MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • K Manikandan Movies: 'ಕಂಟೆಂಟ್‌ ಕಿಂಗ್'‌ ಎಂದ ಮಣಿಕಂಠನ್‌ 5 ಸಿನಿಮಾ ನೋಡಿದ್ರೆ ನೀವೂ ಫ್ಯಾನ್‌ ಆಗ್ತೀರಿ!

K Manikandan Movies: 'ಕಂಟೆಂಟ್‌ ಕಿಂಗ್'‌ ಎಂದ ಮಣಿಕಂಠನ್‌ 5 ಸಿನಿಮಾ ನೋಡಿದ್ರೆ ನೀವೂ ಫ್ಯಾನ್‌ ಆಗ್ತೀರಿ!

ಖ್ಯಾತ ತಮಿಳು ನಟ, ನಿರ್ದೇಶಕ ಕೆ ಮಣಿಕಂಠನ್‌ ಅವರ ಐದು ಟಾಪ್‌ ಸಿನಿಮಾಗಳಿವು! ಈ ಸಿನಿಮಾ ನೋಡಿದ್ರೆ ನೀವು ಅವರ ಅಭಿಮಾನಿಯಾಗ್ತೀರಿ.

2 Min read
Author : Padmashree Bhat
| Updated : Jul 15 2025, 12:18 PM IST
Share this Photo Gallery
  • FB
  • TW
  • Linkdin
  • Whatsapp
16
ಕೆ ಮಣಿಕಂಠನ್‌ ನಟನೆಯ ಐದು ಟಾಪ್‌ ಸಿನಿಮಾಗಳು
Image Credit : k manikandan instagram

ಕೆ ಮಣಿಕಂಠನ್‌ ನಟನೆಯ ಐದು ಟಾಪ್‌ ಸಿನಿಮಾಗಳು

ತಮಿಳು ಚಿತ್ರರಂಗದಲ್ಲಿ ವಿಭಿನ್ನವಾದ ಕಥೆ, ಪಾತ್ರದ ಮೂಲಕ ಹೆಸರು ಮಾಡಿರುವ ನಟ ಮಣಿಕಂಠನ್ ತಮ್ಮ ಭಾವನಾತ್ಮಕ‌, ಸೂಕ್ಷ್ಮವಾದ ನಟನೆಯ ಮೂಲಕ ವಿಶಿಷ್ಟ ಸ್ಥಾನವನ್ನು ಗಳಿಸಿದ್ದಾರೆ. ಕಾನೂನು ನಾಟಕದ ಜೊತೆಗೆ ಸುಂದರವಾದ ಪ್ರೀತಿಯ ಕಥೆಗಳವರೆಗೆ, ತಾನು ಕೂಡ ವಿವಿಧ ಪಾತ್ರಗಳಿಗೆ ಜೀವ ಆಗಬಲ್ಲೆ ಎಂದು ಅವರು ಸಾಬೀತುಪಡಿಸಿದ್ದಾರೆ. ಈ ಐದು ಸಿನಿಮಾಗಳು ನಿಮಗೆ ಮುದ ಕೊಡುವುದರ ಜೊತೆಗೆ ಅವರ ಅಭಿಮಾನಿ ಆಗುವ ಹಾಗೆ ಮಾಡುತ್ತವೆ.

26
ಲವ್ವರ್‌ ಸಿನಿಮಾ
Image Credit : k manikandan instagram

ಲವ್ವರ್‌ ಸಿನಿಮಾ

ಲವ್ವರ್‌ ಸಿನಿಮಾದಲ್ಲಿ ಮಣಿಕಂಠನ್‌ ಅವರು ಲವ್‌ ಮತ್ತು ಕಂಟ್ರೋಲ್‌ ಮಾಡುವ ಮಧ್ಯದ ಪಾತ್ರವನ್ನು ನಿರ್ವಹಿಸಿದರು. ಆರು ವರ್ಷಗಳ ಕಾಲ ಡೇಟ್‌ ಮಾಡಿದ್ದ ಈ ಜೋಡಿ ಮಧ್ಯೆ ಪೊಸೆಸ್ಸಿವ್‌ನೆಸ್ ಸಮಸ್ಯೆ ಬಂದು ಏನೆಲ್ಲ ಆಗುವುದು ಎನ್ನುವುದು ಈ ಸಿನಿಮಾ ಕತೆ.

Related Articles

Related image1
B Saroja Devi Movies: ‘ಅಭಿನಯ ಶಾರದೆ’ ಸರೋಜಾದೇವಿ ನಟಿಸಿರುವ ನೀವು ನೋಡಲೇಬೇಕಾದ ಅತ್ಯಧ್ಬುತ ಸಿನಿಮಾಗಳು
Related image2
Kittur Chennamma Movie: ನಿಮಗೇಕೆ ಕೊಡಬೇಕು ಕಪ್ಪ? ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದ ಪರಕಾಯ ಪ್ರವೇಶ ಮಾಡಿದ್ದ ನಟಿ ಬಿ ಸರೋಜಾದೇವಿ!
36
ಗುಡ್ ನೈಟ್ (2023)
Image Credit : k manikandan instagram

ಗುಡ್ ನೈಟ್ (2023)

'ಗುಡ್ ನೈಟ್' ಎಂಬ ಅದ್ಭುತವಾದ ಸಿನಿಮಾದಲ್ಲಿ ಮಣಿಕಂಠನ್‌ ಅವರು ಐಟಿ ಉದ್ಯೋಗಿಯಾಗಿದ್ದು, ಗೊರಕೆಯ ಸಮಸ್ಯೆಯಿಂದ ಬಳಲುತ್ತಾರೆ. ಆಗ ಅವರಿಗೆ ಓರ್ವ ಹುಡುಗಿ ಜೊತೆ ಲವ್‌ ಆಗಿ ಮದುವೆ ಆಗುವುದು. ಈ ಗೊರಕೆಯಿಂದಾಗಿ ಇವರಿಬ್ಬರು ಒಂದೇ ರೂಮ್‌ನಲ್ಲಿ ನಿದ್ದೆ ಮಾಡಲು ಆಗೋದಿಲ್ಲ. ಈ ಬಗ್ಗೆಯೇ ಕಥೆ ಸಾಗಿದೆ.

46
ಸಿಲ್ಲು ಕರುಪ್ಪಟ್ಟಿ (2019)
Image Credit : k manikandan instagram

ಸಿಲ್ಲು ಕರುಪ್ಪಟ್ಟಿ (2019)

ಹಲಿತಾ ಶಮೀಮ್‌ರ 'ಸಿಲ್ಲು ಕರುಪ್ಪಟ್ಟಿ' ಎಂಬ ಸಿನಿಮಾದಲ್ಲಿ 'ಅತಿಶಯಮೇವತು' ಭಾಗದಲ್ಲಿ ಮಣಿಕಂಠನ್ ನಟಿಸಿದ್ದಾರೆ. ಶ್ರವಣ ದೋಷವುಳ್ಳ ಯುವತಿಯನ್ನು ಪ್ರೀತಿಸುವ ಹುಡುಗನ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಇಲ್ಲಿಯೂ ಸೌಮ್ಯ, ಸಹಜವಾದ ನಟನೆಯಿಂದ ಎಲ್ಲರ ಮನಸ್ಸು ಗಳಿಸಿದರು. ಅವರ ಭಾವನಾತ್ಮಕ ನಟನೆ ಎಲ್ಲರ ಮನಸ್ಸು ಗೆಲ್ಲುವ ಹಾಗೆ ಮಾಡಿತು.

56
kudumbasthan movie
Image Credit : k manikandan instagram

kudumbasthan movie

ಮಣಿಕಂಠನ್‌ರ ಇತ್ತೀಚಿನ ಸಿನಿಮಾ kudumbasthan movie ನಿಜಕ್ಕೂ ಅವರ ನಟನಾ ಶೈಲಿ ಹೇಗಿದೆ ಎನ್ನೋದನ್ನು ಹೇಳುವುದು. ನವೀನ್ ತನ್ನ ಪತ್ನಿ, ತಂದೆ-ತಾಯಿ ಜೊತೆಗೆ ವಾಸ ಮಾಡುತ್ತಿರುತ್ತಾನೆ. ಇವನೇ ಕುಟುಂಬದ ಏಕೈಕ ಜೀವನಾಧಾರ. ತಾನು ಮಾಡುವ ಕೆಲಸದಲ್ಲಿ ನಡೆದ ಜಗಳದಲ್ಲಿ ಕ್ಷಮೆ ಕೇಳೋದಿಲ್ಲ ಎಂದು ಹೇಳಿದ ನಂತರ ಅವರನ್ನು ಕೆಲಸದಿಂದ ತೆಗೆದು ಹಾಕಲಾಯಿತು. ಕುಟುಂಬದ ಒತ್ತಡ ಆರ್ಥಿಕ ತೊಂದರೆಗಳಿಂದ ಕಂಗೆಟ್ಟಿರುವ ನವೀನ್ ತನ್ನ ಜೀವನವನ್ನು ಹೇಗೆ ನಿರ್ವಹಿಸುತ್ತಾನೆ ಎನ್ನೋದು ಈ ಸಿನಿಮಾ ಕಥೆ.

66
ಜೈ ಭೀಮ್ (2021)
Image Credit : k manikandan instagram

ಜೈ ಭೀಮ್ (2021)

'ಜೈ ಭೀಮ್' ಎಂಬ ಕೋರ್ಟ್‌ ಡ್ರಾಮಾದಲ್ಲಿ ಮಣಿಕಂಠನ್‌ ಅವರು ರಾಜಕಾನು ಎಂಬ ಆದಿವಾಸಿ ವ್ಯಕ್ತಿಯ ಪಾತ್ರವನ್ನು ಮಾಡಿದ್ದರು. ಆ ವ್ಯಕ್ತಿಯ ವಿರುದ್ಧ ತಪ್ಪು ಆರೋಪ ಹೊರಿಸಲಾಗುತ್ತದೆ. ಆರೋಪಿ ಸ್ಥಾನದಲ್ಲಿ ಮಣಿಕಂಠನ್‌ ಅವರು ಅದ್ಭುತವಾಗಿ ನಟಿಸಿ, ಮೆಚ್ಚುಗೆ ಗಳಿಸಿದರು. ಇದಕ್ಕಾಗಿ ಅವರು ವ್ಯಾಪಕವಾಗಿ ಮೆಚ್ಚುಗೆ ಗಳಿಸಿದರು. ಅಷ್ಟೇ ಅಲ್ಲದೆ ತಮಿಳು ಚಿತ್ರರಂಗದಲ್ಲಿ ಒಂದು ಮಹತ್ವದ ಹೆಜ್ಜೆ ಗುರುತಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಸಿನಿಮಾ
ಓಟಿಟಿ
ವೆಬ್ ಸರಣಿ

Latest Videos
Recommended Stories
Recommended image1
ರಶ್ಮಿಕಾ ಮಂದಣ್ಣ ಮದುವೆ: ಬಿಕ್ಕಿ ಬಿಕ್ಕಿ ಅಳ್ತಾ ಹೀಗಂದ್ರಾ ರಕ್ಷಿತ್‌ ಶೆಟ್ಟಿ ತಾಯಿ?
Recommended image2
ವಿಜಯ್​ ಎದುರೇ ರಶ್ಮಿಕಾ ಮಂದಣ್ಣಗೆ, ರಕ್ಷಿತ್​ ಶೆಟ್ಟಿ ಬಗ್ಗೆ ಕನ್ನಡದಲ್ಲಿ ಪ್ರಶ್ನೆ! ನಟಿ ಏನ್​ ಹೇಳಿದ್ರು? ವಿಡಿಯೋ ವೈರಲ್​
Recommended image3
ರಶ್ಮಿಕಾ-ವಿಜಯ್ ಮದುವೆಯಾಗುತ್ತಿರುವ ಹೊಟೇಲ್ ರೂಮಿನ ಒಂದು ದಿನದ ಬಾಡಿಗೆ ಇಷ್ಟೊಂದಾ?
Related Stories
Recommended image1
B Saroja Devi Movies: ‘ಅಭಿನಯ ಶಾರದೆ’ ಸರೋಜಾದೇವಿ ನಟಿಸಿರುವ ನೀವು ನೋಡಲೇಬೇಕಾದ ಅತ್ಯಧ್ಬುತ ಸಿನಿಮಾಗಳು
Recommended image2
Kittur Chennamma Movie: ನಿಮಗೇಕೆ ಕೊಡಬೇಕು ಕಪ್ಪ? ಕಿತ್ತೂರು ರಾಣಿ ಚೆನ್ನಮ್ಮ ಪಾತ್ರದ ಪರಕಾಯ ಪ್ರವೇಶ ಮಾಡಿದ್ದ ನಟಿ ಬಿ ಸರೋಜಾದೇವಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved