಹಿ ಕಹಿ
ಜೊಸೆಫ್ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿನ ಸಹಿ ಕಹಿ ಘಟನೆ ತಾಯಂದಿರ ದಿನ ಇಬ್ಬರು ತಾಯಂದಿರ ಗೌರವ ಎತ್ತಿ ಹಿಡಿದಿದೆ. ಮಗ ಸಿಎಂ ಆದ ಸಂದರ್ಭ, ಮಗ ಸಿಎಂ ಪ್ರಮಾಣವಚನಕ್ಕೆ ಗೈರಾದ ಸಂದರ್ಭ. ಏನಿದು ?

ವಿಜಯ್ ಪ್ರಮಾಣವಚನ ಸಮಾರಂಭದ ಹಿಂದಿನ ಘಟನೆ
ಭಾರಿ ಕಸರತ್ತಿನ ಬಳಿಕ ನಟ ಜೊಸೆಫ್ ವಿಜಯ್ ಬಹುಮತದೊಂದಿಗೆ ತಮಿಳುನಾಡಿನಲ್ಲಿ ಸರ್ಕಾರ ರಚಿಸಿದ್ದಾರೆ. ಜೊಸೆಫ್ ವಿಜಯ್ ತಮಿಳುನಾಡು ಮುಖ್ಯಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಮ್ಮಂದಿರ ದಿನ ನಡೆದ ವಿಜಯ್ ಪ್ರಮಾಣವಚನ ಸಮಾರಂಭದಲ್ಲಿ ಪ್ರಮುಖ ಎರಡು ಘಟನೆಗಳು ವ್ಯತಿರಿಕ್ತವಾದರೂ ತಾಯಂದಿರ ಗೌರವ ಎತ್ತಿ ಹಿಡಿದಿದೆ.

ವಿಜಯ್ ಸಮಾಂಭದಲ್ಲಿ ವಿಜಯ್ ತಾಯಿ ಭಾವುಕ
ಜೊಸೆಫ್ ವಿಜಯ್ ಪ್ರಮಾಣ ವಚನ ಸಮಾರಂಭದಲ್ಲಿ ವಿಜಯ್ ತಾಯಿ, ತಂದೆ ಹಾಗೂ ಕುಟುಂಬಸ್ಥರು ಪಾಲ್ಗೊಂಡಿದ್ದರು. ವಿಜಯ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ವಿಜಯ್ ಪೋಷಕರು ಭಾವುಕರಾಗಿದ್ದರು. ಈ ಪೈಕಿ ವಿಜಯ್ ತಾಯಿ ಶೋಭಾ ಚಂದ್ರಶೇಖರ್ ಮಗನ ಅಪ್ಪಿ ಮುದ್ದಾಡಿದ್ದಾರೆ. ತಾಯಂದಿರ ದಿನ ಮಗ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ವಿಜಯ್ ತಾಯಿ ಅತೀವ ಹೆಮ್ಮೆ ಪಟ್ಟು ಭಾವುಕರಾಗಿದ್ದಾರೆ.
ಅದೇ ಸಮಾರಂಭದ ಮತ್ತೊಂದು ಘಟನೆ
ಇದೇ ಸಮಾರಂಭದಲ್ಲಿ ವಿಜಯ್ ಪತ್ನಿ ಸಂಗೀತಾ ಸ್ವರ್ಣಲಿಂಗಂ ಹಾಗೂ ಇಬ್ಬರು ಮಕ್ಕಳಾದ ಜೇಸನ್ ಸಂಜಯ್ ಹಾಗೂ ದಿವ್ಯ ಸಾಶಾ ಮೂವರು ಗೈರಾಗಿದ್ದರು. ಈಗಾಗಲೇ ವಿಜಯ್ ಬೇರೊಬ್ಬ ನಟಿ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿ ಡಿವೋರ್ಸ್ ನೋಟಿಸ್ ನೀಡಿರುವ ಪತ್ನಿ ಸಂಗೀತಾ ವಿಜಯ್‌ನಿಂದ ದೂರ ಉಳಿದಿದ್ದಾರೆ. ಈ ಮೂವರು ವಿಜಯ್ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಗಂಡ ಹೆಂಡತಿ ಜಗಳವಿದ್ದರೂ ಮಕ್ಕಳು ಹಾಜರಾಗುವುದು ಸಾಮಾನ್ಯ. ಆದರೆ ಇಲ್ಲಿ ತಾಯಂದಿರ ದಿನ ತಾಯಿ ಗೌರವ ಕಾಪಾಡಲು ಇಬ್ಬರು ಮಕ್ಕಳು ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಒಂದೇ ಘಟೆಯಲ್ಲಿ ಸಿಹಿ ಕಹಿ, ಆದರೆ ತಾಯಿ ಗೌರವ ಕಾಪಾಡಿದ ಮಕ್ಕಳು
ಶೋಭಾ ಚಂದ್ರಶೇಖರನ್‌ಗೆ ಪುತ್ರ ಮುಖ್ಯಮಂತ್ರಿಯಾದ ಖುಷಿ , ಹೆಮ್ಮೆ ಜೊತೆ ಗೌರವ. ಇತ್ತ ಸಂಗೀತಾ ಸ್ವರ್ಣಲಿಂಗಂ ಗೌರವ, ಪ್ರತಿಷ್ಠೆ ಕಾಪಾಡಲು ಮಕ್ಕಳು ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ. ಅಮ್ಮಂದಿರ ದಿನ ಇಬ್ಬರು ತಾಯಿಗಳ ಇಮೋಶನ್ ಬೇರೆ ಬೆರೆ. ಆದರೆ ಗೌರವಕ್ಕೆ ಧಕ್ಕೆಯಾಗಿಲ್ಲ.
ಭಾರಿ ಸಂಚಲನ ಸೃಷ್ಟಿಸಿದ ಪ್ರತಿಕ್ರಿಯೆ
ಈ ಎರಡು ಘಟನೆ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ. ಈ ಪೈಕಿ ಒಬ್ಬರು, ಮೊದಲ ಮಗ ಚುನಾವಣೆ ಗೆದ್ದು ಸಿಎಂ ಆದ, ಮತ್ತೊಬ್ಬ ಮಗ ತಾಯಿ ಬೆಂಬಲಿಸಿ ಬದುಕು ಗೆದ್ದ ಎಂದು ಪ್ರತಿಕ್ರಿಯಿಸಿದ್ದಾರೆ.
ಭಾರಿ ಸಂಚಲನ ಸೃಷ್ಟಿಸಿದ ಪ್ರತಿಕ್ರಿಯೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

