MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಶಾಹಿದ್‌ ಕಪೂರ್‌ ಹಿಂದೆ ಬಿದ್ದು ಪ್ರಪೋಸ್‌ ಮಾಡಿದ್ದರಂತೆ ಕರೀನಾ!

ಶಾಹಿದ್‌ ಕಪೂರ್‌ ಹಿಂದೆ ಬಿದ್ದು ಪ್ರಪೋಸ್‌ ಮಾಡಿದ್ದರಂತೆ ಕರೀನಾ!

ಶಾಹಿದ್ ಕಪೂರ್ (Shahid Kapoor) ಅವರಿಗೆ 41 ವರ್ಷ. ಫೆಬ್ರವರಿ 25, 1981 ರಂದು ದೆಹಲಿಯಲ್ಲಿ ಜನಿಸಿದ ಶಾಹಿದ್ ಬಾಲಿವುಡ್ ಇಂಡಸ್ಟ್ರಿಯಲ್ಲಿ ನಟನೆಯ ಜೊತೆಗೆ ನೃತ್ಯ, ಲುಕ್‌ ಮತ್ತು ರೊಮ್ಯಾಂಟಿಕ್ ಇಮೇಜ್‌ಗೆ ಹೆಸರುವಾಸಿ. ಅವರು ತಮ್ಮ ಪಾತ್ರ ಮತ್ತು ಲುಕ್‌ನ ಮೇಲೆ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತಾರೆ. ಅನೇಕ ಚಿತ್ರಗಳಲ್ಲಿ ಅವರ ನೋಟವು ವಿಭಿನ್ನವಾಗಿ ಕಂಡುಬಂದಿದೆ. ಅವರು ಮೂರು ವರ್ಷದವನಾಗಿದ್ದಾಗ ಅವರ ಹೆತ್ತವರು ವಿಚ್ಛೇದನ ಪಡೆದರು. ಇದಾದ ನಂತರವೇ ತಂದೆಯೊಂದಿಗೆ ಮುಂಬೈಗೆ ಬಂದಿದ್ದರು. ಶಾಹಿದ್ ಬಾಲಿವುಡ್‌ಗೆ ಹಲವು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ಶಾಹಿದ್ ತನ್ನ ಪ್ರೇಮ ಪ್ರಕರಣದಿಂದಲೂ ಅಷ್ಟೇ ಜನಪ್ರಿಯ. ಶಾಹಿದ್ ಹಲವು ನಟಿಯರೊಂದಿಗೆ ಅಫೇರ್ ಹೊಂದಿದ್ದರು. ಇದರಲ್ಲಿ  ಕರೀನಾ ಕಪೂರ್ (Kareena Kapoor) ಜೊತೆಗಿನ ಅವರ ಸಂಬಂಧದ  ಸಾಕಷ್ಟು ಫೇಮಸ್‌ ಆಗಿತ್ತು.

2 Min read
Author : Suvarna News
Published : Feb 25 2022, 05:26 PM IST
Share this Photo Gallery
  • FB
  • TW
  • Linkdin
  • Whatsapp
19

ವರದಿಗಳನ್ನು ನಂಬುವುದಾದರೆ, ಶಾಹಿದ್ ಕಪೂರ್ ಅಲ್ಲ ಕರೀನಾ ಕಪೂರ್ ಅವರ ಪ್ರೇಮಿಯಾಗಿದ್ದರು. ಸತತ ಎರಡು ತಿಂಗಳು ಕರೀನಾ ಶಾಹಿದ್ ಹಿಂದೆಯೇ ಬಿದ್ದಿದ್ದರು. ಅವರು ಶಾಹಿದ್‌ಗೆ  ನಿರಂತರವಾಗಿ ಮೆಸೇಜ್ ಮಾಡುತ್ತಿದ್ದರು. ನಂತರ ಶಾಹಿದ್ ಅವರ ಪ್ರೀತಿಯ  ಪ್ರಪೋಸಲ್‌ ಒಪ್ಪಿಕೊಂಡರು. ಶಾಹಿದ್ ಕಪೂರ್ ಅವರನ್ನು ಮೊದಲು ಪ್ರಪೋಸ್ ಮಾಡಿದ್ದು ಕರೀನಾ ಕಪೂರ್. 

29

ವರ್ಷಗಳ ಹಿಂದೆ, ಇಬ್ಬರೂ ಕರಣ್ ಜೋಹರ್ ಅವರ ಚಾಟ್ ಶೋನಲ್ಲಿ ಕಾಣಿಸಿಕೊಂಡಿದ್ದರು. 'ನೀವೇ ಮೊದಲು ಪ್ರಾರಂಭಿಸರಬೇಕು, ಶಾಹಿದ್ ಏನನ್ನೂ ಹೇಳಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಕರಣ್ ಕರೀನಾಗೆ
ಕೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಹೌದು, ನಾನೇ ಮೊದಲು ಶುರು ಮಾಡಿದ್ದು  ಮತ್ತು  ಶಾಹಿದ್ ಯಾವತ್ತೂ ಗಮನ ಹರಿಸಿರಲಿಲ್ಲ ಎಂದು  ಕರೀನಾ ಹೇಳಿದ್ದರು.


 

39

'ನಾನು ಎರಡು ತಿಂಗಳು ಶಾಹಿದ್ ಹಿಂದೆ ಇದ್ದೆ. ನಾನು ಶಾಹಿದ್‌ಗೆ ನಿರಂತರವಾಗಿ ಎಸ್‌ಎಂಎಸ್, ಫೋನ್ ಕರೆಗಳನ್ನು ಮಾಡುತ್ತಿದ್ದೆ. ನಾನು ಶಾಹಿದ್‌ನನ್ನು ಭೇಟಿಯಾಗುವಂತೆ ಕೇಳಿದ್ದೆ ಆದರೆ ಶಾಹಿದ್ ನನಗೆ ಹೆಚ್ಚು ಬೆಲೆ ನೀಡಲಿಲ್ಲ' ಎಂದು ಈ ಸಮಯದಲ್ಲಿ ಕರೀನಾ ಕಪೂರ್ ಹೇಳಿದ್ದರು. 

49

ಕರೀನಾ ಮತ್ತು ಶಾಹಿದ್ 2007 ರಲ್ಲಿ ಬೇರ್ಪಟ್ಟಿದ್ದರು. ಅವರ ಪ್ರೇಮಕಥೆಯು 2004 ರಲ್ಲಿ ಫಿದಾ ಚಿತ್ರದ ಸೆಟ್‌ನಲ್ಲಿ ಪ್ರಾರಂಭವಾಯಿತು. ಇವರಿಬ್ಬರು ಮೊದಲ ಬಾರಿಗೆ ಒಟ್ಟಿಗೆ ಕೆಲಸ ಮಾಡಿದ ಚಿತ್ರ ಇದಾಗಿತ್ತು. ಶಾಹಿದ್‌ನನ್ನು ನೋಡಿದ ಕರೀನಾ ತುಂಬಾ ಪ್ರಭಾವಿತಳಾದರು, ಮೊದಲ ನೋಟದಲ್ಲೇ ಅವರು  ಪ್ರೀತಿಸಲು ಪ್ರಾರಂಭಿಸಿದರು. ಇಬ್ಬರೂ ಪರಸ್ಪರ ಗಂಭೀರವಾಗಿಯೇ ಇದ್ದರು. 

59

ಆದರೆ ಇಬ್ಬರೂ ಜಬ್ ವಿ ಮೆಟ್ ಚಿತ್ರದ ಚಿತ್ರೀಕರಣದಲ್ಲಿದ್ದಾಗ, ಕರೀನಾ ಸೈಫ್ ಜೊತೆಗೆ ತಾಶನ್ ಸಹಿ ಹಾಕಿದರು ಮತ್ತು ಅವರ ಪ್ರೀತಿಯಲ್ಲಿ ಟ್ವಿಸ್ಟ್ ಬಂದಿತು. ಕರೀನಾ ಶಾಹಿದ್‌ನನ್ನು ಬಿಟ್ಟು ಸೈಫ್‌ಗೆ ಹತ್ತಿರವಾದರು ಮತ್ತು ಅವರಿಬ್ಬರೂ ಬ್ರೇಕಪ್ ಆಗಿದ್ದರು.

69

ಸಂದರ್ಶನವೊಂದರಲ್ಲಿ ಶಾಹಿದ್ ಕಪೂರ್ ಅವರನ್ನು ಸೈಫ್ ಮತ್ತು ಕರೀನಾ ಒಟ್ಟಿಗೆ ನೋಡುವುದನ್ನು ನೀವು ಕೆಟ್ಟದಾಗಿ ಭಾವಿಸುತ್ತೀರಾ ಎಂದು ಕೇಳಲಾಯಿತು. 'ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದರೆ ಅದು ಸುಳ್ಳಾಗುತ್ತದೆ. ನಾನು ಕೂಡ ಮನುಷ್ಯ. ಇದನ್ನು ನೋಡುವಾಗ ಮತ್ತು ಓದುವಾಗ ನನಗೆ ಯಾವಾಗಲೂ ನೋವಾಗುತ್ತದೆ' ಎಂದು ಶಾಹಿದ್ ಹೇಳಿದ್ದರು.

79

ಶಾಹಿದ್ ಕಪೂರ್ ಇಂದು ಬಾಲಿವುಡ್‌ನ ಟಾಪ್ ನಟರಲ್ಲಿ ಒಬ್ಬರು, ಆದರೆ ಅವರು ಟಿವಿ ಜಾಹೀರಾತು ಮತ್ತು ಹಿನ್ನೆಲೆ ನೃತ್ಯಗಾರರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ‘ಇಷ್ಕ್ ವಿಷ್ಕ್’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕಾಗಿ ಶಾಹಿದ್ ಅತ್ಯುತ್ತಮ ಪುರುಷ ಚೊಚ್ಚಲ ಚಿತ್ರಕ್ಕಾಗಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದರು.


 

89

ಶಾಹಿದ್ ಕಪೂರ್ ಅವರ ವೃತ್ತಿಜೀವನಕ್ಕೆ 2006 ರಲ್ಲಿ ಸೂರಜ್ ಬರ್ಜತ್ಯಾ ಅವರ ವಿವಾಹ್‌ ಮತ್ತು 2007 ರಲ್ಲಿ ಇಮ್ತಿಯಾಜ್ ಅಲಿ ಅವರ ಜಬ್ ವಿ ಮೆಟ್ ಮೂಲಕ ಬ್ರೇಕ್‌ ದೊರೆಯಿತು. ಶಾಹಿದ್ 2009 ರಲ್ಲಿ ವಿಶಾಲ್ ಭಾರದ್ವಾಜ್ ಅವರ ಕಾಮಿನೇ ಚಿತ್ರದಲ್ಲಿ ಕೆಲಸ ಮಾಡುವ ಮೂಲಕ ಸಾಕಷ್ಟು ಸುದ್ದಿ ಮಾಡಿದರು.


 

99

 ಶಾಹಿದ್ ಕಪೂರ್ ತಾಲ್, ಶಿಖರ್, 36 ಚೈನಾ ಟೌನ್, ದೀವಾನೆ ಹುಯೇ ಪಾಗಲ್, ಪಾಠಶಾಲಾ, ಬದ್ಮಾಶ್ ಕಂಪನಿ, ದಿಲ್ ಮಾಂಗೆ ಮೋರ್, ರಂಗೂರ್, ಹೈದರ್, ಕಾಮಿನೇ, ಫಿದಾ, ತೇರಿ ಮೇರಿ ಕಹಾನಿ, ಕಿಸ್ಮತ್ ಕನೆಕ್ಷನ್, ಚುಪ್ ಚುಪ್ಕೆ, ಉಡ್ತಾ ಪಂಜಾಬ್, ಫೆಂಟಾಸ್ಟಿಕ್, ಆರ್ ರಾಜಕುಮಾರ್, ಕಬೀರ್ ಸಿಂಗ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಮುಂಬರುವ ಚಿತ್ರ ಜರ್ಸಿ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
ಕರೀನಾ ಕಪೂರ್
ಬಾಲಿವುಡ್
ಸೈಫ್ ಅಲಿ ಖಾನ್
ಪ್ರೀತಿ

Latest Videos
Recommended Stories
Recommended image1
Toxic Teaser Review: ಫಸ್ಟ್‌ ಟೈಮ್‌ ಹಸಿಬಿಸಿ ದೃಶ್ಯದಲ್ಲಿ ನಟ ಯಶ್;‌ Animal Movie ನೆನಪಾಯ್ತು, ನಿರೀಕ್ಷೆ ಇರ್ಲಿಲ್ಲ
Recommended image2
ಉಪ್ಪಿನ ಋಣ ತೀರಿಸಿದ್ರಾ ಅನಿಲ್ ಕಪೂರ್? ಯಶ್-ರಿಷಬ್ ಶೆಟ್ಟಿ ಬಗ್ಗೆ ಹೇಳಿದ್ದೇನು? ಕನ್ನಡ ಚಿತ್ರರಂಗಕ್ಕೆ..?!
Recommended image3
Yash Toxic Teaser: ಹಾಲಿವುಡ್‌ ರೇಂಜ್‌, ರಯಾ ಆಗಿ ಅಬ್ಬರಿಸಿದ ರಾಕಿಂಗ್‌ ಸ್ಟಾರ್‌ ಯಶ್;‌ ಏನ್ರೋ ಇದು ಟೀಸರ್!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved