- Home
- Entertainment
- Cine World
- Kajol ಯಿಂದ Sara Ali Khanವರೆಗೂ; ತಾಯಂದಿರಂತೆ ಬಣ್ಣದ ಲೋಕದಲ್ಲಿ ಖ್ಯಾತಿಗಳಿಸಿದ ಸ್ಟಾರ್ಸ್
Kajol ಯಿಂದ Sara Ali Khanವರೆಗೂ; ತಾಯಂದಿರಂತೆ ಬಣ್ಣದ ಲೋಕದಲ್ಲಿ ಖ್ಯಾತಿಗಳಿಸಿದ ಸ್ಟಾರ್ಸ್
ತಮ್ಮ ತಾಯಿಯಿಂದ ನಟನೆಯನ್ನು ಕಲಿತು ಸಾಕಷ್ಟು ಹೆಸರು ಗಳಿಸಿದ ಅನೇಕ ಬಾಲಿವುಡ್ ಸೆಲೆಬ್ರಿಟಿಗಳಿದ್ದಾರೆ. ಕಾಜೋಲ್‌ನಿಂದ ಹಿಡಿದು ಸಾರಾ ಅಲಿ ಖಾನ್‌ವರೆಗೆ, ತನ್ನ ತಾಯಿಯಿಂದ ನಟನಾ ಕೌಶಲ್ಯವನ್ನು ಕಲಿತ ನಂತರ, ತಾಯಿಯ ಹಾಗೇ ಯಶಸ್ವಿ ನಟಿಯರ ಪಟ್ಟಿಯಲ್ಲಿ ಸೇರಿಕೊಂಡರು. ತಾಯಿಯ ಜೊತೆ ಉತ್ತಮ ಬಾಡಿಂಗ್ ಹೊಂದಿರುವ ಬಾಲಿವುಡ್‌ನ ನಟಿಯರ ಇವರು.

ತನುಜಾ ಅವರ ಕಾಲದ ಯಶಸ್ವಿ ನಟಿ. ಜೀನೆ ಕಿ ರಾಹ್, ಹಾಥಿ ಮೇರೆ ಸಾಥಿ, ಆಗ್, ಜ್ಯುವೆಲ್ ಥೀಫ್ ಮುಂತಾದ ಸೂಪರ್‌ಹಿಟ್ ಚಲನಚಿತ್ರಗಳನ್ನು ನೀಡಿದರು. ಅವರಿಗೆ ಕಾಜೋಲ್ ಮತ್ತು ತನಿಶಾ ಮುಖರ್ಜಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು. ಇಬ್ಬರೂ ತಮ್ಮ ತಾಯಿಯಿಂದ ನಟನೆಯನ್ನು ಕಲಿತರು. ಕಾಜೋಲ್ ತನ್ನ ತಾಯಿಯಂತೆ ಶ್ರೇಷ್ಠ ನಟಿ ಎಂದು ಸಾಬೀತುಪಡಿಸಿದರು. ಅವರು ಇಲ್ಲಿಯವರೆಗೆ ಅನೇಕ ಹಿಟ್ ಚಲನಚಿತ್ರಗಳನ್ನು ನೀಡಿದ್ದಾರೆ. ಆದರೆ, ತನಿಶಾ ಅಷ್ಟೊಂದು ಯಶಸ್ವಿಯಾಗಲಿಲ್ಲ.
ಅಮೃತಾ ಸಿಂಗ್ ಅವರ ಕಾಲದಲ್ಲಿ ಹಾಟ್ ನಟಿಯರ ಪಟ್ಟಿಯಲ್ಲಿ ಸೇರಿದ್ದರು. ಮರ್ದ್, ಐನಾ, ಬೇತಾಬ್ ನಂತಹ ಹಲವು ಹಿಟ್ ಚಿತ್ರಗಳನ್ನು ನೀಡಿದ ನಟಿಯ ಮಗಳು ಸಾರಾ ಅಲಿ ಖಾನ್. ಸಾರಾ ಕೇದಾರನಾಥ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು ಮತ್ತು ಅನೇಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾರಾ ತನ್ನ ತಾಯಿಯನ್ನು ತುಂಬಾ ಪ್ರೀತಿಸುತ್ತಾರೆ ಮತ್ತು . ತಾಯಿ ಅಮೃತಾರನ್ನು ಬಿಟ್ಟಿರಲಾರದ ಕಾರಣ ಆಕೆ ಮದುವೆಯಾಗುವುದಿಲ್ಲ ಎನ್ನುತ್ತಾರೆ.
ಶರ್ಮಿಳಾ ಟ್ಯಾಗೋರ್ ಬಗ್ಗೆ ಏನೂ ಹೇಳಬೇಕಾಗಿಲ್ಲ. ಅವರ ಪಟ್ಟಿಯಲ್ಲಿ ಹಿಟ್ ಚಿತ್ರಗಳ ಸಾಲುಗಳಿವೆ. ಆರಾಧನಾ, ಅಮರ್ ಪ್ರೇಮ್, ಸಫರ್, ದಾಗ್, ಮಲಿಕ್, ಚುಪ್ಕೆ ಚುಪ್ಕೆ ಸೂಪರ್‌ಹಿಟ್‌ಗಳ ಪಟ್ಟಿಯಲ್ಲಿ ಸೇರಿವೆ. ಸೋಹಾ ಅಲಿ ಖಾನ್ ತನ್ನ ತಾಯಿ ಶರ್ಮಿಳಾ ಟ್ಯಾಗೋರ್ ಅವರಿಂದ ನಟನಾ ಕೌಶಲ್ಯವನ್ನು ಕಲಿತರು ಮತ್ತು ಅನೇಕ ಚಲನಚಿತ್ರಗಳಲ್ಲಿ ಕೆಲಸ ಮಾಡಿದರು. ಅವರು ರಂಗ್ ದೇ ಬಸಂತಿ, ಖೋಯಾ ಖೋಯಾ ಚಂದ್ ಮತ್ತು ತುಮ್ ಮೈಲ್‌ನಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.
ದೊಡ್ಡ ಕಣ್ಣುಗಳು ಮತ್ತು ಸುಂದರ ನೋಟದ ಬಬಿತಾ ಅವರನ್ನು ಯಾರು ಮರೆಯಲು ಸಾಧ್ಯವಿಲ್ಲ. ಕಲ್ ಆಜ್ ಔರ್ ಕಲ್, ಬನ್‌ಫೂಲ್, ಹಸೀನಾ ಮಾನ್ ಜಾಯೇಗಿ, ದಸ್ ಲಖ್ ಮುಂತಾದ ಹಲವು ಹಿಟ್ ಸಿನಿಮಾಗಳನ್ನು ನೀಡಿರುವ ನಟಿಗೆ ಕರಿಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಎಂಬ ಇಬ್ಬರು ಪುತ್ರಿಯರು. ಕುಟುಂಬದಲ್ಲಿ ಸೊಸೆ ಮತ್ತು ಮಗಳು ನಟಿಯಾಗಲು ಅವಕಾಶವಿರಲಿಲ್ಲ. ಆದರೆ ಬಬಿತಾ ಒಪ್ಪದೆ ಕಪೂರ್ ಕುಟುಂಬದಿಂದ ಬೇರ್ಪಟ್ಟು ತನ್ನ ಹೆಣ್ಣುಮಕ್ಕಳಿಗೆ ಸಿನಿಮಾದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟರು. ಬಬಿತಾ ಅವರ ಇಬ್ಬರು ಪುತ್ರಿಯರು ತಾಯಿಯಂತಹ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ.ಇನ್ನೂ ಬಾಲಿವುಡ್‌ನ ಟಾಪ್ ನಟಿಯರ ಲಿಸ್ಟ್‌ನಲ್ಲಿದ್ದಾರೆ.
ಡಿಂಪಲ್ ಕಪಾಡಿಯಾ ಅವರ ಕಾಲದ ಸೂಪರ್ ಸ್ಟಾರ್. ಬಾಬಿ ಚಿತ್ರದ ಮೂಲಕ ಯಶಸ್ವಿ ವೃತ್ತಿ ಜೀವನ ಆರಂಭಿಸಿದ ನಟಿ ಕಾಶ್, ಕ್ರಾಂತಿವೀರ, ಸಾಗರ್ ಸೇರಿದಂತೆ ಹಲವು ಸಿನಿಮಾಗಳನ್ನು ನೀಡಿದ್ದಾರೆ. ಆಕೆ ಇನ್ನೂ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾರೆ. ಅವರ ಮಗಳು ಟ್ವಿಂಕಲ್ ಖನ್ನಾ ಕೂಡ ತಾಯಿಯಂತೆ ನಟಿಯಾದರು. ಮೇಳ, ಬಾದ್‌ಶಾ, ಬರ್ಸಾತ್ ಸೇರಿದಂತೆ ಹಲವು ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಆದರೆ ಮದುವೆಯ ನಂತರ ನಟನೆಗೆ ಗುಡ್ ಬೈ ಹೇಳಿ ಬರಹಗಾರ್ತಿಯಾಗಿದ್ದಾರೆ.
ಬಾಲಿವುಡ್‌ನ ಸೂಪರ್ ಸ್ಟಾರ್ ಶ್ರೀದೇವಿ ಈಗ ಲೋಕದಲ್ಲಿಲ್ಲ. ಆದರೆ ಆಕೆ ತನ್ನ ಇಬ್ಬರು ಹೆಣ್ಣು ಮಕ್ಕಳಾದ ಜಾನ್ವಿ ಮತ್ತು ಖುಷಿಯಜೊತೆಯ ಅವರ ಬಾಡಿಂಗ್ ಎಲ್ಲರಿಗೂ ಗೊತ್ತು. ಶ್ರೀದೇವಿಯಂತೆ ಜಾನ್ವಿ, ಖುಷಿ ಕೂಡ ನಟನಾ ಲೋಕಕ್ಕೆ ಕಾಲಿಟ್ಟಿದ್ದಾರೆ. ಜಾನ್ವಿ ಹಲವು ಸಿನಿಮಾಗಳಲ್ಲಿ ನಟನಾ ಕೌಶಲ್ಯವನ್ನೂ ತೋರಿಸಿದ್ದಾರೆ. ಜೋಯಾ ಅಖ್ತರ್ ಅವರ ಚಿತ್ರದ ಮೂಲಕ ಖುಷಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.