ಒಂದೇ ರೂಮಲ್ಲಿ Kangana Ranaut ಮತ್ತು ಶಾಹಿದ್‌ ಕಪೂರ್; ಕೆಟ್ಟ ದಿನದ ಬಗ್ಗೆ ನಟಿ ಮಾತು!

ಶಾಹಿತ್ ಮತ್ತು ಕಂಗನಾ ನಡುವೆ ಕೋಲ್ಡ್‌ ವಾರ್ ಇರುವುದು ಎಲ್ಲರಿಗೂ ಗೊತ್ತಿದೆ. ಆದರೆ ಯಾವ ಕಾರಣಕ್ಕೆ ಎಂದು ಕಂಗನಾ ತೆರೆದಿಟ್ಟಿದ್ದಾರೆ. 

Bollywood Kangana Ranaut says staying with Shahid Kapoor was a nightmare vcs

ಬಾಲಿವುಡ್ (Bollywood) ಚಿತ್ರರಂಗದ ಕಾಂಟ್ರೋವರ್ಸಿ ನಟಿ ಕಂಗನಾ ರಣಾವತ್ (Kangana Ranaut) ಬೋಲ್ಡ್‌ ಹೇಳಿಕೆ ನೀಡುವುದರಲ್ಲಿ ಮೊದಲಿಗರು. ಕಾಂಟ್ರೋವರ್ಸಿ ಆದರೂ ಡೋಂಟ್‌ ಕೇರ್, ಎಂಥ ಕಷ್ಟ ಎದುರಾದರೂ ನಾನು ಎದರಿಸುವೆ ಎಂದು ಹೇಳುವ ನಟಿ, ಇದೀಗ ಶಾಹಿದ್‌ ಕಪೂರ್ (Shahis Kapoor) ಜೊತೆಗಿರುವ ಮನಸ್ತಾಪದ ಬಗ್ಗೆ ಹಂಚಿಕೊಂಡಿದ್ದಾರೆ. ಯಾವ ಕಾರಣಕ್ಕೆ ಶಾಹಿದ್‌ ಕಂಡರೆ ಆಗುತ್ತಿರಲಿಲ್ಲ? ಯಾವ ಘಟನೆ ಇವರ ನಡುವೆ ಹುಳಿ ಹಿಂಡಿದಂತಾಗಿತ್ತು ಗೊತ್ತಾ?

ಯಾವುದೇ ಸಂದರ್ಶನಲ್ಲಿ ಮಾತನಾಡಿದರೂ ಕೋಲ್ಡ್ ವಾರ್ (Coldwar) ಇರುವುದು ಶಾಹಿದ್ ಕಪೂರ್ ಜೊತೆ, ನನಗೆ ಕಬೀರ್ ಸಿಂಗ್ (Kabir Singh) ನಟ ಇಷ್ಟವಿಲ್ಲ, ಎಂದು ತಲೈವಿ ಹೇಳುತ್ತಿದ್ದರು. ಅನೇಕರು ಕಾರಣ ಪ್ರಶ್ನಿಸಿದಾಗ ಅವರೊಟ್ಟಿಗೆ ಬೇರೆ ನಟಿಯರು ಕೆಲಸ ಮಾಡಲಿ, ಸತ್ಯ ಗೊತ್ತಾಗುತ್ತದೆ ಎಂದು ಹೇಳುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಖಾಸಗಿ ಸಂದರ್ಶನದಲ್ಲಿ ಕೆಲವೊಂದು ಸತ್ಯ ತೆರೆದಿಟ್ಟಿದ್ದಾರೆ. 

Bollywood Chain Smokers: ಈ ಬಾಲಿವುಡ್‌ ಹೀರೋಯಿನ್ಸ್ ಚೈನ್ ಸ್ಮೋಕರ್ಸ್

ವಿಶಾಲ್ ಭಾರದ್ವಾಜ್ (Vishal Bharadwaj) ನಿರ್ದೇಶನ ಮಾಡಿದ  2017ರ  war ಕಮ್ romance ಸಿನಿಮಾ ರಂಗೂನ್‌ನಲ್ಲಿ (Rangoon) ಜೋಡಿಯಾಗಿ ಕಂಗನಾ ಮತ್ತು ಶಾಹಿದ್ ಕಪೂರ್ ನಟಿಸಿದ್ದರು. ಚಿತ್ರೀಕರಣದ ವೇಳೆ ಇಬ್ಬರೂ ಸರಿಯಾಗಿ ಮಾತನಾಡುತ್ತಿರಲಿಲ್ಲ. ಜಗಳ ಆಗುತ್ತಾರೆ, ಯಾವುದೇ ರೀತಿ ಹೊಂದಾಣಿಕೆ ಇಲ್ಲ, ಎಂದು ತಂಡವರು ಮಾತನಾಡಿಕೊಳ್ಳುತ್ತಿದ್ದರು.  ಶಾಹಿದ್‌ ಜೊತೆ ಒಂದು ದಿನ ಕಳೆಯುವುದೆಂದರೆ Nightmare ಎಂದು ಕಂಗನಾ ಹೇಳಿದ್ದರು.

Bollywood Kangana Ranaut says staying with Shahid Kapoor was a nightmare vcs

'ನಾನು ಒಂದು ನಿರ್ಜನ ಪ್ರದೇಶದಲ್ಲಿ (Remote Area) ಚಿತ್ರೀಕರಣ ಮಾಡುತ್ತಿದ್ದೆವು. ಅಲ್ಲಿ ಸಣ್ಣ ಕಾಟೆಜ್‌ (Cottage) ಮಾಡಲಾಗಿತ್ತು. ನಾನು ಮತ್ತು ಶಾಹಿದ್ ಒಂದೇ ಕಾಟೇಜ್ ಹಂಚಿಕೊಂಡವರು. ನಮ್ಮ ನಮ್ಮ ಟರ್ಮ್ಸ್‌ಗಳಲ್ಲಿ ನಾವು ಇರ್ತಿದ್ವಿ. ದಿನ ಬೆಳಗ್ಗೆ ಶಾಹಿದ್ ಹುಚ್ಚ ರೀತಿ ಹಿಪಾಪ್‌ (Hippop) ಹಾಡುಗಳನ್ನು ಕೇಳುತ್ತಿದ್ದ. ಆ ಡಬ್ಬ ಹಾಡುಗಳನ್ನು ಕೇಳಿಸಿಕೊಂಡು ಜಿಮ್ (gym) ಮಾಡುತ್ತಿದ್ದ, ಆ ಹಾಡುಗಳು ಸ್ಪೀಕರ್ (Speaker) ಹೊಡೆದು ಹಾಕುವಷ್ಟು ಕೆಟ್ಟದಾಗಿ ಸೌಂಡ್ ಮಾಡುತ್ತಿದ್ದವು. ಒಂದು ದಿನ ಇದನ್ನು ಸಹಿಸಿಕೊಳ್ಳಲು ಅಗದೆ ಕಾಟೇಜ್ ಬದಲಾಯಿಸಿದೆ. ಶಾಹಿದ್‌ ಜೊತೆ ಇರುವುದು ನಿಜಕ್ಕೂ nightmare,' ಎಂದು ಮಿಡ್‌ ಡೇ ಸಂದರ್ಶನದಲ್ಲಿ ಕಂಗನಾ ಹೇಳಿದ್ದಾರೆ.

ರಂಗೂನ್‌ ಸಿನಿಮಾದಲ್ಲಿ ಕಂಗನಾ ಜೊತೆ ಶಾಹಿದ್ ಮಾತ್ರವಲ್ಲದೇ ಸೈಫ್‌ ಅಲಿ ಖಾನ್ ಕೂಡ ನಟಿಸಿದ್ದಾರೆ. ಬಾಕ್ಸ್‌ ಆಫೀಸ್‌ ಕಲೆಕ್ಷನ್ ಮಾಡದಿದ್ದರೂ, ಸಿನಿ ರಸಿಕರ ಗಮನ ಸೆಳೆದಿತ್ತು ಈ ಸಿನಿಮಾ. ಈ ಮೂವರ ಕಾಂಬಿನೇಶನ್‌ ಹಿಟ್ ಆಗಿದ್ದು ಸುಳ್ಳಲ್ಲ. ಚಿತ್ರದ ಒಂದು ಹಾಡು ಕೂಡ ಹಿಟ್ ಆಗಲಿಲ್ಲ. 

Kangana Ranaut Airport Look: ಕಂಗನಾರ ಏರ್‌ಪೋರ್ಟ್‌ ಸಾರಿ ಲುಕ್‌ ವೈರಲ್‌!

ಸದ್ಯ ಕಂಗನಾ 'ಧಡಕ್' (Dhadak) ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಅರ್ಜುನ್ ರಾಮ್‌ಪಾಲ್ ಮತ್ತು ದಿವ್ಯಾ ದತ್ತ ನಟಿಸುತ್ತಿದ್ದಾರೆ. ಶಾಹಿದ್ ಕಪೂರ್ ಜರ್ಸಿ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದಾರೆ. 

ಇನ್‌ಸ್ಟಾಗ್ರಾಂನಲ್ಲಿ (Instagram) ಆ್ಯಕ್ಟಿವ್ ಅಗಿರುವ ಕಂಗನಾ, ದಕ್ಷಿಣ ಭಾರತ ಸಿನಿಮಾಗಳನ್ನು ಮೆಚ್ಚಿಕೊಂಡಿದ್ದಾರೆ. ಯಾವ ಕಾರಣಕ್ಕೆ ದಕ್ಷಿಣ ಭಾರತೀಯ ನಟರಾದ ಯಶ್ ಮತ್ತು ಅಲ್ಲು ಅರ್ಜುನ್ ಸಿನಿಮಾ ಹಿಟ್ ಆಗುತ್ತವೆ, ಎಂದು ಇತ್ತೀಚೆಗೆ ತಮ್ಮ ಇನ್ ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದರು. ಮೊದಲನೆಯದಾಗಿ, ಅವರು ತಮ್ಮ ಭಾರತೀಯ ಸಂಸ್ಕೃತಿಯ ಬೇರುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಎರಡನೆಯದಾಗಿ, ಅವರು ತಮ್ಮ ಕುಟುಂಬ ಮತ್ತು ಸಂಬಂಧಗಳ ಬಗ್ಗೆ ಪಾಶ್ಚಿಮಾತ್ಯರನ್ನು ಫಾಲೋ ಮಾಡೋಲ್ಲ. ಕುಟುಂಬಕ್ಕೆ ಬದ್ಧರಾಗಿದ್ದಾರೆ. ಮೂರನೆಯದು, ಅವರ ಉತ್ಸಾಹ ಮತ್ತು ಕೆಲಸದ ರೀತಿ ಬಹಳ ವಿಶಿಷ್ಟವಾಗಿದೆ. ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೊನೆಯಲ್ಲಿ, ಬಾಲಿವುಡ್ ಅವರನ್ನು ಭ್ರಷ್ಟಗೊಳಿಸಲು ಬಿಡಬಾರದು, ಎಂದು ಅವರು ದಕ್ಷಿಣದ ಸ್ಟಾರ್ಸ್‌ಗೆ ಕಂಗನಾ ಸಲಹೆ ನೀಡಿದ್ದಾರೆ.

Latest Videos
Follow Us:
Download App:
  • android
  • ios