2023ರಲ್ಲಿ ಆಲಿಯಾ, ಕತ್ರೀನಾ ಕೈಫ್ರನ್ನೇ ಮೀರಿಸಿದೆ ಈ ಹೊಸ ಬಾಲಿವುಡ್ ನಟಿಯ ಗಳಿಕೆ
ಈ ನಟಿ 2023ರಲ್ಲಿ ಬಾಲಿವುಡ್ಗೆ ಪಾದಾರ್ಪಣೆ ಮಾಡಿದರು. ಆದರೆ ಅಚ್ಚರಿಯೆಂಬಂತೆ ಬಿಟೌನ ಟಾಪ್ ನಟರೊಂದಿಗೆ ಈಗಾಗ್ಲೇ ನಟಿಸಿದ್ದಾರೆ. ಮಾತ್ರವಲ್ಲ ಗಲ್ಲಾಪೆಟ್ಟಿಗೆಯಲ್ಲಿ ಕತ್ರಿನಾ ಕೈಫ್, ಆಲಿಯಾ ಭಟ್ ಮತ್ತು ನಯನತಾರಾ ಅವರಂತಹವರನ್ನು ಸೋಲಿಸಿದ್ದಾರೆ.
2023 ಬಾಲಿವುಡ್ ಪಾಲಿಗೆ ಅತ್ಯುತ್ತಮ ವರ್ಷವಾಗಿದೆ. ಕೋವಿಡ್ ಸಮಯದಲ್ಲಿ ಹಿಂದಿ ಚಲನಚಿತ್ರೋದ್ಯಮ ಭಾರತದ ಎಲ್ಲಾ ಚಲನಚಿತ್ರೋದ್ಯಮಗಳಿಗಿಂತ ಹೆಚ್ಚು ಹಾನಿಗೊಳಗಾಗಿತ್ತು. 2021ರಲ್ಲಿಯೂ ಬಾಲಿವುಡ್ ಸಿನಿಮಾಗಳು ಥಿಯೇಟರ್ನಲ್ಲಿ ನಿರೀಕ್ಷಿಸಿದಂತೆ ಸಕ್ಸಸ್ ಕಾಣಲ್ಲಿಲ್ಲ. ಬದಲಿಗೆ ಸೌತ್ ಸಿನಿಮಾಗಳು ಹೆಚ್ಚು ಅಬ್ಬರಿಸಿದವು.
ಆದರೆ 2023ರಲ್ಲಿ ಬಾಲಿವುಡ್ಗೆ ಲಕ್ ಕುದುರಿದೆ. ಶಾರೂಕ್ ಖಾನ್, ಸಲ್ಮಾನ್ ಖಾನ್, ಸನ್ನಿ ಡಿಯೋಲ್ ಅವರಂತಹ ಸ್ಟಾರ್ಗಳ ಕಾರಣದಿಂದಾಗಿ, ಹಿಂದಿ ಚಲನಚಿತ್ರಗಳು ಗಳಿಕೆಯ ದಾಖಲೆಗಳನ್ನು ಮುರಿಯಿತು. ಹಲವು ನಟಿಯರು ಸಹ ಈ ವರ್ಷದಲ್ಲಿ ಸಕ್ಸಸ್ಫುಲ್ ಎನಿಸಿಕೊಂಡರು. ಅದರಲ್ಲೂ 2023ರಲ್ಲಿ ಈ ಬಾಲಿವುಡ್ ನಟಿಯ ಗಳಿಕೆ ಆಲಿಯಾ, ಕತ್ರೀನಾ ಕೈಫ್ರನ್ನೇ ಮೀರಿಸಿದೆ
ಆಕೆ ಶಾರೂಕ್ ಜೊತೆ ಜವಾನ್ ಸಿನಿಮಾದಲ್ಲಿ ಅಭಿನಯಿಸಿದ ನಯನತಾರಾ ಅಂತ ನೀವಂದುಕೊಂಡ್ರೆ ತಪ್ಪು. 2023ರಲ್ಲಿ ಆಲಿಯಾ, ಕತ್ರೀನಾ ಕೈಫ್ರನ್ನೇ ಮೀರಿಸಿದೆ ಈ ಹೊಸ ಬಾಲಿವುಡ್ ನಟಿಯ ಗಳಿಕೆ. ಈ ವರ್ಷ ಚಲನಚಿತ್ರಕ್ಕೆ ಪಾದಾರ್ಪಣೆ ಮಾಡಿದ ನಟಿ ಬರೋಬ್ಬರಿ 1500 ಕೋಟಿ ಗಳಿಸಿದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕೆ ಮತ್ಯಾರೂ ಅಲ್ಲ ರಿಧಿ ಡೋಗ್ರಾ.
ಬಾಲಿವುಡ್ನಂತೆಯೇ, ರಿಧಿ ಡೋಗ್ರಾ ಅವರಿಗೂ 2023 ಅದ್ಭುತವಾಗಿದೆ. ವರ್ಷಗಳಿಂದ ದೂರದರ್ಶನ ಮತ್ತು OTTಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ
ನಟಿ, ಈ ವರ್ಷ 'ಲಕಡ್ಬಗ್ಗಾ' ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತಗಳನ್ನು ಮಾಡದಿದ್ದರೂ, ಇದು ವಿಮರ್ಶಕರಿಂದ ಪ್ರಶಂಸಿಸಲ್ಪಟ್ಟಿತು.
ಆ ನಂತರ ದೊಡ್ಡ ಪರದೆಯಲ್ಲಿ ರಿಧಿಯ ಮುಂದಿನ ಎರಡು ಪ್ರದರ್ಶನಗಳು ದಾಖಲೆಗಳನ್ನು ಸೃಷ್ಟಿಸಿದವು. ಶಾರೂಕ್ ಖಾನ್ ಅವರ ಜವಾನ್ ನಲ್ಲಿ ರಿಧಿ ಡೋಗ್ರಾ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಒಟ್ಟು 1150 ಕೋಟಿ ರೂಪಾಯಿಗಳ ಸಂಗ್ರಹದೊಂದಿಗೆ ವರ್ಷದ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವಾಗಿದೆ.
ಕೆಲವು ತಿಂಗಳ ನಂತರ, ರಿಧಿ ಸಲ್ಮಾನ್ ಖಾನ್ ಅವರ ಟೈಗರ್ 3ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡರು. ಇದು ತನ್ನ ಮೊದಲ ವಾರದಲ್ಲಿಯೇ ವಿಶ್ವದಾದ್ಯಂತ 350 ಕೋಟಿ ರೂ. ಗಳಿಸಿದೆ. ಇದರರ್ಥ ಬಾಲಿವುಡ್ನಲ್ಲಿ ಮೊದಲ ವರ್ಷದಲ್ಲಿ ರಿಧಿ ಅವರ ಚಿತ್ರಗಳು ಬಾಕ್ಸ್ ಆಫೀಸ್ನಲ್ಲಿ ಒಟ್ಟಾರೆಯಾಗಿ 1500 ಕೋಟಿ ಗಳಿಸಿವೆ.
2023ರಲ್ಲಿ ಅತಿ ಹೆಚ್ಚು ಹಣ ಗಳಿಸಿದ ಭಾರತೀಯ ನಟಿ ದೀಪಿಕಾ ಪಡುಕೋಣೆ. ಅವರ ಎರಡು ಚಿತ್ರಗಳು (ಪಠಾನ್ ಮತ್ತು ಜವಾನ್) ಒಟ್ಟಾರೆಯಾಗಿ 2200 ಕೋಟಿ ಗಳಿಸಿವೆ. ಅದರ ನಂತರದಲ್ಲಿ ರಿಧಿ ಡೋಗ್ರಾ ಬರುತ್ತಾರೆ. ನಯನತಾರಾ (ರೂ. 1150 ಕೋಟಿ), ತ್ರಿಶಾ ಕೃಷ್ಣನ್ (ರೂ. 962 ಕೋಟಿ), ಅಮೀಶಾ ಪಟೇಲ್ (ರೂ. 691 ಕೋಟಿ), ರಮ್ಯಾ ಕೃಷ್ಣನ್ (ರೂ. 610 ಕೋಟಿ) ಗಳಿಸಿದ ಸಿನಿಮಾದಲ್ಲಿ ನಟಿಸಿದ್ದಾರೆ.
ಆಲಿಯಾ ಭಟ್ ಮತ್ತು ಕತ್ರಿನಾ ಕೈಫ್ (ಇಬ್ಬರೂ ರೂ. 350 ಕೋಟಿ) ಅವರಂತಹ ದೊಡ್ಡ ನಟಿಯರೂ ಲಿಸ್ಟ್ನಲ್ಲಿದ್ದಾರೆ. ರಿಧಿ ಡೋಗ್ರಾ ಈ ವರ್ಷ ಅಸುರ್, ಮುಂಬೈ ಡೈರೀಸ್ ಮತ್ತು ಬತ್ತಮೀಜ್ ದಿಲ್ನಂತಹ ಯಶಸ್ವಿ ಮತ್ತು ಜನಪ್ರಿಯ ವೆಬ್ ಸರಣಿಗಳಲ್ಲಿ ಕಾಣಿಸಿಕೊಂಡರು.