ಮನೊಕ್ರೋಮ್ ಔಟ್‌ಫಿಟ್‌ನಲ್ಲಿ Sara Ali Khan ಹೊಸ ಫೋಟೋಶೂಟ್
ಸಾರಾ ಅಲಿ ಖಾನ್ (Sara Ali Khan) ಬಾಲಿವುಡ್‌ನ ಅತ್ಯಂತ ಪ್ರೀತಿಪಾತ್ರ ನಟಿಯರಲ್ಲಿ ಒಬ್ಬರು. ಸಾರಾ ತನ್ನ ಇನ್‌ಸ್ಟಾ ಖಾತೆಯಲ್ಲಿ ಫೋಟೋಗಳನ್ನು ಅಪ್‌ಲೋಡ್ ಮಾಡುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸುವುದನ್ನು ಮುಂದುವರೆಸಿದ್ದಾರೆ. ಅವರ ಇತ್ತೀಚಿನ ಪೋಸ್ಟ್ ಇಂಟರ್‌ನೆಟ್‌ನ ತಾಪ ಹೆಚ್ಚಿಸಿದೆ. ನಟಿಯ ಅದ್ಭುತ ಲುಕ್ ಇಲ್ಲಿದೆ.

ಸಾರಾ ಅಲಿ ಖಾನ್ ಈ ದಿನಗಳಲ್ಲಿ ತನ್ನ ಕಾಶ್ಮೀರ ಪ್ರವಾಸದ ಸುಂದರ ಫೋಟೋಳೊಂದಿಗೆ ತನ್ನ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಈಗ ಅವರು ಮತ್ತೊಂದು ಮನೋಕ್ರೋಮ್ ಫೋಟೋಗಳ ಸರಣಿಯೊಂದಿಗೆ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ.
ಸಾರಾ ಅಲಿ ಖಾನ್ ಕಪ್ಪು ಉಡುಪಿನಲ್ಲಿ ಫ್ಲಂಗ್ ನೇಕ್‌ಲೈನ್, ದೊಡ್ಡ ಕಾಲರ್ ಮತ್ತು ಬೋ ಹೊಂದಿರುವುದನ್ನು ಕಾಣಬಹುದು. ಅವರು ತನ್ನ ಕೂದಲನ್ನು ಕಟ್ಟದೆ ಹಾಗೇ ಬಿಟ್ಟಿದ್ದಾರೆ.
ಸಾರಾ ಅಲಿ ಖಾನ್ ತನ್ನ ಹೊಸ ಮನೋಕ್ರೋಮ್ ಫೋಟೋಶೂಟ್‌ನ ಫೋಟೋಗಳಲ್ಲಿ ಸಖತ್ ಸುಂದರವಾಗಿ ಕಾಣುತ್ತಿದ್ದಾರೆ ಮತ್ತು ಅವರು ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಸಾರಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಒಟ್ಟು ನಾಲ್ಕು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಪ್ರತಿ ಒಂದು ಫೋಟೋಗೂ ವಿಭಿನ್ನವಾಗಿ ಪೋಸ್ ನೀಡಿರುವುದು ಕಾಣಬಹುದು. ಒಂದು ಫೋಟೋದಲ್ಲಿ ಸಾರಾ ಈ ಬ್ಯಾಕ್‌ಲೆಸ್ ಡ್ರೆಸ್‌ನಲ್ಲಿ ತನ್ನ ಟೋನ್ಡ್ ಬ್ಯಾಕ್ ಅನ್ನು ತೋರಿಸುತ್ತಿದ್ದಾರೆ.
ಅವರು ಪೋಸ್ಟ್ ಅನ್ನು ಹಂಚಿಕೊಂಡ ಕೂಡಲೇ, ಅವರ ಸ್ನೇಹಿತರು ಮತ್ತು ಅಭಿಮಾನಿಗಳು ಕಾಮೆಂಟ್ ಸೆಕ್ಷನ್ ತುಂಬಿದರು. ಏಸ್ ಡಿಸೈನರ್ ಮನೀಶ್ ಮಲ್ಹೋತ್ರಾ ತಮ್ಮ ಕಾಮೆಂಟ್‌ನಲ್ಲಿ ಹಲವಾರು ಹೃದಯ ಇಮೋಜಿಗಳನ್ನು ಹಾಕಿದ್ದಾರೆ.
ಕೆಲಸದ ಮುಂಭಾಗದಲ್ಲಿ, ಸಾರಾ ಅಲಿ ಖಾನ್ ಕೊನೆಯದಾಗಿ ಧನುಷ್ ಮತ್ತು ಅಕ್ಷಯ್ ಕುಮಾರ್ ಅವರೊಂದಿಗೆ ಅತ್ರಂಗಿ ರೇ ಚಿತ್ರದಲ್ಲಿ ಕಾಣಿಸಿಕೊಂಡರು. ಮುಂದೆ, ಅವರು ವಿಕ್ರಾಂತ್ ಮಾಸ್ಸೆ ಮತ್ತು ಚಿತ್ರಾಂಗದಾ ಸಿಂಗ್
ಅವರೊಂದಿಗೆ ಪವನ್ ಕಿರ್ಪಲಾನಿಯ ಗ್ಯಾಸ್‌ಲೈಟ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರು ವಿಕ್ಕಿ ಕೌಶಲ್ ಜೊತೆ ಲಕ್ಷ್ಮಣ್ ಉಟೇಕರ್ ಅವರ ಇನ್ನೂ ಹೆಸರಿಡದ ಚಿತ್ರವನ್ನೂ ಹೊಂದಿದ್ದಾರೆ.