Asianet Suvarna News Asianet Suvarna News

ಸುಶ್ಮಿತಾ ಸೇನ್‌ ಜೊತೆ Randeep Hooda ಬ್ರೇಕಪ್; 3 ವರ್ಷದ ಹಿಂಸೆಗಿಂತ ಬಿಟ್ಟು ಹೋಗುವುದೇ ಬೆಸ್ಟ್‌

ಸುಶ್ಮಿಕಾ ಸೇನ್‌ ಜೊತೆ 3 ವರ್ಷ ರಿಲೇಷನ್‌ಶಿಪ್‌ನಲ್ಲಿದ್ದ ರಣದೀಪ್ ಹೂಡಾ. ಬ್ರೇಕಪ್ ಮಾಡಿಕೊಂಡಿದೇ ಬೆಸ್ಟ್‌ ನಿರ್ಧಾರ.... 

Randeep Hooda opens up about breakup with Sushmita Sen vcs
Author
First Published Sep 16, 2022, 11:32 AM IST

ಕಡಿಮೆ ಹಿಂದಿ ಸಿನಿಮಾಗಳಲ್ಲಿ ಅಭಿನಯಿಸಿದ್ದರೂ ಪ್ರಭಾವಿ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟ ರಣದೀಪ್ ಹೂಡಾ ಮತ್ತ ವಿಶ್ವ ಸುಂದರಿ ಸುಶ್ಮಿತಾ ಸೇನ್‌ ಮೂರು ವರ್ಷಗಳ ಕಾಲ ಡೇಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಸೀಕ್ರೆಟ್ ಆಗಿ ಲವ್ ಮಾಡಿಕೊಂಡು ಕ್ಯಾಮೆರಾದಿಂದ ಓಡಿ ಹೋಗುವುದು ಬೇಡ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ವಿಚಾರವನ್ನು ಅಧಿಕೃತ ಮಾಡಿದ್ದರು. ಇದಾದ 3 ವರ್ಷಕ್ಕೆ ಬ್ರೇಕಪ್ ಎಂದು ರಣದೀಪ್ ಹೂಡಾ ಅನೌನ್ಸ್‌ ಮಾಡಿದ್ದು ನೆಟ್ಟಿಗರಿಗೆ ಬಿಗ್ ಶಾಕ್.

ಕಳೆದ ವರ್ಷ ಖಾಸಗಿ ಸಂದರ್ಶನವೊಂದರಲ್ಲಿ ರಣದೀಪ್ ಹೂಡಾ ಲವ್- ರಿಲೇಷನ್‌ಶಿಪ್‌ ಬಗ್ಗೆ ಮಾತನಾಡಿದ್ದಾರೆ. 'ವಿಶ್ವ ಸುಂದರಿ ಜೊತೆ ನಾನು ರಿಲೇಷನ್‌ಶಿಪ್‌ನಲ್ಲಿ ಇಲ್ಲ. ಯಾವ ರೀತಿಯಲ್ಲೂ ಅವರೊಟ್ಟಿಗೆ ಜೀವನ ಮಾಡಬೇಕು ಬದುಕು ಕಟ್ಟಿಕೊಳ್ಳಬೇಕು ಅನಿಸಲಿಲ್ಲ. ಒಂದು ಥಿಯೇಟರ್‌ ರಿಹರ್ಸಲ್‌ ಮಿಸ್ ಮಾಡಿದೆ ಅದಕ್ಕೆ ಸುಶ್ಮಿತಾ ಸೇನ್ ಕಾರಣ. ಆ ಒಂದು ರಿಹರ್ಸಲ್‌ನಿಂದ ನನ್ನ ಜೀವನವೇ ಉಲ್ಟಾ ಆಯ್ತು..ಇಲ್ಲದಿದ್ದರೆ ಒಳ್ಳೆಯ ಸ್ಥಾನದಲ್ಲಿರುತ್ತಿದ್ದೆ' ಎಂದು ರಣದೀಪ್ ಹೂಡಾ ಹೇಳಿದ್ದರು.

Randeep Hooda opens up about breakup with Sushmita Sen vcs

'ಸುಶ್ಮಿತಾ ಸೇನ್ ಜೊತೆ ರಿಲೇಷನ್‌ಶಿಪ್‌ ಇದ್ದ ಕಾರಣ ನನಗೆ ಹಲವು ಸಿನಿಮಾ ಆಫರ್‌ಗಳು ಬಂತು ಆದರೆ ಎಲ್ಲವೂ ಸೈಡ್‌ ಲೈನ್‌ ಮಾಡುವುದು...ಸ್ಟಾರ್‌ಗಳ ಪಕ್ಕ ಇರುವುದು. ಹೀಗಾಗಿ ಬ್ರೇಕಪ್ ಆಗಿದ್ದೇ ನನ್ನ ಜೀವನದ ಬೆಸ್ಟ್‌ ನಿರ್ಧಾರ ಎನ್ನಬಹುದು. ಈ ಬ್ರೇಕಪ್‌ನಿಂದ ಹೊರ ಬರಲು ನಾನು ತುಂಬಾನೇ ಸಮಯ ತೆಗೆದುಕೊಂಡೆ. ನನ್ನ ಮೈಂಡ್‌ನ ಚೆನ್ನಾಗಿ ಟ್ರೈನ್ ಮಾಡಿರುವೆ ಏನೇ ಇದ್ದರೂ ನನಗೆ ನಾನೇ ದಾರಿ ಮಾಡಿಕೊಳ್ಳಬೇಕು ಸಾಧನೆ ಮಾಡಬೇಕು' ಎಂದು ರಣದೀಪ್ ಹೂಡಾ ಮಾತನಾಡಿದ್ದಾರೆ.

ಲಲಿತ್ ಮೋದಿ - ಸುಶ್ಮಿತಾ ಸೇನ್ ನಡುವೆ ಬ್ರೇಕಪ್? ಮಾಜಿ ವಿಶ್ವ ಸುಂದರಿ ಹೆಸರು, ಫೋಟೋ ತೆಗೆದಾಕಿದ IPL ಸಂಸ್ಥಾಪಕ

ರಣದೀಪ್ ಹೂಡಾ ತುಂಬಾ ಖುಷಿಯಿಂದ ಇಬ್ಬರೂ ಪರಸ್ಪರ ಮಾತನಾಡಿ ಒಪ್ಪಿಕೊಂಡು ಬ್ರೇಕಪ್ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ. 'ನಮ್ಮ ರಿಲೇಷನ್‌ಶಿಪ್‌ನಲ್ಲಿ ತುಂಬಾ ವಿಚಾರಗಳಲ್ಲಿ ತಪ್ಪಿದ್ದವು. ಕೆಲವೊಂದು ಹಂತ ತಲುಪಿದ ಮೇಲೆ ಸಂಬಂಧ ಹೇಗೆ ಮುಂದುವರೆಸಬೇಕು ಅನ್ನೋದು ತಿಳಿಯುವುದಿಲ್ಲ. ಮದುವೆ ಆಗಿದ್ದರೆ ಅಥವಾ ಸೀರಿಯಸ್‌ ಕಮಿಟ್ಮೆಂಟ್‌ನಲ್ಲಿದ್ದರೆ ಮಾತ್ರ ಕಾಂಪ್ರಮೈಸ್ ಆಗಬೇಕು. ಆರಂಭದಿಂದಲ್ಲೇ ಎಲ್ಲರೂ ಸಪರೇಟ್ ಆಗಿ ಜೀವನ ನಡೆಸಬೇಕು. ಹೀಗೆ ಮೂರು ವರ್ಷ ನಾವು ಸಂಬಂಧದಲ್ಲಿದ್ದು. ಹೀಗಾಗಿ ನಾನು ಸುಶ್ಮಿತಾ ಸೇನ್ ಬಗ್ಗೆ ಪದೇ ಪದೇ ಮಾತನಾಡುವುದಿಲ್ಲ' ಎಂದಿದ್ದರು ರಣದೀಪ್ ಹೂಡಾ.

10 ಬಾಯ್‌ಫ್ರೆಂಡ್ಸ್ ಜೊತೆ ಡೇಟಿಂಗ್!

ಕೇವಲ ಸಿನಿಮಾ ಇಂಡಸ್ಟ್ರಿಯವರು ಮಾತ್ರವಲ್ಲ ಉದ್ಯಮಿಗಳು ಸುಶ್ಮಿತಾ ಸೌಂದರ್ಯಕ್ಕೆ ಮನಸೋತು ಅವ್ರ ಹಿಂದೆ ಬಿದ್ದಿದ್ರು. ಅದ್ರಲ್ಲಿ ಮೊದಲಿಗರು ಬಂಟಿ ಸಚ್ದೇವ್ ಇವ್ರ ಮಧ್ಯೆ ಲವ್ವಿ ಡವ್ವಿ ಜೋರಾಗಿಯೇ ಇತ್ತು ಆದ್ರೆ ಅದು ಹೆಚ್ಚು ದಿನಗಳ ಕಾಲ ಉಳಿಯಲಿಲ್ಲ. 2015ರಲ್ಲಿ ಮುಂಬೈ ಮೂಲದ ರಿತಿಕ್ ಭಾಸಿನ್ ಜತೆಗೂ ಸುಶ್ಮಿತಾ ಸೇನ್ ವರ್ಷಗಳ ಕಾಲ ಸುತ್ತಾಡಿದ್ರು ನಂತ್ರ ಅವ್ರಿಗೂ ಗುಡ್ ಬಾಯ್ ಹೇಳಿದ್ರು.ಇನ್ನು ಪಾಕಿಸ್ತಾನದ ಕ್ರಿಕೆಟರ್ ವಾಸಿಮ್ ಅಕ್ರಮ್ ಜೊತೆಯೂ ತಿಂಗಳುಗಳ ಕಾಲ ಸುಶ್ಮಿತಾ ಕಾಣಿಸಿಕೊಂಡ್ರು..ಆದ್ರೆ ಇವ್ರ ಸಂಬಂಧ ಬಹುಬೇಗ ಹದಗೆಟ್ಟಿತು ಅದಕ್ಕೆ ಕಾರಣ ಪ್ರಸೆಂಟ್ ಸುಶ್ಮಿತಾ ಅವ್ರ ಗೆಳೆಯ ಲಲಿತ್ ಮೋದಿ.ಹಾಟ್ ಮೇಲ್ ಸಂಸ್ಥಾಪಕ ಸಬೀರ್ ಭಾಟಿಯಾ ಕೂಡ ಸುಶ್ಮಿತಾ ಮೋಡಿಗೆ ಮರುಳಾಗಿದ್ರು. ಸುಶ್ಮಿತಾಗೆ 10.5 ಕ್ಯಾರಟ್ನ ಡೈಮಂಡ್ ನೀಡಿ ಪ್ರೀತಿ ನಿವೇದನೆ ಮಾಡಿದ್ರಂತೆ. ಆದ್ರೆ ಈ ಸಂಬಂಧಕ್ಕೂ ಎಳ್ಳು-ನೀರು ಬಿಟ್ರು ಸುಶ್ಮಿತಾ. 

ಸುಶ್ಮಿತಾ ಸೇನ್ ವಿಡಿಯೋಗೆ ಲಲಿತ್ ಮೋದಿ 'ಹಾಟ್' ಕಾಮೆಂಟ್; ವೈರಲ್ ಪೋಸ್ಟ್

ಸುಶ್ಮಿತಾ ಸೇನ್ ಗೆ ತನಗಿಂತ ಚಿಕ್ಕವರ ಜೊತೆ ಡೇಟ್ ಮಾಡಿ ಅಭ್ಯಾಸ ಆಗಿ ಹೋಗಿದೆ...ತನಗೆ 36 ವರ್ಷವಿದ್ದಾಗ , 22 ವರ್ಷದ ಉದ್ಯಮಿ ಇಮ್ತಿಯಾಜ್ ಖತ್ರಿ ಜತೆ ಸಂಬಂಧ ಇಟ್ಟುಕೊಂಡಿದ್ದರು, ಇತ್ತೀಚಿಗೆ ಬ್ರೇಕ್ ಅಪ್ ಮಾಡಿಕೊಂಡ ರೋಹ್ಮನ್ ಶಾಲ್ ಕೂಡ ಸುಶ್ಮಿತಾ ಅವ್ರಿಗಿಂತ  15 ವರ್ಷ ಚಿಕ್ಕವನಾಗಿದ್ರು. ನಿರ್ದೇಶಕ ಮುದಸ್ಸರ್ ಅಜಿಜ್ ಕೂಡ ಸುಶ್ಮಿತಾ ಬಾಯ್ ಫ್ರೆಂಡ್ ಗಳಲ್ಲೊಬ್ಬರು ಇವ್ರ ಜೊತೆಯೂ ಸುಶ್ಮಿತಾ ಲವ್ ಅಫೇರ್ ಜೋರಾಗಿತ್ತು..ಆದ್ರೆ ಮುದಸ್ಸಾರ್ ಪಾಲಕರು ಈ ವಿಚಾರದಿಂದ ಕಂಗೆಟ್ಟ ಕಾರಣ ಮುದಸ್ಸಾರ್ ಅವ್ರೇ ಸುಶ್ಮಿತಾ ಗೆ ಕೈಕೊಟ್ರು.

ಸುಶ್ಮಿತಾ ಡೇಟ್ ಮಾಡ್ತಿರೋ ಲಲಿತ್ ಮೋದಿ ಸಾವಿರರು ಕೋಟಿ ಒಡೆಯ..4.555ಕೋಟಿ ಆಸ್ತಿಯ ಮಾಲೀಕರಾಗಿದ್ದಾರೆ ಲಲಿತ್ ಮೋದಿ..ಐಪಿಎಲ್ ಎಂಬ ಕಲ್ಪನೆ ಹುಟ್ಟುಹಾಕಿದ್ದೆ ಲಲಿತ್ ಮೋದಿ..4.555ಕೋಟಿ ಆಸ್ತಿ ಜೊತೆಗೆ ಲಂಡನ್‌ನ ಐಕಾನಿಕ್ 117, ಸ್ಲೋನ್ ಸ್ಟ್ರೀಟ್‌ನಲ್ಲಿ ಐದು ಅಂತಸ್ತಿನ ಮಹಲು ಹೊಂದಿದ್ದಾರೆ, ಇದು 7000 ಚದರ ಅಡಿಗಳಷ್ಟು ವಿಸ್ತೀರ್ಣದಲ್ಲಿದೆ. ಸುಶ್ಮಿತಾ ನಟಿಯಾಗಿ ಸಿನಿಮಾರಂಗದಿಂದ ದೂರ ಉಳಿದಿದ್ದರೂ ಕೂಡ ಅನೇಕ ಬ್ರ್ಯಾಂಡ್ ಗಳಿಗೆ ರಾಯಭಾರಿ ಆಗಿದ್ದಾರೆ.ಸಾಕಷ್ಟು ಉದ್ಯಮದಲ್ಲಿ ಹೂಡಿಕೆ ಮಾಡಿದ್ದು ತಿಂಗಳಿಗೆ 60 ಲಕ್ಷ ಬರುವಂತೆ ಮಾಡಿಕೊಂಡಿದ್ದಾರೆ. ಮಾಹಿತಿ ಪ್ರಕಾರ ವರ್ಷಕ್ಕೆ 9 ಕೋಟಿ ಗಳಿಸುತ್ತಾರಂತೆ ಸುಶ್ಮಿತಾ.

Follow Us:
Download App:
  • android
  • ios