- Home
- Entertainment
- Cine World
- ಮುಸಲ್ಮಾನರಾಗಿರೋ ಬಾಲಿವುಡ್’ನ ಈ ಸ್ಟಾರ್ ನಿರ್ದೇಶಕನ ಜೀವನ ಬದಲಾಯಿಸಿದ್ದೇ ಭಗವದ್ಗೀತೆಯಂತೆ!
ಮುಸಲ್ಮಾನರಾಗಿರೋ ಬಾಲಿವುಡ್’ನ ಈ ಸ್ಟಾರ್ ನಿರ್ದೇಶಕನ ಜೀವನ ಬದಲಾಯಿಸಿದ್ದೇ ಭಗವದ್ಗೀತೆಯಂತೆ!
ಬಾಲಿವುಡ್ ನಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದ ನಿರ್ದೇಶಕ ಇಮ್ತಿಯಾಸ್ ಆಲಿ ಮುಸ್ಲಿಂ ಆಗಿದ್ದರೂ ಕೂಡ ಬಾಲ್ಯದಲ್ಲಿಯೇ ಭಗವದ್ಗೀತೆ ಓದೋದಕ್ಕೆ ಆರಂಭಿಸಿದ್ದರಂತೆ. ಅದರಿಂದಲೇ ನನ್ನ ಜೀವನ ಬದಲಾಯ್ತು ಎನ್ನುತ್ತಾರೆ ಈ ಖ್ಯಾತ ನಿರ್ದೇಶಕ.

ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಇಮ್ತಿಯಾಸ್ ಆಲಿ (Imtiaz Ali). ಇವರು ಜಬ್ ವಿ ಮೆಟ್, ರಾಕ್ ಸ್ಟಾರ್, ಲವ್ ಆಜ್ ಕಲ್, ತಮಾಶ, ಹೈವೇ ಸೇರಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಇತ್ತಿಚೆಗೆ ಸಂದರ್ಶನವೊಂದರಲ್ಲಿ ಇಮ್ತಿಯಾಸ್, ತಾವು ಬಾಲ್ಯದಿಂದಲೇ ಭಗವದ್ಗೀತೆ, ಋಗ್ವೇದ ಓದಿರೋದಾಗಿ ತಿಳಿಸಿದ್ದಾರೆ.
ನಿರ್ದೇಶಕ ಇಮ್ತಿಯಾಜ್ ಅಲಿ ಇತ್ತೀಚಿನ ಸಂದರ್ಶನವೊಂದರಲ್ಲಿ ತಾವು ಚಿಕ್ಕ ವಯಸ್ಸಿನಲ್ಲಿಯೇ ಋಗ್ವೇದ ಮತ್ತು ಭಗವದ್ಗೀತೆಯನ್ನು (Bhagad Gita) ಓದಿದ್ದು, ಅದರಿಂದ ಆಳವಾಗಿ ಪ್ರಭಾವಿತರಾಗಿರೋದಾಗಿ ತಿಳಿಸಿದ್ದಾರೆ.. ರಣವೀರ್ ಅಲ್ಲಾಬಾಡಿಯಾ ಅವರೊಂದಿಗೆ ಮಾತನಾಡುತ್ತಾ, ನಿರ್ದೇಶಕರು ಈ ಪವಿತ್ರ ಗ್ರಂಥಗಳನ್ನು ಬಾಲ್ಯದಲ್ಲಿ ಓದಲು ಆರಂಭಿಸಿದ್ದು ಯಾಕೆ ಎನ್ನುವ ಬಗ್ಗೆ ಕೂಡ ತಿಳಿಸಿದ್ದಾರೆ.
ಇಮ್ತಿಯಾಜ್ ಬಾಲ್ಯದಲ್ಲೊಮ್ಮೆ ಪುಸ್ತಕವೊಂದನ್ನು ಓದುತ್ತಿದ್ದರಂತೆ, ಆ ಪುಸ್ತಕದಲ್ಲಿ ಸೃಷ್ಟಿಯ ಕುರಿತಾದ ಋಗ್ವೇದದ ಶ್ಲೋಕ ಒಂದಿತ್ತು, ಅದನ್ನ ಓದಿ, ಆ ಶ್ಲೋಕದಿಂದ ತುಂಬಾನೆ ಪ್ರಭಾವಿತರಾಗಿದ್ದರಂತೆ. ಆ ಶ್ಲೋಕವನ್ನು ಓದುತ್ತಿದ್ದಂತೆ ಅದರ ಅರ್ಥ ತಿಳಿಯಿತು. ಇವತ್ತಿಗೂ ಆ ಶ್ಲೋಕವನ್ನು ಮರೆಯೋದಕ್ಕೆ ಸಾಧ್ಯವೇ ಇಲ್ಲ ಎನ್ನುತ್ತಾರೆ ಇಮ್ತಿಯಾಸ್.
ಅಲ್ಲದೇ ಭಗವದ್ಗೀತೆ ನನ್ನ ಜೀವನದಲ್ಲಿ ಒಂದು ಪ್ರಮುಖ ಪುಸ್ತಕವಾಗಿದೆ, ಎನ್ನುವ ಇಮ್ತಿಯಾಸ್ ಇವತ್ತಿಗೂ ನನ್ನ ಮೇಜಿನ ಮೇಲೆ ಸ್ಥಾನ ಪಡೆದ ಪುಸ್ತಕ ಇದಾಗಿದೆ ಎಂದಿದ್ದಾರೆ. ಇಮ್ತಿಯಾಸ್ ಆರನೇ ತರಗತಿಯಲ್ಲಿದ್ದಾಗ ಒಂದು ಬಾರಿ ಅವರು ಒಬ್ಬಂಟಿಯಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರಂತೆ, ಆವಾಗ ಅವರ ಬಳಿ ಹಣದ ಕೊರತೆಯಿತ್ತು.
ವಿಪರ್ಯಾಸವೆಂದರೆ, ರೈಲ್ವೆ ನಿಲ್ದಾಣದಲ್ಲಿ ಇಮ್ತಿಯಾಸ್ ಬಳಿ ಇದ್ದ ದುಡ್ಡಿನಲ್ಲಿ ಖರೀದಿಸಬಹುದಾದ ಏಕೈಕ ಪುಸ್ತಕ ಇದ್ದದ್ದು ಭಗವದ್ಗೀತೆ ಮಾತ್ರ. ಇಮ್ತಿಯಾಸ್ ಅದನ್ನು ಖರೀದಿಸುವಾಗ, ಸುತ್ತಲಿನ ಜನರು ಇವರನ್ನು ವಿಚಿತ್ರವಾಗಿ ನೋಡೋದಕ್ಕೆ ಆರಂಭಿಸಿದರಂತೆ. ಮುಸ್ಲಿಂ ಆಗಿ ಇದನ್ನ ಯಾಕೆ ಖರೀದಿಸಿರಬಹುದು ಎಂದು ಅಚ್ಚರಿಪಟ್ಟಿದ್ದಂತೆ.
ಆ ಸಣ್ಣ ವಯಸ್ಸಿನಲ್ಲೇ ಇಮ್ತಿಯಾಸ್ ಭಗವದ್ಗೀತೆಯನ್ನು ಓದಲು ಪ್ರಾರಂಭಿಸಿದರು. ಅದನ್ನು ಓದುತ್ತಾ ಓದಂತೆ ಅರ್ಥಮಾಡಿಕೊಳ್ಳುವುದು ಎಷ್ಟು ಸುಲಭ ಅನ್ನೋದನ್ನು ತಿಳಿದು ಆಶ್ಚರ್ಯವಾಯಿತು ಎನ್ನುತ್ತಾರೆ ಇಮ್ತಿಯಾಸ್ ಆಲಿ. ಆದರೆ ಕೆಲವೊಂದು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಹತ್ತು ಬಾರಿ ಓದಬೇಕಾಗಿತ್ತಂತೆ. ನಂತರ ಅವರಿಗೆ ಅರ್ಥವಾಗಿತ್ತಂತೆ.
ಇಮ್ತಿಯಾಸ್ ಪ್ರತಿದಿನ ಭಗವದ್ಗೀತೆಯ ಕೆಲವು ಪುಟಗಳನ್ನು ಓದುತ್ತಿದ್ದರು. ಅಂದು ಓದಿದ ಭಗವದ್ಗೀತೆಯ ಸಾಲುಗಳು ಇಂದಿಗೂ ಅವರಲ್ಲಿ ಆಳವಾಗಿ ಬೇರೂರಿದೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ಗೀತೆಯ ಬಗ್ಗೆ ತಿಳಿದುಕೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಇದು ಜನರನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನನಗೆ ಸಹಾಯ ಮಾಡಿದೆ ಎಂದಿದ್ದಾರೆ ಖ್ಯಾತ ನಿರ್ದೇಶಕ (Star Director).
ಭಗವದ್ಗೀತೆ ಮಾತ್ರವಲ್ಲ, ಇತರ ಧಾರ್ಮಿಕ ಗ್ರಂಥಗಳನ್ನು ಸಹ ಓದಿದ್ದಾರೆ ಇಮ್ತಿಯಾಸ್. ಎಲ್ಲಾ ಗ್ರಂಥಗಳು ಸಹ ಆಸಕ್ತಿದಾಯಕವಾಗಿತ್ತು, ಉತ್ತಮ ಮಾಹಿತಿಯನ್ನು ನೀಡುತ್ತೆ ಎಂದಿರುವ ಇಮ್ತಿಯಾಸ್, ನನಗೆ ಇಷ್ಟವಾದದ್ದೇನಾದರೂ ಸಿಕ್ಕರೆ, ನನ್ನ ದಿನ ಸಾರ್ಥಕವಾಗುತ್ತದೆ ಎಂದಿದ್ದಾರೆ. .