ದ್ವಾರಕಾಧೀಶ ದೇಗುಲಕ್ಕೆ ಭೇಟಿ ನೀಡಿದ ಸಾರಾ ಗ್ಯಾಸ್‌ಲೈಟ್ ಸಿನಿಮಾ ಚಿತ್ರೀಕರಣದ ವೇಳೆ ಭೇಟಿ ದೇಗುಲ ಭೇಟಿಗೆ ಟ್ರೋಲ್ ಆದ ಸಾರಾ

ಅಹ್ಮದಾಬಾದ್‌(ಮಾ.31): ತಮ್ಮ ಮುಂದಿನ ಸಿನಿಮಾ ಗ್ಯಾಸ್‌ಲೈಟ್‌ ಚಿತ್ರೀಕರಣದ ವೇಳೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಗುಜರಾತ್‌ನ ದ್ವಾರಕಾಧೀಶ್‌ ದೇಗುಲಕ್ಕೆ ಭೇಟಿ ನೀಡಿದ್ದರು. ಇದು ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿದ್ದಂತೆ ನೆಟ್ಟಿಗರು ಸಾರಾಳನ್ನು ಸ್ವಲ್ಪವೂ ಕರುಣೆ ತೋರದೆ ಸಖತ್ ಟ್ರೋಲ್ ಮಾಡಿದ್ದಾರೆ.

ಸಾರಾ ಅಲಿ ಖಾನ್ (Sara Ali Khan) ಮತ್ತು ವಿಕ್ರಾಂತ್ ಮಾಸ್ಸೆ (Vikrant Massey) ಮೊದಲ ಬಾರಿಗೆ ಗ್ಯಾಸ್‌ಲೈಟ್ ಎಂಬ ಸಿನಿಮಾದಲ್ಲಿ ಜೊತೆಯಾಗಿ ನಟಿಸುತ್ತಿದ್ದಾರೆ. ಇಂಡಿಯಾ ಟುಡೇಗೆ ನೀಡಿದ ಸಂದರ್ಶನವೊಂದರಲ್ಲಿ ವಿಕ್ರಾಂತ್ ತಮ್ಮ ಮುಂದಿನ ಸಿನಿಮಾ ಸಾರಾ ಅವರೊಂದಿಗೆ ಇರುವುದಾಗಿ ಖಚಿತಪಡಿಸಿದ್ದರು. ಅಲ್ಲದೇ ಪ್ರಸ್ತುತ ಗುಜರಾತ್‌ನಲ್ಲಿ ಚಲನಚಿತ್ರದ ಚಿತ್ರೀಕರಣ ನಡೆಯುತ್ತಿರುವುದಾಗಿ ಸಾರಾ ಹೇಳಿದ್ದರು. ಇಂದು(ಮಾ.31) ಸಾರಾ ತಾವಿರುವ ಹೊಟೇಲ್‌ಗೆ ನಿದ್ದೆಗಣ್ಣುಗಳೊಂದಿಗೆ ಬರುತ್ತಿರುವುದು ನಂತರ ನಟ ವಿಕ್ರಾಂತ್‌ ಮಾಸ್ಸೆ ಜೊತೆ ದ್ವಾರಕಾಧೀಶ ದೇವಸ್ಥಾನಕ್ಕೆ ಭೇಟಿ ನೀಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಇದಾದ ನಂತರ ಸಾರಾ ನಿದ್ದೆಗಣ್ಣುಗಳೊಂದಿಗೆ ಹೋಟೆಲ್‌ಗೆ ಪ್ರವೇಶಿಸುತ್ತಿರುವ ಬಗ್ಗೆ ಮತ್ತು ನಂತರ ದೇವಸ್ಥಾನಕ್ಕೆ ಹೋದ ಬಗ್ಗೆ ನೆಟ್ಟಿಗರು ಸಖತ್ ಟ್ರೋಲ್ ಮಾಡುತ್ತಿದ್ದಾರೆ.

ಹ್ಯಾಪಿ ಬರ್ತ್‌ಡೇ ಸಾರಾ: ಫ್ಯಾಮಿಲಿ ಜೊತೆ ಸಾರಾ ಬಾಲ್ಯದ ಬ್ಯೂಟಿಫುಲ್ ಫೋಟೋಸ್

ಸಾರಾ ಅಲಿ ಖಾನ್ ಮತ್ತು ವಿಕ್ರಾಂತ್ ಮಾಸ್ಸೆ ಇಬ್ಬರೂ ಗುಜರಾತ್‌ನ ದ್ವಾರಕಾಧೀಶ ದೇವಾಲಯಕ್ಕೆ ಭೇಟಿ ನೀಡುವುದಕ್ಕೂ ಸಾರಾ ತನ್ನ ಹೋಟೆಲ್‌ಗೆ ಭೇಟಿ ನೀಡಿದಾಗ ಸುಸ್ತಾದಂತೆ ಕಾಣುತ್ತಿದ್ದಳು. ಟ್ರೋಲ್‌ ಆಗುತ್ತಿದ್ದಂತೆ ಕೆಲವರು ಆಕೆಯ ಪರ ನಿಂತರು. ಆಕೆಯ ಶೂಟಿಂಗ್ ಶೆಡ್ಯೂಲ್ ನಿಂದಾಗಿ ಆಕೆ ಸುಸ್ತಾಗಿದ್ದಾಳೆ ಎಂದು ಕಾಮೆಂಟ್ ಮಾಡಿದರು. ಮತ್ತೆ ಕೆಲವರು ಆಸ್ಪತ್ರೆಯಿಂದ ಈಗಷ್ಟೇ ಡಿಸ್ಚಾರ್ಜ್‌ ಆದಂತೆ ಕಾಣಿಸುತ್ತಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಖಾನ್‌ ಎಂದು ಸರ್‌ನೇಮ್‌ ಇಟ್ಟುಕೊಂಡಿದ್ದೀರಿ, ಯಾವ ಉದ್ದೇಶದಿಂದ ದೇಗುಲಕ್ಕೆ ಹೋಗುತ್ತಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಇದಲ್ಲದೇ, ಇತ್ತೀಚೆಗೆ ವಿವಾಹವಾದ ವಿಕ್ರಾಂತ್ ಮಾಸ್ಸಿ ಅವರೊಂದಿಗಿನ ಸುತ್ತಾಟಕ್ಕಾಗಿ ಕೂಡ ಸಾರಾ ಟ್ರೋಲ್‌ಗೆ ಒಳಗಾದರು. 

ಇತ್ತ ಈ ಗ್ಯಾಸ್‌ಲೈಟ್‌ ಸಿನಿಮಾದಲ್ಲಿ ವಿಕ್ರಾಂತ್ ಮಾಸ್ಸೆ, ಸಾರಾ ಅಲಿ ಖಾನ್ ಮತ್ತು ಚಿತ್ರಾಂಗದಾ ಸಿಂಗ್ (Chitrangda Singh) ನಟಿಸಿದ್ದಾರೆ. ಇಂಡಿಯಾ ಟುಡೇ ಜೊತೆ ವಿಶೇಷವಾಗಿ ಮಾತನಾಡಿದ ವಿಕ್ರಾಂತ್, ಸಾರಾ ಅವರನ್ನು ಹೊಗಳಿದ್ದಾರೆ. 'ನಾವು ಈಗಷ್ಟೇ ಚಿತ್ರೀಕರಣವನ್ನು ಪ್ರಾರಂಭಿಸಿದ್ದೇವೆ. ಇದು ಇಲ್ಲಿಯವರೆಗೆ ಅದ್ಭುತವಾಗಿದೆ. ನಾವು ಗುಜರಾತ್‌ನಲ್ಲಿದ್ದೇವೆ. ನಾನು ಹೊಸದನ್ನು ಮಾಡಿದ ಮತ್ತೊಂದು ಚಿತ್ರ ಇದು. ಇದು ತುಂಬಾ ಆಸಕ್ತಿದಾಯಕ ಭಾಗವಾಗಿದೆ. ನಾನು ಸಾರಾ (ಅಲಿ ಖಾನ್) ಮತ್ತು ಚಿತ್ರಾಂಗದಾ (ಸಿಂಗ್) ಅವರೊಂದಿಗೆ ನಟಿಸುತ್ತಿದ್ದೇನೆ. ನಾನು ನಿಜವಾಗಿಯೂ ಉತ್ಸುಕನಾಗಿದ್ದೇನೆ. ಇವರಿಬ್ಬರು ಅಂತಹ ಅದ್ಭುತ ವ್ಯಕ್ತಿಗಳು. ಇನ್ನೂ ವಿಶೇಷವಾಗಿ ಸಾರಾ ಶಕ್ತಿಯಿಂದ ಹಾಗೂ ಚಟುವಟಿಕೆಯಿಂದ ತುಂಬಿದ್ದಾರೆ. ತನ್ನ ಕೆಲಸದ ಕಡೆಗೆ ಅವಳ ದೃಷ್ಟಿಕೋನ, ಅವಳು ಜಗತ್ತನ್ನು ನೋಡುವ ರೀತಿ ತುಂಬಾ ಉಲ್ಲಾಸಕರವಾಗಿದೆ ಎಂದು ಸಾರಾ ಅವರನ್ನು ವಿಕ್ರಾಂತ್ ಮಾಸ್ಸೆ ಕೊಂಡಡಿದ್ದಾರೆ.

ಭಾರೀ ಕ್ಲೋಸ್ ಇದ್ದ ಸಾರಾ-ಕಾರ್ತಿಕ್ ಆರ್ಯನ್ ಈಗ ಪರಸ್ಪರ ಫಾಲೋ ಮಾಡ್ತಿಲ್ಲ

ಸೈಫ್ ಅಲಿ ಖಾನ್ ಹಾಗೂ ಅಮೃತ ಸಿಂಗ್ ಪುತ್ರಿಯಾದ ಸಾರಾ ಇತ್ತೀಚೆಗೆ, ಸೈಫ್ ಹಾಗೂ ಕರೀನಾ ಕಪೂರ್ ಪುತ್ರ ಜೇಹ್‌ ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದರು.ಜೆಹ್ ಅವರ ತಾಯಿಯ ಅಜ್ಜ ರಣಧೀರ್ ಕಪೂರ್ ಅವರ ಮನೆಯಲ್ಲಿ ಈ ಗ್ರ್ಯಾಂಡ್ ಪಾರ್ಟಿಯನ್ನು ನಡೆಸಲಾಗಿತ್ತು. ಇದರಲ್ಲಿ ಸೈಫ್ ಅಲಿಖಾನ್ ಅವರ ಎಲ್ಲಾ ನಾಲ್ಕು ಮಕ್ಕಳು ಒಟ್ಟಿಗೇ ಕಾಣಿಸಿಕೊಂಡಿದ್ದರು. ಹುಟ್ಟುಹಬ್ಬದ ಆಚರಣೆಯ ಕೆಲವು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದರಲ್ಲಿ ಸೈಫ್ ಅವರ ನಾಲ್ವರು ಮಕ್ಕಳಾದ ಸಾರಾ, ಇಬ್ರಾಹಿಂ, ತೈಮೂರ್ ಮತ್ತು ಜೆಹ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಸಮಯದಲ್ಲಿ, ಅಣ್ಣ ಇಬ್ರಾಹಿಂ ತೈಮೂರ್ ಅನ್ನು ತನ್ನ ಭುಜದ ಮೇಲೆ ಕೂರಿಸಿಕೊಂಡಾಗ, ಇದನ್ನು ನೋಡಿದ ಕರೀನಾ ಕಪೂರ್ ಅವರ ಕಿರಿಯ ಮಗ ಜೆಹ್ ಅಳಲು ಪ್ರಾರಂಭಿಸಿದ್ದಾನೆ. ಇದನ್ನು ನೋಡಿದ ಸಾರಾ ಅಲಿ ಖಾನ್ ಮತ್ತು ತಂದೆ ಸೈಫ್ ಅಲಿ ಖಾನ್ ನಗುತ್ತಿದ್ದಾರೆ.