MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಸಿನಿಮಾಗಳಿಗಿಂತ ಪ್ರೇಮ ಪ್ರಕರಣಗಳಿಗೇ ಫೇಮಸ್‌ ಸುಶ್ಮಿತಾ ಸೇನ್ ಅವರ ಲೈಫ್‌

ಸಿನಿಮಾಗಳಿಗಿಂತ ಪ್ರೇಮ ಪ್ರಕರಣಗಳಿಗೇ ಫೇಮಸ್‌ ಸುಶ್ಮಿತಾ ಸೇನ್ ಅವರ ಲೈಫ್‌

ಸುಶ್ಮಿತಾ ಸೇನ್ (Sushmita Sen) ಅವರು ಇಂದು ಅಂದರೆ ನವೆಂಬರ್ 19 ರಂದು 47ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 1975ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದ ಸುಶ್ಮಿತಾ 1994 ರಲ್ಲಿ ವಿಶ್ವ ಸುಂದರಿ ಪಟ್ಟ ಗೆದ್ದರು. ಮಿಸ್ ಯೂನಿವರ್ಸ್ ಕೀರಿಟ ಗೆದ್ದ ನಂತರ ಸುಶ್ಮಿತಾ ಅವರು ಚಲನಚಿತ್ರಗಳಿಗೆ ಆಫರ್‌ಗಳನ್ನು ಪಡೆಯಲು ಪ್ರಾರಂಭಿಸಿದರು. 1996ರಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ ಅವರ  ಚಿತ್ರದ ದಸ್ತಕ್ ಸೂಪರ್ ಫ್ಲಾಪ್ ಆಗಿತ್ತು. ಇದರ ನಂತರ, ಅವರು ದಕ್ಷಿಣದ ಜೊತೆಗೆ ಕೆಲವು ಹಿಂದಿ ಚಿತ್ರಗಳಲ್ಲಿ ಕೆಲಸ ಮಾಡಿದರು, ಆದರೆ ಅವೆಲ್ಲವೂ ಫ್ಲಾಪ್ ಆದವು. 1999ರಲ್ಲಿ ಬಂದ ಅವರ ಬಿವಿ ನಂಬರ್ ಒನ್ ಬಾಕ್ಸ್ ಆಫೀಸ್ ಹಿಟ್ ಆದರೂ ಸುಶ್ಮಿತಾಗೆ ಹೆಚ್ಚಿನ ಲಾಭ ಆಗಲಿಲ್ಲ. ಅವರ 26 ವರ್ಷಗಳ ವೃತ್ತಿ ಜೀವನದಲ್ಲಿ ಅವರು ಸುಮಾರು 27 ಚಿತ್ರಗಳಲ್ಲಿ ನಟಿಸಿದ್ದಾರೆ, ಅವುಗಳಲ್ಲಿ ಹೆಚ್ಚಿನವು ಫ್ಲಾಪ್.  

2 Min read
Author : Suvarna News
Published : Nov 19 2022, 05:04 PM IST
Share this Photo Gallery
  • FB
  • TW
  • Linkdin
  • Whatsapp
18

ವೃತ್ತಿಜೀವನದ ಆರಂಭದಲ್ಲಿ, ಸುಶ್ಮಿತಾ ಸೇನ್ ಕೆಲಸ ಮಾಡಿದ ಕೆಲವು ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೂಪರ್‌ಫ್ಲಾಪ್ ಎಂದು ಸಾಬೀತಾಯಿತು. ಈ ಚಿತ್ರಗಳಲ್ಲಿ ಅವರು ಅಜಯ್ ದೇವಗನ್ ಮತ್ತು ಸನ್ನಿ ಡಿಯೋಲ್ ಅವರಂತಹ ಉದ್ಯಮದ ಸೂಪರ್‌ಸ್ಟಾರ್‌ಗಳೊಂದಿಗೆ ಪರದೆಯನ್ನು ಹಂಚಿಕೊಂಡರು,  ಅದರ ನಂತರವೂ ಅವರ ವೃತ್ತಿ ಜೀವನದ ಗ್ರಾಫ್‌ನಲ್ಲಿ ಏರಲಿಲ್ಲ. 

28

ಸುಶ್ಮಿತಾ ಸೇನ್ ಅವರ ಮೊದಲ ಚಿತ್ರ ದಸ್ತಕ್ ಬಾಕ್ಸ್ ಆಫೀಸ್‌ನಲ್ಲಿ ವಿಫಲವಾಗಿದೆ. 1996ರಲ್ಲಿ ಈ ಚಿತ್ರ ಕೇವಲ 3.01 ಕೋಟಿ ಗಳಿಸಿತ್ತು. ಇದರ ನಂತರ, ಸನ್ನಿ ಡಿಯೋಲ್ ಜೊತೆಗಿನ ಜೋರ್ ಭಿ ಚಿತ್ರವೂ ಯಶಸ್ಸು ಗಳಿಸಲು ಸಾಧ್ಯವಾಗಲಿಲ್ಲ. ಚಿತ್ರ 10.56 ಕೋಟಿ ವ್ಯವಹಾರ ಮಾಡಿದೆ.

38

ಸುಶ್ಮಿತಾ ಸೇನ್ ಅವರ ಮೊದಲ ಹಿಟ್ ಚಿತ್ರ 1999 ರಲ್ಲಿ ಬಿವಿ ನಂಬರ್ ಒನ್ ಆಗಿತ್ತು. ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಕರಿಷ್ಮಾ ಕಪೂರ್ ಅವರೊಂದಿಗೆ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಸಖತ್‌ ಸದ್ದು ಮಾಡಿತ್ತು ಮತ್ತು ಸುಮಾರು 25.58 ಕೋಟಿ ರೂ. ವ್ಯವಹಾರವನ್ನು ಮಾಡಿದೆ.

48

ಇದಾದ ನಂತರ ಅವರ ಅಗಾಜ್‌, ಕ್ಯೂಕಿ ಮೇ ಜೂಟ್‌ ನಹೀ ಬೋಲ್ತಾ, ತುಮ್ಕೋ ನಾ ಭೂಲ್ ಪಾಯೇಂಗೆ ಮತ್ತು ಫಿಲ್‌ಹಾಲ್‌ ನಾಲ್ಕು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಫ್ಲಾಪ್ ಎಂದು ಸಾಬೀತಾಯಿತು. ಈ ಪೈಕಿ ತುಮ್ಕೋ ನಾ ಭೂಲ್ ಪಯೇಂಗೆ 10.53 ಕೋಟಿ ಗಳಿಸಿದ್ದು, ಉಳಿದ ಚಿತ್ರಗಳ ಗಳಿಕೆ  ಕೇವಲ 8 ಕೋಟಿಗೆ ಸೀಮಿತವಾಗಿದೆ.

58

2004 ರಲ್ಲಿ ಶಾರುಖ್ ಖಾನ್ ಜೊತೆ ನಟಿಸಿದ ಮೈ ಹೂ ನಾ ಗಲ್ಲಾಪೆಟ್ಟಿಗೆಯಲ್ಲಿ ಸಖತ್‌ ಸೌಂಡ್‌ ಮಾಡಿತ್ತು. ಚಿತ್ರ ಸುಮಾರು 36.20 ಕೋಟಿ ವ್ಯವಹಾರ ಮಾಡಿದೆ. ಆದರೆ ಶಾರುಖ್‌ನಿಂದಾಗಿ ಈ ಚಿತ್ರ ಬ್ಲಾಕ್‌ಬಸ್ಟರ್ ಎಂದು ಸಾಬೀತಾಯಿತು.

68

2005 ಮತ್ತು 2011 ರ ನಡುವೆ, ಸುಶ್ಮಿತಾ ಸೇನ್ ಸುಮಾರು 12 ಚಿತ್ರಗಳಲ್ಲಿ ನಟಿಸಿದ್ದಾರೆ, ಅವುಗಳಲ್ಲಿ ಕೆಲವು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ಯಾವುದೂ ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ. ಸಲ್ಮಾನ್ ಖಾನ್ ಜೊತೆಗಿನ ಮೈನೆ ಪ್ಯಾರ್ ಕ್ಯೂನ್ ಕಿಯಾ ಚಿತ್ರವು ಸೆಮಿ ಹಿಟ್ ಎಂದು ಕರೆಯಬಹುದು, ಇದು ಸುಮಾರು 26 ಕೋಟಿ ರೂಪಾಯಿಗಳನ್ನು ಗಳಿಸಿತು.

78

2011ರಿಂದ ಸುಶ್ಮಿತಾ ಸೇನ್ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡಿರಲಿಲ್ಲ. 10 ವರ್ಷಗಳ ನಂತರ, ಅವರು ಮತ್ತೆ ನಟನಾ ಜಗತ್ತಿಗೆ ಪ್ರವೇಶಿಸಿದ್ದರು. ಈ ಬಾರಿ ಆರ್ಯ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡರು. 2020ರಲ್ಲಿ ಬಂದ ಅವರ ವೆಬ್ ಸರಣಿ ಉತ್ತಮ ಪ್ರತಿಕ್ರಿಯೆಯನ್ನು ಪಡೆಯಿತು. ಈ ಸರಣಿಯ ಎರಡನೇ ಭಾಗವು 2021 ರಲ್ಲಿ ಬಂದಿತು.
 

88

ಪ್ರಸ್ತುತ ಸುಶ್ಮಿತಾ ಸೇನ್ ಅವರಿಗೆ ಯಾವುದೇ ಚಲನಚಿತ್ರ ಆಫರ್ಸ್ ಇಲ್ಲ. ಸುಶ್ಮಿತಾ ಯಾವಾಗಲೂ ತನ್ನ ಚಿತ್ರಗಳಿಗಿಂತ ಹೆಚ್ಚಾಗಿ ತನ್ನ ಪ್ರೇಮ ಪ್ರಕರಣಗಳ ಕಾರಣದಿಂದ ಮುಖ್ಯಾಂಶಗಳಲ್ಲಿರುತ್ತಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಬಾಲಿವುಡ್

Latest Videos
Recommended Stories
Recommended image1
ತೆರೆ ಮೇಲೆ ಮುದ್ದಾದ ಸಂಸಾರ, ರಿಯಲ್‌ ಆಗಿ ಮದುವೆಗೂ ಮುನ್ನವೇ ಸಹಜೀವನ: ಲಿವ್‌ ಇನ್‌ನಲ್ಲಿದ್ದ ಸೆಲೆಬ್ರಿಟಿಗಳು
Recommended image2
ದಿ ಕೇರಳ ಸ್ಟೋರಿ 2 ಬಿಡುಗಡೆಗೆ ಕೇರಳ ಹೈಕೋರ್ಟ್ ತಡೆ
Recommended image3
ಬೇರೆಯವರ ಪತಿಯ ಮೇಲೆ ಬಿತ್ತು ಈ ಸ್ಟಾರ್​ ನಟಿಯರ ಕಣ್ಣು: ಟಾಪ್​ ಲಿಸ್ಟ್​ನಲ್ಲಿ ಯಾರಿದ್ದಾರೆ ನೋಡಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved