- Home
- Entertainment
- Cine World
- ಆಧ್ಯಾತ್ಮಕ್ಕೆ ವಾಲಿದ್ರಾ ರಣಬೀರ್? ರಾಮಾಯಣ ರಿಲೀಸ್‌ಗೂ ಮುನ್ನ ಆಯೋಧ್ಯೆಯಲ್ಲಿ ಭೂಮಿ ಖರೀದಿ
ಆಧ್ಯಾತ್ಮಕ್ಕೆ ವಾಲಿದ್ರಾ ರಣಬೀರ್? ರಾಮಾಯಣ ರಿಲೀಸ್‌ಗೂ ಮುನ್ನ ಆಯೋಧ್ಯೆಯಲ್ಲಿ ಭೂಮಿ ಖರೀದಿ
ಬಾಲಿವುಡ್ ನಟ ರಣಬೀರ್ ಕಪೂರ್ ರಾಮಾಯಾಣ ಸಿನಿಮಾದ ಶ್ರೀರಾಮನ ಪಾತ್ರಕ್ಕಾಗಿ ಹಲವು ತ್ಯಾಗ ಮಾಡಿದ್ದಾರೆ. ಇದೀಗ ರಣಬೀರ್ ಕಪೂರ್ ಆಧ್ಯಾತ್ಮಕ್ಕೆ ವಾಲಿದ್ರಾ? ಆಯೋಧ್ಯೆಯಲ್ಲಿ ಭೂಮಿ ಖರೀದಿ ಕೆಲ ಸೂಚನೆ ನೀಡಿದೆ.

ಆಯೋಧ್ಯೆಯಲ್ಲಿ ಭೂಮಿ ಖರೀದಿ
ರಾಮಾಯಣ ಸಿನಿಮಾ ಭಾರತದ ಸಿನಿ ರಂಗದಲ್ಲೇ ಅತೀ ದೊಡ್ಡ ಸಿನಿಮಾ. ಬಹುನಿರೀಕ್ಷಿತ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರಕ್ಕಾಗಿ ರಣಬೀರ್ ಕಪೂರ್ ಮಾಂಸಾಹಾರ ತ್ಯಜಿಸಿರುವುದಾಗಿ ವರದಿಯಾಗಿತ್ತು. ಪಾತ್ರವನ್ನೇ ಆವರಿಸಿಕೊಂಡಿರುವ ರಣಬೀರ್ ಕಪೂರ್ ಇದೀಗ ಆಧ್ಯಾತ್ಮಕ್ಕೆ ವಾಲಿದ್ರಾ ಅನ್ನೋ ಮಾತುಗಳು ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಆಯೋಧ್ಯೆಯಲ್ಲಿ ಇದೀಗ ಭೂಮಿ ಖರೀದಿಸಿದ್ದಾರೆ.

3.31 ಕೋಟಿ ರೂಪಾಯಿ ನೀಡಿ ಭೂಮಿ ಖರೀದಿ
ಆಯೋಧ್ಯೆಯ ಸರಯು ಬಳಿ ಇರುವ ಅಭಿನಂದನ್ ಲೋಧನ ಡೆವಲಪ್‌ಮೆಂಟ್ ಪ್ರಾಜೆಕ್ಟ್‌ನಿಂದ ಭೂಮಿ ಖರೀದಿಸಿದ್ದಾರೆ. 2,134 ಚದರ ಅಡಿ ಭೂಮಿ ಖರೀದಿಸಿದ್ದಾರೆ. ಇದಕ್ಕಾಗಿ ರಣಬೀರ್ ಕಪೂರ್ ಬರೋಬ್ಬರಿ 3.31 ಕೋಟಿ ರೂಪಾಯಿ ನೀಡಿದ್ದಾರೆ.
ಆಯೋಧ್ಯೆ ನನ್ನ ಆಯ್ಕೆ ಮಾಡಿದೆ
ಭೂಮಿ ಖರೀದಿ ಬಳಿಕ ರಣಬೀರ್ ಮಾತನಾಡಿದ್ದಾರೆ. ಆಯೋಧ್ಯೆ ನನ್ನನ್ನು ಆಯ್ಕೆ ಮಾಡಿದೆ. ಆಯೋಧ್ಯೆಯ ಕರೆಗೆ ನಾನು ಓಗೊಟ್ಟಿದ್ದೇನೆ ಅಷ್ಟೆ. ಆಯೋಧ್ಯೆ ನಮ್ಮ ಸಂಸ್ಕೃತಿಯ ಭಾಗವಾಗಿದೆ. ನಮ್ಮ ಇತಿಹಾಸ, ನಮ್ಮ ಸಂಸ್ಕೃತಿಯ ಭಾಗವಾಗಿರುವ ಆಯೋಧ್ಯೆಯ ಸರಯು ಬಳಿ ಭೂಮಿ ಖರೀದಿ ದೇವರ ಇಚ್ಚೆಯಾಗಿತ್ತು ಎಂದು ನಾನು ಭಾವಿಸುತ್ತೇನೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಸರಯು ನದಿ ಬಳಿ ಇದೆ ಈ ಭೂಮಿ
ಆಯೋಧ್ಯೆಯಲ್ಲಿ ಅಭಿನಂದನ್ ಹೌಸಿಂಗ್ ಸೊಸೈಸಿ ಈ ಭೂಮಿ ಅಭಿವೃದ್ಧಿಪಡಿಸಿ ಮಾರಾಟ ಮಾಡುತ್ತಿದೆ. ಪವಿತ್ರ ಸರಯೂ ನದಿ ಬಳಿ ಈ ಭೂಮಿ ಇದೆ. ಹೀಗಾಗಿ ಹಲವು ಶ್ರೀಮಂತರು, ಉದ್ಯಮಿಗಳು, ಸೆಲೆಬ್ರೆಟಿಗಳು ಇಲ್ಲಿ ಭೂಮಿ ಖರೀದಿಸಿದ್ದಾರೆ. ಇದೀಗ ರಣಬೀರ್ ಕಪೂರ್ ಖರೀದಿಸಿದ್ದಾರೆ.
ಅಮಿತಾಬ್ ಬಚ್ಚನ್ ಬಳಿಕ ಭೂಮಿ ಖರೀದಿಸಿದ ನಟ
ಅಮಿತಾಬ್ ಬಚ್ಚನ್ ಬಳಿಕ ಆಯೋಧ್ಯೆಯಲ್ಲಿ ಭೂಮಿ ಖರೀದಿಸಿದ ಬಾಲಿವುಡ್ ನಟ ಅನ್ನೋ ಹೆಗ್ಗಳಿಕೆಗೆ ರಣಬೀರ್ ಕಪೂರ್ ಪಾತ್ರರಾಗಿದ್ದಾರೆ. ಇದೇ ಅಭಿನಂದನ್ ಹೌಸಿಂಗ್ ಸೊಸೆಯಿಂದ ಅಮಿತಾಬ್ ಬಚ್ಚನ್ ಭೂಮಿ ಖರೀದಿಸಿದ್ದರು. ಅಮಿತಾಬ್ ಬಚ್ಚನ್ 2.36 ಎಕರೆ ಭೂಮಿ ಖರೀದಿಸಿದ್ದಾರೆ. ಇದಕ್ಕಾಗಿ ಬರೋಬ್ಬರಿ 35 ಕೋಟಿ ರೂಪಾಯಿ ನೀಡಿದ್ದಾರೆ.
4,000ಕೋಟಿ ರೂ ಬಜೆಟ್ ಸಿನಿಮಾ ರಾಮಾಯಣ
ರಾಮಾಯಣ ಸಿನಿಮಾ ಬರೋಬ್ಬರಿ 4000 ಕೋಟಿ ರೂಪಾಯಿ ಬಜೆಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ನಿತೀಶ್ ತಿವಾರ್ ನಿರ್ದೇಶನದ ಈ ಸಿನಿಮಾ ಎರಡು ಭಾಗವಾಗಿ ಬಿಡುಗಡೆಯಾಗುತ್ತಿದೆ. ರಣಬೀರ್ ಕಪೂರ್ ಶ್ರೀರಾಮನ ಪಾತ್ರದಲ್ಲಿದ್ದರೆ, ರಾಕಿಂಗ್ ಸ್ಟಾರ್ ಯಶ್ ರಾವಣ ಪಾತ್ರ ಮಾಡುತ್ತಿದ್ದಾರೆ. ಸೀತಾ ಮಾತೆಯಾಗಿ ಸಾಯಿ ಪಲ್ಲವಿ ಕಾಣಿಸಿಕೊಂಡಿದ್ದಾರೆ.
4,000ಕೋಟಿ ರೂ ಬಜೆಟ್ ಸಿನಿಮಾ ರಾಮಾಯಣ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

