ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಈಕೆ, 13 ವರ್ಷದಲ್ಲೇ 40 ಲಕ್ಷದ ಐಷಾರಾಮಿ ಕಾರಿನ ಒಡತಿ; ಆಸ್ತಿ ಮೌಲ್ಯ ತಿಳಿದ್ರೆ ದಂಗಾಗ್ತೀರಾ?
ಭಾರತದ ಅತ್ಯಂತ ಶ್ರೀಮಂತ ಬಾಲನಟಿ ಈಕೆ. ಹಲವು ಸಿನಿಮಾ, ವೆಬ್‌ಸಿರೀಸ್‌ನಲ್ಲಿ ನಟಿಸಿದ್ದಾರೆ. ಕೇವಲ 13 ವರ್ಷದಲ್ಲೇ 40 ಲಕ್ಷ ರೂ. ಮೌಲ್ಯದ ಐಷಾರಾಮಿ ಕಾರನ್ನು ಹೊಂದಿದ್ದಾರೆ. ಈಕೆಯ ಒಟ್ಟು ಆಸ್ತಿ ಮೌಲ್ಯ ಎಷ್ಟೂಂತ ಗೊತ್ತಾದ್ರೆ ನೀವು ಅಚ್ಚರಿಪಡೋದು ಖಂಡಿತ.
ಸಿನಿಮಾ, ಸೀರಿಯಲ್‌ನಲ್ಲಿ ನಟಿಸುವ ಬಾಲನಟರು ಚಿತ್ರವೊಂದಕ್ಕೆ ಕೇವಲ ನೂರೇ ನೂರು ರೂಪಾಯಿಗಳನ್ನು ಪಡೆಯುತ್ತಿದ್ದ ಕಾಲವೊಂದಿತ್ತು. ಆದರೆ ಈಗ ಚಿತ್ರೋದ್ಯಮ ಬದಲಾಗಿದೆ. ನಟ-ನಟಿಯರು ಕೋಟಿಯಲ್ಲಿ ಸಂಭಾವನೆ ಪಡೆಯೋ ಹಾಗೆ ಬಾಲನಟ-ನಟಿಯರು ಸಹ ಲಕ್ಷ, ಕೋಟಿಯಲ್ಲಿ ಸಂಭಾವನೆ ಪಡೆಯುತ್ತಾರೆ.
ಇತ್ತೀಚಿನ ದಿನಗಳಲ್ಲಿ, ಅತ್ಯಂತ ಜನಪ್ರಿಯ ಬಾಲ ನಟರು ಒಂದೇ ಚಿತ್ರದಲ್ಲಿ ಕಾಣಿಸಿಕೊಂಡರೂ ಸಾಕು ಲಕ್ಷಗಳನ್ನು ಗಳಿಸುತ್ತಾರೆ. ಅದಕ್ಕಿಂತ ಹೆಚ್ಚಾಗಿ, ಅವರು ಸೋಷಿಯಲ್ ಇನ್‌ಫ್ಲುಯೆನ್ಸರ್, ಜಾಹೀರಾತುಗಳ ಮೂಲಕವೂ ಹಣ ಗಳಿಸಲು ಸಾಧ್ಯವಾಗುತ್ತದೆ. ಅಂದಹಾಗೆ ಭಾರತದ ಅತ್ಯಂತ ಶ್ರೀಮಂತ ಬಾಲನಟ 8 ಕೋಟಿಗೂ ಅಧಿಕ ನಿವ್ವಳ ಸಂಪತ್ತನ್ನು ಸಂಪಾದಿಸಿದ್ದಾರೆ. ಯಾರವರು?
ಹೀಗೆ ಸಣ್ಣ ವಯಸ್ಸಿನಲ್ಲೇ ಕೋಟಿ ಕೋಟಿ ಸಂಪಾದಿಸ್ತಿರೋ ನಟಿ ಮತ್ಯಾರೂ ಅಲ್ಲ, ರಿವಾ ಅರೋರಾ. ಉರಿ ಮತ್ತು ಛತ್ರಿವಾಲಿಯಂತಹ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ನಟಿ ಮತ್ತು ಪ್ರಭಾವಿ. ಪ್ರಸ್ತುತ ಭಾರತದ ಶ್ರೀಮಂತ ಬಾಲನಟಿ ಎಂದು ಗುರುತಿಸಿಕೊಂಡಿದ್ದಾರೆ. ಬಹು ವರದಿಗಳ ಪ್ರಕಾರ ನಟಿ 1 ಮಿಲಿಯನ್ (ಸುಮಾರು ರೂ 8.2 ಕೋಟಿ) ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಇದು ಭಾರತದಲ್ಲಿನ ಎಲ್ಲಾ ಬಾಲ ನಟರಿಗಿಂತ ಹೆಚ್ಚು. ಕುತೂಹಲಕಾರಿಯಾಗಿ, ಈ ವರ್ಷದ ಆರಂಭದಲ್ಲಿ ರಿವಾ, ರಿಚ್ಚೆಸ್ಟ್ ಚೈಲ್ಡ್ ಆಕ್ಟ್ರೆಸ್ ಎಂಬ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದರು. ಚಿತ್ರದಿಂದ ಚಿತ್ರಕ್ಕೆ ಸಂಭಾವನೆಯನ್ನು ಹೆಚ್ಚಿಸಿಕೊಳ್ತಿರೋ ರಿವಾ ಇತ್ತೀಚೆಗೆ 40 ಲಕ್ಷ ರೂಪಾಯಿ ಬೆಲೆಬಾಳುವ ಐಷಾರಾಮಿ ಆಡಿ ಕಾರನ್ನು ಖರೀದಿಸಿದ್ದಾರೆ.
ರಿವಾ 2019ರಲ್ಲಿ ಬಿಡುಗಡೆಯಾದ 'ಉರಿ ದಿ ಸರ್ಜಿಕಲ್ ಸ್ಟ್ರೈಕ್'ನೊಂದಿಗೆ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದರು. ಇದಕ್ಕಾಗಿ ಅವರು ವಿಮರ್ಶಕರು ಮತ್ತು ಅಭಿಮಾನಿಗಳಿಂದ ಪ್ರಶಂಸಿಸಲ್ಪಟ್ಟರು. ಅಂತ್ಯಕ್ರಿಯೆ ದೃಶ್ಯದಲ್ಲಿ ಆಕೆಯ ದೃಶ್ಯವನ್ನು ಪ್ರಶಂಸಿಸಲಾಯಿತು.
ಅಂದಿನಿಂದ ಅವರು ಭಾರತ್, ಸೆಕ್ಷನ್ 375, ಗುಂಜನ್ ಸಕ್ಸೇನಾ: ದಿ ಕಾರ್ಗಿಲ್ ಗರ್ಲ್, ಹಾಗೆಯೇ ಬಂದಿಶ್ ಬ್ಯಾಂಡಿಟ್ಸ್ ಮತ್ತು ಟಿವಿಎಫ್ ಟ್ರಿಪ್ಲಿಂಗ್‌ನಂತಹ ವೆಬ್ ಸರಣಿಗಳಲ್ಲಿ ನಟಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ಬಿಡುಗಡೆಯಾದ ರಾಕುಲ್ ಪ್ರೀತ್ ಸಿಂಗ್ ಅಭಿನಯದ ಛತ್ರಿವಾಲಿಯಲ್ಲಿ ರಿವಾ ಕೊನೆಯದಾಗಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
2006ರಲ್ಲಿ ಜನಿಸಿದ ನಟಿಗೆ 16 ವರ್ಷ. ಆದರೆ ಈ ಚಿಕ್ಕವಯಸ್ಸಿನಲ್ಲಿ ಈಕೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ವೆಬ್‌ಸಿರೀಸ್‌ಗಳಲ್ಲಿ ನಟಿಸಿ ಸಕ್ಸಸ್ ಎನಿಸಿಕೊಂಡಿದ್ದಾರೆ. ಹೀಗಾಗಿ ಇವರ ಆಸ್ತಿ ಮೌಲ್ಯವೂ ಕೋಟಿ ಮೀರಿದೆ.