ರಶ್ಮಿಕಾ ಜೊತೆ ವಿಜಯ್ ದೇವರಕೊಂಡ ಮದ್ವೆ ಸುದ್ದಿ ಬೆನ್ನಲ್ಲೇ ಮಾಜಿ ಗೆಳತಿ ಜೊತೆಗಿನ ಫೋಟೋ ಲೀಕ್, ಸೋಶಿಯಲ್ ಮೀಡಿಯಾಗಳಲ್ಲಿ ಈ ಫೋಟೋಗಳು ಹರಿದಾಡುತ್ತಿದ್ದು ಭಾರಿ ಕೋಲಾಹಲ ಸೃಷ್ಟಿಸಿದೆ. ಯಾರು ಈ ಮಾಜಿ ಗೆಳತಿ 

ಹೈದರಾಬಾದ್ (ಫೆ.10) ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಅನ್ನೋ ಸುದ್ದಿ ಬಲಗೊಳ್ಳುತ್ತಿದೆ. ಈಗಾಗಲೇ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದೆ ಅನ್ನೋ ಸುದ್ದಿಯೂ ಹರಿದಾಡಿದೆ. ವಿಜಯ್ ದೇವರಕೊಂಡ ಮನೆ, ವಿಜಯ್ ಜೊತೆ ಪ್ರವಾಸದಲ್ಲಲೂ ರಶ್ಮಿಕಾ ಜೊತೆಗಿದ್ದರು ಅನ್ನೋದು ಅಭಿಮಾನಿಗಳು ಪತ್ತೆ ಹಚ್ಚಿದ್ದರು. ಇದೇ ತಿಂಗಳ ಅಂತ್ಯದಲ್ಲಿ ಇವರ ಮದುವೆ ಎಂಬ ಸುದ್ದಿಗಳು ಹರಿದಾಡಿದೆ.ಇದರ ನಡುವೆ ಹಳೇ ಫೋಟೋಸ್ ಲೀಕ್ ಆಗಿದೆ. ಇದು ಕೋಲಾಹಲ ಎಬ್ಬಿಸಿದೆ.

Add Asianetnews Kannada as a Preferred SourcegooglePreferred

ವಿಜಯ್ ದೇವರಕೊಂಡ ಹಳೇ ಫೋಟೋ

ವಿಜಯ್ ದೇವರಕೊಂಡ ಅವರದ್ದು ಎನ್ನಲಾದ ಕಲ ಹಳೇ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ವಿಜಯ್ ದೇವರಕೊಂಡ ಸಿನಿಮಾ ಬದುಕಿನಲ್ಲಿ ಹೆಜ್ಜೆ ಹಾಕುತ್ತಿದ್ದ ದಿನಗಳಲ್ಲಿದ್ದ ಗೆಳತಿ ಜೊತೆಗಿರುವ ಕೆಲ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಲಭ್ಯವಿದೆ. ರೆಡ್ಡಿಟ್ ಸೇರಿದಂತೆ ಹಲವು ತಾಣಗಳಲ್ಲಿರುವ ಈ ಪೋಟೋ ಮದುವೆ ಹತ್ತಿರಬರುತ್ತಿದ್ದಂತೆ ಮತ್ತೆ ವೈರಲ್ ಆಗಿದೆ.

ಈ ಫೋಟೋದಲ್ಲಿರುವ ಗೆಳತಿ ಯಾರು?

ನಟ ವಿಜಯ್ ದೇವರಕೊಂಡ ಅವರದ್ದು ಎಂದು ಹೇಳಲಾಗುತ್ತಿರುವ ಈ ಫೋಟೋದಲ್ಲಿ ನಟನ ಮಾಜಿ ಗೆಳತಿ ಕೂಡ ಇದ್ದಾರೆ. ಕೆಲ ವರದಿಗಳ ಪ್ರಕಾರ ವಿಜಯ್ ದೇವರಕೊಂಡ ಬೆಲ್ಜಿಯಂ ಮೂಲದ ಮಾಡೆಲ್ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿದೆ. ಈ ಮಾಡೆಲ್ ಜೊತೆಗಿನ ಆಪ್ತತೆಯ ಕೆಲ ಫೋಟೋಗಳು ಇದೀಗ ಎಲ್ಲಾ ತಾಣಗಳಲ್ಲಿ ಸದ್ದು ಮಾಡುತ್ತಿದೆ. ವಿಜಯ್ ಹಾಗೂ ಈ ಮಾಡೆಲ್ ಡೇಟಿಂಗ್ ಕೆಲ ವರ್ಷಗಳ ಕಾಲ ನಡೆದಿತ್ತು ಎಂದು ಹೇಳಲಾಗತ್ತಿದೆ. ಕೋವಿಡ್ ಸಂದರ್ಭದಲ್ಲೂ ವಿಜಯ್ ದೇವರಕೊಂಡ ಮಾಡೆಲ್ ಭೇಟಿಯಾಗಲು ಯೂರೋಪ್‌ಗೆ ತೆರಳಿದ್ದರು ಎಂದು ಕೆಲ ಸ್ಥಳೀಯ ಮಾಧ್ಯಮ ವರದಿಗಳು ಹೇಳುತ್ತಿದೆ. ಮಾಡೆಲ್ ಪೋಷಕರು ಹೈದರಾಬಾದ್‌ಗೆ ಆಗಮಿಸಿದ್ದರು. ಆದರೆ ಇವರ ಡೇಟಿಂಗ್ ದಿಢೀರ್ ಯೂ ಟರ್ನ್ ಪಡೆದಿತ್ತು. ರಶ್ಮಿಕಾ ಮಂದಣ್ಣ ಜೊತೆಗಿನ ಸಿನಿಮಾ ಬಳಿಕ ಈ ಬೆಲ್ಜಿಯಂ ಮಾಡೆಲ್ ಜೊತೆಗಿನ ರಿಲೇಶನ್‌ಶಿಪ್ ಬ್ರೇಕ್ ಅಪ್ ಆಗಿತ್ತು ಅನ್ನೋ ಮಾತುಗಳು ಇವೆ. ಆದರೆ ಯಾವುದೇ ಮಾಹಿತಿಗಳು ಅಧಿಕೃತವಲ್ಲ.

2016ರಲ್ಲಿ ವಿಜಯ್ ಜೊತೆ ಅಭಿನಯಿಸಿದ್ದ ಮಾಡೆಲ್

ಈ ಬೆಲ್ಜಿಯಂ ಮಾಡೆಲ್ ಹೆಸರು ವರ್ಜಿನಿಯಾ ಎಂದು ಹೇಳಲಾಗುತ್ತಿದೆ. ಈಕೆ 2016ಲ್ಲಿ ತೆರೆಕಂಡ ವಿಡಯ್ ದೇವರಕೊಂಡ ಅವರ ಪೆಲ್ಲಿ ಚೂಪುಲು ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದ್ದಾರೆ. ಈ ಸಿನಿಮಾ ಬಳಿಕ ವಿಜಯ್ ದೇವರಕೊಂಡ ಹಾಗೂ ಬೆಲ್ಜಿಯಂ ಮಾಡೆಲ್ ಆತ್ಮೀಯರಾಗಿದ್ದರು. ಈ ವೇಳೆಯ ಫೋಟೋಗಳು ಎಂದು ಹೇಳಲಾಗುತ್ತಿದೆ.

ಬೆಸ್ಟ್ ಫ್ರೆಂಡ್ಸ್ ಅಷ್ಟೆ

ವಿಜಯ್ ದೇವರಕೊಂಡ ಹಾಗೂ ಬೆಲ್ಜಿಯಂ ಮಾಡೆಲ್ ಉತ್ತಮ ಸ್ನೇಹಿತರು. ಇವರ ನಡುವೆ ಇತರ ಯಾವದೇ ರಿಲೇಶನ್‌ಶಿಪ್ ಇಲ್ಲ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಆದರೆ ಕೆಲವರು ಈ ಫೋಟೋಗಳು ಬೆಸ್ಟ್ ಫ್ರೆಂಡ್ಸ್ ಫೋಟೋ ರೀತಿ ಎಲ್ಲ ಎಂದು ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.