Salman Khan ಅವರ ಮುಂದಿನ ಚಿತ್ರದಲ್ಲಿ ಒಂದಲ್ಲ ಎರಡಲ್ಲ ಹತ್ತು ನಾಯಕಿರಂತೆ!
ಈ ದಿನಗಳಲ್ಲಿ ಸಲ್ಮಾನ್ ಖಾನ್ (Salman Khan) ತಮ್ಮ ಕಭಿ ಈದ್ ಕಭಿ ದೀವಾಲಿ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಚಿತ್ರದ ಶೂಟಿಂಗ್ ಹೈದರಾಬಾದ್ ನಲ್ಲಿ ನಡೆಯುತ್ತಿದೆ. ಈ ನಡುವೆ ಅವರು ನೋ ಎಂಟ್ರಿ ಮೇ ಎಂಟ್ರಿ (no entry mein entry) ಎಂಬ ಶೀರ್ಷಿಕೆಯ ನೋ ಎಂಟ್ರಿ ಸಿಕ್ವೆಲ್ ಕಾರಣದಿಂದ ಚರ್ಚೆಯಲ್ಲಿದ್ದಾರೆ. ಇದೇ ವೇಳೆ ಈ ಚಿತ್ರದ ಬಗ್ಗೆ ಕೆಲವು ಆಘಾತಕಾರಿ ವಿಷಯಗಳು ಹೊರಬಿದ್ದಿವೆ.
ವರದಿಗಳ ಪ್ರಕಾರ, ಈ ಕಾಮಿಡಿ ಚಿತ್ರದಲ್ಲಿ ಒಬ್ಬರೋ ಇಬ್ಬರೋ ಅಲ್ಲ ಒಟ್ಟು 10 ಮಂದಿ ನಾಯಕಿಯರು ಇರುತ್ತಾರಂತೆ. ಆದರೆ, ಇನ್ನೂ ಯಾರ ಹೆಸರನ್ನೂ ಬಹಿರಂಗಪಡಿಸಿಲ್ಲ. ಈಟೈಮ್ಸ್ ವರದಿಗಳ ಪ್ರಕಾರ, ಈ ಸೀಕ್ವೆಲ್ ನಲ್ಲಿ 2005ರ ನೋ ಎಂಟ್ರಿ ಚಿತ್ರದ ಪ್ರಮುಖ ನಾಯಕ ಅಂದರೆ ಸಲ್ಮಾನ್ ಖಾನ್, ಅನಿಲ್ ಕಪೂರ್ ಮತ್ತು ಫರ್ದೀನ್ ಖಾನ್ ತ್ರಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪ್ರತಿ ಪಾತ್ರಕ್ಕೂ ಒಬ್ಬ ನಾಯಕಿ ಇರುತ್ತಾಳೆ.
ಸಲ್ಮಾನ್ ಖಾನ್ ಮತ್ತೆ ಕಾಮಿಡಿ ರೋಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ನೋ ಎಂಟ್ರಿ ಚಿತ್ರದ ಮುಂದುವರಿದ ಭಾಗದ ಶೂಟಿಂಗ್ ಕೂಡ ಶುರುವಾಗಲಿದೆ.ಚಿತ್ರದ ನಿರ್ದೇಶಕ ಅನೀಸ್ ಬಾಜ್ಮಿ ಅವರು ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಸಲ್ಮಾನ್ ಈ ಚಿತ್ರದ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲ ಚಿತ್ರದ ಶೂಟಿಂಗ್ ಆದಷ್ಟು ಬೇಗ ಶುರುವಾಗಲಿ ಎಂಬುದು ಅವರ ಬಯಕೆ ವ್ಯಕ್ತಪಡಿಸಿದ್ದರು
ಹೊರಬರುತ್ತಿರುವ ವರದಿಗಳ ಪ್ರಕಾರ, ನಂತರ ನೋ ಎಂಟ್ರಿಯ ಸ್ಟಾರ್‌ಕಾಸ್ಟ್ ಅನ್ನು ಸೀಕ್ವೆಲ್‌ನಲ್ಲಿ ಕಾಣಬಹುದು. ಇದರಲ್ಲಿ ಸಲ್ಮಾನ್, ಅನಿಲ್ ಮತ್ತು ಫರ್ದೀನ್ ಹೊರತಾಗಿ ಬಿಪಾಶಾ ಬಸು, ಇಶಾ ಡಿಯೋಲ್, ಲಾರಾ ದತ್ತಾ ಮತ್ತು ಸೆಲಿನಾ ಜೇಟ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಇವರ ಹೊರತಾಗಿ ಇನ್ನಷ್ಟು ನಾಯಕಿಯರು ನಟಿಸಲಿದ್ದಾರೆ.
ಇವರ ಹೊರತಾಗಿ ಇನ್ನಷ್ಟು ನಾಯಕಿಯರು ನಟಿಸಲಿದ್ದಾರೆ. ಮೂವರೂ ಪ್ರಮುಖ ನಾಯಕರ ಟ್ರಿಪಲ್ ರೋಲ್ ಫಿಲ್ಮ್ ನೋ ಎಂಟ್ರಿಯಲ್ಲಿ, ಎಂಟ್ರಿಯಲ್ಲಿ ಸಖತ್ ಹಾಸ್ಯದ ಛಾಯೆ ಇರುತ್ತದೆ.
ಈ ದಿನಗಳಲ್ಲಿ ಸಲ್ಮಾನ್ ಖಾನ್ ಕಭಿ ಈದ್ ಕಭಿ ದೀವಾಲಿ ಚಿತ್ರೀಕರಣದಲ್ಲಿದ್ದಾರೆ. ಅದೇ ಸಮಯದಲ್ಲಿ ಅವರು ಯಶ್ ರಾಜ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಈದ್ 2023 ರ ಸಂದರ್ಭದಲ್ಲಿ ಟೈಗರ್ 3 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಟೈಗರ್ 3 ಸಿನಿಮಾದಲ್ಲಿ ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದೆ ಎಂದು ಹೇಳಲಾಗುತ್ತಿದೆ, ಆದರೆ ಕ್ಲೈಮ್ಯಾಕ್ಸ್ ಚಿತ್ರೀಕರಣ ಇನ್ನೂ ನಡೆಯಬೇಕಿದೆ.