Suhana Khan ಬರ್ತ್‌ಡೇ ಫೋಟೋ ವೈರಲ್ ; ಶಾರ್ಟ್ ಡ್ರೆಸ್‌ನಲ್ಲಿ ಮಿಂಚಿದ ಶಾರುಖ್ ಪುತ್ರಿ
ಸುಹಾನಾ ಖಾನ್ (Suhana khan) ಬಾಲಿವುಡ್‌ಗೆ ಕಾಲಿಡಲಿದ್ದಾರೆ. ಅವರ ಮುಂಬರುವ ಚಿತ್ರದ ಪೋಸ್ಟರ್‌ಗಳು ಕೂಡ ಕಾಣಿಸಿಕೊಂಡಿವೆ. ತನ್ನ ಚೊಚ್ಚಲ ಪ್ರವೇಶಕ್ಕೂ ಮುಂಚೆಯೇ, ಸುಹಾನಾ ತನ್ನ ಮನಮೋಹಕ ಲುಕ್‌ಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಶಾರುಖ್ ಖಾನ್ (Shah rukh khan) ಪುತ್ರಿ ಸುಹಾನಾ ಖಾನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಮಯದ ಫೋಟೋಗಳು ಸಖತ್ ವೈರಲ್ ಆಗಿವೆ
ಮೇ 22 ರಂದು ಸುಹಾನಾ ಖಾನ್ ತಮ್ಮ 22ನೇ ವರ್ಷ ಕಾಲಿಟ್ಟಿದ್ದಾರೆ .ಅವರು ತಮ್ಮ ಹುಟ್ಟುಹಬ್ಬದ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳು ಸಖತ್ ವೈರಲ್ ಆಗಿವೆ.
ಸುಹಾನಾ ಖಾನ್ ಇನ್ಸ್ಟಾಗ್ರಾಮ್‌ನಲ್ಲಿ (Instagram) ಶೇರ್ ಮಾಡಿರುವ ಹುಟ್ಟುಹಬ್ಬದ (Birthday) ಫೋಟೋಗಳನ್ನು ನೋಡಿದ ಅವರ ಅಭಿಮಾನಿಗಳು ಹಾಗೂ ಬಾಲಿವುಡ್ ಸೆಲೆಬ್ರಿಟಿಗಳು (Bollywood Celebrities) ಪ್ರೀತಿಯ ಮಳೆ ಸುರಿಸುತ್ತಿದ್ದಾರೆ.
ಸುಹಾನಾ ಖಾನ್ ಹಂಚಿಕೊಂಡ ಫೋಟೋಗಳನ್ನು ನೋಡಿದರೆ, ಅವರ ವಿಶೇಷ ದಿನವನ್ನು ಎಷ್ಟು ವಿಶೇಷವಾಗಿ ಆಚರಿಸಲಾಗಿದೆ ಎಂದು ತಿಳಿಯುತ್ತದೆ. ಸುಹಾನಾ ಖಾನ್ ತನ್ನ ಹುಟ್ಟುಹಬ್ಬದಂದು ಹಳದಿ ಬಣ್ಣದ ಸಿಂಗಲ್ ಶೋಲ್ಡರ್ ಡ್ರೆಸ್ ಧರಿಸಿದ್ದರು
ಕೂದಲು ಮತ್ತು ಲೈಟ್ ಮೇಕಪ್ ನಲ್ಲಿ ಸುಹಾನ್ ಖಾನ್ ಮನಮೋಹಕವಾಗಿ ಕಾಣುತ್ತಿದ್ದರು. ಅವರು ಈ ಫೋಟೋದಲ್ಲಿ ಅಗಸ್ತಾ ನಂದಾ ಜೊತೆ ನಗುತ್ತಾ ಪೋಸ್ ನೀಡಿದ್ದಾರೆ.
ಅದೇ ಸಮಯದಲ್ಲಿ, ಈ ಫೋಟೋದಲ್ಲಿ, ಸುಹಾನಾ ಖಾನ್ ಅವರ ಸಹ-ನಟರಾದ ಖುಷಿ ಕಪೂರ್ (Kushi Kapoor) ಮತ್ತು ಯುವರಾಜ್ ಮೆಂಡಾ ಅವರೊಂದಿಗೆ ಪೋಸ್ ನೀಡುತ್ತಿದ್ದಾರೆ. ಇವರು ಆರ್ಚಿ ಚಿತ್ರದಲ್ಲಿ ಸುಹಾನಾ ಖಾನ್ ಜೊತೆ ಕಾಣಿಸಿಕೊಳ್ಳಲಿದ್ದಾರೆ.
ಸುಹಾನಾ ಖಾನ್ ಜನ್ಮದಿನದಂದು ಅನೇಕರು ಪುಷ್ಪಗುಚ್ಛವನ್ನು ನೀಡಿರುವುದು ಕಂಡುಬಂದಿದೆ. ಸುಹಾನಾ ಸ್ನೇಹಿತರು ನೀಡಿರುವ ಹೂವಿನ ಬೊಕ್ಕೆಗಳ ಪೋಟೊಗಳನ್ನು ಸಹ ಹಂಚಿಕೊಂಡಿದ್ದಾರೆ.
ಫೋಟೋಗಳ ಕಾಮೆಂಟ್ ವಿಭಾಗದಲ್ಲಿ ಅನನ್ಯಾ ಪಾಂಡೆ (Ananya Pandey) ನನ್ನ ಹೂವುಗಳು ಎಲ್ಲಿ ಎಂದು ಕೇಳಿದ್ದಾರೆ. ಅದಕ್ಕೆ ಸುಹಾನಾ ನಾನು ರಾತ್ರಿ ಅವುಗಳ ಪಕ್ಕದಲ್ಲಿ ಮಲಗುತ್ತೇನೆ ಎಂದು ತಮಾಷೆಯಾಗಿ ಕಾಮೆಂಟ್ ಮಾಡಿದ್ದಾರೆ.
ಜೋಯಾ ಅಖ್ತರ್ ಅವರ ಚಿತ್ರ ದಿ ಆರ್ಚೀಸ್ ಚಿತ್ರದಲ್ಲಿ ಸುಹಾನಾ ಖಾನ್ (Suhana Khan) ಜೊತೆ ಖುಷಿ ಕಪೂರ್ ಮತ್ತು ಅಗಸ್ತ್ಯ ನಂದಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.