Life of Sarika: ದುಡ್ಡಿಗಾಗಿ ನಟಿಸಲು ಹೇಳುತ್ತಿದ್ದರಂತೆ ಕಮಲ್‌ಹಾಸನ್ ಮಾಜಿ ಪತ್ನಿ ಸಾರಿಕಾ ತಾಯಿ!
ಕಮಲ್ ಹಾಸನ್ (Kamal Hassan) ಅವರ ಮಾಜಿ ಪತ್ನಿ ಸಾರಿಕಾ (Sarika) ಅವರಿಗೆ 61 ವರ್ಷ ತುಂಬಿದೆ. ಅವರು 5 ಡಿಸೆಂಬರ್ 1960 ರಂದು ದೆಹಲಿಯಲ್ಲಿ ಜನಿಸಿದ ಸಾರಿಕಾ ಅವರು ಅನೇಕ ಬಾಲಿವುಡ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಉದ್ಯಮದಲ್ಲಿ ವಿಶೇಷ ಹೆಸರು ಗಳಿಸುವಲ್ಲಿ ಯಶಸ್ವಿಯಾಗಲಿಲ್ಲ. ಅವರು ತನ್ನ ವೃತ್ತಿಪರ ಜೀವನಕ್ಕಿಂತ ಹೆಚ್ಚಾಗಿ ತನ್ನ ವೈಯಕ್ತಿಕ ಜೀವನದಲ್ಲಿ ಸುದ್ದಿ ಮಾಡಿದ್ದಾರೆ. ವಿವಾಹಿತ ಕಮಲ್ ಹಾಸನ್ ಜೊತೆಗಿನ ಸಂಬಂಧ ಪ್ರಾರಂಭವಾದಾಗ ಅವರು ಬೆಳಕಿಗೆ ಬಂದರು ಮತ್ತು ಅವರು ಮದುವೆಯಾಗದೆ ತಾಯಿಯಾದರು. ಬಾಲ ಕಲಾವಿದೆಯಾಗಿ ವೃತ್ತಿ ಜೀವನ ಆರಂಭಿಸಿದ ಸಾರಿಕಾ ಬಾಲ ಕಲಾವಿದೆಯಾಗಿ ಸಾಕಷ್ಟು ಯಶಸ್ಸು ಗಳಿಸಿದ್ದರು. ಸಾರಿಕಾಳ ತಾಯಿ ಆಕೆಯನ್ನು ಸಿನಿಮಾದಲ್ಲಿ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು.
ಸಾರಿಕಾ ಅವರ ಪೂರ್ಣ ಹೆಸರು ಸಾರಿಕಾ ಠಾಕೂರ್. ಅವರು ಬಾಲಿವುಡ್ ಇಂಡಸ್ಟ್ರಿಯ ಅತ್ಯಂತ ಯಶಸ್ವಿ ಬಾಲ ಕಲಾವಿದೆ. ಆದರೆ ಅವರು ಉತ್ತಮ ಬಾಲ್ಯ ಹೊಂದಿರಲಿಲ್ಲ. ಪತಿಯಿಂದ ಬೇರ್ಪಟ್ಟ ತಾಯಿ ಹಣಕ್ಕಾಗಿಯೇ ಮಗಳು ಸಾರಿಕಾರನ್ನು ದುಡಿಯುವಂತೆ ಮಾಡುತ್ತಿದ್ದರು.
ಮಾಧ್ಯಮ ವರದಿಗಳ ಪ್ರಕಾರ, ಮಗಳೆಡೆಗೆ ಅವರ ತಾಯಿಯ ನಡವಳಿಕೆಯು ಉತ್ತಮವಾಗಿರಲಿಲ್ಲ. ಒಮ್ಮೆ ಸಾರಿ ತಮ್ಮ ಸಂಬಳದಿಂದ 1500 ರೂಪಾಯಿ ಕೊಟ್ಟು ಪುಸ್ತಕಗಳನ್ನು ಖರೀದಿಸಿದ್ದರು. ಆ ಕಾರಣಕ್ಕೆ ಅವರ ತಾಯಿ ಸಾರಿಕರನ್ನು ಕೆಟ್ಟದಾಗಿ ಹೊಡೆದಿದ್ದರು. ಸಾರಿಕಾ ಜೀವನದಲ್ಲಿ ತನ್ನ ತಂದೆಯ ಸರ್‌ನೇಮ್ ಅಥವಾ ಪತಿ ಕಮಲ್ ಹಾಸನ್ ಅವರ ಹೆಸರು ಸೇರಿಸಲು ಸಾಧ್ಯವಾಗಲಿಲ್ಲ.
5ನೇ ವಯಸ್ಸಿನಲ್ಲಿ, ಸಾರಿಕಾ ಬಾಲ ಕಲಾವಿದೆಯಾಗಿ ಚಲನಚಿತ್ರಗಳಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಆರ್ಥಿಕ ಅಡಚಣೆಯಿಂದಾಗಿ ಸಾರಿಕಾ ಶಾಲೆಗೆ ಹೋಗಲೇ ಇಲ್ಲ. ಏನೆಲ್ಲಾ ದುಡಿದರೂ ಅದನ್ನೆಲ್ಲ ಅವರ ಅಮ್ಮ ಇಟ್ಟುಕೊಳ್ಳುತ್ತಿದ್ದರು ಎಂಬ ಮಾತಿದೆ. ಸಾರಿಕಾ ತನ್ನ ತಾಯಿಯ ನಡವಳಿಕೆಯಿಂದ ತೊಂದರಗಳು ಹೆಚ್ಚಾದಾಗ ಅಂತಿಮವಾಗಿ ಅವರನ್ನು ತೊರೆದಳು ಎಂದು ವರದಿಗಳು ಹೇಳುತ್ತವೆ.
ಅಮ್ಮನಿಂದ ಪ್ರೀತಿ ಕಾಣದ ಸಾರಿಕಾಗೆ ಕಮಲ್ ಹಾಸನ್‌ನಿಂದ ತುಂಬು ಪ್ರೀತಿ ಸಿಗುವ ನಿರೀಕ್ಷೆಯಿತ್ತು. ಆದರೆ, ಇಬ್ಬರ ನಡುವೆ ಏನಾಯಿತೋ, ಏನೋ, ಹೆಚ್ಚು ದಿನ ಸಂಬಂಧ ಮುಂದುವರಿಯಲ್ಲಿ.
ಸಿನಿಮಾದಲ್ಲಿ ಕೆಲಸ ಮಾಡುವಾಗ ಕಮಲ್ ಹಾಸನ್ ಅವರನ್ನು ಭೇಟಿಯಾದರು. ಕ್ರಮೇಣ ಇಬ್ಬರ ನಡುವೆ ಆತ್ಮೀಯತೆ ಹೆಚ್ಚಿತು ನಂತರ ಇಬ್ಬರೂ ಲಿವ್-ಇನ್‌ನಲ್ಲಿ ವಾಸಿಸಲು ಪ್ರಾರಂಭಿಸಿದರು. ಸಾರಿಕಾ ಮತ್ತು ಕಮಲ್ ಹಾಸನ್ ಪರಸ್ಪರ ಹತ್ತಿರವಾದಾಗ ಕಮಲ್ ಮದುವೆಯಾಗಿದ್ದರು.
ಕಮಲ್ ಹಾಸನ್ ಜೊತೆ ರಿಲೆಷನ್‌ಶಿಪ್‌ನಲ್ಲಿದ್ದಾಗ ಸಾರಿಕಾ ಗರ್ಭಿಣಿಯಾದರು ಮತ್ತು 1986 ರಲ್ಲಿ ಮಗಳು ಶ್ರುತಿ ಹಾಸನ್ ಅವರಿಗೆ ಜನ್ಮ ನೀಡಿದರು. ಮಗಳು ಹುಟ್ಟಿದ ಎರಡು ವರ್ಷಗಳ ನಂತರ ಅವರು 1988 ರಲ್ಲಿ ಕಮಲ್ ಹಾಸನ್ ಅವರನ್ನು ವಿವಾಹವಾದರು. ಇದಾದ ನಂತರ ಅವರಿಗೆ ಮತ್ತೊಬ್ಬ ಮಗಳು ಅಕ್ಷರಾ ಜನಿಸಿದಳು.
ಇಬ್ಬರೂ ಒಟ್ಟಿಗೆ 16 ವರ್ಷಗಳನ್ನು ಹಂಚಿಕೊಂಡರು ಮತ್ತು 2004 ರಲ್ಲಿ ಅವರು ಬೇರೆಯಾದರು.ಇತ್ತೀಚೆಗಷ್ಟೇ ಶೃತಿ ಸಂದರ್ಶನವೊಂದರಲ್ಲಿ ತನ್ನ ತಂದೆ-ತಾಯಿಯ ವಿಚ್ಛೇದನದಿಂದ ತುಂಬಾ ಖುಷಿಯಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ. ಏಕೆಂದರೆ ಇಬ್ಬರು ಒಟ್ಟಿಗೆ ಬಾಳಲು ಸಾಧ್ಯವಾಗದಿದ್ದರೆ ಒಟ್ಟಿಗೆ ಬಾಳುವಂತೆ ಒತ್ತಾಯಿಸಬಾರದು ಎಂದು ಅವರು ನಂಬುತ್ತಾರೆ.
ಇಬ್ಬರೂ ಅತ್ಯುತ್ತಮ ಮತ್ತು ಅದ್ಭುತ ವ್ಯಕ್ತಿಗಳು. ಅವರ ಜೊತೆಗಿರುವುದು ಅವರ ಈ ಒಳ್ಳೆಯತನವನ್ನು ನಾಶ ಮಾಡುತ್ತಿತ್ತು. ಇಬ್ಬರೂ ಬೇರ್ಪಟ್ಟಾಗ ನಾನು ತುಂಬಾ ಚಿಕ್ಕವಳಾಗಿದ್ದೆ. ಇದು ತುಂಬಾ ಸುಲಭ ಮತ್ತು ನಾವೆಲ್ಲರೂ ತುಂಬಾ ಸಂತೋಷಪಟ್ಟಿದ್ದೇವೆ. ನಾನು ಅವರಿಬ್ಬರ ಬಗ್ಗೆ ತುಂಬಾ ಉತ್ಸುಕಳಾಗಿದ್ದೆ ಏಕೆಂದರೆ ಈಗ ಅವರು ತಮ್ಮ ಜೀವನವನ್ನು ನಡೆಸಲಿದ್ದಾರೆ ಎಂದು ಶ್ರುತಿ ಹೇಳಿದ್ದರು
70 ಮತ್ತು 80 ರ ದಶಕದಲ್ಲಿ, ಸಾರಿಕಾ ಅನೇಕ ಚಿತ್ರಗಳಲ್ಲಿ ನಟಿಸಿದರು. ಆದರೆ ಕಮಲ್ ಹಾಸನ್ ಅವರನ್ನು ಮದುವೆಯಾದ ನಂತರ ಅವರು ಚಲನಚಿತ್ರಗಳಿಂದ ದೂರವಿದ್ದರು. ಶ್ರೀಮಾನ್ ಶ್ರೀಮತಿ, ಸತ್ತೇ ಪೆ ಸತ್ತಾ, ರಾಜ್ ತಿಲಕ್, ತಹಾನ್, ಮನೋರಮಾ ಸಿಕ್ಸ್ ಫೀಟ್ ಅಂಡರ್, ಭೇಜಾ ಫ್ರೈ ಮತ್ತು ಪರ್ಜಾನಿಯಾ ಮುಂತಾದ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಪರ್ಜಾನಿಯಾ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿಗಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.