- Home
- Entertainment
- Cine World
- Top 10 Richest Indian Stars: ಇಂಡಿಯಾದ ಟಾಪ್ 10 ಶ್ರೀಮಂತ ಹೀರೋಗಳು ಇವರೇ.. ಯಾರ ಬಳಿ ಹೆಚ್ಚು ಆಸ್ತಿ ಇದೆ?
Top 10 Richest Indian Stars: ಇಂಡಿಯಾದ ಟಾಪ್ 10 ಶ್ರೀಮಂತ ಹೀರೋಗಳು ಇವರೇ.. ಯಾರ ಬಳಿ ಹೆಚ್ಚು ಆಸ್ತಿ ಇದೆ?
'ನಮ್ಮ ದೇಶದ ಅತ್ಯಂತ ಶ್ರೀಮಂತ ನಾಯಕ ನಟರು ಯಾರು? ಯಾರ ಬಳಿ ಹೆಚ್ಚು ಆಸ್ತಿಇದೆ? ಅವರು ಎಲ್ಲಿ ಇದ್ದಾರೆ?' ಹೀಗೆ ಸಿನಿಮಾ ತಾರೆಯರಿಗೆ ಸಂಬಂಧಿಸಿ ಗೂಗಲ್ ಸರ್ಚ್ ನಡೆಸುವವರ ಸಂಖ್ಯೆ ಅಧಿಕವಾಗಿದೆ. ಈ ಪಟ್ಟಿಯಲ್ಲಿ ಯಾರು ಅಗ್ರಸ್ಥಾನದಲ್ಲಿದ್ದಾರೆ ಎಂದು ನೋಡಿ..

Top 10 Richest Indian Heroes: ಸಿನಿಮಾ ತಾರೆಯರು ಎಂದರೆ ಅವರ ಬಳಿ ಬಹಳಷ್ಟು ಆಸ್ತಿ ಇದೆ ಎಂದೇ ಸಾಮಾನ್ಯ ಜನರು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ಸಿನಿಮಾ ಸೆಲೆಬ್ರಿಟಿಗಳನ್ನು ತಮ್ಮ ರೋಲ್ ಮಾಡೆಲ್ ಎನ್ನುವಂತೆ ಆರಾಧಿಸುತ್ತಾರೆ. ಅನುಕರಿಸುತ್ತಾರೆ. ಅವರ ರೀತಿಯಲ್ಲೇ ಬದುಕಬೇಕು ಎಂದು ತಮ್ಮ ಆಸ್ತಿ ಮತ್ತು ಐಷಾರಾಮಿ ಜೀವನದ ಬಗ್ಗೆ ನಿರಂತರವಾಗಿ ಕನಸು ಕಾಣುತ್ತಾರೆ. ಆದರೆ ಸತ್ಯ ಸಂಗತಿ ಏನು? ಈ ಸ್ಟೋರಿ ನೋಡಿ...
ಅದಕ್ಕಾಗಿ ಹಲವರು ಗೂಗಲ್‌ನಲ್ಲಿ ಸರ್ಚ್ ಮಾಡುತ್ತಾರೆ- 'ನಮ್ಮ ದೇಶದ ಅತ್ಯಂತ ಶ್ರೀಮಂತ ನಾಯಕ ನಟರು ಯಾರು? ಯಾರ ಬಳಿ ಹೆಚ್ಚು ಆಸ್ತಿಇದೆ? ಅವರು ಎಲ್ಲಿ ಇದ್ದಾರೆ?' ಹೀಗೆ ಸಿನಿಮಾ ತಾರೆಯರಿಗೆ ಸಂಬಂಧಿಸಿ ಗೂಗಲ್ ಸರ್ಚ್ ನಡೆಸುವವರ ಸಂಖ್ಯೆ ಅಧಿಕವಾಗಿದೆ. ಇದು ಬಹಳಷ್ಟು ಜನರಿಗೆ ಬಹಳ ಆಸಕ್ತಿದಾಯಕ ವಿಷಯವಾಗಿದೆ. ಈ ನಿಟ್ಟಿನಲ್ಲಿ ಹಲವು ಚರ್ಚೆಗಳು ನಡೆಯುತ್ತಿವೆ. ಈ ಪಟ್ಟಿಯಲ್ಲಿ ಯಾರು ಅಗ್ರಸ್ಥಾನದಲ್ಲಿದ್ದಾರೆ ಎಂದು ನೋಡೋಣ..
10 ರಿಂದ 1 ಎಣಿಕೆ ಮೂಲಕ ಬರೋದಾದ್ರೆ- ಕೊನೆಯದಾಗಿ, ಭಾರತದ ಟಾಪ್ 10 ಶ್ರೀಮಂತ ನಾಯಕ ಮೆಗಾ ಪವರ್ ಸ್ಟಾರ್ ರಾಮ್ ಚರಣ್. ಅವರ ಪ್ರಸ್ತುತ ನಿವ್ವಳ ಮೌಲ್ಯ 1,630 ಕೋಟಿ ರೂ. ಆದ್ದರಿಂದ, ಟಾಪ್ 10 ಶ್ರೀಮಂತ ಭಾರತೀಯ ನಾಯಕರ ಪಟ್ಟಿಯಲ್ಲಿ ಕಿರಿಯ ವಯೋಮಾನದ, ಏಕೈಕ ಯುವ ನಾಯಕ ನಟ ರಾಮ್ ಚರಣ್.
ಬಾಲಿವುಡ್ ಹಿರಿಯ ನಾಯಕ ಮತ್ತು ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಸಿನಿಮಾಗಳು, ಜಾಹೀರಾತುಗಳು ಮತ್ತು ಕೆಬಿಸಿಯಂತಹ ಕಾರ್ಯಕ್ರಮಗಳ ಮೂಲಕ ಸಾಕಷ್ಟು ಸಂಪಾದನೆ ಮಾಡುತ್ತಿದ್ದಾರೆ. ಅಮಿತಾಭ್ ಅವರು ಈ ಪಟ್ಟಿಯಲ್ಲಿ ಟಾಪ್ 8ರಲ್ಲಿ ಇದ್ದಾರೆ. ಅವರ ಪ್ರಸ್ತುತ ಆಸ್ತಿ ಮೌಲ್ಯ ರೂ. 1680 ಕೋಟಿ. ತೆಲುಗು ನಾಯಕ ನಟ ವಿಕ್ಟರಿ ವೆಂಕಟೇಶ್ ಟಾಪ್ 9ರಲ್ಲಿದ್ದಾರೆ. ಅವರ ನಿವ್ವಳ ಮೌಲ್ಯ ರೂ. 1650 ಕೋಟಿ ಎನ್ನಲಾಗಿದೆ. ತೆಲುಗು ನಾಯಕರಲ್ಲಿ ನಾಗಾರ್ಜುನ ಮತ್ತು ಚಿರಂಜೀವಿ ನಂತರದ ಸ್ಥಾನದಲ್ಲಿ ವೆಂಕಟೇಶ್ ಅತಿ ಹೆಚ್ಚು ಆಸ್ತಿಯನ್ನು ಹೊಂದಿದ್ದಾರೆ.
ಎರಡನೇ ಅತ್ಯಂತ ಶ್ರೀಮಂತ ತೆಲುಗು ನಾಯಕ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ. ಭಾರತದ ಟಾಪ್ 7ಶ್ರೀಮಂತ ನಾಯಕರಾಗಿ ಹೊರಹೊಮ್ಮಿದ್ದಾರೆ. ವರದಿ ಪ್ರಕಾರ, ಸದ್ಯಕ್ಕೆ ಅವರ ಆಸ್ತಿ 1,750 ಕೋಟಿ ರೂ ಬೆಲೆಬಾಳುತ್ತದೆ ಎನ್ನಲಾಗಿದೆ.
ನಂತರದ ಸ್ಥಾನದಲ್ಲಿ ಹೃತಿಕ್ ರೋಷನ್ ಇದ್ದಾರೆ. ಹೃತಿಕ್ ಅವರ ಆಸ್ತಿ 3,100 ಕೋಟಿ ರೂ.ಗಳಾಗಿದೆ. ಬಳಿಕ, ಟಾಪ್ 5 ರಲ್ಲಿ, ಬಾಲಿವುಡ್ ಹೀರೋ ಅಕ್ಷಯ್ ಕುಮಾರ್ ಇದ್ದಾರೆ. ಚಲನಚಿತ್ರಗಳಲ್ಲಿ ನಟಿಸುವುದರ ಜೊತೆಗೆ, ಅಕ್ಷಯ್ ಜಾಹೀರಾತುಗಳು ಮತ್ತು ಸ್ಪೆಷಲ್ ಕಾರ್ಯಕ್ರಮಗಳಿಂದಲೂ ಹಣ ಗಳಿಸುತ್ತಾರೆ. ಪ್ರಸ್ತುತ, ಅವರ ಆಸ್ತಿ 2,250 ಕೋಟಿ ರೂ. ನಂತರದ ಸ್ಥಾನ 6ಅನ್ನು ನಟ ಆಮಿರ್ ಖಾನ್ ಗಳಿಸಿಕೊಂಡಿದ್ದಾರೆ. ಅವರ ನಿವ್ವಳ ಮೌಲ್ಯ 1,860 ಕೋಟಿ ರೂ.
ಸಲ್ಮಾನ್ ಖಾನ್ ಅವರ ಆಸ್ತಿ 3,225 ಕೋಟಿ ರೂ.ಗಳಾಗಿವೆ. ಸಿನಿಮಾಗಳು, ಜಾಹೀರಾತುಗಳು ಮತ್ತು ಬಿಗ್ ಬಾಸ್ ಶೋನಂತಹ ಕಾರ್ಯಕ್ರಮಗಳಿಂದ ಸಲ್ಲೂ ಉತ್ತಮ ಆದಾಯ ಗಳಿಸುತ್ತಾರೆ. ಅವರು ಟಾಪ್ 3 ರಲ್ಲಿ ಇರುವುದು ವಿಶೇಷ.
ಶಾರುಖ್ ಖಾನ್ ನಂತರ, ಟಾಲಿವುಡ್ ಹಿರಿಯ ನಾಯಕ ನಾಗಾರ್ಜುನ ನಮ್ಮ ದೇಶದಲ್ಲಿ ನಿವ್ವಳ ಮೌಲ್ಯ ಮತ್ತು ಆಸ್ತಿಯ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಅವರು ನಮ್ಮ ದೇಶದಲ್ಲಿ 5000 ಕೋಟಿ ರೂ. ನಿವ್ವಳ ಮೌಲ್ಯದೊಂದಿಗೆ ಎರಡನೇ ಸ್ಥಾನದಲ್ಲಿ ಇದ್ದಾರೆ. ಅವರ ಗಳಿಕೆಯು ಚಲನಚಿತ್ರಗಳು ಹಾಗೂ ಬಿಗ್ ಬಾಸ್ ಕಾರ್ಯಕ್ರಮದಿಂದ ಬರುತ್ತಿದೆ. ಆದ್ದರಿಂದ, ಸುದ್ದಿಮೂಲದ ಪ್ರಕಾರ, ತೆಲುಗು ನಾಯಕರಲ್ಲಿ ಅತ್ಯಂತ ಹೆಚ್ಚು ಶ್ರೀಮಂತ ನಾಯಕರಲ್ಲಿ ನಾಗಾರ್ಜುನ ಅವರೇ ಟಾಪ್.
ಕಂಪನಿಯೊಂದು ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಶಾರುಖ್ ಖಾನ್ ಟಾಪ್ 10 ಶ್ರೀಮಂತ ನಾಯಕರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ನಮ್ಮ ದೇಶದಲ್ಲಿ ನಾಯಕರು ತೆಗೆದುಕೊಳ್ಳುವ ಸಂಭಾವನೆ ಮತ್ತು ಅವರ ನಿವ್ವಳ ಮೌಲ್ಯವನ್ನು ಆಧರಿಸಿ ಈ ಪಟ್ಟಿಯನ್ನು ತಯಾರಿಸಲಾಗಿದೆ. ನಮ್ಮ ತೆಲುಗು ನಾಯಕರು ಸಹ ಅದರಲ್ಲಿ ಸ್ಥಾನ ಪಡೆದಿದ್ದಾರೆ. ಬಾಲಿವುಡ್ ಹಿರಿಯ ನಾಯಕ ನಟ ಶಾರುಖ್ ಖಾನ್ ಅವರ ಪ್ರಸ್ತುತ ಮಾರುಕಟ್ಟೆ ಮೌಲ್ಯ 12,931 ಕೋಟಿ ರೂ. ಈ ಮೂಲಕ ಅವರು ದೇಶದ ಶ್ರೀಮಂತ ನಾಯಕರಲ್ಲಿ ಅವರು ಮೊದಲ ಸ್ಥಾನ ಸಂಪಾದಿಸಿಕೊಂಡಿದ್ದಾರೆ. ಶಾರುಖ್ ಖಾನ್ ಆದಾಯವು ಚಲನಚಿತ್ರಗಳು ಹಾಗೂ ಅನೇಕ ಜಾಹೀರಾತುಗಳ ಮೂಲಕ ಬರುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

