- Home
- Entertainment
- Cine World
- Dhanush Hit Movies: ಒಂದೊಳ್ಳೆಯ ರಿವ್ಯೂ ಪಡೆದು, ಸೂಪರ್ ಹಿಟ್ ಕಲೆಕ್ಷನ್ ಮಾಡಿರುವ ಧನುಷ್ ಸಿನಿಮಾಗಳಿವು
Dhanush Hit Movies: ಒಂದೊಳ್ಳೆಯ ರಿವ್ಯೂ ಪಡೆದು, ಸೂಪರ್ ಹಿಟ್ ಕಲೆಕ್ಷನ್ ಮಾಡಿರುವ ಧನುಷ್ ಸಿನಿಮಾಗಳಿವು
Actor Dhanush Movies: ತಮಿಳು ನಟ ಧನುಷ್ ನಟನೆಯ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾಗಳು: ಸೂಪರ್‌ಸ್ಟಾರ್ ಧನುಷ್ ಅಭಿನಯದ 'ತೇರೆ ಇಷ್ಕ್ ಮೇ' ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾ ನೋಡುವ ಮುನ್ನ, OTTಯಲ್ಲಿ ಲಭ್ಯವಿರುವ ಧನುಷ್ ಅವರ ಅತಿ ಹೆಚ್ಚು ಗಳಿಕೆ ಕಂಡ ಈ 7 ಸಿನಿಮಾಗಳು ಇಲ್ಲಿವೆ.

ರಾಯನ್ ಸಿನಿಮಾ
2024ರಲ್ಲಿ ಬಿಡುಗಡೆಯಾದ ಧನುಷ್ ಅವರ 'ರಾಯನ್' ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಈ ಸಿನಿಮಾವು ಬಾಕ್ಸ್ ಆಫೀಸ್‌ನಲ್ಲಿ 156.1 ಕೋಟಿ ರೂಪಾಯಿ ಗಳಿಸಿತ್ತು. ನೀವು ಈ ಸಿನಿಮಾವನ್ನು ಅಮೆಜಾನ ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
ರಾಂಝಣಾ ಸಿನಿಮಾ
2013ರಲ್ಲಿ ಬಂದ ಸೂಪರ್‌ಹಿಟ್ ಸಿನಿಮಾ 'ರಾಂಝಣಾ'ದಲ್ಲಿ ಧನುಷ್ ಮತ್ತು ಬಾಲಿವುಡ್ ನಟಿ ಸೋನಂ ಕಪೂರ್ ಜೋಡಿ ಮೋಡಿ ಮಾಡಿತ್ತು. ಈ ಸಿನಿಮಾವನ್ನು ನೀವು ಪ್ರೈಮ್ ವಿಡಿಯೋ ಮತ್ತು ಜೀ5 ನಲ್ಲಿ ನೋಡಬಹುದು.
ತಿರುಚಿತ್ರಂಬಲಂ ಸಿನಿಮಾ
2022ರಲ್ಲಿ ಬಂದ 'ತಿರುಚಿತ್ರಂಬಲಂ' ಸಿನಿಮಾದಲ್ಲಿ ಧನುಷ್ ಪ್ರಮುಖ ಪಾತ್ರದಲ್ಲಿದ್ದಾರೆ. ನೀವು ಈ ಸಿನಿಮಾವನ್ನು ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
ವಾತಿ ಸಿನಿಮಾ
2023ರಲ್ಲಿ 'ವಾತಿ' ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 118.2 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ನೀವು ಈ ಸಿನಿಮಾವನ್ನು ಇನ್ನೂ ನೋಡಿಲ್ಲದಿದ್ದರೆ, ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.
ಇಡ್ಲಿ ಕಡೈ
2025ರಲ್ಲಿ ಬಿಡುಗಡೆಯಾದ 'ಇಡ್ಲಿ ಕಡೈ' ಸಿನಿಮಾ, ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಮಾಡಿತ್ತು. ನೀವು ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದು.
ಕುಬೇರ
2025ರಲ್ಲಿ ಬಿಡುಗಡೆಯಾದ 'ಕುಬೇರ' ಚಿತ್ರದಲ್ಲಿ ಧನುಷ್ ಪ್ರಮುಖ ಪಾತ್ರದಲ್ಲಿದ್ದರು. ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ 137.5 ಕೋಟಿ ರೂ. ಗಳಿಸಿತ್ತು. ನೀವು ಈ ಸಿನಿಮಾ ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
'ಕ್ಯಾಪ್ಟನ್ ಮಿಲ್ಲರ್'
'ಕ್ಯಾಪ್ಟನ್ ಮಿಲ್ಲರ್' ಸಿನಿಮಾವು 78.2 ಕೋಟಿ ರೂಪಾಯಿಗಳ ಲೈಫ್ ಟೈಮ್ ಕಲೆಕ್ಷನ್ ಮಾಡಿತ್ತು. ನೀವು ಧನುಷ್ ಅವರ ಈ ಸಿನಿಮಾವನ್ನು ನೋಡಲು ಬಯಸಿದರೆ, ಪ್ರೈಮ್ ವಿಡಿಯೋದಲ್ಲಿ ನೋಡಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

